Karnataka Weather Report: ಬೆಂಗಳೂರು, ಜುಲೈ 01, 2025:
ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯಾದ್ಯಂತ ಮುಂಗಾರು ಮಳೆಯ ಹೊಸ ಮುನ್ಸೂಚನೆ ನೀಡಿದ್ದು, ಈ ವಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಹೆಚ್ಚು ಇರುವುದು ಸಾಧ್ಯ. ಹವಾಮಾನ ಇಲಾಖೆ ಪ್ರಕಟಿಸಿದ ವರದಿಯ ಪ್ರಕಾರ ಜುಲೈ 5ರವರೆಗೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ಸಾಧಾರಣ ಮಳೆ ನಿರೀಕ್ಷೆಯಿದ್ದು, ಅಲ್ಲಿ ಯಾವುದೇ ಎಚ್ಚರಿಕೆ ಇಲ್ಲದೆ ಸಾಮಾನ್ಯ ಮಳೆಯಲ್ಲೇ ಮುಗಿಯಬಹುದು. ಮುಂಗಾರು ಅಲೆ ಈ ವಾರ ರಾಜ್ಯದ ಹತ್ತಾರು ಪ್ರದೇಶಗಳಲ್ಲಿ ತಂಪು ತಂದಿಟ್ಟಿದ್ದು, ರೈತರು ಹಾಗೂ ಸಾರ್ವಜನಿಕರು ತಮ್ಮ ದಿನಚರಿಯನ್ನು ಹವಾಮಾನದ ಮಾಹಿತಿಗೆ ಅನುಗುಣವಾಗಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.
ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ದಿನ ಎಚ್ಚರಿಕೆ ಘೋಷಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ — ಕೆಳಗೆ ನೋಡಿರಿ!
ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Karnataka Weather Report: ಯಾವ ಜಿಲ್ಲೆಗಳಲ್ಲಿ ಯಾವ Alert?
ರಾಜ್ಯಾದ್ಯಂತ Yellow Alert
ಈ ದಿನಗಳಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ಉಡುಪಿ, ಉತ್ತರ ಕನ್ನಡ (ಉ.ಕ.) ಮತ್ತು ದಕ್ಷಿಣ ಕನ್ನಡ (ದ.ಕ.) ಜಿಲ್ಲೆಗಳಿಗೆ ಈಗಷ್ಟಕ್ಕೆ ಯಾವುದೇ Alart ಇಲ್ಲ. ಇಲ್ಲಿ ಸಾಮಾನ್ಯ ಮಟ್ಟದ ಮಳೆಯ ಶಕ್ಯತೆ ಮಾತ್ರ ಇದೆ.
ಕರಾವಳಿ ಜಿಲ್ಲೆಗಳಲ್ಲಿ (Coastal Districts) ಮೂರು ದಿನ ಭಾರೀ ಮಳೆ
Bengaluru Weather: ಬೆಂಗಳೂರಿನ ವಾತಾವರಣ:

Bengaluru Today Weather ರಾಜಧಾನಿ ಬೆಂಗಳೂರಿನಲ್ಲಿ ಈ ವಾರ ಗರಿಷ್ಠ ತಾಪಮಾನ ಸರಿಸುಮಾರು 28 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ ಸುಮಾರು 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ನಗರದಲ್ಲಿ ಭಾಗಶಃ ಮೋಡ ಆವರಣ ಕಾಣಬಹುದು ಮತ್ತು ಕೆಲ ಕಾಲ ಸಾಧಾರಣ ಮಳೆ ಸುರಿಯುವ ಸಾಧ್ಯತೆಯೂ ಇದೆ. ಹೊರಗೆ ಹೋಗುವವರು ಕೈಯಲ್ಲಿ ಛತ್ರಿ ಇಟ್ಟುಕೊಳ್ಳುವುದು ಉತ್ತಮ!
ನಾಳೆಯ ಮುನ್ಸೂಚನೆ (ಜುಲೈ 2, 2025):
- ದಕ್ಷಿಣ ಕನ್ನಡ ಮತ್ತು ಉಡುಪಿ: ಇಲ್ಲಿಗೆ Alart ಇಲ್ಲ, ಆದರೆ ಸಾಧಾರಣ ಮಳೆಯ ನಿರೀಕ್ಷೆ ಇದೆ.
- ಉಳಿದ ಜಿಲ್ಲೆಗಳು: ರಾಜ್ಯದ ಇತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುಂದುವರೆದಿದೆ. ಕೆಲವು ಕಡೆ Thunderstorm ಸಹ ಕಾಣಬಹುದು.
July 3rd Weather: ಜುಲೈ 3, 2025 ಹವಾಮಾನ ಅಪ್ಡೇಟ್:
- ದಕ್ಷಿಣ ಕನ್ನಡ: ಇಲ್ಲಿ Alart ಇಲ್ಲ, ಸಾಧಾರಣ ಮಳೆಯ ನಿರೀಕ್ಷೆ ಮಾತ್ರ.
- ಇತರ ಜಿಲ್ಲೆಗಳು: ಉಳಿದ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ಕೆಲ ಭಾಗಗಳಲ್ಲಿ ಗಾಳಿ ಜೋರಾಗಿ ಬೀಸಬಹುದು, ಭಾರೀ ಮಳೆಯೂ ಸಾಧ್ಯ.
ಜುಲೈ 4-5, 2025 ವರೆಗಿನ ಸ್ಥಿತಿ:
- ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.
- ಕರಾವಳಿ, ಮಲೆನಾಡು, ಒಳನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆಯ ಆಗಮನ ಸಾಧ್ಯ.
- ಕರಾವಳಿ ಜಿಲ್ಲೆಗಳು: ಉಡುಪಿ, ಉ.ಕ., ದ.ಕ. ಜಿಲ್ಲೆಗಳಿಗೆ ಜುಲೈ 4 ರಿಂದ Alart ಪ್ರಾರಂಭ.
- ಮಲೆನಾಡು: ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ Thunderstorm ಜೊತೆಗೆ ಭಾರೀ ಮಳೆಯ ಮುನ್ಸೂಚನೆ ಇದೆ.
ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಕೆಲ ಭಾಗಗಳಲ್ಲಿ ಮಳೆಯಿಂದ ನೀರು ತುಂಬಿ ಹೋಗುವ ಸಾಧ್ಯತೆ ಇದೆ. ನದಿಗಳ, ಕೆರೆಗಳು ಅಥವಾ ಕಾಲುವೆಗಳ ಹತ್ತಿರ ಇದ್ದವರು ತುಸು ಜಾಗ್ರತೆಯಿಂದ ಇರಲಿ. ಸಾಧ್ಯವಾದಷ್ಟು ಮನೆ ಅಥವಾ ಸುರಕ್ಷಿತ ಸ್ಥಳದಲ್ಲೇ ಇರಲು ಪ್ರಯತ್ನಿಸಿ. ಅಗತ್ಯವಿಲ್ಲದ ಪ್ರಯಾಣಗಳನ್ನು ಬೇರೆ ದಿನಕ್ಕೆ ಮುಂದೂಡಿದರೆ ಒಳ್ಳೆಯದು.
ಮುಂಗಾರು ತೀವ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ರೈತರು, ಪ್ರಯಾಣಿಕರು, ಜನಸಾಮಾನ್ಯರು ಮುಂಜಾಗ್ರತೆಯಿಂದ ಇರಬೇಕು. ಹವಾಮಾನ ನಿರೀಕ್ಷೆ ನಿತ್ಯ ಗಮನಿಸಿ!
ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;











