ಭಾರತೀಯ ಜೀವ ವಿಮಾ ನಿಗಮ (LIC) 2025ರಲ್ಲಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, “ಎಲ್‌ಐಸಿ ಬಿಮಾ ಸಖಿ ಯೋಜನೆ” (Bima Sakhi Yojana In Kannada) ಎಂಬ ಹೊಸ ಉಪಕ್ರಮವನ್ನು ಆರಂಭಿಸಿದೆ. ಈ ಯೋಜನೆಯ ಉದ್ದೇಶವೇನೆಂದರೆ – ಗ್ರಾಮೀಣ ಹಾಗೂ-ನಗರ ಪ್ರದೇಶದ ಮಹಿಳೆಯರನ್ನು LIC ಏಜೆಂಟ್‌ಗಳಾಗಿ ನೇಮಕ ಮಾಡಿ ಅವರಿಗೆ ಆದಾಯ ಹಾಗೂ ಸ್ವಾವಲಂಬನೆ ನೀಡುವುದು.
ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].
ಯೋಜನೆಯ ಉದ್ದೇಶ ಮತ್ತು ಲಾಭಗಳು
ಈ ಯೋಜನೆಯ ಅಡಿಯಲ್ಲಿ 1 ಲಕ್ಷಕ್ಕೂ ಅಧಿಕ ಮಹಿಳಾ ಬಿಮಾ ಸಖಿಗಳನ್ನು (Bima Sakhi Yojana In Kannada) ನೇಮಕ ಮಾಡುವ ಗುರಿಯಿದೆ. ಆಯ್ಕೆಗೊಳ್ಳುವ ಮಹಿಳೆಯರಿಗೆ:
- LIC ಏಜೆಂಟ್‌ಗಳಾಗಿ ತರಬೇತಿ ನೀಡಲಾಗುತ್ತದೆ
- ಮೂರೂ ವರ್ಷಗಳ ಕಾಲ ಮಾಸಿಕ ₹7,000 ಸ್ಟೈಪೆಂಡ್ ನೀಡಲಾಗುತ್ತದೆ
- ಆರ್ಥಿಕವಾಗಿ ಸ್ವಾವಲಂಬಿಗಳಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ
- ವಿಮಾ ಸೇವೆಗಳ ಜಾಗೃತಿ ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗುತ್ತದೆ
ಅರ್ಹತಾ ಮಾನದಂಡಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ನಿರ್ದಿಷ್ಟ ಅರ್ಹತಾ ನಿಯಮಗಳಿವೆ:
| ಮಾನದಂಡ | ವಿವರ |
|---|---|
| ವಯಸ್ಸು | ಕನಿಷ್ಟ 18 ವರ್ಷ, ಗರಿಷ್ಠ 70 ವರ್ಷ (ಅರ್ಜಿಯ ದಿನಾಂಕಕ್ಕೆ) |
| ಶೈಕ್ಷಣಿಕ ಅರ್ಹತೆ | ಕನಿಷ್ಠ 10ನೇ ತರಗತಿ ಪಾಸಾಗಿರಬೇಕು |
| ಸ್ಥಿತಿ | ಭಾರತದಲ್ಲಿ ನಿವಾಸಿಯಾಗಿರುವ ಮಹಿಳೆಯರು ಮಾತ್ರ ಅರ್ಹರು |
ಅನರ್ಹರು:
- ಈಗಾಗಲೇ LIC ಏಜೆಂಟ್ ಆಗಿರುವವರು
- LIC ನೌಕರರು ಅಥವಾ ಅವರ ಕುಟುಂಬಸ್ಥರು (ಪತಿ/ಪತ್ನಿ, ಮಕ್ಕಳು, ಪೋಷಕರು, ಸಹೋದರ-ಸಹೋದರಿಯರು, ಇತ್ಯಾದಿ)
- ನಿವೃತ್ತ LIC ನೌಕರರು
- ಮಾಜಿ LIC ಏಜೆಂಟ್‌ಗಳು
ಪಶುಪಾಲನಾ ಸಾಲ ಯೋಜನೆ 2025 – ಹಸು, ಎಮ್ಮೆ ಖರೀದಿಗೆ ಭರ್ಜರಿ ಸಹಾಯಧನ; ರೈತರಿಗೆ ಆರ್ಥಿಕ ನೆರವಿನ ಹೊಸ ಆಯ್ಕೆ!
ಅಗತ್ಯವಿರುವ ದಾಖಲೆಗಳು
ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಲಗತ್ತಿಸುವುದು ಅವಶ್ಯಕ:
- ವಯಸ್ಸಿನ ಪುರಾವೆ (ಆಧಾರ್/SSLC ಮಾರ್ಕ್ ಶೀಟ್)
- ವಿಳಾಸ ಪುರಾವೆ (ರೇಷನ್ ಕಾರ್ಡ್, ಬಿಲ್ ನಕಲು ಇತ್ಯಾದಿ)
- ಶೈಕ್ಷಣಿಕ ಪ್ರಮಾಣಪತ್ರ (10ನೇ ತರಗತಿ)
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಯಿಂದ ಲಾಭ ಪಡೆಯಲು ಆಸಕ್ತ ಮಹಿಳೆಯರು ತಮ್ಮ ಪ್ರದೇಶದ LIC ಡೆವೆಲಪ್ಮೆಂಟ್ ಆಫೀಸರ್ ಅಥವಾ ಬ್ರಾಂಚ್ ಕಚೇರಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಇನ್ನಷ್ಟು ವಿವರಗಳು LIC ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ..
ಎಲ್‌ಐಸಿ ಬಿಮಾ ಸಖಿ ಯೋಜನೆ ಮಹಿಳಾ ಸಬಲೀಕರಣಕ್ಕೆ ನಿಜವಾಗಿಯೂ ಶಕ್ತಿಯುತ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ಆದಾಯವನ್ನೂ ಗಳಿಸಿ, ವಿಮೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸಲು ಶಕ್ತಿ ಪಡೆಯುತ್ತಾರೆ. ತಾವು ಅರ್ಹರೆಂದು ಅನಿಸುತ್ತಿದ್ದರೆ, ತಡಮಾಡದೆ ಅರ್ಜಿ ಹಾಕಿ ನಿಮ್ಮ ಭವಿಷ್ಯ ಕಟ್ಟಿಕೊಳ್ಳಿ.













