Pm Kisan 21st Installment Date: ಪಿಎಂ ಕಿಸಾನ್ 21ನೇ ಕಂತು ಯಾವಾಗ? ಈ ಬಾರಿ ಹಣ ಡಬಲ್..!

Photo of author

Mantesh

Publish: August 9, 2025

share Share:

Pm Kisan 21st Installment Date: ಕೃಷಿಕ ಬಂಧುಗಳೇ, ಇತ್ತೀಚೆಗೆ ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ — “ಪಿಎಂ ಕಿಸಾನ್ ಯೋಜನೆಯ ಹಣವನ್ನು ಡಬಲ್ ಮಾಡಲಾಗುತ್ತಿದೆ, ಈಗ ₹6000 ಬದಲು ₹12000 ಸಿಗುತ್ತದೆ” ಎಂದು.

ಆದರೆ, ಈ ವಿಷಯದ ಹಿಂದೆ ನಿಜವೇನು? ಮತ್ತು 21ನೇ ಕಂತಿನ ಹಣ ಯಾವಾಗ ಸಿಗುತ್ತದೆ? ಇನ್ನು ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕಂತು ಮೊತ್ತ ಹೆಚ್ಚಾಗಲಿದೆಯೇ? ನಿಜ ಏನು?

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆಯ ಮತ್ತವನ್ನು ಹೆಚ್ಚಿಸಬೇಕು ಎನ್ನುವುದರ ಕುರಿತು ಸ್ವಲ್ಪ ಸಮಯದವರೆಗೆ ಕೇಂದ್ರದಲ್ಲಿ ಚರ್ಚೆ ನಡೆದಿದ್ದು ಸತ್ಯ. ಆದರೆ ಸುದೀರ್ಘ ಚರ್ಚೆಯ ನಂತರ ಇದೀಗ ಸರ್ಕಾರವು ಅಂತಹ ಯಾವುದೇ ಯೋಜನೆ ಇಲ್ಲ ಎಂಬುವುದನ್ನು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ 20 ಕಂತುಗಳಲ್ಲಿ ದೇಶದ ಎಲ್ಲಾ ರೈತರಿಗೆ 3.9 ಲಕ್ಷ ಕೋಟಿ ರೂ. ಗಳನ್ನು ನೀಡಲಾಗಿದೆ ಎಂದು ಕೃಷಿ  ಸಚಿವ, ಶಿವರಾಜ್ ಸಿಂಗ್ ಚೌಹಾಣ್ ಸಂಸತ್ತಿನಲ್ಲಿ ತಿಳಿಸಿದರು. ಈ ಮೊತ್ತವು ರೈತರ ಖಾತೆಗಳಿಗೆ ನೇರವಾಗಿ ತಲುಪಿದ್ದು, ಇದು ಅವರ ದೈನಂದಿನ ಕೃಷಿ ಉಪಯೋಗಿ, ಚಟುವಟಿಕೆಗಳಿಗೆ ಸಹಾಯ ಮಾಡಿದೆ.

20ನೇ ಕಂತು ಈಗಾಗಲೇ ಜಮಾ..!

Pm Kisan 21st Installment Date

ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯ 20ನೇ ಕಂತಿನಡಿ 9.7 ಕೋಟಿ ರೈತರ ಖಾತೆಗಳಿಗೆ ಒಟ್ಟು ₹20,500 ಕೋಟಿ ಮೊತ್ತವನ್ನು ಜಮಾ ಮಾಡಿದೆ. ಈ ಕಂತಿನಲ್ಲಿ ಪ್ರತಿಯೊಬ್ಬ ರೈತನಿಗೂ ₹2,000 ರಷ್ಟು ನೆರವು ನೀಡಲಾಗಿದೆ. ಸಾಮಾನ್ಯವಾಗಿ ಸರ್ಕಾರವು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಂದು ಕಂತು ಬಿಡುಗಡೆ ಮಾಡುವ ರೂಢಿಯಿದೆ. ಆದರೆ ಈ ಬಾರಿ ಜೂನ್‌ನಲ್ಲಿ ಬರಬೇಕಿದ್ದ 20ನೇ ಕಂತು ವಿಳಂಬವಾಗಿ ಆಗಸ್ಟ್‌ನಲ್ಲಿ ಬಿಡುಗಡೆಗೊಂಡಿತು. ಈ ಕಾರಣದಿಂದ ರೈತರು ಸ್ವಲ್ಪ ಹೆಚ್ಚುವರಿ ಕಾಲ ಕಾಯಬೇಕಾಯಿತು. ಆದಾಗ್ಯೂ, ಈಗ ಹಣ ಅವರ ಬ್ಯಾಂಕ್ ಖಾತೆಗಳಿಗೆ ತಲುಪಿದೆ.

Pm Kisan 21st Installment Date: ಪಿಎಂ-ಕಿಸಾನ್ 21ನೇ ಕಂತು: ಈ ಬಾರಿ ಹಣ ಯಾವಾಗ ಬರುತ್ತೆ?

21ನೇ ಕಂತು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬರುವ ನಿರೀಕ್ಷೆ:

ಸರ್ಕಾರದ ಹಿಂದಿನ ಪಾವತಿ ವೇಳಾಪಟ್ಟಿಯನ್ನು ಪರಿಗಣಿಸಿದರೆ, ಪಿಎಂ-ಕಿಸಾನ್ ಯೋಜನೆಯ PM Kisan 21ನೇ ಕಂತು ಅಕ್ಟೋಬರ್ ಅಥವಾ ನವೆಂಬರ್ 2025ರಲ್ಲಿ (Pm Kisan 21st Installment Date) ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಆದರೆ ಕಂತಿನ ನಿಖರ ದಿನಾಂಕವು ಸಂಪೂರ್ಣವಾಗಿ ಸರ್ಕಾರದ ನಿರ್ಧಾರಕ್ಕೆ ಅವಲಂಬಿತವಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿರುವಂತೆ, 21ನೇ ಕಂತಿನ ಮೊತ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೈತರು ಹಿಂದೆ ಪಡೆದಂತೆಯೇ ₹2,000ರ ನೆರವು ಈ ಬಾರಿ ಸಹ ಪಡೆಯಲಿದ್ದಾರೆ.

ರೈತರು ಈಗ ತಮ್ಮ ಖಾತೆಗಳಿಗೆ ಮುಂದಿನ ಕಂತು ಸಮಯಕ್ಕೆ ತಲುಪುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಈ ಯೋಜನೆ ಲಕ್ಷಾಂತರ ಸಣ್ಣ ಮತ್ತು ಅಲ್ಪ ರೈತರಿಗೆ ಆರ್ಥಿಕ ಬೆಂಬಲ ನೀಡುತ್ತಿದ್ದು, ಅವರ ಜೀವನವನ್ನು ಸುಲಭಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಸರ್ಕಾರವು ರೈತರಿಗೆ ಸಲಹೆ ನೀಡಿರುವಂತೆ, ಬ್ಯಾಂಕ್ ಖಾತೆ ಮತ್ತು ಆಧಾರ್ ವಿವರಗಳನ್ನು ನವೀಕರಿಸಿಕೊಂಡು ಹೋಗುವುದು ಕಂತಿನ ಹಣ ತಲುಪುವಲ್ಲಿ ಯಾವುದೇ ಅಡಚಣೆಗಳನ್ನು ತಪ್ಪಿಸಲು ಅಗತ್ಯವಾಗಿದೆ.

ಹೇಗೆ ಚೆಕ್ ಮಾಡಬೇಕು 21ನೇ ಕಂತಿನ ಸ್ಟೇಟಸ್?

ಅಧಿಕೃತ ವೆಬ್‌ಸೈಟ್ ಮೂಲಕ

  • PM Kisan ಅಧಿಕೃತ ವೆಬ್‌ಸೈಟ್ ತೆರೆಯಿರಿ
  • “Beneficiary Status” ಆಯ್ಕೆ ಮಾಡಿ
  • ಆಧಾರ್ ನಂಬರ್ / ಮೊಬೈಲ್ ನಂಬರ್ / ಖಾತೆ ನಂಬರ್ ನಮೂದಿಸಿ
  • “Get Data” ಕ್ಲಿಕ್ ಮಾಡಿದರೆ ಕಂತಿನ ಸ್ಥಿತಿ ಕಾಣಿಸುತ್ತದೆ

ಮೊಬೈಲ್ ಆಪ್ ಮೂಲಕ

  • “PM Kisan” ಅಧಿಕೃತ ಆಪ್ ಡೌನ್‌ಲೋಡ್ ಮಾಡಿ
  • ಲಾಗಿನ್ ಮಾಡಿ “Beneficiary Status” ಪರಿಶೀಲಿಸಿ

ಹೆಲ್ಪ್‌ಲೈನ್ ಕರೆ ಮೂಲಕ

  • PM Kisan Toll Free: 155261, 1800115526, 011-23381092

Summary Table: Pm Kisan 21st Installment Date.

TopicDetails
Current Scheme₹6,000/year in three installments of ₹2,000
Doubling SpeculationVideo and parliamentary response confirm there’s no plan to double
21st InstallmentExpected around November 2025, but not officially announced

ಯಾವುದೇ ರೀತಿಯ ಅನಧಿಕೃತ ಮೆಸೇಜುಗಳು, ವಾಟ್ಸಾಪ್ಪ್, ಸುಳ್ಳು ಮಾಹಿತಿಗಳನ್ನು ನಂಬಬೇಡಿ. ನಿಖರ ಹಾಗೂ ನಿರ್ದಿಷ್ಠ ಸುದ್ದಿಗಾಗಿ ನಮ್ಮ ಜಾಲತಾಣ karnataka24.in ಕ್ಕೆ ಭೇಟಿ ನೀಡಿ.

Join

Leave a Comment