ನಮಸ್ಕಾರ ಕರ್ನಾಟಕದ ಜನತೆಗೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಖಾಲಿ ಇರುವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯ ಕುರಿತು ಒಂದು ಲೇಖನ ವಾಗಿದ್ದು.ಒಟ್ಟು 945 ಹುದ್ದೆಗಳು ಖಾಲಿ ಇದ್ದು ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಇದರಲ್ಲಿ ತಿಳಿಸಲಿದ್ದೇವೆ ಹಾಗೂ ಆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಯಾವ ರೀತಿ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು ಎಂಬುದನ್ನು ಈ ಕೆಳಗಿನ ಒಂದು ಲೇಖನದಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಆದಕಾರಣ ನೀವೆಲ್ಲರೂ ಈ ಒಂದು ಬ್ಲಾಗನ್ನು ಸಂಪೂರ್ಣ ಓದಿ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇದೇ ರೀತಿಯ ಕರ್ನಾಟಕದ ಸಂಪೂರ್ಣ ಮಾಹಿತಿಗಳನ್ನು ಹಾಗೂ ಯಾವುದೇ ರೀತಿಯ ಉದ್ಯೋಗ ಮಾಹಿತಿಗಳನ್ನು ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಿ ಎಂದು ತಿಳಿಸುತ್ತೇವೆ. ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಖಾಲಿ ಇರುವ ಹುದ್ದೆಗಳ ಮಾಹಿತಿ:
KPSC(Karnataka public service commission) ನಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಲೋಕಸೇವಾ ಆಯೋಗವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 945 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಅವುಗಳಲ್ಲಿ 128 ಹುದ್ದೆಗಳು ಕೃಷಿ ಅಧಿಕಾರಿ ಅಂದರೆ agricultural officer ಹುದ್ದೆಗಳಾಗಿದ್ದು ಮತ್ತು ಉಳಿದ 817 ಹುದ್ದೆಗಳು ಸಹಾಯಕ ಕೃಷಿ ಅಧಿಕಾರಿ ಅಂದರೆ assistant agricultural officer ಹುದ್ದೆಗಳಾಗಿದ್ದು ಇದೀಗ ಇವುಗಳ ನೇಮಕಾತಿ ಕುರಿತು ಮಾಹಿತಿ ಬಂದಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ ಹಾಗೂ ವಯೋಮಿತಿಯ ಕುರಿತು:
ಕರ್ನಾಟಕ ಲೋಕಸೇವಾ ಆಯೋಗವು ಈ ಒಂದು ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದ್ದು ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಹಾಕಬಹುದು. ಹಾಗೂ ಅರ್ಜಿ ಸಲ್ಲಿಕೆಯ ಮೊತ್ತವನ್ನು ಸಹ ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

Also Read :
Olympic Games Paris 2024: ಪ್ಯಾರಿಸ್ ಒಲಿಂಪಿಕ್ಸ್ 2024
ಯೂನಿಯನ್ ಬಜೆಟ್ 2024(Union Budget 2024)
ಈ ಒಂದು ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ವಯೋಮಿತಿ ಬಗ್ಗೆ ಮಾಹಿತಿ. ಖಾಲಿ ಇರುವ ಒಟ್ಟು 945 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಅದರ ಅನ್ವಯ ಆಸಕ್ತ ಅಭ್ಯರ್ಥಿಯು ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ 18 ವಯಸ್ಸನ್ನು ಹೊಂದಿರಬೇಕು ಹಾಗೂ ಗರಿಷ್ಠ 38 ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ ಇನ್ನು ಈ ಒಂದು ಕೃಷಿ ಅಧಿಕಾರಿ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಸಹ ನೀಡಲಾಗಿದ್ದು ಅದರ ಬಗ್ಗೆ ತಿಳಿದುಕೊಳ್ಳೋಣ.
- SC/St ಹಾಗೂ cat -1 ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷಗಳ ವಯೋಮಿತಿಯ ಸಡಿಲಿಕೆ ಇರುತ್ತದೆ.
- Cat-2A/2B/3A/3B ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷದ ವಯೋಮಿತಿಯ ಸಡಿಲಿಕೆ ಇರುತ್ತದೆ.
- PWD/Widow ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿಯ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಕೆಯ ಮೊತ್ತ:
- SC/ST/CAT-1/PWD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಸಲ್ಲಿಕೆಯ ಮೊತ್ತವನ್ನು ಪಾವತಿಸುವಂತಿಲ್ಲ.
- ಮಾಜಿ ಸೈನಿಕ ಅಭ್ಯರ್ಥಿಗಳು ಕೇವಲ 50 ರೂಪಾಯಿಗಳನ್ನು ಮಾತ್ರ ಪಾವತಿಸಬೇಕು.
- CAT-2A/2B/3A/3B ಅಭ್ಯರ್ಥಿಗಳು 300 ಪಾವತಿಸಬೇಕು.
- ಸಾಮಾನ್ಯ ಅಭ್ಯರ್ಥಿಗಳು ರೂಪಾಯಿ 600 ಪಾವತಿಸಬೇಕು.












2 thoughts on “KPSC(Karnataka public service commission): ಒಟ್ಟು 945 ಹುದ್ದೆಗಳು ಖಾಲಿ!”