SBI Har Ghar Lakhpati Yojana 2025: SBIನ ಹೊಸ ಹೂಡಿಕೆ ಯೋಜನೆ 2025. Quickly Apply.

Photo of author

Mantesh

Publish: March 17, 2025
SBI Har Ghar Lakhpati Yojana 2025

share Share:

Introduction:ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು SBI ನ ಹೊಸ ಹೂಡಿಕೆ ಯೋಜನೆಯ (SBI Har Ghar Lakhpati Yojana 2025) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಹಣದ ಹೂಡಿಕೆ ಮಾಡುವುದು ಕೇವಲ ವಿದ್ಯಾವಂತರಿಗೆ ಮಾತ್ರ ಹಾಗೂ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂಬುವ ತಪ್ಪು ಕಲ್ಪನೆಯಿಂದ ಹೊರಬರಲು ಈ ಒಂದು ಯೋಜನೆ ಸಾಕ್ಷಿ. ಯಾವ ವ್ಯಕ್ತಿ ತನ್ನ ದೈನಂದಿನ ಜೀವನದ ಜಂಜಾಟದಲ್ಲಿ ಸಿಲುಕಿಕೊಂಡು ತನ್ನ ಆರ್ಥಿಕ ಸ್ಥಿತಿಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಕಷ್ಟ ಪಡುತ್ತಿರುವ ವ್ಯಕ್ತಿ, ಅಂಥವರಿಗೆ ಇದೀಗ ಒಂದು ಒಳ್ಳೆಯ ಸುದ್ದಿ ಎಂದು ಹೇಳಬಹುದು. ಸಾಮಾನ್ಯ ವರ್ಗದ ಜನ, ಬಡ ಜನರು, ತೀರ ಕಡಿಮೆ ಹೂಡಿಕೆ ಸಹ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಜನರಿಗಾಗಿ ಈ ಒಂದು ಯೋಜನೆ ಬಹಳ ಸಹಾಯಕಾರಿ ಆಗಿದೆ ಎನ್ನಬಹುದು. ನಮಗೆ ಅತಿ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡಲು ಆಗುವುದಿಲ್ಲ, ನಮಗೆ ಹೆಚ್ಚಾಗಿ ಈ ಹೂಡಿಕೆಯ ವಿಧಾನಗಳ ಬಗ್ಗೆ ತಿಳಿದಿಲ್ಲ ಎನ್ನುವವರಿಗೆ ಈ ಯೋಜನೆ ತುಂಬಾ ಸಹಾಯಕಾರಿ ಆಗಬಹುದು.

SBI Har Ghar Lakhpati Yojana 2025.

SBI Har Ghar Lakhpati Yojana 2025

ಯಾರು ಅತಿ ಹೆಚ್ಚಿನ ರಿಸ್ಕ್ ಹಾಗೂ ಲಾಭವನ್ನು ಬಯಸದೆ ಹೂಡಿಕೆ ಮಾಡಲು ಬಯಸುವರು ಹಾಗೂ ಯಾವುದೇ ರೀತಿಯ ಹೂಡಿಕೆಯ ತಂತ್ರಗಳನ್ನು ಅತಿಯಾಗಿ ಗಮನಿಸದೆ ಮತ್ತು ಹೆಚ್ಚಿನ ಲಾಭವನ್ನು ನಿರೀಕ್ಷಿಸದೆ ಹೂಡಿಕೆ ಮಾಡಲು ಸಿದ್ದರಿರುವರು ಅಂತವರು ಈ ಯೋಜನೆಯಲ್ಲಿ ಹಣವನ್ನು ತೊಡಗಿಸಬಹುದು.
ಈ ಒಂದು ಯೋಜನೆ ಬಗ್ಗೆ ಹೇಳುವುದಾದರೆ ಇದೊಂದು RD ಯೋಜನೆ ಎಂದು ಹೇಳಬಹುದು ಅಂದರೆ (recurring deposit), ಪ್ರತಿ ತಿಂಗಳು ಇಂತಹ ತಾರೀಕಿಗೆ ಇಂತಿಷ್ಟು ಹಣವನ್ನು ನೀವು ಹೂಡಿಕೆ ಮಾಡಬೇಕು. ಇದನ್ನು ನೀವು SIP(Systematic investment plan) ಗೆ ಹೋಲಿಸಬಹುದು. ನೀವು ಈ ಯೋಜನೆಯಲ್ಲಿ ಅಥವಾ ಈ ಒಂದು ನಿರ್ದಿಷ್ಟ ಹೂಡಿಕೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾದರೆ ಕನಿಷ್ಠ ಪಕ್ಷ 3 ವರ್ಷಗಳ ಕಾಲ ನೀವು ಹಣವನ್ನು ಹೂಡಿಕೆ ಮಾಡಲೇಬೇಕು. ಒಂದು ವೇಳೆ ನೀವು ಇನ್ನೂ ಹೆಚ್ಚಿನ ಸಮಯದವರೆಗೆ ಹೂಡಿಕೆ ಮಾಡಲು ಬಯಸಿದರೆ ಗರಿಷ್ಠಪಕ್ಷ 10 ವರ್ಷಗಳ ವರೆಗೆ ಹೂಡಿಕೆಯನ್ನು ಮುಂದುವರಿಸಬಹುದು.

ಹಾಗಾದರೆ ಈ ಒಂದು ಯೋಜನೆಗೆ ಹೂಡಿಕೆ ಮಾಡಲು ಯಾರು ಅರ್ಹರು?.SBI Har Ghar Lakhpati Yojana 2025

ಆ ರೀತಿಯಾಗಿ ನೋಡುವುದಾದರೆ, ಇಡೀ ಭಾರತ ದೇಶದ ಪ್ರಜೆಗಳೆಲ್ಲರೂ ಸಹ ಈ ಒಂದು ಯೋಜನೆಯೆಲ್ಲಿ ಹೂಡಿಕೆಯನ್ನು ಮಾಡಬಹುದು. ಗಮನಿಸಬೇಕಾದ ಅಂಶ: ಈ ಒಂದು ಹೂಡಿಕೆಯ ಯೋಜನೆಯಲ್ಲಿ ಕೇವಲ ವಯಸ್ಕರ ಅಲ್ಲವೇ ಅಪ್ರಾಪ್ತ ವಯಸ್ಕರು ಸಹ ಹೂಡಿಕೆಯನ್ನು ಮಾಡಬಹುದು. ಯಾರು ಹತ್ತು ವರ್ಷಗಳ ಮೇಲ್ಪಟ್ಟಿರುತ್ತಾರೋ ಅವರು ತಮ್ಮದೇ ಸಹಿಯನ್ನು ಮಾಡಲು ಬರುವವರು, ಒಂದು ವೇಳೆ ಸಹಿ ಮಾಡಲು ಬರದಿದ್ದರೆ ಪಾಲಕರ ಸಹಿಯ ಒಪ್ಪಿಗೆಯೊಂದಿಗೆ ಈ ಒಂದು ಖಾತೆಯನ್ನು ತೆರೆದು ಹೂಡಿಕೆಯನ್ನು ಮಾಡಬಹುದು.


ಹೂಡಿಕೆಯ ವಿಧಾನ ಹಾಗೂ ಅವಧಿಯ ಕುರಿತು ಈ ಕೆಳಗಿನ ಚಾರ್ಟ್ ನೋಡಿ:SBI Har Ghar Lakhpati Yojana 2025

Period (Years)345678910
General Public₹ 2,502₹ 1,812₹ 1,409₹ 1,135₹ 940₹ 795₹ 682₹ 593
Senior Citizen₹ 2,482₹ 1,793₹ 1,391₹ 1,117₹ 923₹ 778₹ 665₹ 576
Staff₹ 2,463₹ 1,775₹ 1,373₹ 1,100₹ 906₹ 762₹ 650₹ 562
Staff Senior Citizen₹ 2,444₹ 1,756₹ 1,355₹ 1,082₹ 889₹ 745₹ 634₹ 546


ದೊರೆಯುವ ಬಡ್ಡಿದರ ಎಷ್ಟು ಮತ್ತು ಇನ್ನಿತರ ಮಾಹಿತಿಗಾಗಿ ಈ ಕೆಳಗಿನ ಚಾರ್ಟ್ ನೋಡಿ:SBI Har Ghar Lakhpati Yojana 2025

Period (Years)345678910
General Public6.75%6.75%6.50%6.50%6.50%6.50%6.50%6.50%
Senior Citizen7.25%7.25%7.00%7.00%7.00%7.00%7.00%7.00%
Staff7.75%7.75%7.50%7.50%7.50%7.50%7.50%7.50%
Staff Senior Citizen8.25%8.25%8.00%8.00%8.00%8.00%8.00%8.00%

ಈ ಮೇಲಿನ ಮಾಹಿತಿಯನ್ನು ನೋಡಿದ ಮೇಲೆ ಒಬ್ಬ ಸಾಮಾನ್ಯ ಮನುಷ್ಯ ತಲೆಯಲ್ಲಿ ಬರುವ ಮೊದಲ ವಿಚಾರವೇನೆಂದರೆ; ಇಷ್ಟೊಂದು ಕಡಿಮೆ ಬಡ್ಡಿ ದರ ಹೊಂದಿರುವ ಯೋಜನೆಯಲ್ಲಿ ನಾವು ಹೂಡಿಕೆ ಮಾಡಬೇಕಾ? SBI Har Ghar Lakhpati Yojana 2025 ಸ್ನೇಹಿತರೆ, ಇದು ಮೊದಲೇ ಹೇಳಿದ ಹಾಗೆ ರಿಸ್ಕ್ ಇಲ್ಲದ ಜೋನ್, ಇಲ್ಲಿ ಯಾರು ನಿಮ್ಮ ವೃತ್ತಿಯ ಜೀವನದ ಕೊನೆಯ ಘಟ್ಟಕ್ಕೆ ಬಂದಿರುವ ಹೂಡಿಕೆದಾರರು ಮಾಡುವ ಹೂಡಿಕೆಯ ಕುರಿತು ಯೋಚಿಸುವುದಾದರೆ, ನಿಮ್ಮ ರಿಟೈರ್ಮೆಂಟ್ ದುಡ್ಡು ಬಂದಿದ್ದರೆ, ಇಲ್ಲವೇ ಯಾವುದೋ ರೀತಿಯ ಆದಾಯದ ಮೂಲವನ್ನು ನೀವು ಹೊಂದಿದ್ದರೆ, ಅದೇ ರೀತಿ ಮನೆ ಬಾಡಿಗೆ ಬರುತ್ತಿದ್ದರೆ, ಈ ರೀತಿಯ ಆದಾಯದ ಮೂಲಗಳು ನೀವು ಹೊಂದಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲು ಸಾಧ್ಯವಾಗದಿದ್ದರೆ, ಹಾಗೂ ನನಗೆ ಕೇವಲ ಹಣದುಬ್ಬರವನ್ನು ನಿವಾರಿಸಿದರೇ ಸಾಕು ಎನ್ನುವ ಮನಸ್ಥಿತಿಯನ್ನು ನೀವು ಹೊಂದಿದ್ದರೆ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಬದಲಿಗೆ ನೀವು ಷೇರು ಮಾರುಕಟ್ಟೆ ಹಾಗೂ ಎಸ್ಐಪಿ ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಕನಿಷ್ಠವಾಗಿ 10% ನಿಂದ 12% ನವರೆಗೆ ಹೂಡಿಕೆ ಮೇಲೆ ಲಾಭವನ್ನು ನಿರೀಕ್ಷಿಸಬಹುದು, ಅದೇ ರೀತಿ ಅದರಲ್ಲಿ ಇರುವ ರಿಸ್ಕ್ ಸಹ ಅಷ್ಟೇ ಇರುವುದು, ಹಾಗಾಗಿ ಇಲ್ಲಿ ಹೇಳುವ ಯೋಜನೆಯ ಉದ್ದೇಶ ಇಷ್ಟೇ, ಯಾವುದೇ ರೀತಿಯ ರಿಸ್ಕ್ ಇಲ್ಲದೆ ಹಣದ ಮೌಲ್ಯವನ್ನು ಉಳಿಸಿಕೊಳ್ಳುವುದು.

Premature withdraw: ಅಕಾಲಿಕ ಹಿಂತೆಗೆದುಕೊಳ್ಳುವಿಕೆ.

ಸ್ನೇಹಿತರೆ, SBI Har Ghar Lakhpati Yojana 2025 ಒಂದು ವೇಳೆ ನೀವು ನಿಮ್ಮ ಹೂಡಿಕೆಯ ಹಣವನ್ನು ಯಾವುದೇ ರೀತಿಯ ಹೂಡಿಕೆಯ ತೊಂದರೆಗಳು ಎದುರಾದಾಗ ನಿಮ್ಮ ಒಟ್ಟು ಹೂಡಿಕೆ ಹಣ ಹಾಗೂ ಬರುವ ಒಟ್ಟು ಮೊತ್ತವನ್ನು ಹಿಂತೆಗೆದುಕೊಳ್ಳಲು ಬಯಸಿದರೆ ನೀವು ತೆಗೆದುಕೊಳ್ಳಬಹುದು. ಆದರೆ, ನಿಯಮದ ಪ್ರಕಾರ ನಿಮ್ಮ ಒಟ್ಟು ಹೂಡಿಕೆಯ ಮೊತ್ತ 5 ಲಕ್ಷ ರೂಪಾಯಿ ಗಳಿಗಿಂತ ಕಡಿಮೆ ಇದ್ದರೆ ನೀವು 1/2% ನಷ್ಟು ಅಂದರೆ 0.50% ನವರೆಗೆ ಅಕಾಲಿಕ ಹಿಂತೆಗೆದುಕೊಳ್ಳುವಿಕೆಯ ಮೇಲೆ ಪೆನಾಲ್ಟಿ ಕಟ್ಟಬೇಕಾಗುತ್ತದೆ. ಹಾಗೆಯೇ ನಿಮ್ಮ ಒಟ್ಟು ಹೂಡಿಕೆಯ ಮೊತ್ತ 5 ಲಕ್ಷ ರೂಪಾಯಿಗಳಿಗಿಂತ ಮೇಲೆ ಇದ್ದರೆ ಅಂತಹ ಸನ್ನಿವೇಶದಲ್ಲಿ 1% ನಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ.

Payment due: ಪಾವತಿ ಬಾಕಿ.

ಒಂದು ವೇಳೆ ನೀವು ತಿಂಗಳ ಮೊದಲನೆಯ ವಾರದಲ್ಲಿ RD ಕಟ್ಟುತ್ತೇವೆ ಎಂದು ಖಾತೆಯನ್ನು ತೆಗೆದುಕೊಂಡಿದ್ದರೆ ಯಾವುದೇ ರೀತಿಯ ಅಡೆತಡೆಗಳನ್ನು ಎದುರಿಸುವಾಗ ನೀವು ಪಾವತಿ ಬಾಕಿ ಮಾಡದೆ ಹೋದರೆ ಐದು ವರ್ಷಗಳ ಕೆಳಗೆ ನಿಮ್ಮ ಹುಡುಕಿ ಯೋಜನೆ ಆಗಿದ್ದರೆ ನಿಮಗೆ ಪ್ರತಿ 100 ರೂಪಾಯಿಗೆ 1.5% ನಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಅದೇ ರೀತಿ 5 ವರ್ಷಗಳ ಮೇಲಿನ ಹೂಡಿಕೆ ಯೋಜನೆ ಆಗಿದ್ದರೆ ಪ್ರತಿ 100 ರೂಪಾಯಿಗೆ 2% ನಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಹಾಗೆಯೇ ಒಂದು ವೇಳೆ ನೀವು ಸತತವಾಗಿ ಪಾವತಿ ಬಾಕಿ ಮಾಡಿದರೆ ಆರು ತಿಂಗಳ ಪಾವತಿ ಬಾಕಿ ನಿಮ್ಮದಾಗಿದ್ದರೆ ಅಂತಹ ಖಾತೆಗಳನ್ನು ಮುಚ್ಚಲಾಗುತ್ತದೆ. ಹಾಗೂ ಪೆನಾಲ್ಟಿಯನ್ನು ಕಟ್ ಮಾಡಿಕೊಂಡು ಉಳಿದ ಮೊತ್ತವನ್ನು ನಿಮ್ಮ ಲಿಂಕ್ ಆದ ಖಾತೆಗೆ ವರ್ಗಾವಣೆ ಮಾಡಲಾಗುವುದು. ಈ ಯೋಜನೆಗೆ ಹೂಡಿಕೆ ಮಾಡಲು ಬಯಸುವವರು SBI ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಈ ಹುಡುಕಿಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ TDS ರೀತಿಯ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದು SBI ನ ಮನೆ ಮನೆಗೆ ಲಕ್ಷಾಧಿಪತಿ (SBI Har Ghar Lakhpati Yojana 2025) ಎನ್ನುವ ಯೋಜನೆಯ ಸಂಪೂರ್ಣ ಮಾಹಿತಿ.

ಈ ಮಾಹಿತಿಗಳನ್ನು ಓದಿ:

bmrcl recruitment 2025: ನಮ್ಮ ಮೆಟ್ರೋದಲ್ಲಿ ನೇಮಕಾತಿ…!

CISF Recruitment 2025:10ನೇ ತರಗತಿ ಪಾಸ್ ಆಗಿದ್ದರೆ ಸಾಕು.1161 ಹುದ್ದೆಗಳು…!

Join

1 thought on “SBI Har Ghar Lakhpati Yojana 2025: SBIನ ಹೊಸ ಹೂಡಿಕೆ ಯೋಜನೆ 2025. Quickly Apply.”

Leave a Comment