ಪಂಜಾಬ್ ನ್ಯಾಷನಲ್ ಬ್ಯಾಂಕ್ 545 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಕರ್ನಾಟಕದಲ್ಲಿ 78 ಹುದ್ದೆ ಲಭ್ಯ. ಅರ್ಹತೆ, ವಯೋಮಿತಿ, ವೇತನ, ಆನ್ಲೈನ್ ಅರ್ಜಿ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 545 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ PNB LBO ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 16ರವರೆಗೆ ವಿಸ್ತರಿಸಿದೆ. ಕರ್ನಾಟಕದಲ್ಲಿ ಬರೋಬ್ಬರಿ 78 ಹುದ್ದೆಗಳಿದ್ದು, ಬ್ಯಾಂಕಿಂಗ್ ಕ್ಷೇತ್ರದ ಅನುಭವಿ ಪದವೀಧರರಿಗೆ ಇದೊಂದು ಉತ್ತಮ ಅವಕಾಶ.
ಪ್ರಮುಖ ವಿವರಗಳು
- ನೇಮಕಾತಿ ಸಂಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
- ಹುದ್ದೆ: ಲೋಕಲ್ ಬ್ಯಾಂಕ್ ಆಫೀಸರ್ (LBO – JMGS-I)
- ಒಟ್ಟು ಹುದ್ದೆಗಳು: 545 (ಇಡೀ ಭಾರತ, 17 ರಾಜ್ಯಗಳಲ್ಲಿ)
- ಕರ್ನಾಟಕದ ಹುದ್ದೆಗಳು: 78
- ಉದ್ಯೋಗದ ಸ್ವರೂಪ: ಖಾಯಂ ಹುದ್ದೆ
ಮುಖ್ಯ ಮಾಹಿತಿ: ಅರ್ಜಿ ದಿನಾಂಕ ಈಗಾಗಲೇ ಒಮ್ಮೆ ವಿಸ್ತರಣೆಯಾಗಿದ್ದು, ಆಗಸ್ಟ್ 16ರ ರಾತ್ರಿ 11:59ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.
ವಿದ್ಯಾರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಯಾವುದೇ ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ RRBಯಲ್ಲಿ ಕ್ಲರಿಕಲ್ ಅಥವಾ ಆಫೀಸರ್ ಕೇಡರ್ನಲ್ಲಿ ಕನಿಷ್ಠ 1 ವರ್ಷದ ಸೇವಾ ಅನುಭವ ಹೊಂದಿರಬೇಕು (09-08-2026ಕ್ಕೆ ಅನ್ವಯ).
- ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆ (ಕರ್ನಾಟಕಕ್ಕೆ ಕನ್ನಡ) ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
ವೇತನ
JMGS-I ಗ್ರೇಡ್ ಅಡಿಯಲ್ಲಿ ₹48,480 – ₹85,920 ವೇತನ ಶ್ರೇಣಿ ಇರಲಿದೆ. ಇದರ ಜೊತೆಗೆ DA, HRA, ಸಾರಿಗೆ ಭತ್ಯೆ, ವೈದ್ಯಕೀಯ ವಿಮೆ ಹಾಗೂ ಪಿಂಚಣಿ ಸೌಲಭ್ಯಗಳು ಲಭ್ಯ.
ವಯೋಮಿತಿ ಮತ್ತು ಸಡಿಲಿಕೆ
01.07.2026ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ಇರಬೇಕು.
- SC/ST: 5 ವರ್ಷ ಸಡಿಲಿಕೆ
- OBC (Non-Creamy Layer): 3 ವರ್ಷ ಸಡಿಲಿಕೆ
- PwBD: 10 ವರ್ಷ ಸಡಿಲಿಕೆ
- ಮಾಜಿ ಸೈನಿಕರು: 5 ವರ್ಷ ಸಡಿಲಿಕೆ
ಅರ್ಜಿ ಶುಲ್ಕ
- SC/ST/PwBD: ₹59 (GST ಸೇರಿ)
- ಸಾಮಾನ್ಯ, OBC, EWS: ₹1,180 (GST ಸೇರಿ)
- ಪಾವತಿ ವಿಧಾನ: Debit/Credit Card, Net Banking, UPI ಮೂಲಕ ಆನ್ಲೈನ್ ಪಾವತಿ ಮಾತ್ರ.
ಆಯ್ಕೆ ಪ್ರಕ್ರಿಯೆ
- ಆನ್ಲೈನ್ ಪರೀಕ್ಷೆ: 150 ಅಂಕ (Reasoning, Data Analysis, English, Quantitative Aptitude, Banking Awareness), ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಮಾರ್ಕ್
- ದಾಖಲೆ ಪರಿಶೀಲನೆ
- ಸ್ಥಳೀಯ ಭಾಷಾ ಪರೀಕ್ಷೆ (10/12ನೇ ತರಗತಿಯಲ್ಲಿ ಕನ್ನಡ ಓದದವರಿಗೆ ಮಾತ್ರ)
- ವೈಯಕ್ತಿಕ ಸಂದರ್ಶನ: 50 ಅಂಕ
ಅರ್ಜಿ ಹೇಗೆ?
- ಅಧಿಕೃತ ವೆಬ್ಸೈಟ್ pnb.bank.in ಗೆ ಭೇಟಿ ನೀಡಿ.
- “Recruitment / Careers” ವಿಭಾಗಕ್ಕೆ ತೆರಳಿ.
- “Recruitment of Local Bank Officers 2026” ಲಿಂಕ್ ಕ್ಲಿಕ್ ಮಾಡಿ New Registration ಆಯ್ಕೆ ಮಾಡಿ.
- ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಬಳಸಿ ನೋಂದಣಿ ಪೂರ್ಣಗೊಳಿಸಿ.
- ವೈಯಕ್ತಿಕ, ಶೈಕ್ಷಣಿಕ, ಅನುಭವ ಹಾಗೂ ಮೀಸಲಾತಿ ವಿವರ ಭರ್ತಿ ಮಾಡಿ.
- ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು, ಘೋಷಣಾಪತ್ರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ Submit ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ಔಟ್ ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಪ್ರಾರಂಭ: 20 ಜುಲೈ 2026
- ವಿಸ್ತರಿಸಿದ ಕೊನೆಯ ದಿನಾಂಕ: 16 ಆಗಸ್ಟ್ 2026 (ರಾತ್ರಿ 11:59)
- ಆನ್ಲೈನ್ ಪರೀಕ್ಷೆ: ಆಗಸ್ಟ್/ಸೆಪ್ಟೆಂಬರ್ 2026 (ಸಂಭಾವ್ಯ)
ಲಿಂಕ್
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ PDF | Download |
| Online ಅರ್ಜಿ ಲಿಂಕ್ | Apply Here |
| WhatsApp Group | Join |
| Telegram Channel | Join |
| ಹೆಚ್ಚಿನ ಮಾಹಿತಿ | Karnataka24.in |











