ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಉದ್ಯೋಗಿನಿ ಯೋಜನೆಯ (Udyogini Yojana) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:
Udyogini Yojana ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು. ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆ. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ” ಎನ್ನುವ ಗಾದೆಯ ರೀತಿ, ಒಂದು ಹೆಣ್ಣು ಕಲಿತರೆ ಅವಳು ಒಂದು ಶಾಲೆಯನ್ನೇ ತೆರೆಯುತ್ತಾಳೆ. ಆದರೆ, ನಮ್ಮಲ್ಲಿ ಹೆಣ್ಣು ಮಕ್ಕಳು ಅಬಲೆಯರು ಎನ್ನುವ ಮನಸ್ಥಿತಿಯನ್ನು ತೊಡೆದು ಹಾಕಬೇಕು. ಹೀಗೆ ಅವರು ಸಹ ಪುರುಷರಂತೆ ಎಲ್ಲಾ ರಂಗದಲ್ಲೂ ಸಮಾನವಾಗಿ ಸಮಾಜದಲ್ಲಿ ಮುಂದೆ ಬರಬೇಕು. ಉದ್ಯೋಗಿನಿ ಯೋಜನೆ ಎನ್ನುವುದು ಇದಕ್ಕೆ ಪೂರಕ.
ಏನಿದು ಉದ್ಯೋಗಿನಿ ಯೋಜನೆ? What Is Udyogini Yojana.
ಸ್ನೇಹಿತರೆ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ರೂಪಿಸಿದ ಒಂದು ಸಾಲ ಸೌಲಭ್ಯ ಯೋಜನೆ. ಇದರ ಮೂಲಕ ಮಹಿಳೆಯರು ಸಾಲ ಸೌಲಭ್ಯವನ್ನು ಪಡೆದು ತಮ್ಮದೇ ಆದ ಒಂದು ಸ್ವಂತ ಉದ್ಯೋಗ ಮಾಡಲು ಸರ್ಕಾರವು ಸಹಾಯ ಮಾಡುವುದು. ಇದರಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಈ ಒಂದು ಯೋಜನೆಗೆ ಯಾವ ಮಹಿಳೆ ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು. ಇದರ ಮೂಲಕ ಪಡೆದ ಹಣದಲ್ಲಿ ಮಹಿಳೆಯರು ತಮ್ಮದೇ ಆದ ಸ್ವಂತ ಉದ್ಯೋಗ, ವ್ಯವಹಾರ, ಕಿರುಕುಳ ವ್ಯವಹಾರ, ಮತ್ತು ಅನೇಕ ರೀತಿಯ ತಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಒಂದು ಹಣವನ್ನು ಬಳಸಿಕೊಳ್ಳಬಹುದು. ಹೀಗೆ ಪಡೆದ ಹಣದಲ್ಲಿ ಶೇ 50% ಹಣವನ್ನು ಸಬ್ಸಿಡಿಯಾಗಿ ಸರ್ಕಾರವು ಮನ್ನಾ ಮಾಡುವುದು. ಇದು ಆಯಾ ವರ್ಗದ ಮಹಿಳೆಯರಿಗೆ ಅನುಗುಣವಾಗಿ ಅನ್ವಯವಾಗುತ್ತದೆ.

ಹಾಗಾದರೆ ಸಿಗುವ ಸಾಲ ಎಷ್ಟು? ಮತ್ತು ಹೇಗೆ? Udyogini Yojana.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಗರಿಷ್ಠವಾಗಿ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುವುದು. ಹಾಗೂ ನೀಡಿದ ಸಾಲದಲ್ಲಿ ಆಯಾ ವರ್ಗಕ್ಕೆ ಅನುಗುಣವಾಗಿ 90000-150000 ದ ವರೆಗೆ ಸಬ್ಸಿಡಿ ಯನ್ನು ನೀಡಲಾಗುವುದು. ಒಂದು ವೇಳೆ ಮಹಿಳೆಯರು ಅಂಗವಿಕಲರಾಗಿದ್ದರೆ, ವಿಧವೆಯಾಗಿದ್ದರೆ, ಅಥವಾ ಸಾಮಾನ್ಯ ವರ್ಗದಲ್ಲಿದ್ದು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೆ ಶೇ 30% ನಸ್ಟು ಸಬ್ಸಿಡಿಯನ್ನು ನೀಡಲಾಗುವುದು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಶೇ 50% ಅಂದರೆ 150000 ದ ವರೆಗೆ ಸಬ್ಸಿಡಿಯನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳು & ದಾಖಲೆಗಳು: Udyogini Yojana.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಆಸಕ್ತ ಮಹಿಳೆಯರು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷದ ಒಳಗಿನ ವಯೋಮಿತಿಯನ್ನು ಹೊಂದಿರಬೇಕು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷದ ಒಳಗೆ ಇರಬೇಕು.
ಸಾಮಾನ್ಯ ವರ್ಗದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷದ ಒಳಗೆ ಇರಬೇಕು.
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಆಸಕ್ತ ಮಹಿಳೆಯರು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷದ ಒಳಗಿನ ವಯೋಮಿತಿಯನ್ನು ಹೊಂದಿರಬೇಕು
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷದ ಒಳಗೆ ಇರಬೇಕು.
- ಸಾಮಾನ್ಯ ವರ್ಗದ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷದ ಒಳಗೆ ಇರಬೇಕು.
ಬೇಕಾಗುವ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ (Aadhar Card)
- ಪಡಿತರ ಚೀಟಿ (Ration Card)
- ಶಾಲಾ ವರ್ಗಾವಣೆ ಪತ್ರ (TC)
- ಎಸ್ ಎಸ್ ಎಲ್ ಸಿ ಅಂಕಪಟ್ಟಿ (SSLC Marks Card)
- ಬ್ಯಾಂಕ್ ಪಾಸ್ ಬುಕ್ (Bank Passbook)
- ಅದೇ ರೀತಿ ಒಂದು ವೇಳೆ ಅರ್ಜಿ ಸಲ್ಲಿಸುವ ಮಹಿಳೆಯರು ವಿಧವೆ ಆಗಿದ್ದರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆ ಅಂತಹ ಮಹಿಳೆಯರು ಅಗತ್ಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಕೆ ವಿಧಾನ: Apply For Udyogini Yojana.
ಉದ್ಯೋಗಿನಿ ಯೋಜನೆ ಎನ್ನುವುದು ಸರ್ಕಾರಿ ಯೋಜನೆ ಆಗಿದ್ದು ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ಮಾಡಬೇಕಾದರೆ, ಮೊದಲಿಗೆ ನಿಮ್ಮ ಹತ್ತಿರದ ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಕಚೇರಿಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಪರ್ಯಾಯ ಮಾರ್ಗವೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಯೋಜನೆಯ ಸದುಪಯೋಗ ಹಾಗೂ ಸ್ವ-ಉದ್ಯೋಗದ ಮಾಹಿತಿ:
ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ಪಡೆದ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಇದನ್ನು ಸದುಪಯೋಗ ಪಡೆಸಿಕೊಳ್ಳಬಹುದು, ಹಾಗೂ ಇದರಲ್ಲಿ ತಮ್ಮದೇ ಆದ ಸ್ವ-ಉದ್ಯೋಗವನ್ನು ಸ್ಥಾಪಿಸಿ ಅದರ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಅಡಿಯಲ್ಲಿ ನೀವು; ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ ಉದ್ಯೋಗ, ಅಗರಬತ್ತಿ, ಕಾಫಿ ಟೀ ಅಂಗಡಿ, ಬ್ಯೂಟಿ ಪಾರ್ಲರ್, ಕ್ಲಿನಿಕ್, ಜಿಮ್, ಹಿಟ್ಟಿನ ಗಿರಣಿ, ಫೋಟೋ ಸ್ಟುಡಿಯೋ, ಚಪ್ಪಲಿ ಅಂಗಡಿ, ಹೀಗೆ 88ಕ್ಕೂ ಹೆಚ್ಚಿನ ಸಣ್ಣ ಹಾಗೂ ಅತಿ ಸಣ್ಣ ಪ್ರಮಾಣದ ಉದ್ಯೋಗಗಳನ್ನು ನಡೆಸಿಕೊಂಡು ಹೋಗಬಹುದು.
ಇದಿಷ್ಟು ಉದ್ಯೋಗಿನಿ ಯೋಜನೆಯ (Udyogini Yojana) ಸಂಪೂರ್ಣ ಮಾಹಿತಿ. ಈ ರೀತಿಯ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮೊಂದಿಗೆ ಸೇರಿಕೊಳ್ಳಿ.
ಈ ಮಾಹಿತಿಗಳನ್ನು ಓದಿ:
Benefits Of Eating Garlic : ದಿನಕ್ಕೆರಡು ಬೆಳ್ಳುಳ್ಳಿ ಸಂಸಾರಿಕ ಜೀವನದ ಗುಟ್ಟು.
Skin Care Tips. ಬಿಳಿಯ ತ್ವಚೆಗಾಗಿ ಏನು ಮಾಡಬೇಕು ಗೊತ್ತಾ? Skin Care Tips In Kannada.












2 thoughts on “Udyogini Yojana: ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ..! 1.50 ಲಕ್ಷ ಸಬ್ಸಿಡಿ..! Quick Apply.”