2025ರ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಹೇಗೆ ಹಾಕುವುದು? | Karnataka Free Laptop Yojana 2025
ಇಂದು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಡಿಜಿಟಲ್ ಸಾಧನಗಳ ಪಾತ್ರ ಎಚ್ಚರಿಕೆ ತಂದಿದೆ. ಹಿಂದುಳಿದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಲಾಭ ಒದಗಿಸಲು, ಕರ್ನಾಟಕ ಸರ್ಕಾರವು “ಉಚಿತ ಲ್ಯಾಪ್‌ಟಾಪ್ ಯೋಜನೆ” ಅನ್ನು 2025 ರಲ್ಲಿಯೂ ಮುಂದುವರಿಸಿದೆ. ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮತ್ತಷ್ಟು ಸುಲಭವಾಗಿ ಮುಂದುವರೆಸಿಕೊಳ್ಳಬಹುದು.
ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ? ಮತ್ತು ಯೋಜನೆಯ ಉದ್ದೇಶ ಹಾಗೂ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Karnataka Free Laptop Yojana 2025 ಯೋಜನೆಯ ಉದ್ದೇಶವೇನು?
✅ಉಚಿತ ಲ್ಯಾಪ್‌ಟಾಪ್ ಯೋಜನೆಯ ಪ್ರಾಥಮಿಕ ಗುರಿ:
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಭಾಗದ ಅಥವಾ ಹಿಂದುಳಿದ ವರ್ಗದ ಮಕ್ಕಳಿಗೆ ಡಿಜಿಟಲೀಕರಣದ ಮೂಲಕ ಉನ್ನತ ಶೈಕ್ಷಣಿಕ ಜೀವನಕ್ಕೆ ಸಹಾಯವನ್ನು ಮಾಡುವುದು ಇದರ ಪ್ರಾಥಮಿಕ ಗುರಿ.
✅ಡಿಜಿಟಲ್ ಶಿಕ್ಷಣಕ್ಕೆ ಪ್ರೇರಣೆ ನೀಡುವುದು
ಮೇಲೆ ತಿಳಿಸಿದ ಹಾಗೆ ಪ್ರಸ್ತುತ ಶತಮಾನದಲ್ಲಿ ಪ್ರತಿಯೊಂದು ಸಹ ಡಿಜಿಟಲ್ ಆಗಿದೆ, ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣ ಪ್ರೇರೇಪಿಸುವುದು ಇದರ ಉದ್ದೇಶ
✅ಹಿಂದುಳಿದ ವರ್ಗದ ಮಕ್ಕಳಿಗೆ ತಾಂತ್ರಿಕ ಸಾಧನ ಲಭ್ಯವಾಗಿಸುವುದು
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ತಾಂತ್ರಿಕ ಸಾಧನಗಳನ್ನು ಒದಗಿಸುವ ಮೂಲಕ ಅವರ ಶೈಕ್ಷಣಿಕ ಜೀವನ ಮಟ್ಟವನ್ನು ಸುಧಾರಿಸುವುದು.
✅ಆನ್‌ಲೈನ್ ಕಲಿಕೆ, ನೋಟ್ಸ್ ತಯಾರಿ, ಮತ್ತು ಪಟ್ಟಿ ಪ್ರಾಜೆಕ್ಟ್‌ಗಳಿಗೆ ಸಹಾಯ ಮಾಡುವುದು
ತಂತ್ರಜ್ಞಾನವನ್ನು ಬಳಸಿಕೊಂಡು ಆನ್ಲೈನ್ ಕಲಿಕೆ ಹಾಗೂ ತಾಂತ್ರಿಕ ಕೋರ್ಸುಗಳ ಕಲಿಕೆ ಮತ್ತು ಇನ್ನಿತರ ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕಡೆಗೆ ಗಮನಹರಿಸಲು ಸಹಾಯ ಮಾಡುವುದು.
✅ಯುವಜನರ ಶೈಕ್ಷಣಿಕ ಮಟ್ಟವನ್ನು ಮೇಲಕ್ಕೆ ತರುವಲ್ಲಿ ಸರ್ಕಾರದ ಸಹಾಯ
ಇಂತಹ ಯೋಜನೆಗಳ ಮೂಲಕ ಯುವಜನರ ಶೈಕ್ಷಣಿಕ ಜೀವನ ಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶ.

ಅರ್ಹತಾ ಮಾನದಂಡಗಳು ಏನು? Eligibility criteria For Karnataka Free Laptop Yojana 2025
- ಅಭ್ಯರ್ಥಿ ಕರ್ನಾಟಕದ ಶಾಶ್ವತ ನಿವಾಸಿ ಆಗಿರಬೇಕು
- ಪಿಯುಸಿ (PUC) ಅಥವಾ ಪದವಿ ಕೋರ್ಸ್ ಮೊದಲನೇ ವರ್ಷ ಓದುತ್ತಿರಬೇಕು
- ಸರಕಾರಿ ಅಥವಾ ಅನುದಾನಿತ ಕಾಲೇಜು ವಿದ್ಯಾರ್ಥಿಗಳು ಮಾತ್ರ ಅರ್ಹರು
- ಎಸ್‌ಸಿ/ಎಸ್‌ಟಿ/ಒಬಿಸಿ/ಇತರೆ ಹಿಂದುಳಿದ ವರ್ಗಗಳಿಗೆ ಪ್ರಾಶಸ್ತ್ಯ
- ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ಅವಶ್ಯಕ ದಾಖಲೆಗಳು: required documents For Karnataka Free Laptop Yojana 2025
ಅರ್ಜಿಯೊಂದಿಗೆ ಈ ದಾಖಲೆಗಳು ಬೇಕಾಗುತ್ತವೆ:
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಪಿಯುಸಿ ಅಥವಾ ಹಳೆ ಶಿಕ್ಷಣ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- ಕಾಲೇಜು ID ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಪಾಸ್‌ಬುಕ್ ಪ್ರತಿ (ವಿದ್ಯಾರ್ಥಿಯ ಹೆಸರಲ್ಲಿ)
ಅರ್ಜಿಯ ವಿಧಾನ – ಹಂತ ಹಂತವಾಗಿ: How To Apply Step-By-Step
ವೆಬ್‌ಸೈಟ್‌ಗೆ ಭೇಟಿ ನೀಡಿ: 👉 ssp.karnataka.gov.in
“New Registration” ಆಯ್ಕೆಮಾಡಿ, ನಿಮ್ಮ ಮಾಹಿತಿ ಭರ್ತಿ ಮಾಡಿ
ಲಾಗಿನ್ ಮಾಡಿ – ವಿದ್ಯಾಭ್ಯಾಸ, ಕಾಲೇಜು ವಿವರಗಳು ಸೇರಿಸಿ
ಎಲ್ಲಾ ದಾಖಲೆಗಳನ್ನು ಸಕಾಲದಲ್ಲಿ ಅಪ್‌ಲೋಡ್ ಮಾಡಿ
ಅರ್ಜಿ ಸಲ್ಲಿಸುವ ಮೊದಲು ಮತ್ತೆ ಪರಿಶೀಲಿಸಿ
ಕೊನೆಗೆ “Submit” ಬಟನ್ ಒತ್ತಿ
ಲ್ಯಾಪ್‌ಟಾಪ್ ಸ್ಪೆಸಿಫಿಕೇಶನ್ ಏನು? specification’s
ಪ್ರತಿ ವರ್ಷ ಗುತ್ತಿಗೆ ಆಧಾರದ ಮೇಲೆ ವಿಭಿನ್ನ ಬ್ರಾಂಡ್ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತದೆ. ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಿ ಈ ವೈಶಿಷ್ಟ್ಯಗಳು ಇರುತ್ತವೆ:
Karnataka Free Laptop Yojana 2025
✅ Intel i3 ಅಥವಾ ಹೆಚ್ಚಿನ ಪ್ರೊಸೆಸರ್
✅ 4GB RAM, 1TB HDD ಅಥವಾ 256GB SSD
✅ Windows OS ಅಥವಾ Linux
ಆನ್‌ಲೈನ್ ಕಲಿಕೆ ಮತ್ತು ಸರಳ ಪರ್ಫಾರ್ಮೆನ್ಸ್‌ಗಾಗಿ ಉತ್ತಮ
ಅರ್ಜಿ ಕೊನೆಯ ದಿನಾಂಕ: Last Date To Apply
15 ಜೂನ್ 2025 (ದಿನಾಂಕ ಬದಲಾಗಬಹುದು, ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ)
ಮುಖ್ಯ ಸೂಚನೆಗಳು:
ಅರ್ಜಿಯ ನಂತರ ನಿಮ್ಮ ನೋಂದಣಿ ಸಂಖ್ಯೆ ಭದ್ರವಾಗಿ ಇಟ್ಟುಕೊಳ್ಳಿ
ಅರ್ಜಿ ಸ್ಥಿತಿ ssp.karnataka.gov.in ಮೂಲಕ ಪರಿಶೀಲಿಸಬಹುದು
ಆಯ್ಕೆ ಆದವರಿಗೆ SMS ಅಥವಾ ಕಾಲೇಜು ಮೂಲಕ ಮಾಹಿತಿ ದೊರೆಯುತ್ತದೆ
[short-code2]
FAQ’s:
ಖಾಸಗಿ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಹಾಕಬಹುದೆ?
ಇಲ್ಲ, ಈ ಯೋಜನೆ ಮಾತ್ರ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಿಗೆ ಮಾತ್ರ.
ಲ್ಯಾಪ್‌ಟಾಪ್ ಸ್ಫೆಸಿಫಿಕೇಶನ್ ಏನು?
ಸಾಮಾನ್ಯವಾಗಿ i3 Processors, 4GB RAM, 1TB HDD ಅಥವಾ SSD ಹೊಂದಿರುತ್ತದೆ. ಆದರೆ ವರ್ಷಾವಾರದ tender ಮೇಲ್ಆಧರಿಸಿರುತ್ತದೆ.
ಅರ್ಜಿ ಸ್ಥಿತಿ ಹೇಗೆ ಪರೀಕ್ಷಿಸಬೇಕು?
ಅರ್ಜಿ ಸಲ್ಲಿಸಿದ ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ – “Application Status” ವಿಭಾಗದಲ್ಲಿ ಪರಿಶೀಲಿಸಬಹುದು.












How to apply