7ನೇ ವೇತನ ಆಯೋಗಕ್ಕೆ ಸಿಎಂ ಗ್ರೀನ್ ಸಿಗ್ನಲ್.(7th pay commission) ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್.
ಏನಿದು 7ನೇ ವೇತನ ಆಯೋಗ ಹೆಚ್ಚಳ? ವೇತನ ಆಯೋಗ ಎಂದರೆ ಏನು?
ವೇತನ ಆಯೋಗ ಅಂದ್ರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡೋಕೆ ಮತ್ತು ಕಾಲಕಾಲಕ್ಕೆ ಅದನ್ನು ಪರಿಷ್ಕರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ಆಯೋಗವನ್ನು ರಚನೆ ಮಾಡಲಾಗಿದೆ ಅದಕ್ಕೆ ವೇತನ ಆಯೋಗ (pay commission) ಎಂದು ಕರೆಯಲಾಗುತ್ತದೆ. ಕೇಂದ್ರಕ್ಕೆ ಸೆಂಟ್ರಲ್ ಪೆ ಕಮಿಷನ್ ರಾಜ್ಯಕ್ಕೆ ಸ್ಟೇಟ್ ಕಮಿಷನ್ ಎನ್ನುವ ಆಯೋಗಗಳನ್ನು ರಚನೆ ಮಾಡಲಾಗಿರುತ್ತದೆ. ವೇತನ ಆಯೋಗ ಸರ್ಕಾರಿ ನೌಕರರ ಟಿಎ ಡಿಎ ಚ್ಆರ್ ಏ ಹಾಗೂ ಇನ್ನಿತರ ಸೌಲಭ್ಯ ಅಥವಾ ಸವಲತ್ತುಗಳ ಅವಲೋಕನ ಮಾಡಲಾಗುತ್ತದೆ. ಇದು ರಾಷ್ಟ್ರದ ಅಥವಾ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚುವರಿ ಮಾಡಬಹುದಾ ಅಥವಾ ಇಲ್ಲವಾ ಎಂಬುದನ್ನು ಹೇಳಿಕೊಡುತ್ತದೆ. ಈ ವೇತನ ಆಯೋಗವು ರಾಜ್ಯದಲ್ಲಿ ಐದು ವರ್ಷಗಳಿಗೊಮ್ಮೆ ರಚನೆಯಾಗಿ ಅಲ್ಲಿರುವ ಸರ್ಕಾರಿ ನೌಕರರ ಸಂಬಳ ಹಾಗೂ ಇನ್ನಿತರ ಕೊರತೆಗಳು ಅಥವಾ ಗೊಂದಲಗಳನ್ನು ಸರಿ ಮಾಡುವ ಕ್ರಮ ಕೈಗೊಳ್ಳುತ್ತದೆ ಕೇಂದ್ರದಲ್ಲಿ ಇದು ಹತ್ತು ವರ್ಷಗಳಿಗೊಮ್ಮೆ ನೇಮಕವಾಗುತ್ತದೆ ಹಾಗೂ ರಾಜಕೀಯ ಅಥವಾ ಆರ್ಥಿಕ ಕಾರಣಗಳಿಂದಾಗಿ ಒಂದೆರಡು ವರ್ಷಗಳ ಬದಲಾಗುತ್ತಿರುತ್ತದೆ. ಇದುವರೆಗೂ ಕೇಂದ್ರದಲ್ಲಿ ಇಂತಹ ಒಟ್ಟು ಏಳು ವೇತನ ಆಯೋಗಗಳು ಪೂರ್ಣಗೊಂಡಿವೆ. ಅದೇ ರೀತಿ ರಾಜ್ಯದಲ್ಲಿ ಇಲ್ಲಿಯವರೆಗೆ ಆರು ವೇತನ ಆಯೋಗಗಳು ಬಂದು ಹೋಗಿವೆ.1966ರಲ್ಲಿ ರಾಜ್ಯದಲ್ಲಿ ಮೊದಲನೇ ವೇತನ ಆಯೋಗ ರಚನೆಯಾಗಿತ್ತು. ಇದೀಗ ಸುದ್ದಿಯಲ್ಲಿರುವ ವೇತನ ಆಯೋಗ 7ನೇ ವೇತನ ಆಯೋಗ ಆಗಿರುತ್ತದೆ. ಏಳನೇ ವೇತನ ಆಯೋಗವನ್ನು ರಚನೆ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ.
ಇದಿಷ್ಟು ವೇತನ ಆಯೋಗದ ಬಗ್ಗೆ ಇರುವ ಮಾಹಿತಿ.



ಶೀಘ್ರದಲ್ಲಿ 7ನೇ ವೇತನ ಆಯೋಗ ಹೆಚ್ಚಳ.
ಕರ್ನಾಟಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಏನೆಂದರೆ ಕರ್ನಾಟಕ ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ( 7th pay commission) ಕ್ಕೆ ಗ್ರೀನ್ ಸಿಗ್ನಲ್ ದೊರಕಿದಂತಾಗಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯನವರು ಮೊನ್ನೆ (21/june/2024) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಸಚಿವರೊಂದಿಗೆ ಚರ್ಚೆ ಮಾಡಿದ್ದಾರೆ. ಇನ್ನೂ ಇದು ಅಧಿಕೃತವಾಗಿ ಜಾರಿಯಾಗಿಲ್ಲ. ಒಂದು ಏಳು 2027ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಳದ ಬಗ್ಗೆ ಮಾಹಿತಿ ದೊರಕಿದೆ ಅಂದರೆ ಗೌರಿ ಗಣೇಶದ ಹಬ್ಬದ ಆಚೆಗೆ ಇದು ಜಾರಿಯಾಗುವ ಸಂಭವವಿದೆ.
ಸರ್ಕಾರಿ ನೌಕರರ ವೇತನ 27.50% ರಷ್ಟು ಹೆಚ್ಚಳ!
ಒಂದು ವೇಳೆ ಕರ್ನಾಟಕ ರಾಜ್ಯ ಸರ್ಕಾರವು 7ನೇ ವೇತನವನ್ನು ಜಾರಿ ಮಾಡಿದರೆ ಸರ್ಕಾರಿ ನೌಕರರ ವೇತನದ 27.50% ರಷ್ಟು ಹೆಚ್ಚಳವಾಗುತ್ತದೆ. ಅಂದರೆ ಇದರಲ್ಲಿ ಅಂದಾಜು 5.40 ಲಕ್ಷ ನೌಕರರ ವೇತನವನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಮಾಹಿತಿ ಹೊರಬಂದಿದೆ. ಒಂದು ವೇಳೆ ಕರ್ನಾಟಕ ರಾಜ್ಯ ಸರ್ಕಾರವು 7ನೇ ವೇತನವನ್ನು ಜಾರಿ ಮಾಡಿದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚಿನ ಪ್ರಮಾಣದ ಖರ್ಚನ್ನು ತೆತ್ತಬೇಕಾಗುತ್ತದೆ. ಅಂದಾಜು 5.4 0 ಲಕ್ಷ ನೌಕರರ ಮೂಲವೇತನ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ಅಥವಾ ಸರಕಾರದ ಬೊಕ್ಕಸದಿಂದ ಅಂದಾಜು 12 ರಿಂದ 15 ಸಾವಿರ ಕೋಟಿಗಳಷ್ಟು ವಾರ್ಷಿಕ ಖರ್ಚನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಮೂಲ ಮಾಹಿತಿಗಳು ತಿಳಿಸಿಕೊಟ್ಟಿವೆ.













1 thought on “7ನೇ ವೇತನ ಆಯೋಗಕ್ಕೆ ಸಿಎಂ ಗ್ರೀನ್ ಸಿಗ್ನಲ್.”