ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 | 1,100 ಹುದ್ದೆಗಳಿಗೆ ಅರ್ಜಿ ಆಹ್ವಾನ

Photo of author

Mantesh

Publish: September 6, 2026
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026

share Share:

ಬ್ಯಾಂಕ್ ಆಫ್ ಬರೋಡಾದಲ್ಲಿ 1,100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕಟ. ಅರ್ಹತೆ, ವೇತನ, ವಯೋಮಿತಿ ಮತ್ತು ಆನ್‌ಲೈನ್ ಅರ್ಜಿ ವಿಧಾನ ಇಲ್ಲಿ ತಿಳಿಯಿರಿ.

ಹಲೋ ಸ್ನೇಹಿತರೇ ನಮಸ್ಕಾರ, ಬ್ಯಾಂಕ್ ಆಫ್ ಬರೋಡಾ (BOB) ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 1,100 ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಮಾಹಿತಿ:

ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅವಕಾಶ ಇದಾಗಿದ್ದು, ಸೆಪ್ಟೆಂಬರ್ 24, 2026 ಕೊನೆಯ ದಿನಾಂಕವಾಗಿದೆ.

ಉದ್ಯೋಗ ವಿವರಗಳ ಸಂಕ್ಷಿಪ್ತ ಮಾಹಿತಿ

  • ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
  • ಹುದ್ದೆಗಳು: ವೆಲ್ತ್ ಎಕ್ಸಿಕ್ಯೂಟಿವ್, ಕ್ರೆಡಿಟ್ ಅನಾಲಿಸ್ಟ್ (C & IC)
  • ಒಟ್ಟು ಹುದ್ದೆಗಳು: 1,100
  • ಉದ್ಯೋಗ ಸ್ಥಳ: ಅಖಿಲ ಭಾರತ
  • ವೇತನ: ₹48,480 – ₹64,820/- ತಿಂಗಳಿಗೆ

ಹುದ್ದೆವಾರು ವಿವರ ಮತ್ತು ವೇತನ

  • ವೆಲ್ತ್ ಎಕ್ಸಿಕ್ಯೂಟಿವ್ – 1,000 ಹುದ್ದೆಗಳು – ₹48,480/-
  • ಕ್ರೆಡಿಟ್ ಅನಾಲಿಸ್ಟ್ – 100 ಹುದ್ದೆಗಳು – ₹64,820/-

ಅರ್ಹತಾ ವಿವರ

ಶೈಕ್ಷಣಿಕ ಅರ್ಹತೆ:

  • ವೆಲ್ತ್ ಎಕ್ಸಿಕ್ಯೂಟಿವ್: ಯಾವುದೇ ವಿಷಯದಲ್ಲಿ ಪದವಿ
  • ಕ್ರೆಡಿಟ್ ಅನಾಲಿಸ್ಟ್: ಸಿಎ ಅಥವಾ ಪದವಿ ಪೂರ್ಣ

ವಯೋಮಿತಿ:

  • ವೆಲ್ತ್ ಎಕ್ಸಿಕ್ಯೂಟಿವ್: 22–32 ವರ್ಷ
  • ಕ್ರೆಡಿಟ್ ಅನಾಲಿಸ್ಟ್: 21–33 ವರ್ಷ

ವಯೋಮಿತಿ ಸಡಿಲಿಕೆ: OBC – 3 ವರ್ಷ, SC/ST – 5 ವರ್ಷ, PwBD (ಸಾಮಾನ್ಯ) – 10 ವರ್ಷ, PwBD (OBC) – 13 ವರ್ಷ, PwBD (SC/ST) – 15 ವರ್ಷ

ಅರ್ಜಿ ಶುಲ್ಕ

  • ಸಾಮಾನ್ಯ/EWS/OBC: ₹850/-
  • SC/ST/PwBD/ESM: ₹175/-

ಆಯ್ಕೆ ಪ್ರಕ್ರಿಯೆ

  1. ಅರ್ಜಿ ಶಾರ್ಟ್‌ಲಿಸ್ಟಿಂಗ್
  2. ಆನ್‌ಲೈನ್ ಪರೀಕ್ಷೆ (ನಡೆಸಿದಲ್ಲಿ ಮಾತ್ರ)
  3. ಮನೋಮಾಪನ ಪರೀಕ್ಷೆ
  4. ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ
  5. ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ

ಅರ್ಜಿ ಸಲ್ಲಿಸುವ ವಿಧಾನ

  1. bankofbaroda.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. Careers ವಿಭಾಗಕ್ಕೆ ತೆರಳಿ
  3. Apply Online ಕ್ಲಿಕ್ ಮಾಡಿ ವಿವರ ಭರ್ತಿ ಮಾಡಿ
  4. ದಾಖಲೆ, ಫೋಟೋ, ಸಹಿ ಅಪ್‌ಲೋಡ್ ಮಾಡಿ
  5. ಶುಲ್ಕ ಪಾವತಿಸಿ ಸಲ್ಲಿಸಿ, ಪ್ರಿಂಟ್ ತೆಗೆದುಕೊಳ್ಳಿ

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ: 04-09-2026
  • ಅರ್ಜಿ ಕೊನೆಯ ದಿನಾಂಕ: 24-09-2026

ವಿವರಲಿಂಕ್
Notificationಅಧಿಕೃತ ಅಧಿಸೂಚನೆ
ಅರ್ಜಿ ಸಲ್ಲಿಸಿApply Online
Join NowWhatsApp Group
Join NowTelegram Group

Join
Join WhatsApp Group