DHFWS ಬೆಂಗಳೂರು ನೇಮಕಾತಿ 2026: 23 ಹುದ್ದೆಗಳಿಗೆ Walk-in Interview. Medical Officer, Nursing Officer, Lab Technician ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. 09 ಜೂನ್ 2026 ಇಂದಿರಾನಗರ ಬೆಂಗಳೂರು.
ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS Bangalore) 2026ನೇ ಸಾಲಿನಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ವೈದ್ಯಾಧಿಕಾರಿ (Medical Officer), ಶುಶ್ರೂಷಾ ಅಧಿಕಾರಿ (Nursing Officer), ಪ್ರಯೋಗಶಾಲಾ ತಂತ್ರಜ್ಞ (Lab Technician), ಮತ್ತು ಕಿರಿಯ ಆರೋಗ್ಯ ಸಹಾಯಕ (Junior Health Assistant) ಸೇರಿದಂತೆ ಒಟ್ಟು 23 ಹುದ್ದೆಗಳನ್ನು Walk-in Interview ಮೂಲಕ ಭರ್ತಿ ಮಾಡಲಾಗುವುದು.
ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆ, PM-ABHIM ಯೋಜನೆ ಅಡಿ ಹೊಸದಾಗಿ ಅನುಮೋದನೆಯಾಗಿರುವ ಹಾಗೂ ಪ್ರಸ್ತುತ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. MBBS, B.Sc Nursing, GNM, ಡಿಪ್ಲೊಮಾ ಅಥವಾ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಮುಖ್ಯ ದಿನಾಂಕಗಳು
| ವಿವರ | ದಿನಾಂಕ |
|---|---|
| ಅಧಿಸೂಚನೆ ಬಿಡುಗಡೆ | 30-05-2026 |
| Walk-in Interview ದಿನಾಂಕ | 09-06-2026 |
| Interview ಸಮಯ | ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:00 ಗಂಟೆವರೆಗೆ |
ಹುದ್ದೆಗಳ ವಿವರ ಮತ್ತು ಖಾಲಿ ಹುದ್ದೆ
| ಹುದ್ದೆ ಹೆಸರು | ಖಾಲಿ ಹುದ್ದೆ | ವಯೋಮಿತಿ |
|---|---|---|
| ವೈದ್ಯಾಧಿಕಾರಿ (Medical Officer) | 9 | ಗರಿಷ್ಠ 60 ವರ್ಷ |
| ಶುಶ್ರೂಷಾ ಅಧಿಕಾರಿ (Nursing Officer) | 6 | — |
| ಪ್ರಯೋಗಶಾಲಾ ತಂತ್ರಜ್ಞ (Lab Technician) | 2 | ಗರಿಷ್ಠ 35 ವರ್ಷ |
| ಕಿರಿಯ ಆರೋಗ್ಯ ಸಹಾಯಕ (Junior Health Assistant) | 6 | — |
| ಒಟ್ಟು | 23 |
ವಿದ್ಯಾರ್ಹತೆ
ಪ್ರತಿ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಹೀಗಿದೆ:
ವೈದ್ಯಾಧಿಕಾರಿ (Medical Officer): MBBS ಪದವಿ ಪೂರ್ಣಗೊಳಿಸಿ KMC ನೋಂದಣಿ ಮಾಡಿಕೊಂಡಿರಬೇಕು. Internship ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶುಶ್ರೂಷಾ ಅಧಿಕಾರಿ (Nursing Officer): ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಿಂದ B.Sc (Nursing) ಅಥವಾ GNM ಕೋರ್ಸ್ ಪೂರ್ಣಗೊಳಿಸಿ, KRNC ನೋಂದಣಿ ಹೊಂದಿದ್ದು, Computer ಜ್ಞಾನ ಕಡ್ಡಾಯ.
ಪ್ರಯೋಗಶಾಲಾ ತಂತ್ರಜ್ಞ (Lab Technician): SSLC ಅಥವಾ ಸಮಾನ ಪರೀಕ್ಷೆ ಉತ್ತೀರ್ಣರಾಗಿ, ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿ ನಡೆಸುವ ಪ್ರಯೋಗಶಾಲಾ ತಂತ್ರಜ್ಞ ಕೋರ್ಸ್ ನಲ್ಲಿ 3 ವರ್ಷ ಉತ್ತೀರ್ಣರಾಗಿರಬೇಕು. ಅಥವಾ 2nd PUC ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿ, ಪ್ರಯೋಗಶಾಲಾ ತಂತ್ರಜ್ಞ ಕೋರ್ಸ್ ನಲ್ಲಿ 2 ವರ್ಷ ಉತ್ತೀರ್ಣರಾಗಿರಬೇಕು. KSBMB ನೋಂದಣಿ ಕಡ್ಡಾಯ.
ಕಿರಿಯ ಆರೋಗ್ಯ ಸಹಾಯಕ (Junior Health Assistant): SSLC ಅಥವಾ ಸಮಾನ ಪರೀಕ್ಷೆ ಉತ್ತೀರ್ಣರಾಗಿ, ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ ವಿಪಿದ್ಯೋದ್ಧೇಶ ಮೂಲ ಆರೋಗ್ಯ ಕಾರ್ಯಕರ್ತ ತರಬೇತಿ ಪಡೆದಿರಬೇಕು. ಅಥವಾ PUC (ವಿಜ್ಞಾನ) ಉತ್ತೀರ್ಣರಾಗಿ, 2 ವರ್ಷಗಳ ಆರೋಗ್ಯ ನಿರೀಕ್ಷಕ ಡಿಪ್ಲೊಮಾ ಹೊಂದಿರಬೇಕು.
ವಯೋಮಿತಿ
- ವೈದ್ಯಾಧಿಕಾರಿ: ಗರಿಷ್ಠ 60 ವರ್ಷ
- ಪ್ರಯೋಗಶಾಲಾ ತಂತ್ರಜ್ಞ: ಗರಿಷ್ಠ 35 ವರ್ಷ (SC/ST – 38 ವರ್ಷ, OBC – 38 ವರ್ಷ, PH ವರ್ಗ-1 – 40 ವರ್ಷ)
- ವಯೋ ವಿನಾಯಿತಿ: DHFWS ಬೆಂಗಳೂರು ನಿಯಮಾನುಸಾರ
ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಅಭ್ಯರ್ಥಿಗಳನ್ನು Walk-in Interview ಮೂಲಕ ನೇರವಾಗಿ ಆಯ್ಕೆ ಮಾಡಲಾಗುವುದು. NHM ಮಾರ್ಗಸೂಚಿಗಳಂತೆ Roster ಕ್ರಮ Merit ಅನ್ವಯ ನೇಮಕಾತಿ ನೀಡಲಾಗುತ್ತದೆ.
ವೇತನ ವಿವರ
| ಹುದ್ದೆ ಹೆಸರು | ಮಾಸಿಕ ವೇತನ |
|---|---|
| ವೈದ್ಯಾಧಿಕಾರಿ (Medical Officer) | ₹60,000/- |
| ಶುಶ್ರೂಷಾ ಅಧಿಕಾರಿ (Nursing Officer) | ₹20,594/- |
| ಪ್ರಯೋಗಶಾಲಾ ತಂತ್ರಜ್ಞ (Lab Technician) | ₹20,594/- |
| ಕಿರಿಯ ಆರೋಗ್ಯ ಸಹಾಯಕ (Junior Health Assistant) | ₹20,404/- |
ಅರ್ಜಿ ಶುಲ್ಕ
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
Online ಅರ್ಜಿ ಅಗತ್ಯವಿಲ್ಲ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 09-06-2026 ರಂದು ಬೆಳಿಗ್ಗೆ 10:30 ಗಂಟೆಗೆ ಅಗತ್ಯ ದಾಖಲೆಗಳೊಂದಿಗೆ 1 ಸೆಟ್ Xerox ಪ್ರತಿಗಳನ್ನು ತೆಗೆದುಕೊಂಡು ಕೆಳಕಂಡ ವೇದಿಕೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು:
ವೇದಿಕೆ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣ, ಹಳೆ ಟಿ.ಬಿ ಆಸ್ಪತ್ರೆ, ಹಳೆ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಸಮೀಪ, ಇಂದಿರಾನಗರ, ಬೆಂಗಳೂರು – 38.
ಮುಖ್ಯ ಲಿಂಕ್‌ಗಳು
- ಅಧಿಕೃತ ನೋಟಿಫಿಕೇಶನ್: Click Here
- ಅಧಿಕೃತ ವೆಬ್‌ಸೈಟ್: bengaluruurban.nic.in











