2026-27ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಆರಂಭ. ಅರ್ಹತೆ, ಬೇಕಾದ ದಾಖಲೆಗಳು, ಜಿಲ್ಲಾವಾರು ಕೊನೆಯ ದಿನಾಂಕ ಮತ್ತು ಆನ್ಲೈನ್ ಅರ್ಜಿ ಲಿಂಕ್ ಇಲ್ಲಿದೆ.
2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ, ಜಿಲ್ಲಾ ಪಂಚಾಯತ್ ಮತ್ತು ಗ್ರಾಮೀಣ ಕೈಗಾರಿಕೆ ವಿಭಾಗದ ಮೂಲಕ ಗ್ರಾಮೀಣ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Power Operated Sewing Machine) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
ಮುಖ್ಯ ಮಾಹಿತಿ: ಈ ಯೋಜನೆ ಜಿಲ್ಲಾವಾರು ನಡೆಯುತ್ತದೆ. ಪ್ರತಿ ಜಿಲ್ಲೆಯ ದಿನಾಂಕ, ವಯೋಮಿತಿ ಮತ್ತು ಅರ್ಜಿ ಲಿಂಕ್ ಬೇರೆ ಬೇರೆ ಆಗಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜಿಲ್ಲೆಯ ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ.
ಯೋಜನೆಯ ಸಂಕ್ಷಿಪ್ತ ವಿವರ
| ವಿವರ | ಮಾಹಿತಿ |
|---|---|
| ಯೋಜನೆಯ ಹೆಸರು | ಉಚಿತ ಹೊಲಿಗೆ ಯಂತ್ರ ಯೋಜನೆ 2026-27 |
| ಸೌಲಭ್ಯ | ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ |
| ಯಾರಿಗೆ | ಗ್ರಾಮೀಣ ಮಹಿಳಾ ಅಭ್ಯರ್ಥಿಗಳು |
| ಅರ್ಜಿ ವಿಧಾನ | ಆನ್ಲೈನ್ (ಸೇವಾಸಿಂಧು / ಜಿಲ್ಲಾ ಅಧಿಕೃತ ಲಿಂಕ್) |
| ಅರ್ಜಿ ಶುಲ್ಕ | ಅಧಿಸೂಚನೆಯಲ್ಲಿ ಶುಲ್ಕದ ಉಲ್ಲೇಖವಿಲ್ಲ |
ಅರ್ಹತೆಗಳು
- ಅರ್ಜಿದಾರರು ಮಹಿಳೆಯಾಗಿರಬೇಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು
- ವಯೋಮಿತಿ 18 ರಿಂದ 45 ವರ್ಷ (ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ವಯಸ್ಸು ಹೆಚ್ಚು ಕಡಿಮೆ ಇರಬಹುದು)
- ಕನಿಷ್ಠ 8ನೇ ತರಗತಿ ಶಿಕ್ಷಣ
- ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ನಗರ ಪಾಲಿಕೆ ವ್ಯಾಪ್ತಿಯ ಅಭ್ಯರ್ಥಿಗಳು ಅರ್ಹರಲ್ಲ
- ಕಲಬುರಗಿ ಜಿಲ್ಲೆಯಲ್ಲಿ ಎಸ್ಸಿ ಮತ್ತು ಎಸ್ಟಿ ವರ್ಗದವರು ಮಾತ್ರ ಅರ್ಜಿ ಸಲ್ಲಿಸಬಹುದು
ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
- ಜನ್ಮ ದಿನಾಂಕದ ದಾಖಲೆ (ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣಪತ್ರ)
- ಹೊಲಿಗೆ ತರಬೇತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ)
- ರೇಷನ್ ಕಾರ್ಡ್ ಅಥವಾ ಗುರುತಿನ ಚೀಟಿ
- ನಿರ್ಗತಿಕ ವಿಧವೆ ಪ್ರಮಾಣಪತ್ರ (ಅನ್ವಯಿಸಿದರೆ)
- ವಿಕಲಚೇತನರ ಪ್ರಮಾಣಪತ್ರ (ಅನ್ವಯಿಸಿದರೆ)
- ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ (PDO) ದೃಢೀಕರಣ ಪತ್ರ ಅಥವಾ ಕಾರ್ಮಿಕ ಇಲಾಖೆಯ ಕುಶಲಕರ್ಮಿ ಗುರುತಿನ ಚೀಟಿ
Start and Last Dates of Free Sewing Machine Scheme in Karnataka 2026-27


ಜಿಲ್ಲಾವಾರು ಅರ್ಜಿ ದಿನಾಂಕಗಳು
| ಜಿಲ್ಲೆ | ಪ್ರಾರಂಭ ದಿನಾಂಕ | ಕೊನೆಯ ದಿನಾಂಕ | ಸ್ಥಿತಿ |
|---|---|---|---|
| ಕಲಬುರಗಿ | ಜುಲೈ 20, 2026 | ಸೆಪ್ಟೆಂಬರ್ 30, 2026 | ಚಾಲ್ತಿಯಲ್ಲಿದೆ |
| ಚಿಕ್ಕಮಗಳೂರು | ಆಗಸ್ಟ್ 10, 2026 | ಸೆಪ್ಟೆಂಬರ್ 30, 2026 | ಚಾಲ್ತಿಯಲ್ಲಿದೆ |
| ಮಂಡ್ಯ | ಸೆಪ್ಟೆಂಬರ್ 1, 2026 | ಸೆಪ್ಟೆಂಬರ್ 30, 2026 | ಚಾಲ್ತಿಯಲ್ಲಿದೆ |
| ಚಾಮರಾಜನಗರ | ಸೆಪ್ಟೆಂಬರ್ 1, 2026 | ಸೆಪ್ಟೆಂಬರ್ 30, 2026 | ಚಾಲ್ತಿಯಲ್ಲಿದೆ |
| ಹಾಸನ | ಜುಲೈ 25, 2026 | ಸೆಪ್ಟೆಂಬರ್ 16, 2026 | ಕೊನೆಗೊಂಡಿದೆ |
| ರಾಮನಗರ (ಬೆಂಗಳೂರು ದಕ್ಷಿಣ) | ಆಗಸ್ಟ್ 10, 2026 | ಸೆಪ್ಟೆಂಬರ್ 5, 2026 | ಕೊನೆಗೊಂಡಿದೆ |
| ಮೈಸೂರು | ಆಗಸ್ಟ್ 17, 2026 | ಆಗಸ್ಟ್ 30, 2026 | ಕೊನೆಗೊಂಡಿದೆ |
| ಯಾದಗಿರಿ | ಜುಲೈ 10, 2026 | ಜುಲೈ 31, 2026 | ಕೊನೆಗೊಂಡಿದೆ |
ಇನ್ನುಳಿದ ಜಿಲ್ಲೆಗಳಾದ ದಕ್ಷಿಣ ಕನ್ನಡ, ತುಮಕೂರು, ಹಾವೇರಿ, ಬೀದರ್, ಉಡುಪಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು, ವಿಜಯಪುರ, ಗದಗ, ಬಾಗಲಕೋಟೆ, ಧಾರವಾಡ, ವಿಜಯನಗರ, ಬೆಂಗಳೂರು ನಗರ, ಕೋಲಾರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅರ್ಜಿ ಶೀಘ್ರದಲ್ಲೇ ಆರಂಭವಾಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಕೆಲವು ಜಿಲ್ಲೆಗಳ ಅರ್ಜಿ ಸೇವಾಸಿಂಧು ಪೋರ್ಟಲ್ ಮೂಲಕ ನಡೆಯುತ್ತದೆ. ಕಲಬುರಗಿಯಂತಹ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಆಡಳಿತದ ಪ್ರತ್ಯೇಕ ಲಿಂಕ್ ಇದೆ. ಎರಡೂ ಲಿಂಕ್ಗಳನ್ನು ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ. ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವ ಹಂತಗಳು:
- ಕೆಳಗಿನ ಟೇಬಲ್ನಲ್ಲಿರುವ ನಿಮ್ಮ ಜಿಲ್ಲೆಯ “ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

- ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

- ಯೋಜನೆಯ ವಿವರಗಳನ್ನು ಆಯ್ಕೆ ಮಾಡಿ.

- ಪತ್ರವ್ಯವಹಾರದ ವಿವರಗಳನ್ನು ನೀಡಿ: ಮೊಬೈಲ್ ಸಂಖ್ಯೆ, ಇ-ಮೇಲ್, ವಿಳಾಸ (ಗ್ರಾಮ, ತಾಲ್ಲೂಕು, ಜಿಲ್ಲೆ) ಮತ್ತು ಪಿನ್ ಕೋಡ್.

- ಶೈಕ್ಷಣಿಕ ಅರ್ಹತೆ ಮತ್ತು ನಿಮಗೆ ಸಂಬಂಧಿಸಿದ ಪ್ರಮಾಣಪತ್ರಗಳ ಮಾಹಿತಿಯನ್ನು ಆಯ್ಕೆ ಮಾಡಿ.

- ಘೋಷಣೆಯ ಬಾಕ್ಸ್ನಲ್ಲಿ ಟಿಕ್ ಮಾಡಿ, ಕ್ಯಾಪ್ಚಾ ತುಂಬಿ, Submit ಕ್ಲಿಕ್ ಮಾಡಿ.

- ಮುಂದಿನ ಪುಟದಲ್ಲಿ ಎಲ್ಲಾ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಸೇವ್ ಮಾಡಿ.
- ಕೊನೆಯಲ್ಲಿ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಗಮನಿಸಿ
- PDO ದೃಢೀಕರಣ ಪತ್ರವನ್ನು ಮೊದಲೇ ಗ್ರಾಮ ಪಂಚಾಯತಿಯಿಂದ ಪಡೆದುಕೊಳ್ಳಿ
- ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ
- ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ
- ಅರ್ಜಿ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಪ್ರಮುಖ ಲಿಂಕ್ಗಳು
| ವಿವರ | ಲಿಂಕ್ |
|---|---|
| ಕಲಬುರಗಿ ಜಿಲ್ಲೆ ಅರ್ಜಿ (ಎಸ್ಸಿ, ಎಸ್ಟಿ ಮಾತ್ರ) | ಅರ್ಜಿ ಸಲ್ಲಿಸಿ |
| ಚಿಕ್ಕಮಗಳೂರು ಜಿಲ್ಲೆ ಅರ್ಜಿ | ಅರ್ಜಿ ಸಲ್ಲಿಸಿ |
| ಮಂಡ್ಯ ಜಿಲ್ಲೆ ಅರ್ಜಿ | ಅರ್ಜಿ ಸಲ್ಲಿಸಿ |
| ಚಾಮರಾಜನಗರ ಜಿಲ್ಲೆ ಅರ್ಜಿ | ಅರ್ಜಿ ಸಲ್ಲಿಸಿ |
| ಕಲಬುರಗಿ ಜಿಲ್ಲಾ ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಚಿಕ್ಕಮಗಳೂರು ಜಿಲ್ಲಾ ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಮಂಡ್ಯ ಜಿಲ್ಲಾ ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಚಾಮರಾಜನಗರ ಜಿಲ್ಲಾ ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| WhatsApp ಗ್ರೂಪ್ ಸೇರಿ | ಜಾಯಿನ್ ಆಗಿ |
| Telegram ಚಾನೆಲ್ ಸೇರಿ | ಜಾಯಿನ್ ಆಗಿ |
Free Sewing Machine Scheme in Karnataka Online Application Links 2026-27
| ಜಿಲ್ಲೆ | ಹೆಚ್ಚಿನ ಮಾಹಿತಿಗಾಗಿ | ಅರ್ಜಿ ಸಲ್ಲಿಕೆ ಲಿಂಕ್ಸ್ |
|---|---|---|
| ಯಾದಗಿರಿ | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ (ಕೊನೆಗೊಂಡಿದೆ) |
| ಕಲಬುರಗಿ | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ (ಎಸ್ಸಿ, ಎಸ್ಟಿ ಮಾತ್ರ) |
| ಹಾಸನ | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ (ಕೊನೆಗೊಂಡಿದೆ) |
| ಚಿಕ್ಕಮಗಳೂರು | ————— | ಅರ್ಜಿ ಸಲ್ಲಿಸಿ |
| ರಾಮನಗರ (ಬೆಂಗಳೂರು ದಕ್ಷಿಣ) | ————— | ಅರ್ಜಿ ಸಲ್ಲಿಸಿ (ಕೊನೆಗೊಂಡಿದೆ) |
| ಮೈಸೂರು | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ (ಕೊನೆಗೊಂಡಿದೆ) |
| ಮಂಡ್ಯ | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ |
| ಚಾಮರಾಜನಗರ | ಇಲ್ಲಿ ಕ್ಲಿಕ್ ಮಾಡಿ (PDF) | ಅರ್ಜಿ ಸಲ್ಲಿಸಿ |
| ದಕ್ಷಿಣ ಕನ್ನಡ | ————— | ಶೀಘ್ರದಲ್ಲೇ ಆರಂಭ… |
| ತುಮಕೂರು | ————— | ಶೀಘ್ರದಲ್ಲೇ ಆರಂಭ… |
| ಹಾವೇರಿ | ————— | ಶೀಘ್ರದಲ್ಲೇ ಆರಂಭ… |
| ಬೀದರ್ | ————— | ಶೀಘ್ರದಲ್ಲೇ ಆರಂಭ… |
| ಉಡುಪಿ | ————— | ಶೀಘ್ರದಲ್ಲೇ ಆರಂಭ… |
| ಚಿಕ್ಕಬಳ್ಳಾಪುರ | ————— | ಶೀಘ್ರದಲ್ಲೇ ಆರಂಭ… |
| ಚಿತ್ರದುರ್ಗ | ————— | ಶೀಘ್ರದಲ್ಲೇ ಆರಂಭ… |
| ರಾಯಚೂರು | ————— | ಶೀಘ್ರದಲ್ಲೇ ಆರಂಭ… |
| ವಿಜಯಪುರ | ————— | ಶೀಘ್ರದಲ್ಲೇ ಆರಂಭ… |
| ಗದಗ | ————— | ಶೀಘ್ರದಲ್ಲೇ ಆರಂಭ… |
| ಬಾಗಲಕೋಟೆ | ————— | ಶೀಘ್ರದಲ್ಲೇ ಆರಂಭ… |
| ಧಾರವಾಡ | ————— | ಶೀಘ್ರದಲ್ಲೇ ಆರಂಭ… |
| ವಿಜಯನಗರ | ————— | ಶೀಘ್ರದಲ್ಲೇ ಆರಂಭ… |
| ಬೆಂಗಳೂರು ನಗರ | ————— | ಶೀಘ್ರದಲ್ಲೇ ಆರಂಭ… |
| ಕೋಲಾರ | ————— | ಶೀಘ್ರದಲ್ಲೇ ಆರಂಭ… |
| ಬಳ್ಳಾರಿ | ————— | ಶೀಘ್ರದಲ್ಲೇ ಆರಂಭ… |
ಪ್ರಮುಖ ಲಿಂಕ್ಗಳು
| ವಿವರ | ಲಿಂಕ್ |
|---|---|
| WhatsApp ಗ್ರೂಪ್ ಸೇರಿ | ಜಾಯಿನ್ ಆಗಿ |
| Telegram ಚಾನೆಲ್ ಸೇರಿ | ಜಾಯಿನ್ ಆಗಿ |











