ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ 365 ನಾವಿಕ್, ಯಾಂತ್ರಿಕ್, ಹೈಜೀನಿಸ್ಟ್ ಹುದ್ದೆಗಳ ನೇಮಕಾತಿ. ಅರ್ಹತೆ, ವಯೋಮಿತಿ, ಸಂಬಳ, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕ 21-10-2026 ಇಲ್ಲಿದೆ.
ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) CGEPT 01/2027 ಮತ್ತು 02/2027 ಬ್ಯಾಚ್ಗಳ ಮೂಲಕ ನಾವಿಕ್ (ಜನರಲ್ ಡ್ಯೂಟಿ), ನಾವಿಕ್ (ಡೊಮೆಸ್ಟಿಕ್ ಬ್ರಾಂಚ್), ಯಾಂತ್ರಿಕ್ ಮತ್ತು ಹೈಜೀನಿಸ್ಟ್-I ಸೇರಿ ಒಟ್ಟು 365 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ, 12ನೇ ತರಗತಿ ಅಥವಾ ಡಿಪ್ಲೊಮಾ ಪೂರೈಸಿದವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಪ್ರಮುಖ ವಿವರ
- ಸಂಸ್ಥೆ: ಭಾರತೀಯ ಕೋಸ್ಟ್ ಗಾರ್ಡ್ (ರಕ್ಷಣಾ ಸಚಿವಾಲಯ)
- ಒಟ್ಟು ಹುದ್ದೆಗಳು: 365 (ತಾತ್ಕಾಲಿಕ)
- ನಾವಿಕ್ (ಜನರಲ್ ಡ್ಯೂಟಿ): 260
- ಯಾಂತ್ರಿಕ್: 60 (ಮೆಕ್ಯಾನಿಕಲ್ 28, ಎಲೆಕ್ಟ್ರಿಕಲ್ 23, ಎಲೆಕ್ಟ್ರಾನಿಕ್ಸ್ 9)
- ನಾವಿಕ್ (ಡೊಮೆಸ್ಟಿಕ್ ಬ್ರಾಂಚ್): 25
- ಹೈಜೀನಿಸ್ಟ್-I: 20
- ಕೆಲಸದ ಸ್ಥಳ: ಅಖಿಲ ಭಾರತ
- ಮಹಿಳೆಯರು ನಾವಿಕ್ (ಜನರಲ್ ಡ್ಯೂಟಿ) ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು
ಶೈಕ್ಷಣಿಕ ಅರ್ಹತೆ
- ನಾವಿಕ್ (ಜಿಡಿ): ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 12ನೇ ತರಗತಿ ಉತ್ತೀರ್ಣ
- ನಾವಿಕ್ (ಡಿಬಿ): 10ನೇ ತರಗತಿ ಉತ್ತೀರ್ಣ
- ಹೈಜೀನಿಸ್ಟ್-I: ಮೆಟ್ರಿಕ್ಯುಲೇಷನ್ ಅಥವಾ ITI
- ಯಾಂತ್ರಿಕ್: 10ನೇ ಮತ್ತು 12ನೇ ತರಗತಿ ಜೊತೆಗೆ AICTE ಅನುಮೋದಿತ 2 ಅಥವಾ 3 ವರ್ಷದ ಸಂಬಂಧಿತ ಡಿಪ್ಲೊಮಾ
ಸಂಬಳ
- ನಾವಿಕ್ ಮತ್ತು ಹೈಜೀನಿಸ್ಟ್-I: ಲೆವೆಲ್ 3, ಮೂಲ ವೇತನ ರೂ. 21,700
- ಯಾಂತ್ರಿಕ್: ಲೆವೆಲ್ 5, ರೂ. 29,200 ಜೊತೆಗೆ ರೂ. 6,200 ಯಾಂತ್ರಿಕ್ ವೇತನ
- ತುಟ್ಟಿಭತ್ಯೆ ಮತ್ತು ಇತರ ಭತ್ಯೆಗಳು ಹೆಚ್ಚುವರಿ
ಮುಖ್ಯ ಮಾಹಿತಿ: ಒಬ್ಬ ಅಭ್ಯರ್ಥಿ ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕನ್ನಡಕ ಬಳಸುವವರು ನಾವಿಕ್ (ಜಿಡಿ) ಹುದ್ದೆಗೆ ಅರ್ಹರಲ್ಲ. ಕರ್ನಾಟಕದ ಪುರುಷ ಅಭ್ಯರ್ಥಿಗಳು ನಾವಿಕ್ (ಜಿಡಿ) ಹುದ್ದೆಗೆ ದಕ್ಷಿಣ ವಲಯದಲ್ಲಿ ಸ್ಪರ್ಧಿಸುತ್ತಾರೆ ಮತ್ತು ಡೊಮಿಸೈಲ್ ಪ್ರಮಾಣಪತ್ರ ಅಪ್ಲೋಡ್ ಮಾಡುವುದು ಕಡ್ಡಾಯ.
ವಯೋಮಿತಿ
- ನಾವಿಕ್ (ಜಿಡಿ): 01-11-2005 ರಿಂದ 01-05-2009 ರ ನಡುವೆ ಜನಿಸಿರಬೇಕು
- ಯಾಂತ್ರಿಕ್: 01-05-2005 ರಿಂದ 01-05-2009
- ನಾವಿಕ್ (ಡಿಬಿ): 01-11-2005 ರಿಂದ 01-10-2009
- ಹೈಜೀನಿಸ್ಟ್-I: 01-11-2002 ರಿಂದ 01-10-2009
- ಸಡಿಲಿಕೆ: OBC ಗೆ 3 ವರ್ಷ, SC/ST ಗೆ 5 ವರ್ಷ
ಅರ್ಜಿ ಶುಲ್ಕ
ಅರ್ಜಿ ಶುಲ್ಕ ರೂ. 550. SC/ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕಾರ್ಡ್ ಅಥವಾ UPI ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ
- ಹಂತ 1: 100 ಪ್ರಶ್ನೆಗಳ ಆನ್ಲೈನ್ ಪರೀಕ್ಷೆ (1 ಗಂಟೆ, ನೆಗೆಟಿವ್ ಮಾರ್ಕಿಂಗ್ ಇಲ್ಲ)
- ಹಂತ 2: ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
- ಹಂತ 3: INS ಚಿಲ್ಕಾದಲ್ಲಿ ದಾಖಲೆ ಮತ್ತು ವೈದ್ಯಕೀಯ ಪರೀಕ್ಷೆ
- ಹಂತ 4: ಮೂಲ ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವುದು ಹೇಗೆ?
- SSC ಅಧಿಕೃತ ವೆಬ್ಸೈಟ್ ssc.gov.in ಗೆ ಭೇಟಿ ನೀಡಿ ನೋಂದಣಿ ಮಾಡಿ.
- ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಬಳಸಿ.
- ಅಂಕಪಟ್ಟಿಯಲ್ಲಿರುವಂತೆಯೇ ಅಂಕಗಳನ್ನು ನಮೂದಿಸಿ.
- ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ (ಅನ್ವಯವಾದರೆ), ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ: 06-10-2026 (ಬೆಳಗ್ಗೆ 11:00)
- ಕೊನೆಯ ದಿನಾಂಕ: 21-10-2026 (ಸಂಜೆ 5:30)
- ಹಂತ 1 ಆನ್ಲೈನ್ ಪರೀಕ್ಷೆ: ನವೆಂಬರ್ 2026 ಆರಂಭ/ಮಧ್ಯ (ತಾತ್ಕಾಲಿಕ)
ಪ್ರಮುಖ ಲಿಂಕ್ಗಳು
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ (PDF) | Notification PDF |
| ಆನ್ಲೈನ್ ಅರ್ಜಿ ಸಲ್ಲಿಸಲು | Apply Online |
| WhatsApp ಗ್ರೂಪ್ | Join Now |
| Telegram ಚಾನೆಲ್ | Join Now |











