ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ 2026: 572 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸಾದವರಿಗೆ ಅವಕಾಶ

Photo of author

Mantesh

Publish: July 11, 2026
ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ

share Share:

KEA ಮೂಲಕ ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೆ ಅರ್ಜಿ ಆಹ್ವಾನ. ಪಿಯುಸಿ ಪಾಸಾದವರು ಜುಲೈ 30ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯಲ್ಲಿ ಖಾಲಿಯಿರುವ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಗ್ರೂಪ್-ಸಿ ಸರ್ಕಾರಿ ಹುದ್ದೆ ಪಡೆಯುವ ಉತ್ತಮ ಅವಕಾಶವಾಗಿದೆ.

ಹುದ್ದೆಯ ವಿವರ

  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಇಲಾಖೆ: ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ
  • ಹುದ್ದೆ: ಗ್ರಾಮ ಆಡಳಿತ ಅಧಿಕಾರಿ (VAO) – ಗ್ರೂಪ್ ಸಿ
  • ಒಟ್ಟು ಹುದ್ದೆಗಳು: 572 (ಉಳಿಕೆ ಮೂಲ ವೃಂದ: 505, ಕಲ್ಯಾಣ ಕರ್ನಾಟಕ: 67)
  • ಅರ್ಜಿ ವಿಧಾನ: ಆನ್‌ಲೈನ್ ಮಾತ್ರ

ಜಿಲ್ಲಾವಾರು ಹುದ್ದೆಗಳ ಹಂಚಿಕೆ

  • ತುಮಕೂರು, ಮಂಡ್ಯ – ತಲಾ 50, ಬೆಳಗಾವಿ – 48, ಮೈಸೂರು – 45
  • ಹಾಸನ – 35, ಚಾಮರಾಜನಗರ – 31, ಬೆಂಗಳೂರು ದಕ್ಷಿಣ – 30
  • ಕಲಬುರಗಿ (KK) – 40, ಬೀದರ್ (KK) – 17, ರಾಯಚೂರು (KK) – 10
  • ಉಳಿದ ಜಿಲ್ಲೆಗಳ ಸಂಪೂರ್ಣ ಪಟ್ಟಿಗೆ ಅಧಿಕೃತ ಅಧಿಸೂಚನೆ ನೋಡಿ. ಅಭ್ಯರ್ಥಿಗಳು ಒಂದೇ ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ

  • ದ್ವಿತೀಯ ಪಿಯುಸಿ (12ನೇ ತರಗತಿ) ಅಥವಾ ತತ್ಸಮಾನ ಪಾಸಾಗಿರಬೇಕು
  • CBSE/ICSE 12ನೇ ತರಗತಿ, ITI+NIOS, 3 ವರ್ಷದ ಡಿಪ್ಲೊಮಾ ಸಹ ಅರ್ಹ
  • ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅವಕಾಶವಿಲ್ಲ

ವಯೋಮಿತಿ

  • ಕನಿಷ್ಠ 18 ವರ್ಷ ತುಂಬಿರಬೇಕು
  • ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ
  • 2A/2B/3A/3B: ಗರಿಷ್ಠ 43 ವರ್ಷ
  • SC/ST/ಪ್ರವರ್ಗ-1: ಗರಿಷ್ಠ 45 ವರ್ಷ

ಮುಖ್ಯ ಮಾಹಿತಿ: ಈ ಬಾರಿ ಗರಿಷ್ಠ ವಯೋಮಿತಿಯಲ್ಲಿ ಸರ್ಕಾರ ಒಂದು ಬಾರಿಗೆ 5 ವರ್ಷ ಸಡಿಲಿಕೆ ನೀಡಿದೆ. ಮಾಜಿ ಸೈನಿಕರು, ವಿಶೇಷ ಚೇತನರು ಹಾಗೂ ವಿಧವೆಯರಿಗೆ ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು 2A/2B/3A/3B: ರೂ. 750
  • SC/ST/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿ: ರೂ. 500
  • ವಿಶೇಷ ಚೇತನರು: ರೂ. 250

ಪರೀಕ್ಷಾ ವಿಧಾನ

  • ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆ, ತಪ್ಪು ಉತ್ತರಕ್ಕೆ 0.25 ಅಂಕ ಕಡಿತ
  • ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಪ್ರಶ್ನೆ, 100 ಅಂಕ, 2 ಗಂಟೆ
  • ಪತ್ರಿಕೆ-2 (ಕನ್ನಡ, ಇಂಗ್ಲಿಷ್, ಕಂಪ್ಯೂಟರ್): 100 ಪ್ರಶ್ನೆ, 100 ಅಂಕ, 2 ಗಂಟೆ
  • ಕನಿಷ್ಠ ಶೇ. 35 ಅಂಕ ಗಳಿಸುವುದು ಕಡ್ಡಾಯ
  • SSLC ಹಂತದಲ್ಲಿ ಕನ್ನಡ ಓದದವರಿಗೆ 150 ಅಂಕದ ಕಡ್ಡಾಯ ಕನ್ನಡ ಪರೀಕ್ಷೆ (ಕನಿಷ್ಠ 50 ಅಂಕ ಅಗತ್ಯ, ಮೆರಿಟ್‌ಗೆ ಪರಿಗಣಿಸಲ್ಲ)

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ: 11.07.2026
  • ಅರ್ಜಿ ಕೊನೆಯ ದಿನಾಂಕ: 30.07.2026
  • ಶುಲ್ಕ ಪಾವತಿ ಕೊನೆಯ ದಿನ: 31.07.2026
  • RPC ಪರೀಕ್ಷೆ: 04.10.2026
  • KK ಪರೀಕ್ಷೆ: 25.10.2026

ಅರ್ಜಿ ಸಲ್ಲಿಸುವ ವಿಧಾನ

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಿ
  • ವೈಯಕ್ತಿಕ, ಶೈಕ್ಷಣಿಕ ಮಾಹಿತಿ ಭರ್ತಿ ಮಾಡಿ, ದಾಖಲೆ ಅಪ್‌ಲೋಡ್ ಮಾಡಿ
  • ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ, ಪ್ರಿಂಟ್‌ಔಟ್ ಇಟ್ಟುಕೊಳ್ಳಿ

Links Table

ವಿವರಲಿಂಕ್
ಆನ್‌ಲೈನ್ ಅರ್ಜಿ ಸಲ್ಲಿಸಿApply Online
ಅಧಿಕೃತ ಅಧಿಸೂಚನೆOfficial Notification
WhatsAppJoin
TelegramJoin
Karnataka24.inKarnataka24.in

Join
Join WhatsApp Group