ಭೂದಾಖಲೆಗಳ ಇಲಾಖೆಯ 750 ಭೂಮಾಪಕ ಹುದ್ದೆಗಳಿಗೆ ಕೆಇಎ ಅರ್ಜಿ ಆಹ್ವಾನ. ಅರ್ಹತೆ, ವಯೋಮಿತಿ, ಸಂಬಳ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ 750 ಭೂಮಾಪಕ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅರ್ಜಿ ಆಹ್ವಾನಿಸಿದೆ. ಎಂಜಿನಿಯರಿಂಗ್ ಅಥವಾ ಸಂಬಂಧಿತ ಪದವಿ/ಡಿಪ್ಲೊಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಹುದ್ದೆಯ ವಿವರ
- ಒಟ್ಟು ಹುದ್ದೆಗಳು: 750
- ಮೂಲ ವೃಂದ (RPC): 560 ಹುದ್ದೆಗಳು
- ಕಲ್ಯಾಣ ಕರ್ನಾಟಕ ವೃಂದ (KK): 190 ಹುದ್ದೆಗಳು
- ಆಯ್ಕೆ ಮಾಧ್ಯಮ: ಸ್ಪರ್ಧಾತ್ಮಕ ಪರೀಕ್ಷೆ
- ಇಲಾಖೆ: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಶೈಕ್ಷಣಿಕ ಅರ್ಹತೆ
- ಬಿಇ ಅಥವಾ ಬಿ.ಟೆಕ್ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ, ಅಥವಾ
- ಗಣಿತ/ಭೌತಶಾಸ್ತ್ರ/ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಕೃಷಿ ವಿಷಯದಲ್ಲಿ ಬಿ.ಎಸ್ಸಿ ಪದವಿ, ಅಥವಾ
- ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಜಿನಿಯರಿಂಗ್/ತಂತ್ರಜ್ಞಾನ ಡಿಪ್ಲೊಮಾ
ಮುಖ್ಯ ಮಾಹಿತಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನಿಮ್ಮ ಅರ್ಹತೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಆಯ್ಕೆ ಮಾನದಂಡಗಳು ವೃಂದವಾರು (RPC/KK) ಭಿನ್ನವಾಗಿರುತ್ತವೆ.
ವಯೋಮಿತಿ
07-08-2026ರಂತೆ ಲೆಕ್ಕಹಾಕಲಾಗುತ್ತದೆ:
- ಕನಿಷ್ಠ ವಯಸ್ಸು: 18 ವರ್ಷ
- ಸಾಮಾನ್ಯ ವರ್ಗ: 40 ವರ್ಷ
- ಪ್ರವರ್ಗ 2ಎ/2ಬಿ/3ಎ/3ಬಿ: 43 ವರ್ಷ
- ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1: 45 ವರ್ಷ
ಸಂಬಳ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.37,500 ರಿಂದ ರೂ.76,100 ವರೆಗೆ ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಸಾಮಾನ್ಯ/2ಎ/2ಬಿ/3ಎ/3ಬಿ ವರ್ಗ: ರೂ.750
- ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1/ಮಾಜಿ ಸೈನಿಕ: ರೂ.500
- ಅಂಗವಿಕಲ ಅಭ್ಯರ್ಥಿಗಳು: ರೂ.250
ಆಯ್ಕೆ ಪ್ರಕ್ರಿಯೆ
- ಸ್ಪರ್ಧಾತ್ಮಕ ಬರಹ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ
- KEA ಅಧಿಕೃತ ಜಾಲತಾಣ ತೆರೆದು ನೇಮಕಾತಿ ವಿಭಾಗದಡಿ “ಭೂಮಾಪಕರ ನೇಮಕಾತಿ 2026” ಆಯ್ಕೆ ಮಾಡಿ
- ನಿಮ್ಮ ವೃಂದ (RPC ಅಥವಾ KK) ಆಯ್ಕೆ ಮಾಡಿ ಅರ್ಜಿ ಲಿಂಕ್ ಕ್ಲಿಕ್ ಮಾಡಿ
- ಹೊಸಬರಾಗಿದ್ದಲ್ಲಿ ಡಿಜಿಲಾಕರ್ ಮೂಲಕ ನೋಂದಣಿ ಮಾಡಿ, ಲಾಗಿನ್ ಆಗಿ ಅಗತ್ಯ ವಿವರ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ: ಜುಲೈ 11
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 07
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 -08- 2026 (ವಿಸ್ತರಿಸಲಾಗಿದೆ)
- ಶುಲ್ಕ ಪಾವತಿ ಕೊನೆಯ ದಿನಾಂಕ: ಆಗಸ್ಟ್ 10
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21 -08- 2026 (ವಿಸ್ತರಿಸಲಾಗಿದೆ)
- ಸ್ಪರ್ಧಾತ್ಮಕ ಪರೀಕ್ಷೆ: ಅಕ್ಟೋಬರ್ 03











