ಕಾರ್ಮಿಕ ಕಲ್ಯಾಣ ವಿದ್ಯಾರ್ಥಿವೇತನ 2026-27 – ಬೀಡಿ, ಸಿನೆಮಾ, ಸುಣ್ಣದ ಕಲ್ಲು ಮತ್ತು ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳಿಗೆ ₹1,000 ರಿಂದ ₹25,000 ವರೆಗೆ ವಿದ್ಯಾರ್ಥಿವೇತನ. ಅರ್ಹತೆ, ದಾಖಲೆಗಳು, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕ ಇಲ್ಲಿ ತಿಳಿಯಿರಿ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2026-27ನೇ ಸಾಲಿಗೆ ಕಾರ್ಮಿಕ ಕಲ್ಯಾಣ ವಿದ್ಯಾರ್ಥಿವೇತನ ಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಬೀಡಿ, ಸಿನೆಮಾ, ಸುಣ್ಣದ ಕಲ್ಲು ಮತ್ತು ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಎಂಜಿನಿಯರಿಂಗ್, ಮೆಡಿಕಲ್‌ವರೆಗೆ ₹1,000 ರಿಂದ ₹25,000 ವರೆಗೆ ಆರ್ಥಿಕ ನೆರವು ಸಿಗಲಿದೆ. ಅರ್ಜಿ ಶುಲ್ಕ ಇಲ್ಲ, ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್.
ಗಮನಿಸಿ: ಇದು ಕರ್ನಾಟಕ ಸರ್ಕಾರದ ಸ್ವಂತ ಕಾರ್ಮಿಕ ಕಲ್ಯಾಣ ಮಂಡಳಿ (KLWB) ಸ್ಕಾಲರ್‌ಶಿಪ್ ಅಲ್ಲ. ಇದು ಕೇಂದ್ರ ಸರ್ಕಾರದ ಪ್ರತ್ಯೇಕ ಯೋಜನೆಯಾಗಿದ್ದು, ಬೀಡಿ/ಸಿನೆಮಾ/ಗಣಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಅನ್ವಯ. ರಾಜ್ಯ KLWB ಸ್ಕಾಲರ್‌ಶಿಪ್‌ಗೆ ನಿರ್ಮಾಣ ಕಾರ್ಮಿಕರ ಮಕ್ಕಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ಯೋಜನೆಯ ಸಂಕ್ಷಿಪ್ತ ಮಾಹಿತಿ
| ವಿವರ | ಮಾಹಿತಿ |
|---|---|
| ಯೋಜನೆ ಹೆಸರು | ಕಾರ್ಮಿಕ ಕಲ್ಯಾಣ ವಿದ್ಯಾರ್ಥಿವೇತನ (Labour Welfare Scholarship) |
| ನಿರ್ವಹಣೆ | ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ |
| ಪೋರ್ಟಲ್ | National Scholarship Portal (scholarships.gov.in) |
| ಅರ್ಜಿ ಶುಲ್ಕ | ಇಲ್ಲ |
| ಮೊತ್ತ | ₹1,000 ರಿಂದ ₹25,000 (ವಾರ್ಷಿಕ) |
ಯಾರು ಅರ್ಜಿ ಸಲ್ಲಿಸಬಹುದು?
✔ ಬೀಡಿ ಕಾರ್ಮಿಕರ ಮಕ್ಕಳು (ನೋಂದಾಯಿತ)
✔ ಸಿನೆಮಾ ಕ್ಷೇತ್ರದ ಕಾರ್ಮಿಕರ ಮಕ್ಕಳು
✔ ಸುಣ್ಣದ ಕಲ್ಲು (ಲೈಮ್‌ಸ್ಟೋನ್) ಗಣಿ ಕಾರ್ಮಿಕರ ಮಕ್ಕಳು
✔ ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳು
ಪೋಷಕರ ಬಳಿ ಸಂಬಂಧಪಟ್ಟ ಆಡಳಿತ ಮಂಡಳಿಯ ಅಧಿಕೃತ ID Card ಇರುವುದು ಕಡ್ಡಾಯ.
ವಿದ್ಯಾರ್ಥಿವೇತನ ಮೊತ್ತ (ತರಗತಿವಾರು)
| ಶೈಕ್ಷಣಿಕ ಹಂತ | ವಾರ್ಷಿಕ ಮೊತ್ತ |
|---|---|
| 1 ರಿಂದ 4ನೇ ತರಗತಿ | ₹1,000 |
| 5 ರಿಂದ 8ನೇ ತರಗತಿ | ₹1,500 |
| 9 ಮತ್ತು 10ನೇ ತರಗತಿ | ₹2,000 |
| ಪ್ರಥಮ ಮತ್ತು ದ್ವಿತೀಯ ಪಿಯುಸಿ | ₹3,000 |
| ಐಟಿಐ / ಪಾಲಿಟೆಕ್ನಿಕ್ / ಪದವಿ (ಬಿ.ಎಸ್ಸಿ ಕೃಷಿ ಸೇರಿ) | ₹6,000 |
| ವೃತ್ತಿಪರ ಕೋರ್ಸ್ (ಎಂಜಿನಿಯರಿಂಗ್/ಮೆಡಿಕಲ್) | ₹25,000 |
ಅಗತ್ಯ ದಾಖಲೆಗಳು
✔ ಆದಾಯ ಪ್ರಮಾಣಪತ್ರ
✔ ಪೋಷಕರ ಕಾರ್ಮಿಕ ಗುರುತಿನ ಚೀಟಿ
✔ ವಿದ್ಯಾರ್ಥಿಯ ಪಾಸ್‌ಪೋರ್ಟ್ ಫೋಟೋ
✔ ಆಧಾರ್ ಕಾರ್ಡ್
✔ ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟ
✔ ಹಿಂದಿನ ವರ್ಷದ ಅಂಕಪಟ್ಟಿ / TC
✔ ಬೋನಫೈಡ್ ಪ್ರಮಾಣಪತ್ರ
ಎಲ್ಲಾ ದಾಖಲೆ PDF/JPG ಫಾರ್ಮ್ಯಾಟ್, 100KB ಒಳಗೆ ಸ್ಕ್ಯಾನ್ ಮಾಡಿಡಿ.
ಅರ್ಜಿ ಸಲ್ಲಿಸುವ ವಿಧಾನ
- scholarships.gov.in ಗೆ ಭೇಟಿ ನೀಡಿ
- One Time Registration (OTR) ಮಾಡಿ — ಆಧಾರ್ + OTP ಬಳಸಿ
- OTR ID ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ
- “ಕಾರ್ಮಿಕ ಕಲ್ಯಾಣ ವಿದ್ಯಾರ್ಥಿವೇತನ” ಆಯ್ಕೆ ಮಾಡಿ
- ಅರ್ಜಿ ನಮೂನೆ ಭರ್ತಿ ಮಾಡಿ, ದಾಖಲೆ ಅಪ್‌ಲೋಡ್ ಮಾಡಿ
- Preview ಪರಿಶೀಲಿಸಿ Final Submit ಮಾಡಿ
- ಶಾಲೆ/ಕಾಲೇಜಿನಿಂದ ಪರಿಶೀಲನೆ ಆದ ಬಳಿಕ ಜಿಲ್ಲಾ/ರಾಜ್ಯ ಮಟ್ಟದ ಅನುಮೋದನೆ
ಇಂಟರ್ನೆಟ್ ಸೌಲಭ್ಯ ಇಲ್ಲದವರು ಹತ್ತಿರದ ಗ್ರಾಮ ಒನ್ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಬಹುದು.
ಹಣ ಆಧಾರ್ ಪೇಮೆಂಟ್ ಬ್ರಿಡ್ಜ್ (DBT) ಮೂಲಕ ವಿದ್ಯಾರ್ಥಿಯ ಸ್ವಂತ, ಆಧಾರ್-ಲಿಂಕ್ ಆದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಕೊನೆಯ ದಿನಾಂಕ
✔ ಮೆಟ್ರಿಕ್ ಪೂರ್ವ (1-10ನೇ ತರಗತಿ): ಆಗಸ್ಟ್ 31, 2026
✔ ಮೆಟ್ರಿಕ್ ನಂತರ (11ನೇ ತರಗತಿ ಮತ್ತು ಮೇಲ್ಪಟ್ಟು): ಅಕ್ಟೋಬರ್ 31, 2026
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ಅಧಿಕೃತ ಪೋರ್ಟಲ್ | scholarships.gov.in ಗೆ ಭೇಟಿ ನೀಡಿ |
| ಸಹಾಯವಾಣಿ | 9148240554 / 080-23471406 |
| WhatsApp ಗ್ರೂಪ್ ಸೇರಿ | |
| Telegram | Telegram ಚಾನಲ್ ಸೇರಿ |
| ಇತರ ಸ್ಕಾಲರ್‌ಶಿಪ್ ಮಾಹಿತಿ | Click Here |











