ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ 2026: NICL Administrative Officer Recruitment 2026

Photo of author

Mantesh

Publish: October 12, 2026
NICL Administrative Officer Recruitment 2026

share Share:

ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ 321 ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹತೆ, ವಯೋಮಿತಿ, ವೇತನ, ಪರೀಕ್ಷೆ ಮತ್ತು ಕೊನೆಯ ದಿನಾಂಕ ಇಲ್ಲಿ ತಿಳಿಯಿರಿ.

ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ವಿಮಾ ಸಂಸ್ಥೆಯಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL), ಸ್ಕೇಲ್-I ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಜೆನೆರಾಲಿಸ್ಟ್ ಮತ್ತು ಸ್ಪೆಷಲಿಸ್ಟ್) ಒಟ್ಟು 321 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 28, 2026 ಕೊನೆಯ ದಿನ. ಪ್ರಿಲಿಮಿನರಿ ಪರೀಕ್ಷೆಗೆ ಕರ್ನಾಟಕದ ಏಳು ನಗರಗಳಲ್ಲಿ ಕೇಂದ್ರಗಳಿವೆ.

ಹುದ್ದೆಗಳ ಪ್ರಮುಖ ವಿವರ

  • ಸಂಸ್ಥೆ: ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL)
  • ಹುದ್ದೆ: ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಕೇಲ್-I)
  • ಒಟ್ಟು ಹುದ್ದೆಗಳು: 321 (ಜೆನೆರಾಲಿಸ್ಟ್ 200, ಸ್ಪೆಷಲಿಸ್ಟ್ 121)
  • ಕರ್ತವ್ಯ ಸ್ಥಳ: ಭಾರತದ ಯಾವುದೇ ಭಾಗ
  • ಅರ್ಜಿ ವಿಧಾನ: ಆನ್‌ಲೈನ್

ಸ್ಪೆಷಲಿಸ್ಟ್ ಹುದ್ದೆಗಳ ವಿಂಗಡಣೆ:

  • ಫೈನಾನ್ಸ್ (CA/CMA): 20
  • ಲೀಗಲ್: 20
  • ಇನ್ಫಾರ್ಮೇಷನ್ ಟೆಕ್ನಾಲಜಿ: 11 (ಬ್ಯಾಕ್‌ಲಾಗ್ ಸೇರಿ)
  • ಆಟೋಮೊಬೈಲ್ ಇಂಜಿನಿಯರ್: 20
  • ರಿಸ್ಕ್ ಇಂಜಿನಿಯರ್: 28
  • ಕಂಪನಿ ಸೆಕ್ರೆಟರಿ: 2
  • ಅಗ್ರಿಕಲ್ಚರ್: 20

ಮುಖ್ಯ ಮಾಹಿತಿ: ಜೆನೆರಾಲಿಸ್ಟ್ ಹುದ್ದೆಗೆ ಯಾವುದೇ ವಿಷಯದ ಪದವಿ ಸಾಕು. ಸ್ಪೆಷಲಿಸ್ಟ್ ಹುದ್ದೆಗಳಿಗೆ ಆಯಾ ವಿಷಯದ ನಿರ್ದಿಷ್ಟ ಅರ್ಹತೆ ಕಡ್ಡಾಯ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿ.

ಶೈಕ್ಷಣಿಕ ಅರ್ಹತೆ

  • ಜೆನೆರಾಲಿಸ್ಟ್: ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ
  • ಫೈನಾನ್ಸ್: ಚಾರ್ಟರ್ಡ್ ಅಕೌಂಟೆಂಟ್ (ICAI) ಅಥವಾ ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (ICWAI), ಜೊತೆಗೆ ಪದವಿ/ಸ್ನಾತಕೋತ್ತರ ಪದವಿ
  • ಲೀಗಲ್: ಕಾನೂನಿನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ
  • ಇನ್ಫಾರ್ಮೇಷನ್ ಟೆಕ್ನಾಲಜಿ: ಕಂಪ್ಯೂಟರ್ ಸೈನ್ಸ್/ಐಟಿಯಲ್ಲಿ BE/B.Tech/ME/M.Tech ಅಥವಾ MCA
  • ಆಟೋಮೊಬೈಲ್ ಇಂಜಿನಿಯರ್: ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ BE/B.Tech/ME/M.Tech
  • ರಿಸ್ಕ್ ಇಂಜಿನಿಯರ್: ಇಂಜಿನಿಯರಿಂಗ್ ಪದವಿ ಅಥವಾ ಸ್ನಾತಕೋತ್ತರ ಪದವಿ
  • ಕಂಪನಿ ಸೆಕ್ರೆಟರಿ: ACS/FCS, ಜೊತೆಗೆ ಪದವಿ/ಸ್ನಾತಕೋತ್ತರ ಪದವಿ
  • ಅಗ್ರಿಕಲ್ಚರ್: ಅಗ್ರಿಕಲ್ಚರ್, ಅಗ್ರಿಕಲ್ಚರಲ್ ಬಯೋಟೆಕ್ನಾಲಜಿ ಅಥವಾ ಅಗ್ರಿಕಲ್ಚರಲ್ ಇಂಜಿನಿಯರಿಂಗ್‌ನಲ್ಲಿ 4 ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿ

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ ರೂ. 82,485 ಆಗಿದ್ದು, ವೇತನ ಶ್ರೇಣಿ ರೂ. 82,485 ರಿಂದ ರೂ. 1,56,745 ರವರೆಗೆ ಇರುತ್ತದೆ.

ವಯೋಮಿತಿ (01-10-2026ಕ್ಕೆ)

  • ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ:

  • ಒಬಿಸಿ (ಎನ್‌ಸಿಎಲ್): 3 ವರ್ಷ
  • ಎಸ್‌ಸಿ/ಎಸ್‌ಟಿ: 5 ವರ್ಷ
  • ಪಿಡಬ್ಲ್ಯೂಬಿಡಿ (ಜನರಲ್/ಇಡಬ್ಲ್ಯೂಎಸ್): 10 ವರ್ಷ
  • ಪಿಡಬ್ಲ್ಯೂಬಿಡಿ (ಒಬಿಸಿ): 13 ವರ್ಷ
  • ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ): 15 ವರ್ಷ

ಅರ್ಜಿ ಶುಲ್ಕ

  • ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: ರೂ. 250
  • ಇತರೆ ಎಲ್ಲಾ ಅಭ್ಯರ್ಥಿಗಳು: ರೂ. 1,000
  • ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಮಾದರಿ

ಆಯ್ಕೆಯು ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ (ಎರಡೂ ಆನ್‌ಲೈನ್), ಸಂದರ್ಶನ ಮತ್ತು ದಾಖಲೆ ಪರಿಶೀಲನೆಯ ಮೂಲಕ ನಡೆಯುತ್ತದೆ.

  • ಪ್ರಿಲಿಮಿನರಿ: ಇಂಗ್ಲಿಷ್ (30 ಅಂಕ), ರೀಸನಿಂಗ್ (35 ಅಂಕ), ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (35 ಅಂಕ). ಒಟ್ಟು 100 ಪ್ರಶ್ನೆ, 100 ಅಂಕ; ಪ್ರತಿ ವಿಭಾಗಕ್ಕೆ 20 ನಿಮಿಷ
  • ಮುಖ್ಯ ಪರೀಕ್ಷೆ: ಒಟ್ಟು 250 ಅಂಕ. ರೀಸನಿಂಗ್, ಜನರಲ್ ಅವೇರ್‌ನೆಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಭಾಗಗಳಿರುತ್ತವೆ. ಸ್ಪೆಷಲಿಸ್ಟ್ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 50 ಅಂಕಗಳ ತಾಂತ್ರಿಕ ವಿಷಯ ಪರೀಕ್ಷೆ ಇರುತ್ತದೆ

ಕರ್ನಾಟಕದಲ್ಲಿನ ಪರೀಕ್ಷಾ ಕೇಂದ್ರಗಳು:

  • ಪ್ರಿಲಿಮಿನರಿ: ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
  • ಮುಖ್ಯ ಪರೀಕ್ಷೆ: ಬೆಂಗಳೂರು, ಹುಬ್ಬಳ್ಳಿ/ಧಾರವಾಡ

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  2. ಕೆಳಗಿನ ಲಿಂಕ್ ಟೇಬಲ್‌ನಲ್ಲಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಯನ್ನು ಭರ್ತಿ ಮಾಡಿ.
  4. ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಸೂಚಿಸಿದ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
  5. ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ, ಪ್ರತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ: ಅಕ್ಟೋಬರ್ 08, 2026
  • ಅರ್ಜಿ ಕೊನೆಯ ದಿನಾಂಕ: ಅಕ್ಟೋಬರ್ 28, 2026
  • ಪ್ರಿಲಿಮಿನರಿ ಪರೀಕ್ಷೆ: ನವೆಂಬರ್ 17, 2026
  • ಮುಖ್ಯ ಪರೀಕ್ಷೆ: ಡಿಸೆಂಬರ್ 22, 2026

NICL AO Recruitment 2026 ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಸೂಚನೆ (Notification PDF)ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
WhatsApp ಗ್ರೂಪ್ ಸೇರಲುಇಲ್ಲಿ ಕ್ಲಿಕ್ ಮಾಡಿ
Telegram ಚಾನೆಲ್ ಸೇರಲುಇಲ್ಲಿ ಕ್ಲಿಕ್ ಮಾಡಿ

Join
Join WhatsApp Group