ಎಸ್‌ಎಸ್‌ಪಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ 2026-27: ಅರ್ಜಿ ಸಲ್ಲಿಕೆ ಪ್ರಾರಂಭ, ಕೊನೆಯ ದಿನಾಂಕ ಇಲ್ಲಿದೆ

Photo of author

Suma Golasangi

Publish: August 10, 2026
SSP post matric scholarship 2026-27

share Share:

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP) ಮೂಲಕ 2026-27ನೇ ಸಾಲಿನ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಅರ್ಹತೆ, ಬೇಕಾದ ದಾಖಲೆಗಳು, ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ.

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (State Scholarship Portal – SSP) ಮೂಲಕ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಲಾಗುವ 2026-27ನೇ ಸಾಲಿನ ಮೆಟ್ರಿಕ್ ನಂತರದ (Post Matric) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. 10ನೇ ತರಗತಿ (SSLC) ಪೂರ್ಣಗೊಳಿಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಸೇರಿದಂತೆ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ವಿದ್ಯಾರ್ಥಿಗಳು ಅಧಿಕೃತ ಪೋರ್ಟಲ್ ssp.postmatric.karnataka.gov.in ಮೂಲಕ ಇಲಾಖಾವಾರು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಆರ್ಟಿಕಲ್‌ನಲ್ಲಿ ಯಾವೆಲ್ಲಾ ಇಲಾಖೆಗಳು ಈ ಸ್ಕೀಮ್‌ನಡಿ ಬರುತ್ತವೆ, ಬೇಕಾಗುವ ದಾಖಲೆಗಳು, ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ತಿಳಿಸಲಾಗಿದೆ.

SSP ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನದಡಿ ಬರುವ ಇಲಾಖೆಗಳು

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಡಿಯಲ್ಲಿ ಈ ಕೆಳಗಿನ ಇಲಾಖೆಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನೀಡುತ್ತವೆ:

✔ ಸಮಾಜ ಕಲ್ಯಾಣ ಇಲಾಖೆ
✔ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
✔ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
✔ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
✔ ತಾಂತ್ರಿಕ ಶಿಕ್ಷಣ ಇಲಾಖೆ
✔ ವೈದ್ಯಕೀಯ ಶಿಕ್ಷಣ ಇಲಾಖೆ
✔ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
✔ ಆಯುಷ್ ಇಲಾಖೆ
✔ ವಿಕಲಚೇತನರ ಕಲ್ಯಾಣ ಇಲಾಖೆ
✔ ಕಾಲೇಜು ಶಿಕ್ಷಣ ಇಲಾಖೆ
✔ ಕಾರ್ಮಿಕ ಇಲಾಖೆ
✔ ಕೃಷಿ ಇಲಾಖೆ
✔ ಜವಳಿ ಮತ್ತು ಕೈಮಗ್ಗ ಇಲಾಖೆ
✔ ಸಾರಿಗೆ ಇಲಾಖೆ
✔ ಮೀನುಗಾರಿಕೆ ಇಲಾಖೆ

ಒಂದೊಂದು ಇಲಾಖೆಯೂ ತನ್ನದೇ ಆದ ಅರ್ಹತಾ ಮಾನದಂಡ, ಆದಾಯ ಮಿತಿ ಹಾಗೂ ಕೊನೆಯ ದಿನಾಂಕ ಹೊಂದಿರುತ್ತದೆ. ಹಾಗಾಗಿ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜಾತಿ/ವರ್ಗಕ್ಕೆ ಸಂಬಂಧಿಸಿದ ಇಲಾಖೆಯ ದಿನಾಂಕವನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಮುಖ್ಯ ಮಾಹಿತಿ: ಬಹುತೇಕ ಇಲಾಖೆಗಳಿಗೆ ಕೊನೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಈಗಾಗಲೇ ಪ್ರಕಟವಾಗಿರುವ ಇಲಾಖೆಗಳ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

SSP ವಿದ್ಯಾರ್ಥಿವೇತನಕ್ಕೆ ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:

✔ ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಆಧಾರ್‌ನಲ್ಲಿರುವ ಹಾಗೆಯೇ ಹೆಸರು
✔ ಕುಟುಂಬ ಗುರುತಿನ ಸಂಖ್ಯೆ (kutumba-services.karnataka.gov.in)
✔ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
✔ ವಿದ್ಯಾರ್ಥಿಯ ಇ-ಮೇಲ್ ಐಡಿ
✔ ಎಸ್‌ಎಸ್‌ಎಲ್‌ಸಿ ನೋಂದಣಿ ಸಂಖ್ಯೆ
✔ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ
✔ ವಿಕಲಚೇತನ ವಿದ್ಯಾರ್ಥಿಗಳಿಗೆ ಯುಡಿಐಡಿ ಗುರುತಿನ ಸಂಖ್ಯೆ
✔ ವಾಸಿಸುವ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರ ಹಾಗೂ ಮನೆಯ ವಿಳಾಸ
✔ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
✔ ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ ಮಾತ್ರ)
✔ ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ ಮಾತ್ರ)

SSP ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ 2026-27 ಕೊನೆಯ ದಿನಾಂಕ

ಇಲಾಖೆಕೊನೆಯ ದಿನಾಂಕ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ31/08/2026
ಸಮಾಜ ಕಲ್ಯಾಣ ಇಲಾಖೆ31/01/2027
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ31/08/2026
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ30/09/2026
ತಾಂತ್ರಿಕ ಶಿಕ್ಷಣ ಇಲಾಖೆಶೀಘ್ರದಲ್ಲೇ ಪ್ರಕಟ
ಬ್ರಾಹ್ಮಣ ಅಭಿವೃದ್ಧಿ ಇಲಾಖೆಶೀಘ್ರದಲ್ಲೇ ಪ್ರಕಟ
ಕಾರ್ಮಿಕ ಇಲಾಖೆಶೀಘ್ರದಲ್ಲೇ ಪ್ರಕಟ
ಕೃಷಿ ಇಲಾಖೆಶೀಘ್ರದಲ್ಲೇ ಪ್ರಕಟ
ಕಾಲೇಜು ಶಿಕ್ಷಣ ಇಲಾಖೆಶೀಘ್ರದಲ್ಲೇ ಪ್ರಕಟ
ಆಯುಷ್ ಇಲಾಖೆಶೀಘ್ರದಲ್ಲೇ ಪ್ರಕಟ
ವೈದ್ಯಕೀಯ ಶಿಕ್ಷಣ ಇಲಾಖೆಶೀಘ್ರದಲ್ಲೇ ಪ್ರಕಟ
ವಿಕಲಚೇತನರ ಕಲ್ಯಾಣ ಇಲಾಖೆಶೀಘ್ರದಲ್ಲೇ ಪ್ರಕಟ

SSP ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿಧಾನ

✔ ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಬಳಸಿ
✔ ಎಸ್‌ಎಸ್‌ಪಿ ಖಾತೆ ಇಲ್ಲದಿದ್ದರೆ ಹೊಸದಾಗಿ ಕ್ರಿಯೇಟ್ ಮಾಡಿ
✔ ನಂತರ ಲಾಗಿನ್ ಆಗಿ
✔ Apply for Post-Matric Scholarship ಮೇಲೆ ಕ್ಲಿಕ್ ಮಾಡಿ
✔ ಹಂತ 1 – ವ್ಯಾಸಂಗ / ಜಾತಿ / ವೈಯಕ್ತಿಕ ವಿವರಗಳು ಭರ್ತಿ ಮಾಡಿ
✔ ಹಂತ 2 – ಕಾಲೇಜಿನ ವಿವರಗಳು ನಮೂದಿಸಿ
✔ ಹಂತ 3 – ಇ-ಧೃಢೀಕರಣ ವಿವರಗಳು ನೀಡಿ
✔ ಹಂತ 4 – ವಸತಿ ನಿಲಯ ವಿವರಗಳು (ಅನ್ವಯವಾದಲ್ಲಿ)
✔ ಹಂತ 5 – ಪೂರ್ವವೀಕ್ಷಣೆ ಪರಿಶೀಲಿಸಿ ಅಂತಿಮವಾಗಿ ಸಲ್ಲಿಸಿ

ಎಲ್ಲಾ ಹಂತಗಳನ್ನು ಸರಿಯಾಗಿ ಭರ್ತಿ ಮಾಡಿ, ನಮೂದಿಸಿದ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿಯೇ ಫೈನಲ್ ಸಬ್ಮಿಟ್ ಮಾಡಿ. ಸಲ್ಲಿಕೆಯ ನಂತರ ಅಪ್ಲಿಕೇಶನ್ ಬದಲಾವಣೆಗೆ ಅವಕಾಶ ಇರುವುದಿಲ್ಲ, ಹಾಗಾಗಿ ಎಚ್ಚರಿಕೆಯಿಂದ ಭರ್ತಿ ಮಾಡುವುದು ಅಗತ್ಯ.

Links Table

Links NameIMP Links
SSP Post Matric Scholarship Direct LinkApply Now
SSP New Create Account LinkCreate AC
Official WebsiteSSP
WhatsAppJoin Group
TelegramJoin Channel

Join

Leave a Comment

Join WhatsApp Group