Ration Card E-kyc: ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಕೊನೆ ಎಚ್ಚರಿಕೆ..! E -kyc ಗೆ ಜೂನ್ 30 ಕೊನೆಯ ದಿನಾಂಕ. ಈ ಕೆಲಸ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು.

Photo of author

Mantesh

Publish: June 10, 2025
Ration Card E-kyc

share Share:

ನಮಸ್ಕಾರ ಕರ್ನಾಟಕದ ಜನತೆಗೆ, (Ration Card E-kyc) ರಾಜ್ಯ ಸರ್ಕಾರವು ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಅನೇಕ ಜನಸಾಮಾನ್ಯರಿಗೆ ವಿವಿಧ ರೀತಿಯ ಯೋಜನೆಗಳನ್ನು ತರುವುದರ ಮೂಲಕ ಅವರ ಜೀವನ ಗುಣಮಟ್ಟವನ್ನು ವೃದ್ಧಿಸಲು ಸಹಾಯ ಮಾಡುತ್ತಿದೆ. ಈ ರೀತಿಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕಾಗುತ್ತದೆ. ಈಗ ಅದೇ ರೇಷನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ. ಯಾಕೆ? ಏನು? ಮತ್ತು ಹೇಗೆ? ಹಾಗೂ ರದ್ದು ಆಗದೆ ಇರಲು ಏನು ಮಾಡಬೇಕು ಎಂಬುದರ ಕುರಿತಾಗಿ ಇವತ್ತಿನ ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ;

SSC Selection Post Phase 13 Notification 2025: 2402 ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ!


Ration Card E-kyc? ಇ – ಕೆವೈಸಿ ಎಂದರೇನು? ಇದು ಯಾಕೆ ಕಡ್ಡಾಯ?

ಇ – ಕೆವೈಸಿ (E-kyc) ಅಂದರೆ, (electronic know your customer). ಪಡಿತರ ಚೀಟಿಗೆ ಸಂಬಂಧಿಸಿದ ಮನೆಯ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ಮಾಡುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ವಿವರಗಳು ಮತ್ತು ಬೆರಳಿನ ಪ್ರಮಾಣಿಕರಣ ಹಾಗೂ ಇತರ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು.
ಈ ಒಂದು ಪ್ರಕ್ರಿಯೆ ಡಿಜಿಟಲ್ ಮೂಲಕ ನಡೆಯುವುದರಿಂದ ನಿಖರವಾಗಿದ್ದು, ನಕಲಿ ಹಾಗೂ ಇತರ ಅನರ್ಹ ಕಾರ್ಡುಗಳನ್ನು ತಡೆಯಲು ಸಾಧ್ಯವಾಗುವುದು. ಮತ್ತು ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

Ration Card E-kyc
Ration Card E-kyc

Ration Card E-kyc last date ಇ – ಕೆವೈಸಿ ಮಾಡಿಸಲು ಜೂನ್ 30 ಕೊನೆಯ ದಿನಾಂಕ.

ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗುವುದು. ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ 2025 ಜೂನ್ 30 ರ ಒಳಗೆ ಈಕೆ ವೈ ಸಿ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈ ಕಾರ್ಡುಗಳನ್ನು ಅನರ್ಹ ಎಂದು ಪರಿಗಣಿಸಲಾಗುವುದು. ಒಂದು ವೇಳೆ ನಿಮ್ಮ ಕಾರ್ಡ್ ಅನರ್ಹ ಎಂದು ಪರಿಗಣಿಸಲಾಗಿದೆ ಎಂದರೆ ನೀವು ಯಾವುದೇ ರೀತಿಯ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಾಧ್ಯವಿಲ್ಲ ಹಾಗೂ ಪಡಿತರ ಧಾನ್ಯ ವಿತರಣೆಯು ಸಹ ನಿಲ್ಲಿಸಲಾಗುವುದು.

How to do E-kyc: ಇ – ಕೆವೈಸಿ ಮಾಡಿಸುವುದು ಹೇಗೆ?

ನೀವು ನಿಮ್ಮ ರೇಷನ್ ಕಾರ್ಡ್ ನ ಈ ಕೆ ವೈ ಸಿ (Ration Card E-kyc) ಯನ್ನು ಮಾಡಿಸುವುದು ಬಹಳ ಸುಲಭ, ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು. ನಂತರ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್ (ಮನೆಯ ಎಲ್ಲಾ ಸದಸ್ಯರ), ಚಾಲ್ತಿ ಇರುವ ಮೊಬೈಲ್ ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗೂ ಒಂದು ವೇಳೆ ನೀವು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಸಿಲಿಂಡರ್ ಪಡೆದುಕೊಂಡಿದ್ದರೆ ಅದರ ಗ್ರಾಹಕ ಸಂಖ್ಯೆಯನ್ನು ಕೂಡ ತೆಗೆದುಕೊಂಡು ಹೋಗಬೇಕು.
ಇಲ್ಲಿ ನಿಮ್ಮ ಬೆರಳಚ್ಚು ಪಡೆಯುತ್ತಾರೆ. ಮತ್ತು ಕೆಲವು ನಿಮಿಷಗಳಲ್ಲಿ ಡಿಜಿಟಲ್ ಮೂಲಕ ನಿಮ್ಮ ಈ ಕೆವೈಸಿ ಪ್ರಕ್ರಿಯೆಯನ್ನು ಮುಗಿಸಿಕೊಡುತ್ತಾರೆ. ಈ ಒಂದು ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾಗಿಲ್ಲ.

How to check E-kyc: ಈ ಕೆ ವೈ ಸಿ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಈಕೆ ವೈ ಸಿ (Ration Card E-kyc) ಆಗಿದೆಯೇ ಎಂದು ಚೆಕ್ ಮಾಡಬಹುದು. ಅದಕ್ಕಾಗಿ ಮೊದಲು “ration card e KYC status” ಇಲ್ಲಿ ಕ್ಲಿಕ್ ಮಾಡಿ.
ಮುಂದಿನ ಹಂತದಲ್ಲಿ “ಈ-ಸ್ಥಿತಿ” ಕಾಲಮಿನಲ್ಲಿ ಕಾಣುವ “ಹಾಲಿ ಪಡಿತರ ಚೀಟಿಯ ಸ್ಥಿತಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ನ ಕೆವೈಸಿ ಆಗಿದೆಯೋ ಅಥವಾ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.

ಕಡ್ಡಾಯವಾಗಿ ಈಕೆ ವೈ ಸಿ ಮಾಡಿಸಿ

ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆದುಕೊಳ್ಳಬೇಕಾದರೆ ನಿಮ್ಮ ರೇಷನ್ ಕಾರ್ಡ್ ಈಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು. ಒಂದು ವೇಳೆ ಈ ಕೆವೈಸಿ ಯನ್ನು ಮಾಡಿಸದಿದ್ದರೆ

  • ಪಡಿತರ ಚೀಟಿಯು ರದ್ದಾಗಬಹುದು
  • ಮುಂದೆ ರೇಷನ್ ವಿತರಣೆಗೆ ತಡೆಯಾಗಬಹುದು
  • ಸರ್ಕಾರಿ ಯೋಜನೆಗಳ ಪ್ರಯೋಜನ ರದ್ದಾಗುವುದು
  • ಹೊಸ ಕಾಡು ಪಡೆಯಲು ಪ್ರತ್ಯೇಕ ಪ್ರಕ್ರಿಯೆಯನ್ನು ಅನುಸರಿಸ ಬೇಕಾಗಬಹುದು


ಹಾಗಾಗಿ ತಕ್ಷಣವೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಈಕೆ ವೈಸಿ ಯನ್ನು ಮಾಡಿಸಿಕೊಳ್ಳುವುದು ಉತ್ತಮ.

Join

Leave a Comment