ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 – 450 ಬೀಟ್ ಫಾರೆಸ್ಟರ್ ಹುದ್ದೆ | Karnataka Beat Forester Recruitment 2026

Photo of author

Mantesh

Publish: November 19, 2026
Karnataka Beat Forester Recruitment 2026

share Share:

Karnataka Beat Forester Recruitment 2026: ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 450 ಬೀಟ್ ಫಾರೆಸ್ಟರ್ ಹುದ್ದೆಗಳಿಗೆ ಪಿಯುಸಿ ಪಾಸಾದವರು ಡಿ.22ರೊಳಗೆ ಅರ್ಜಿ ಸಲ್ಲಿಸಿ. ವೃಂದವಾರು ಹುದ್ದೆ, ವೇತನ, ಆಯ್ಕೆ ವಿವರ ಇಲ್ಲಿದೆ.

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026ರ ಅಡಿಯಲ್ಲಿ 450 ಬೀಟ್ ಫಾರೆಸ್ಟರ್ (ಫಾರೆಸ್ಟ್ ಗಾರ್ಡ್, ಗ್ರೂಪ್ C) ಹುದ್ದೆಗಳ ಅಧಿಸೂಚನೆ 17 ನವೆಂಬರ್ 2026ರಂದು ಪ್ರಕಟವಾಗಿದೆ. ಇದರಲ್ಲಿ 355 ಹುದ್ದೆಗಳು RPC (ಕಲ್ಯಾಣ ಕರ್ನಾಟಕ ಹೊರತಾದ) ವೃಂದದಲ್ಲಿ, 95 ಹುದ್ದೆಗಳು ಕಲ್ಯಾಣ ಕರ್ನಾಟಕ (HK) ವೃಂದದಲ್ಲಿ ಇವೆ. ಅರ್ಜಿ 23 ನವೆಂಬರ್‌ನಿಂದ 22 ಡಿಸೆಂಬರ್ 2026ರವರೆಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಗೊಂದಲ ಬೇಡ: ಈ ಹಿಂದೆ ಪ್ರಕಟವಾದ 750 ಅರಣ್ಯ ವೀಕ್ಷಕ (ಗ್ರೂಪ್ D, SSLC) ನೇಮಕಾತಿ ಬೇರೆ. ಅದರ ವಿದ್ಯಾರ್ಹತೆ, ವೇತನ ಮತ್ತು ಕೊನೆಯ ದಿನಾಂಕ ಇದಕ್ಕೆ ಅನ್ವಯಿಸುವುದಿಲ್ಲ.

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 – ಪ್ರಮುಖ ವಿವರಗಳು

ವಿವರಮಾಹಿತಿ
ನೇಮಕಾತಿ ಸಂಸ್ಥೆಕರ್ನಾಟಕ ಅರಣ್ಯ ಇಲಾಖೆ
ನೇಮಕಾತಿ ಪ್ರಾಧಿಕಾರಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಬೀಟ್ ಫಾರೆಸ್ಟರ್ (ಗ್ರೂಪ್ C)
ಒಟ್ಟು ಹುದ್ದೆ450 (RPC 355 + HK 95)
ವಿದ್ಯಾರ್ಹತೆಪಿಯುಸಿ / 12ನೇ ತರಗತಿ
ವಯೋಮಿತಿ18 ರಿಂದ 32 ವರ್ಷ (ವರ್ಗಕ್ಕೆ ಅನುಸಾರ 35/37)
ವೇತನ₹37,500 – ₹76,100
ಅರ್ಜಿ ವಿಧಾನಆನ್‌ಲೈನ್
ಅರ್ಜಿ ಪ್ರಾರಂಭ23-11-2026
ಕೊನೆಯ ದಿನಾಂಕ22-12-2026
ಅಧಿಕೃತ ವೆಬ್‌ಸೈಟ್aranya.gov.in

ಹುದ್ದೆಗಳ ವಿವರ ಮತ್ತು ವೃಂದವಾರು ಖಾಲಿ ಹುದ್ದೆಗಳು

RPC / Non-HK (355 ಹುದ್ದೆ: 320 ಸಾಮಾನ್ಯ + 35 ಬ್ಯಾಕ್‌ಲಾಗ್)

ಅರಣ್ಯ ವೃತ್ತಒಟ್ಟು
ಚಾಮರಾಜನಗರ78
ಶಿವಮೊಗ್ಗ64
ಕೆನರಾ45
ಮಂಗಳೂರು36
ಚಿಕ್ಕಮಗಳೂರು29
ಮೈಸೂರು29
ಕೊಡಗು27
ಬೆಂಗಳೂರು25
ಹಾಸನ18
ಧಾರವಾಡ3
ಬಳ್ಳಾರಿ1

ಕಲ್ಯಾಣ ಕರ್ನಾಟಕ / HK (95 ಹುದ್ದೆ: 93 ಸಾಮಾನ್ಯ + 2 ಬ್ಯಾಕ್‌ಲಾಗ್)

ಅರಣ್ಯ ವೃತ್ತಸಾಮಾನ್ಯ ಹುದ್ದೆ
ಕಲಬುರಗಿ62
ಬಳ್ಳಾರಿ31

ವರ್ಗವಾರು ಮೀಸಲಾತಿ ಹಂಚಿಕೆ ವೃತ್ತ ಮತ್ತು ವಿಭಾಗಕ್ಕೆ ಅನುಸಾರ ಬದಲಾಗುತ್ತದೆ. ಅಧಿಸೂಚನೆಯಲ್ಲಿನ ಮೀಸಲಾತಿ ಕೋಷ್ಟಕ ನೋಡಿ. RPC ಮತ್ತು HK ಹುದ್ದೆಗಳಿಗೆ ಅರ್ಜಿ ಬೇರೆ ಬೇರೆ ಆಯ್ಕೆ ಮಾಡಬೇಕು.

ವಿದ್ಯಾರ್ಹತೆ ಮತ್ತು ವಯೋಮಿತಿ

ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ಕೇವಲ SSLC ಸಾಕಾಗುವುದಿಲ್ಲ.

ವರ್ಗಗರಿಷ್ಠ ವಯಸ್ಸು
ಸಾಮಾನ್ಯ32 ವರ್ಷ
2A, 2B, 3A, 3B35 ವರ್ಷ
SC, ST, ಪ್ರವರ್ಗ-137 ವರ್ಷ

ಕನಿಷ್ಠ ವಯಸ್ಸು 18 ವರ್ಷ. ವಯಸ್ಸನ್ನು 22-12-2026ರಂತೆ ಲೆಕ್ಕ ಹಾಕಲಾಗುತ್ತದೆ. ಮಾಜಿ ಸೈನಿಕರಿಗೆ ಹೆಚ್ಚುವರಿ ಸಡಿಲಿಕೆ ಅಧಿಸೂಚನೆಯ ನಿಯಮಗಳ ಪ್ರಕಾರ.

ವೇತನದ ವಿವರ

ವೇತನ ಶ್ರೇಣಿ ₹37,500 ರಿಂದ ₹76,100. ಭತ್ಯೆಗಳು ಮತ್ತು ಕಡಿತಗಳ ನಂತರ ಕೈಗೆ ಬರುವ ಮೊತ್ತ ಬದಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

  1. ಪಿಯುಸಿ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ (ದೈಹಿಕ ಪರೀಕ್ಷೆಗೆ 1:20 ಅನುಪಾತ)
  2. ದೈಹಿಕ ಮಾನದಂಡ ಪರೀಕ್ಷೆ (PST)
  3. ದೈಹಿಕ ಸಹಿಷ್ಣುತೆ ಪರೀಕ್ಷೆ
  4. ದೈಹಿಕ ದಕ್ಷತೆ ಪರೀಕ್ಷೆ (PET)
  5. ಲಿಖಿತ ಪರೀಕ್ಷೆ
  6. ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

ದೈಹಿಕ ಮಾನದಂಡ: ಪುರುಷರಿಗೆ ಕನಿಷ್ಠ ಎತ್ತರ 163 ಸೆಂ.ಮೀ., ಎದೆ 79 ಸೆಂ.ಮೀ. (5 ಸೆಂ.ಮೀ. ವಿಸ್ತರಣೆ). ಮಹಿಳೆಯರಿಗೆ ಎತ್ತರ 150 ಸೆಂ.ಮೀ., ತೂಕ 40 ಕೆ.ಜಿ. ನಿರ್ದಿಷ್ಟ ಅರಣ್ಯವಾಸಿ ST ಅಭ್ಯರ್ಥಿಗಳಿಗೆ ಸಡಿಲ ಮಾನದಂಡ ಇದೆ.

ಓಟ: ಪುರುಷರು 1,600 ಮೀ. 7 ನಿಮಿಷದಲ್ಲಿ; ಮಹಿಳೆಯರು 1,000 ಮೀ. 6 ನಿಮಿಷದಲ್ಲಿ. ಈ ಪರೀಕ್ಷೆಗಳು ಅರ್ಹತಾ ಸ್ವರೂಪದ್ದು.

ಲಿಖಿತ ಪರೀಕ್ಷೆ (RPC ಅಧಿಸೂಚನೆ): 100 ಬಹುಆಯ್ಕೆ ಪ್ರಶ್ನೆ, 100 ಅಂಕ. ಸಾಮಾನ್ಯ ಜ್ಞಾನ 60, ಗಣಿತ 40, ಅವಧಿ 2 ಗಂಟೆ, ತಪ್ಪು ಉತ್ತರಕ್ಕೆ 0.25 ಅಂಕ ಕಡಿತ. ಅಂತಿಮ ಮೆರಿಟ್‌ನಲ್ಲಿ ಪಿಯುಸಿ ಅಂಕಕ್ಕೆ 50%, ಲಿಖಿತ ಪರೀಕ್ಷೆಗೆ 50% ತೂಕ.

ಅರ್ಜಿ ಸಲ್ಲಿಸುವ ವಿಧಾನ

  1. aranya.gov.in ನಲ್ಲಿ ನಿಮ್ಮ ವೃಂದದ (RPC ಅಥವಾ HK) ಅಧಿಸೂಚನೆ ಡೌನ್‌ಲೋಡ್ ಮಾಡಿ ಓದಿ.
  2. KEA ವೆಬ್‌ಸೈಟ್‌ನಲ್ಲಿ 23 ನವೆಂಬರ್‌ನಿಂದ ಸಕ್ರಿಯವಾಗುವ ಬೀಟ್ ಫಾರೆಸ್ಟರ್ ಅರ್ಜಿ ಲಿಂಕ್ ತೆರೆಯಿರಿ.
  3. ನೋಂದಣಿ ಮಾಡಿ, ವೈಯಕ್ತಿಕ ಮತ್ತು ಪಿಯುಸಿ ಅಂಕಗಳ ವಿವರ ಭರ್ತಿ ಮಾಡಿ.
  4. ಸರಿಯಾದ ವೃಂದ ಮತ್ತು ಮೀಸಲಾತಿ ವರ್ಗ ಆಯ್ಕೆ ಮಾಡಿ.
  5. ಭಾವಚಿತ್ರ, ಸಹಿ ಮತ್ತು ಅಗತ್ಯ ಪ್ರಮಾಣಪತ್ರ ಅಪ್‌ಲೋಡ್ ಮಾಡಿ.
  6. ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ಅರ್ಜಿ ಮತ್ತು ರಸೀದಿ ಡೌನ್‌ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು

ವರ್ಗಶುಲ್ಕ
ಸಾಮಾನ್ಯ, 2A, 2B, 3A, 3B₹750
SC, ST, ಪ್ರವರ್ಗ-1, ಮಾಜಿ ಸೈನಿಕ, ತೃತೀಯ ಲಿಂಗಿ₹500
ಅಂಗವಿಕಲ (PwD)₹250
ಪ್ರಕ್ರಿಯೆದಿನಾಂಕ
ಅಧಿಸೂಚನೆ ದಿನಾಂಕ17-11-2026
ಅರ್ಜಿ ಪ್ರಾರಂಭ23-11-2026
ಅರ್ಜಿ ಕೊನೆಯ ದಿನ22-12-2026
ಶುಲ್ಕ ಪಾವತಿ ಕೊನೆಯ ದಿನ23-12-2026
ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ದಿನಾಂಕಇನ್ನೂ ಪ್ರಕಟವಾಗಿಲ್ಲ

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಲಿಂಕ್

ವಿವರಲಿಂಕ್
ಅಧಿಕೃತ ಅಧಿಸೂಚನೆ PDF RPCಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ (23-11-2026ರಿಂದ)ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ PDF HKಇಲ್ಲಿ ಕ್ಲಿಕ್ ಮಾಡಿ
KEA ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
WhatsApp ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
Telegram ಚಾನೆಲ್ಇಲ್ಲಿ ಕ್ಲಿಕ್ ಮಾಡಿ

Join

Leave a Comment

Join WhatsApp Group