ICICI Bank Wedding Loan: ಐಸಿಐಸಿಐ ಬ್ಯಾಂಕ್‌ನಿಂದ ಮದುವೆಗೆ ₹50 ಲಕ್ಷ ಸಾಲ – ಹೇಗೆ ಪಡೆಯುವುದು? ₹50 ಲಕ್ಷದವರೆಗೆ ಲೋನ್, ಆನ್‌ಲೈನ್ ಅರ್ಜಿ ವಿಧಾನ.

Photo of author

Mantesh

Publish: June 13, 2025
ICICI Bank Wedding Loan

share Share:

ICICI Bank Wedding Loan: ಮದುವೆ ಎನ್ನುವುದು ಅನೇಕ ಜನರ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ. ಜನ ಇಂತಹ ಸಂದರ್ಭಗಳಲ್ಲಿ ದುಡ್ಡಿನ ಯೋಚನೆ ಮಾಡದೆ ಹೆಚ್ಚಿನ ಪ್ರಮಾಣದ ಖರ್ಚನ್ನು ಮಾಡುತ್ತಾರೆ. ಹೀಗೆ ಖರ್ಚು ಮಾಡಲು ಅವರು ತೆಗೆದುಕೊಳ್ಳುವ ಸಾಲದ ಮೇಲಿನ ಬಡ್ಡಿಯ ಪ್ರಮಾಣ ಹೆಚ್ಚಾಗಿರುವುದರಿಂದ ಭವಿಷ್ಯದಲ್ಲಿ ಅವರನ್ನು ಸಂಕಷ್ಟಕ್ಕೆ ದೂಡುವುದು. ಹಾಗಾಗಿ ಒಂದು ನಿರ್ದಿಷ್ಟ ಪ್ರಮಾಣದ ಬಡ್ಡಿಯಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಸೂಕ್ತ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಐಸಿಐಸಿಐ ಬ್ಯಾಂಕ್ ಮೂಲಕ ನೀಡುವ ಮದುವೆ ಸಾಲದ (ICICI Bank Wedding Loan) ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


ICICI ಬ್ಯಾಂಕ್ ಮದುವೆ ಸಾಲವೆಂದರೇನು? What Is ICICI Bank Wedding Loan.

ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ICICI ಬ್ಯಾಂಕ್, ಮದುವೆ ಖರ್ಚುಗಳಿಗೆ ವಿಶೇಷವಾಗಿ ರೂಪಿಸಿರುವ ವೈಯಕ್ತಿಕ ಸಾಲವನ್ನು “ವೆಡ್ಡಿಂಗ್ ಲೋನ್” (ICICI Bank Wedding Loan) ಎಂಬ ಹೆಸರಿನಲ್ಲಿ ನೀಡುತ್ತಿದೆ. ಈ ಸಾಲದ ವಿಶೇಷತೆ ಎಂದರೆ – ಯಾವುದೇ ಆಸ್ತಿಯನ್ನು ಅಡಮಾನವಾಗಿಸಬೇಕಾಗಿಲ್ಲ. ₹50,000 ರಿಂದ ₹50 ಲಕ್ಷ ವರೆಗೆ ಸಾಲ ಪಡೆಯಬಹುದಾದ ಈ ಯೋಜನೆಯು, ಕಡಿಮೆ ಬಡ್ಡಿದರದಿಂದ ಆರಂಭವಾಗುತ್ತಿದ್ದು, ಮರುಪಾವತಿ ಗಂಭೀರವಲ್ಲದ ಹಂತಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ.

Swavalambi Sarathi Scheme 2025: ಸ್ವಾವಲಂಬಿ ಸಾರಥಿ ಯೋಜನೆ 2025..! ನಿರುದ್ಯೋಗಿ ಯುವಕರಿಗೆ ಹೊಸ ಆಶಾಕಿರಣ.

ICICI ಮದುವೆ ಸಾಲದ ಮುಖ್ಯ ವೈಶಿಷ್ಟ್ಯಗಳು

ಅಂಶವಿವರ
ಸಾಲದ ಮೊತ್ತ₹50,000 ರಿಂದ ₹50,00,000 ವರೆಗೆ
ಬಡ್ಡಿದರವಾರ್ಷಿಕ 10.85% ರಿಂದ ಆರಂಭ
ಮರುಪಾವತಿ ಅವಧಿ12 ತಿಂಗಳುಗಳಿಂದ 72 ತಿಂಗಳುಗಳವರೆಗೆ
ಭದ್ರತೆಯಾವುದೇ ಆಸ್ತಿಯ ಅಡಮಾನ ಅಗತ್ಯವಿಲ್ಲ
ಅರ್ಜಿಯ ವಿಧಾನಪೂರ್ತಿಯಾಗಿ ಆನ್‌ಲೈನ್ ಮೂಲಕ
ಅನುಮೋದನೆ ಹಾಗೂ ಹಣ ಬಿಡುಗಡೆಸರಿಯಾದ ದಾಖಲೆಗಳೊಂದಿಗೆ 72 ಗಂಟೆಗಳಲ್ಲಿ ಹಣ ಖಾತೆಗೆ ಜಮಾ

ICICI Bank Wedding Loan
ICICI Bank Wedding Loan

ಮದುವೆ ಸಾಲವನ್ನು ಏಕೆ ತೆಗೆದುಕೊಳ್ಳಬೇಕು?

ಅನೇಕ ಜನರ ಬದುಕಿನಲ್ಲಿ ಮದುವೆ ಎಂಬುದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಮದುವೆ ಎಂಬುವುದು ಸಮಾಜದಲ್ಲಿ ಒಂದು ಕುಟುಂಬದ ಸಿರಿವಂತಿಕೆಯ ಪ್ರತಿಬಿಂಬ ಎನ್ನುವ ರೀತಿಯಲ್ಲಿ ಕಂಡು ಬರುತ್ತಿದೆ. ಹಾಗಾಗಿ ಮದುವೆ ಮಾಡುವ ಪ್ರತಿಯೊಬ್ಬರು ಯೋಚಿಸುವುದು ಏನೆಂದರೆ, ಅತಿ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಬಂದು ಬಳಗದವರ ಮುಂದೆ ಮದುವೆ ಮಾಡಬೇಕು. ಎನ್ನುವುದು. ಆದರೆ ಸಮಯ ಹಾಗೂ ಸಂದರ್ಭಗಳ ಕಾರಣದಿಂದಾಗಿ ಮತ್ತು ಹಣಕಾಸಿನ ಕೊರತೆಯಿಂದಾಗಿ ವಿಜೃಂಭಣೆಯಿಂದ ಮದುವೆ ಮಾಡಲು ಸಾಧ್ಯ ಆಗುವುದಿಲ್ಲ. ಇಂತಹ ಸಮಯದಲ್ಲಿ ಮದುವೆ ಸಾಲವನ್ನು (ICICI Bank Wedding Loan) ತೆಗೆದುಕೊಳ್ಳುವುದು ಸೂಕ್ತ.

ICICI ಮದುವೆ ಸಾಲ ಅರ್ಜಿ ಪ್ರಕ್ರಿಯೆ

1. ಅರ್ಹತೆ ಪರಿಶೀಲನೆ
ICICI ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ವಯಸ್ಸು, ಆದಾಯ, ಉದ್ಯೋಗ ಸ್ಥಿತಿ, ಕ್ರೆಡಿಟ್ ಸ್ಕೋರ್‌ ಆಧಾರಿತ ಅರ್ಹತೆ ಪರಿಶೀಲಿಸಿ.

2. EMI ಲೆಕ್ಕಾಚಾರ
ಅಂತಿಮ ಬಡ್ಡಿದರ ಹಾಗೂ ಸಾಲದ ಅವಧಿಯನ್ನು ಆಯ್ದುಕೊಂಡು, ತಾವು ಪಾವತಿಸಬೇಕಾದ ಮಾಸಿಕ ಕಂತು (EMI) ಎಷ್ಟು ಎಂದು ಲೆಕ್ಕಿಸಿಕೊಳ್ಳಿ.

3. ಆನ್‌ಲೈನ್ ಅರ್ಜಿ ಸಲ್ಲಿಕೆ
ವೈಯಕ್ತಿಕ ಹಾಗೂ ಹಣಕಾಸು ಮಾಹಿತಿ ನೀಡಿ form ಭರ್ತಿ ಮಾಡಿ. ಸರಿಯಾದ ಮಾಹಿತಿಯನ್ನು ಮಾತ್ರ ನಮೂದಿಸಬೇಕು.

4. ಅಗತ್ಯ ದಾಖಲೆಗಳ ಅಪ್‌ಲೋಡ್

  • ಗುರುತಿನ ದಾಖಲೆಗೆ: ಆದಾರ್ ಕಾರ್ಡ್ / ಪಾನ್ ಕಾರ್ಡ್
  • ವಿಳಾಸ ಪುರಾವೆ
  • ಮಾಸಿಕ ವೇತನ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ (3 ತಿಂಗಳು)
  • ಪಾಸ್‌ಪೋರ್ಟ್ ಗಾತ್ರದ ಫೋಟೋ

5. ಅರ್ಜಿ ಪರಿಶೀಲನೆ ಮತ್ತು ಮಂಜೂರು
ಬ್ಯಾಂಕ್ ಅಧಿಕಾರಿಗಳು ನಿಮ್ಮ ಮಾಹಿತಿಯನ್ನು ಪರಿಶೀಲಿಸಿ, ಯಾವುದೇ ತೊಂದರೆ ಇಲ್ಲದಿದ್ದರೆ ಸಾಲ ಮಂಜೂರಾಗುತ್ತದೆ.

6. ಹಣದ ಬಿಡುಗಡೆ
ಸಾಲ ಮಂಜೂರಾದ ನಂತರ 3 ದಿನಗಳೊಳಗೆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.


ಅರ್ಹತಾ ಮಾನದಂಡಗಳು

  • ವಯಸ್ಸು: ಕನಿಷ್ಠ 21 ರಿಂದ ಗರಿಷ್ಠ 58 ವರ್ಷ
  • ಉದ್ಯೋಗ: ಉದ್ಯೋಗಸ್ಥರು ಅಥವಾ ಸ್ವಯಂ ಉದ್ಯೋಗಿಗಳು
  • ಆದಾಯ ಪುರಾವೆ: ನಿಯಮಿತ ಮಾಸಿಕ ಆದಾಯ ಮತ್ತು ಅದರ ದಾಖಲೆಗಳು
  • ಕ್ರೆಡಿಟ್ ಸ್ಕೋರ್: ಉತ್ತಮ ಕ್ರೆಡಿಟ್ ಇತಿಹಾಸ ಅಗತ್ಯವಿದೆ

ICICI ಮದುವೆ ಸಾಲದ ಉಪಯೋಗ: ಎಲ್ಲೆಲ್ಲಿ ಬಳಸಬಹುದು?

  • ಮದುವೆ ಮಂಟಪ / ರೆಸಾರ್ಟ್ ಬುಕ್ಕಿಂಗ್
  • ಛಾಯಾಗ್ರಹಣ ಹಾಗೂ ವೀಡಿಯೋಗ್ರಫಿ
  • ಬಟ್ಟೆ ಹಾಗೂ ಆಭರಣ ಖರೀದಿ
  • ಊಟದ ವ್ಯವಸ್ಥೆ
  • ಹನಿಮೂನ್ ಪ್ರವಾಸದ ಖರ್ಚು

ಹೆಚ್ಚಿನ ಮಾಹಿತಿಗಾಗಿ:

👉 ICICI ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಅಥವಾ ಬಳಿಯ ಶಾಖೆಗೆ ಭೇಟಿನೀಡಿ
👉 ಅಥವಾ ನೇರವಾಗಿ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಿ: www.icicibank.com

Join

Leave a Comment