Old Age pension Cancelled: 23 ಲಕ್ಷ ಹಿರಿಯ ನಾಗರಿಕರ ವೃದ್ಧಾಪ್ಯ ವೇತನಕ್ಕೆ ಸರ್ಕಾರ ಕತ್ತರಿ..! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ.

Photo of author

Mantesh

Publish: June 19, 2025
Old Age pension Cancelled

share Share:

Old Age pension Cancelled: 23 ಲಕ್ಷ ಹಿರಿಯ ನಾಗರಿಕರ ವೃದ್ಧಾಪ್ಯ ವೇತನಕ್ಕೆ ಸರ್ಕಾರ ಕತ್ತರಿ..! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ.
ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಇದೀಗ ಒಂದು ದೊಡ್ಡ ಶಾಕ್ ನೀಡಿದೆ. ಹೌದು, ರಾಜ್ಯದಲ್ಲಿ ಅನೇಕ ಅನರ್ಹ ಫಲಾನುಭವಿಗಳು ವೃದ್ಧಾಪ್ಯ ವೇತನ ಪಡೆಯುತ್ತಿದ್ದು, ಅಂತಹ ಫಲಾನುಭವಿಗಳ ಲಾಭಕ್ಕೆ ಕತ್ತರಿ ಹಾಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ ಕಿರು ಮಾಹಿತಿ.

ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯಾವಾಗಲೂ ತನ್ನ ಪ್ರಜೆಗಳ ಒಳಿತಿಗಾಗಿ ಕೆಲಸ ಮಾಡುತ್ತವೆ. ಪ್ರತಿಯೊಬ್ಬ ಹಿರಿ ಬಡ ನಾಗರಿಕನಿಗೂ ತನ್ನ ಇಳಿ ವಯಸ್ಸಿನಲ್ಲಿ ಹಣಕಾಸಿನ ಸಮಸ್ಯೆ ಉಂಟಾಗಬಾರದು ಹಾಗೂ ಅವರಿಗೆ ತಮ್ಮ ಇಳಿ ವಯಸ್ಸಿನಲ್ಲಿ ಹಣಕಾಸಿನ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ಜನೌಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನ ಪ್ರಮುಖವಾದವು. ಈ ಯೋಜನೆಗಳ ಅಡಿಯಲ್ಲಿ 53.20 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.

ವೃದ್ಧಾಪ್ಯ ವೇತನ ಯೋಜನೆ

ಸರ್ಕಾರದ ಈ ಒಂದು ಯೋಜನೆಯ ಅಡಿಯಲ್ಲಿ ಯಾವುದೇ ನಾಗರಿಕ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿನ ವಯಸ್ಸಿನವರಾಗಿದ್ದರೆ ಹಾಗೂ ಅವರು ಬಿಪಿಎಲ್ ಕಾರ್ಡ್ (BPL) ಹೊಂದಿದ್ದರೆ ಅಂತವರಿಗೆ ಮಾಸಿಕವಾಗಿ ಅಂದರೆ ಪ್ರತಿ ತಿಂಗಳು ₹800 ಅನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿವೆ. ಪ್ರಸ್ತುತ ಈ ಯೋಜನೆಯ ಲಾಭವನ್ನು 21.87 ಲಕ್ಷ ಮಂದಿ ಪಡೆಯುತ್ತಿದ್ದಾರೆ. (Old Age pension Cancelled)

ಸಂಧ್ಯಾ ಸುರಕ್ಷಾ ಯೋಜನೆ

Old Age pension Cancelled ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕ ಅವನು 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವನಾಗಿದ್ದರೆ ಹಾಗೂ ಬಿಪಿಎಲ್ (BPL) ಕಾರ್ಡ್ ಹೊಂದಿದ್ದರೆ ಅಂತವರಿಗೆ ಮಾಸಿಕವಾಗಿ ₹1200 ಅನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರಸ್ತುತ ಈ ಯೋಜನೆಯ ಲಾಭವನ್ನು 31.33 ಲಕ್ಷ ಜನ ಪಡೆಯುತ್ತಿದ್ದಾರೆ.

ಅನರ್ಹ ಫಲಾನುಭವಿಗಳ ಪಿಂಚಣಿ ರದ್ದು. Old Age pension Cancelled.

Old Age pension Cancelled
Old Age pension Cancelled

ಹೌದು ಸ್ನೇಹಿತರೆ, ಸರ್ಕಾರಗಳು ನೀಡುವ ಈ ಹಣಕಾಸಿನ ಯೋಜನೆಯೆಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡವಾರು ಬಹಳ ಕಡಿಮೆ ಇದ್ದು, ಈ ಯೋಜನೆಯ ಬಹುಪಾಲು ಹಣವನ್ನು ರಾಜ್ಯ ಸರ್ಕಾರವೇ ವಿನಿಯೋಗಿಸುತ್ತಿದೆ. ಹಾಗಾಗಿ ಇದರ ಹಣಕಾಸಿನ ಹೊರೆಯನ್ನು ತಪ್ಪಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಸೂಕ್ತ ಪ್ರಯೋಜನವನ್ನು ತಲುಪಿಸಲು ಪಟ್ಟಿಯನ್ನು ತಯಾರಿಸಿ ಈ ಯೋಜನೆಗಳಿಂದ ಇವರನ್ನು ರದ್ದು (Old Age pension Cancelled) ಮಾಡಲಾಗುತ್ತಿದೆ.

Swavalambi Sarathi Scheme 2025: ಸ್ವಾವಲಂಬಿ ಸಾರಥಿ ಯೋಜನೆ 2025..! ನಿರುದ್ಯೋಗಿ ಯುವಕರಿಗೆ ಹೊಸ ಆಶಾಕಿರಣ.


ಸರ್ಕಾರವು ತಂತ್ರಾಂಶ ಹಾಗೂ ದತ್ತಾಂಶಗಳನ್ನು ಪರಿಶೀಲಿಸಿದಾಗ ಮತ್ತು ಅದನ್ನು ಯೋಜನೆಯ ಲಾಭವನ್ನು ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳ ದತ್ತಾಂಶಗಳೊಂದಿಗೆ ಹೋಲಿಸಿದಾಗ ಅನರ್ಹ ಫಲಾನುಭವಿಗಳು ಹೆಚ್ಚಾಗಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ ಅತೀವ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂಬುವುದು ಬೆಳಕಿಗೆ ಬಂದಿದೆ.


ಅನರ್ಹರನ್ನು ಗುರುತಿಸುವ ವಿಧಾನ ಹೇಗೆ? Old Age pension Cancelled

  • ಸರ್ಕಾರವು ತನ್ನಲ್ಲಿ ಇರುವ ಅಧಿಕೃತ ದತ್ತಾಂಶಗಳನ್ನು ಪ್ರಸ್ತುತ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಡೇಟಾ ಹೋಲಿಕೆ ಮಾಡುವ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಿದೆ.
  • ಹಲವಾರು ಜನರ ಆಧಾರ್ ಕಾರ್ಡ್ ಮತ್ತು ಅವರ ಅಧಿಕೃತ ವಯಸ್ಸನ್ನು ಮ್ಯಾಚಿಂಗ್ ಮಾಡುವ ಮೂಲಕ ಅವರ ವಯೋಮಾನ ಪರಿಶೀಲನೆ ಮಾಡಲಾಗಿದೆ.
  • ಎಚ್ ಆರ್ ಎಂ ಎಸ್ (HRMS) ಡೇಟಾ ಮೂಲಕ ನಿವೃತ್ತಿ ಸರ್ಕಾರಿ ನೌಕರರ ಗುರುತನ್ನು ಪತ್ತೆ ಮಾಡಲಾಗಿದೆ.
  • ಆದಾಯ ತೆರಿಗೆ ಪಾವತಿ ಮೂಲಕ ಟ್ಯಾಕ್ಸ್ ಪೇಯರ್ ಗಳ ಪಟ್ಟಿ ಮಾಡಲಾಗಿದೆ.
  • ಕುಟುಂಬದ ದತ್ತಾಂಶ ತಂತ್ರಾಂಶ ಮೂಲಕ ಕುಟುಂಬದ ಒಟ್ಟು ಆದಾಯ ಮತ್ತು ಸದಸ್ಯರ ವಿವರಗಳ ಗುರುತು

ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ

ಇಲ್ಲಿಯವರೆಗೆ ಸರ್ಕಾರವು ಯಾವುದೇ ರೀತಿಯ ಅಧಿಕೃತ ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಆದರೆ, ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವವರು ಆತಂಕ ಪಡುವ ಅಗತ್ಯವಿಲ್ಲ.

  • ನಿಮ್ಮ ವಯಸ್ಸು 60 ಅಥವಾ 65ಕ್ಕಿಂತ ಮೇಲ್ಪಟ್ಟಿದ್ದರೆ
  • ನೀವು ಎಪಿಎಲ್ ಕಾರ್ಡ್ ಹೊಂದಿದ್ದರೆ
  • ನೀವು ಯಾವುದೇ ರೀತಿಯ ಆದಾಯ ತೆರಿಗೆಯನ್ನು ಪಾವತಿಸುತ್ತಿಲ್ಲವೆಂದರೆ
  • ಸರ್ಕಾರಿ ಹುದ್ದೆಯಲ್ಲಿ ಇಲ್ಲವೆಂದರೆ
  • ಕುಟುಂಬದ ಆದಾಯದ ಮಿತಿ ಹೆಚ್ಚಾಗಿರದಿದ್ದರೆ


ಇಷ್ಟಾಗಿಯೂ ನಿಮಗೆ ಸಂದೇಹವಿದ್ದರೆ ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಅಥವಾ ಅಧಿಕಾರಿಗಳಿಗೆ ಭೇಟಿ ನೀಡಿ, ಇಲ್ಲವಾದಲ್ಲಿ ಸೇವಾ ಸಿಂಧು ಆನ್ಲೈನ್ಲ್ ಪೋರ್ಟಲ್ ಮೂಲಕ ಬೇಕಾದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.

ಅರ್ಹರಿದ್ದರೆ ಮರು ಪರಿಶೀಲನೆಗೆ ಅರ್ಜಿ ಮಾಡಿ

ಒಂದು ವೇಳೆ ನೀವು ಸೂಕ್ತ ಹಾಗೂ ಪ್ರಮಾಣಿಕ ಫಲಾನುಭವಿ ಆಗಿದ್ದರೆ, ಸರ್ಕಾರವು ಯಾವುದೇ ರೀತಿಯ ಸೂಚನೆಗಳನ್ನು ನಿಮಗೆ ನೀಡದೆ ನಿಮ್ಮನ್ನು ಅನರ್ಹರ ಪಟ್ಟಿಯಲ್ಲಿ ಸೇರಿಸಿದರೆ, ಎಲ್ಲಾ ಅರ್ಹತೆಗಳು ಇದ್ದು ನಿಮ್ಮ ಪಿಂಚಣಿಯು ಸ್ಥಗಿತಗೊಂಡಿದ್ದರೆ, ಕೂಡಲೇ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಾಗೂ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿ ಮರು ಪರಿಶೀಲನೆಗೆ ಅರ್ಜಿ ಮಾಡಿ.
ಸರ್ಕಾರವು ಈ ಕಾರ್ಯವನ್ನು ಅನರ್ಹರನ್ನು ತೆಗೆದುಹಾಕಿ ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ಸಿಗಲಿ ಎನ್ನುವ ಉದ್ದೇಶದಿಂದ ಮಾಡಿದೆ. ಒಂದು ವೇಳೆ ನೀವು ಅನರ್ಹರ ಪಟ್ಟಿಯಲ್ಲಿ ಇದ್ದರೆ ಕೂಡಲೇ ಸೂಕ್ತ ದಾಖಲೆಗಳೊಂದಿಗೆ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿ.

Join

Leave a Comment