DCET Result 2025 ಕರ್ನಾಟಕ ಎಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆ (DCET) 2025 ರ ಫಲಿತಾಂಶವನ್ನು ಬಹು ನಿರೀಕ್ಷಿತವಾಗಿ ರಾಜ್ಯದ ಅಭ್ಯರ್ಥಿಗಳು ಎದುರು ನೋಡುತ್ತಿದ್ದರು. ಡಿಪ್ಲೊಮಾ ಮುಗಿಸಿದ ನಂತರ ಇಂಜಿನಿಯರಿಂಗ್ ಕೋರ್ಸ್‌ಗೆ ನೇರವಾಗಿ 2ನೇ ವರ್ಷದ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗುತ್ತದೆ. 2025ರ ಮೇ 31ರಂದು ನಡೆದ ಈ ಪರೀಕ್ಷೆಯಲ್ಲಿ ಭಾಗವಹಿಸಿದ ಸಾವಿರಾರು ಅಭ್ಯರ್ಥಿಗಳ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜೂನ್ 24ರಂದು ಅಧಿಕೃತವಾಗಿ ಪ್ರಕಟಿಸಿದೆ.
ಈ ಲೇಖನದಲ್ಲಿ ನೀವು DCET ಫಲಿತಾಂಶವನ್ನು ಎಲ್ಲಿ ಮತ್ತು ಹೇಗೆ ಪರಿಶೀಲಿಸಬಹುದು ಎಂಬ ಮಾಹಿತಿ, ಲಿಂಕ್‌ಗಳು, ಮುಂದಿನ ಪ್ರವೇಶಾತಿ ಹಂತಗಳು, ಹಾಗೂ ಉಪಯುಕ್ತ ಸಲಹೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಡಿಪ್ಲೊಮಾ ಪ್ರವೇಶ ಪರೀಕ್ಷೆ ಫಲಿತಾಂಶ 2025 ಬಿಡುಗಡೆ – ಅಧಿಕೃತ ಘೋಷಣೆ KEA DCET result 2025
ಡಿಪ್ಲೊಮಾ-2025ರ ಪ್ರವೇಶಾತಿ ಸಂಬಂಧ ಮೇ 31 ರಂದು ರಾಜ್ಯಾದ್ಯಂತ ನಡೆದ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ 24, 2025 ರಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಪರೀಕ್ಷೆಯು, ಇಂಜಿನಿಯರಿಂಗ್ ಕಾಲೇಜುಗಳ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಬಿ.ಇ. ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಆಯೋಜಿಸಲಾಗಿತ್ತು.
ಈ ಪರೀಕ್ಷೆಗೆ ರಾಜ್ಯದಾದ್ಯಂತ ಸಾವಿರಾರು ಡಿಪ್ಲೊಮಾ ಅರ್ಹತೆಯ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಲಿಂಕ್ ಮೂಲಕ ಪರಿಶೀಲಿಸಬಹುದು:
https://cetonline.karnataka.gov.in/kea/
ಇದನ್ನು ಆಧಾರವಾಗಿಸಿಕೊಂಡು ಮುಂದಿನ ಪ್ರವೇಶಾತಿ ಪ್ರಕ್ರಿಯೆಗಳಿಗೆ ಅಭ್ಯರ್ಥಿಗಳು ತಯಾರಾಗಬೇಕು. ಇನ್ನು ಮುಂದೆ ನಡೆಯುವ ಡಾಕ್ಯುಮೆಂಟ್ ವೆರಿಫಿಕೇಷನ್, ಆಸನ್ ಆಯ್ಕೆ ಹಾಗೂ ಕೌನ್ಸೆಲಿಂಗ್ ಹಂತಗಳು ಅಧಿಕೃತ ವೇಳಾಪಟ್ಟಿಯ ಪ್ರಕಾರ ನಡೆಯಲಿವೆ. ಅಭ್ಯರ್ಥಿಗಳು ಯಾವುದೇ ಮಹತ್ವದ ಮಾಹಿತಿ ತಪ್ಪಿಸಿಕೊಳ್ಳದೆ ಪಡೆಯಲು ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಂತ ಅಗತ್ಯ.
How to Check DCET Result 2025. KEA result link
DCET 2025 ಫಲಿತಾಂಶವನ್ನು ಪರಿಶೀಲಿಸುವ ವಿಧಾನ:

- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://cetonline.karnataka.gov.in/kea/
- ಮುಖ್ಯ ಪುಟದಲ್ಲಿ ಲಭ್ಯವಿರುವ “DCET 2025 Result Link” ಅಥವಾ “ಫಲಿತಾಂಶ” ಲಿಂಕ್ ಅನ್ನು ಆಯ್ಕೆಮಾಡಿ. ಈ ಲಿಂಕ್ 24/06/2025 ರಂದು ಸಕ್ರಿಯವಾಗುತ್ತದೆ.
- ನಿಮ್ಮ ಅರ್ಜಿ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕವನ್ನು ನಮೂದಿಸಿ, ನಂತರ “Submit” ಬಟನ್ ಒತ್ತಿ.
- ನಿಮ್ಮ ವೈಯಕ್ತಿಕ ಫಲಿತಾಂಶವು ಪರದೆ ಮೇಲೆ ಪ್ರದರ್ಶಿಸಲಾಗುತ್ತದೆ. ಅದನ್ನು ಪರಿಶೀಲಿಸಿ ಹಾಗೂ ಭವಿಷ್ಯಕ್ಕಾಗಿ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
Direct Links to Check DCET 2025 Result and Updates
| ಲಿಂಕ್ ವಿವರಣೆ | ಡೈರೆಕ್ಟ್ ಲಿಂಕ್ |
|---|---|
| DCET 2025 ಫಲಿತಾಂಶ ಲಿಂಕ್ | ಕ್ಲಿಕ್ ಮಾಡಿ (Check Now) |
| ಅಧಿಕೃತ ವೆಬ್‌ಸೈಟ್ | kea.kar.nic.in |
| ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ | KarnatakaHelp.in |












