Finacial Rules Changes ಜುಲೈ 1ರಿಂದ ಹಲವು ಪ್ರಮುಖ ಹಣಕಾಸು ಸೇವೆಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳು ಜಾರಿಯಾಗಲಿವೆ. ಇದೀಗ ತತ್ಕಾಲ್ ರೈಲು ಟಿಕೆಟ್ ಬುಕ್ಕಿಂಗ್, ತೆರಿಗೆ ಪಾವತಿ ಸೇರಿದಂತೆ ಕೆಲವು ಸೇವೆಗಳಿಗೆ ಆಧಾರ್ ಅನಿವಾರ್ಯವಾಗಲಿದೆ.
ಇದೆ ವೇಳೆ, ಜಿಎಸ್‌ಟಿ ನಿಯಮಗಳಲ್ಲಿ ಕೂಡಾ ಮಹತ್ವದ ಪರಿಷ್ಕರಣೆ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕದಲ್ಲಿಯೂ ಹೊಸ ತಿದ್ದುಪಡಿ ಜಾರಿಯಾಗಲಿದೆ ಎಂದು ಬ್ಯಾಂಕುಗಳು ಮಾಹಿತಿ ನೀಡಿವೆ.
ಇನ್ನು ವಾಟ್ಸ್‌ಆ್ಯಪ್ ಬಳಕೆದಾರರಿಗೆ ಪ್ರಮುಖ ಬದಲಾವಣೆ ಎಂದರೆ, ಮೆಟಾ ಕಂಪನಿ ವಾಣಿಜ್ಯ ಸಂದೇಶಗಳಿಗೆ ಶೀಘ್ರದಲ್ಲೇ ಶುಲ್ಕ ವಿಧಿಸಲು ನಿರ್ಧರಿಸಿದ್ದು, ವ್ಯಾಪಾರಿಕ ಚಾಟ್‌ಗಳಿಗೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Finacial Rules Changes: ಜುಲೈ 1ರಿಂದ ಹೊಸ ಹಣಕಾಸು ನಿಯಮಗಳು ಜಾರಿಗೆ: ಆಧಾರ್ ಕಡ್ಡಾಯ, ಟಿಕೆಟ್ ಬುಕ್ಕಿಂಗ್ ನಿಯಮ ಬದಲಾವಣೆ
Finacial Rules Changes: ಜುಲೈ 1ರಿಂದ ಹಣಕಾಸು ಸೇವೆಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಪಾನ್ ಕಾರ್ಡ್ ಪಡೆಯುವುದು ತತ್ಕಾಲ್ ರೈಲು ಟಿಕೆಟ್ ಬುಕ್ಕಿಂಗ್‌ವರೆಗೆ ಆಧಾರ್ ದೃಢೀಕರಣ ಅನಿವಾರ್ಯವಾಗುತ್ತಿದೆ. ಜೊತೆಗೆ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳಲ್ಲಿಯೂ ಬದಲಾವಣೆ ತರಲಾಗುತ್ತಿದೆ.
PAN Card Alert: ಸೆಪ್ಟೆಂಬರ್ 15ರೊಳಗೆ ಸರಿಪಡಿಸಿಲ್ಲ ಅಂದ್ರೆ ಬ್ಯಾಂಕ್ ಖಾತೆ ಬಂದ್ ಆಗಬಹುದು!
ಪಾನ್‌ಗೆ ಆಧಾರ್ ಕಡ್ಡಾಯ:
ಹೊಸ ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಈಗ ಮುಂದೆ ಆಧಾರ್ ದೃಢೀಕರಣ ಅನಿವಾರ್ಯವಾಗಲಿದೆ. ಈವರೆಗೆ ಜನ್ಮದಿನಾಂಕವನ್ನು ದೃಢೀಕರಿಸಲು ಜನನ ಪ್ರಮಾಣಪತ್ರ ಅಥವಾ ಯಾವದೇ ಗುರುತಿನ ಚೀಟಿಯಲ್ಲಿ ಜನ್ಮದಿನಾಂಕ ನಮೂದಿರುವ ದಾಖಲೆ ಸಲ್ಲಿಸಿದ್ದರೆ ಸಾಕಾಗುತ್ತಿತ್ತು.
ಆದರೆ ಈಗಾಗಲೇ ಪಾನ್ ಕಾರ್ಡ್ ಹೊಂದಿರುವವರು ಇನ್ನೂ ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿಲ್ಲದಿದ್ದರೆ, 2025 ಡಿಸೆಂಬರ್ 31ರೊಳಗೆ ಆಧಾರ್-ಪಾನ್ ಲಿಂಕ್ ಮಾಡುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ
- ಜುಲೈ 1ರಿಂದ ತತ್ಕಾಲ್ ರೈಲು ಟಿಕೆಟ್ ಬುಕ್ಕಿಂಗ್‌ಗೆ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಆಧಾರ್ ದೃಢೀಕರಣ ಕಡ್ಡಾಯ.
- ಜುಲೈ 15ರಿಂದ ಪಿಆರ್‌ಎಸ್ ಕೌಂಟರ್, ಆನ್‌ಲೈನ್ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಬುಕ್ಕಿಂಗ್ ಮಾಡುವವರಿಗೂ ಒಟಿಪಿ ದೃಢೀಕರಣ ಕಡ್ಡಾಯವಾಗಲಿದೆ.
- ರೈಲ್ವೆ ಕೌಂಟರ್‌ಗಳಲ್ಲಿ ನೇರವಾಗಿ ಬುಕ್ ಮಾಡುವವರಿಗೆ ಮಾತ್ರ ಆಧಾರ್ ಪರಿಶೀಲನೆ ಕಡ್ಡಾಯವಿಲ್ಲ.
Finacial Rules Changes: ಜುಲೈ 1ರಿಂದ ಹಣಕಾಸು, ಪ್ರಯಾಣ ಮತ್ತು ತೆರಿಗೆ ಸೇವೆಗಳಲ್ಲಿ ಹೊಸ ಬದಲಾವಣೆಗಳು
ಜುಲೈ 1ರಿಂದ ಕೆಲ ಪ್ರಮುಖ ನಿಯಮಗಳು ಮತ್ತು ದರಗಳಲ್ಲಿ ಪರಿಷ್ಕರಣೆ ಜಾರಿಯಾಗುತ್ತಿದೆ. ಜನಸಾಮಾನ್ಯರಿಂದ ಹೂಡಿಕೆದಾರರ ತನಕ ಎಲ್ಲರಿಗೂ ಇದು Knowing Must!

ಪ್ರಯಾಣ ದರ ಏರಿಕೆ
- ಜುಲೈ 1ರಿಂದ ರೈಲ್ವೆ ಪ್ರಯಾಣ ದರಗಳಲ್ಲಿ ಸಣ್ಣ ಮಟ್ಟದ ಹೆಚ್ಚಳ ಇರುವ ಸಾಧ್ಯತೆ ಇದೆ.
- ಸಾಮಾನ್ಯ ರೈಲುಗಳ ಎರಡನೇ ಶ್ರೇಣಿ ಬೋಗಿಗಳಿಗೆ ಪ್ರತಿ ಕಿ.ಮೀಗೆ ಅರ್ಧ ಪೈಸೆ ಹೆಚ್ಚಳ.
- ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ಬೋಗಿಗಳಿಗೆ ಪ್ರತಿ ಕಿ.ಮೀಗೆ ಒಂದು ಪೈಸೆ ಹೆಚ್ಚಳ.
- ಎಸಿ ಬೋಗಿಗಳಿಗೆ ಪ್ರತಿ ಕಿ.ಮೀಗೆ ಎರಡು ಪೈಸೆ ಹೆಚ್ಚಳ ಇರಲಿದೆ.
ಜಿಎಸ್‌ಟಿ ನಿಯಮ ಬದಲಾವಣೆ
- ಜುಲೈ 1ರಿಂದ ಜಿಎಸ್‌ಟಿ ಮಾಸಿಕ ರಿಟರ್ನ್ ಅನ್ನು ನಮೂನೆ 3B ಮೂಲಕ ಸಲ್ಲಿಸಿದರೆ ಅದನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
- ತೆರಿಗೆ ಪಾವತಿದಾರರು ಮೂರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದರೆ ಅವರಿಗೆ ಮುಂದಿನ ಮಾಸಿಕ ಅಥವಾ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ಅವಕಾಶ ಇರೋದಿಲ್ಲ.
ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಹೊಸ ಸೇವಾ ಶುಲ್ಕ
- HDFC ಸೇರಿದಂತೆ ಪ್ರಮುಖ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಿವೆ.
- ಕೆಲವು ವಿಶೇಷ ಸೇವೆಗಳಿಗೆ ಶೇ.1ರಷ್ಟು ಶುಲ್ಕ, ಗರಿಷ್ಠವಾಗಿ ತಿಂಗಳಿಗೆ ₹4,999 ವಿಧಿಸಲಾಗುತ್ತದೆ.
- ರಿವಾರ್ಡ್ ಪಾಯಿಂಟ್ ಗಳ ನಿಯಮದಲ್ಲಿಯೂ ಸುಕ್ಷ್ಮ ಬದಲಾವಣೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲ ಸೇವೆಗಳಿಗೆ ಆಧಾರ್ ಕಡ್ಡಾಯ
- ಸರ್ಕಾರಿ ಸಬ್ಸಿಡಿಗಳು ಮತ್ತು ಯೋಜನೆಗಳು.
- ತೆರಿಗೆ ಪಾವತಿ.
- ಕೆಲವು ಬ್ಯಾಂಕಿಂಗ್ ಸೇವೆಗಳು.
- ತತ್ಕಾಲ್ ಟಿಕೆಟ್ ಬುಕಿಂಗ್.













