krishi Honda Subsidy: ಕೃಷಿ ಹೊಂಡ ಸಬ್ಸಿಡಿ: ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

Photo of author

Mantesh

Publish: June 30, 2025
krishi Honda Subsidy

share Share:

krishi Honda Subsidy: ಚಾಮರಾಜನಗರ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ಎಲ್ಲಾ ವರ್ಗದ ರೈತರಿಗೆ ಶೇಕಡಾ 50% ರಿಂದ 90% ರಷ್ಟು ಸಹಾಯಧನ ಅಥವಾ ಸಬ್ಸಿಡಿ (krishi Honda Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆದ್ದರಿಂದ ಆಸಕ್ತಿ ಇರುವ ರೈತರು ತಮ್ಮ ಹೊಲದಲ್ಲಿಗೆ ಕೃಷಿ ಹೊಂಡ ನಿರ್ಮಿಸಲು ತಕ್ಷಣ ಅರ್ಜಿ ಸಲ್ಲಿಸಬಹುದು.

ಹೌದು ಸ್ನೇಹಿತರೆ! ಈ ಲೇಖನದ ಮೂಲಕ ನೀವು:

  • ✔️ ಕೃಷಿ ಹೊಂಡಕ್ಕಾಗಿ ಬೇಕಾಗುವ ಅಗತ್ಯ ದಾಖಲೆಗಳು ಯಾವವು?
  • ✔️ ಎಷ್ಟು ಸಹಾಯಧನ ಸಿಗುತ್ತದೆ?
  • ✔️ ಅರ್ಜಿ ಸಲ್ಲಿಸುವ ಸರಿಯಾದ ವಿಧಾನವೇನು?

ಅನ್ನುವ ಎಲ್ಲ ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


krishi Honda Subsidy: ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ – ಶೇಕಡ 50% ರಿಂದ 90% ಸಹಾಯಧನ!

ಈಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ರೈತರಿಗೆ 2025–26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆಯಡಿ ಕೃಷಿ ಹೊಂಡ (Krishi Honda) ನಿರ್ಮಾಣಕ್ಕೆ ಅರ್ಜಿ ಆಹ್ವಾನ ನೀಡಲಾಗಿದೆ.

ಈ ಯೋಜನೆಯ ಮೂಲಕ:

  • ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 50% ಸಬ್ಸಿಡಿ,
  • ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ಶೇಕಡಾ 90% ಸಹಾಯಧನ ದೊರೆಯಲಿದೆ.

ಆದ್ದರಿಂದ ಆಸಕ್ತಿ ಇರುವ ರೈತರು ತಾವು ಮಾಲೀಕರಾಗಿರುವ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಈಗಲೇ ಅರ್ಜಿ ಸಲ್ಲಿಸಿ ಮತ್ತು ನೀರಾವರಿ ವ್ಯವಸ್ಥೆಯನ್ನು ಬಲಪಡಿಸಿ!

Gold Price Today: ಇಂದು ಚಿನ್ನದ ದರ ಎಷ್ಟು? ಇರಾನ್–ಇಸ್ರೇಲ್ ಕದನ ವಿರಾಮ ಮತ್ತು ಯುಎಸ್–ಚೀನಾ ಒಪ್ಪಂದದಿಂದ ಮಾರುಕಟ್ಟೆ ಸ್ಥಿತಿ ಹೇಗಿದೆ?

ಕೃಷಿ ಹೊಂಡ ನಿರ್ಮಾಣಕ್ಕೆ ಗರಿಷ್ಠ ಸಹಾಯಧನ ಎಷ್ಟು ಕೊಡುತ್ತಾರೆ?

ನೀವು ಕೃಷಿ ಹೊಂಡ (krishi Honda) ನಿರ್ಮಿಸಲು ಯೋಜಿಸುತ್ತಿದ್ದರೆ, ಸರ್ಕಾರದಿಂದ ಉತ್ತಮ ಪ್ರಮಾಣದಲ್ಲಿ ಆರ್ಥಿಕ ನೆರವು ಪಡೆಯಬಹುದು.

  • ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ₹75,000 ರಷ್ಟು ಸಹಾಯಧನ ದೊರೆಯಲಿದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ ₹2.28 ಲಕ್ಷ ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

  • ಕೃಷಿ ಹೊಂಡ ನಿರ್ಮಿಸಲು ರೈತರು ಕನಿಷ್ಠ 1 ಹೆಕ್ಟೇರ್ ಜಮೀನು ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ರೈತ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿ ಹಾಕುವ ರೈತರು ಕರ್ನಾಟಕ ನಿವಾಸಿಗಳಾಗಿರಬೇಕು.
  • ಜಮೀನಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳು (ಪಹಣಿ, ಜಮೀನು ದಾಖಲೆಗಳು) ಇರಬೇಕು.

Farm pond construction rules Karnataka: ಕೃಷಿ ಹೊಂಡದ ಅಳತೆಗಳು ಮತ್ತು ಪಾಲಿಸಬೇಕಾದ ನಿಯಮಗಳು

krishi Honda Subsidy
krishi Honda Subsidy
  • ಕೃಷಿ ಹೊಂಡದ ತಳಿ ಅಳತೆ 20×20×3 ಮೀಟರ್ ಆಗಿರಬೇಕು, 1:1 ಇಳಿಜಾರಿನಂತೆ ನಿರ್ಮಾಣವಾಗಬೇಕು.
  • ಗರಿಷ್ಠ 12 ಘನ ಮೀಟರ್ ನೀರು ಶೇಖರಣೆ ಸಾಮರ್ಥ್ಯ ಹೊಂದಿರಬೇಕು.
  • ನೀರು ಇಂಗದಂತೆ 300 ಮೈಕ್ರಾನ್ ISI ಗುಣಮಟ್ಟದ ಪಾಲಿಥಿನ್ ಲೈನಿಂಗ್ ಕಡ್ಡಾಯ.
  • ಒಳಹರಿವು ಮತ್ತು ಔಟ್ಲೆಟ್ ವ್ಯವಸ್ಥೆಯನ್ನು ರೈತರು ಕಡ್ಡಾಯವಾಗಿ ನಿರ್ಮಿಸಬೇಕು.
  • ಕನಿಷ್ಠ ಒಂದು ಎಕರೆ ತೋಟಗಾರಿಕೆ ಬೆಳೆ ಇದ್ದರೆ ಮಾತ್ರ ಅರ್ಹತೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಧಾಖಲೆಗಳು

  • ಅರ್ಜಿ ನಮೂನೆ (ಅಧಿಕೃತ)
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಈ ವರ್ಷದ ಪಹಣಿ ನಕಲು
  • ಅರ್ಜಿದಾರನ ಆಧಾರ್ ಕಾರ್ಡ್ ಪ್ರತಿ
  • ಬ್ಯಾಂಕ್ ಖಾತೆ ವಿವರಗಳು, ಚೆಕ್ ಪಾಸ್ಬುಕ್ ಪ್ರತಿ
  • ಬೆಳೆ ದೃಢೀಕರಣ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತರ ಅಗತ್ಯ ದಾಖಲೆಗಳು (ತೋಟಗಾರಿಕೆ ಇಲಾಖೆಯಿಂದ ಕೇಳಿಬಂದರೆ)

How to apply for Krishi Honda Subsidy: ಅರ್ಜಿ ಸಲ್ಲಿಸುವ ವಿಧಾನ

  • ಮೇಲ್ಕಂಡ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ.
  • ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿ ಅಥವಾ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ.
  • ಅರ್ಜಿ ನಮೂನೆ ಪಡೆಯಿರಿ, ಸರಿಯಾಗಿ ಭರ್ತಿ ಮಾಡಿ.
  • ಅಧಿಕೃತ ಸಿಬ್ಬಂದಿಗೆ ದಾಖಲೆಗಳ ಪರಿಶೀಲನೆ ನೀಡಿ, ಅರ್ಜಿ ಸಲ್ಲಿಸಿ.
  • ಹೆಚ್ಚಿನ ಮಾಹಿತಿ ಅಥವಾ ಅನುಮಾನಗಳಿಗೆ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಿ.

ರೈತ ಬಂಧುಗಳೇ, ಕೃಷಿ ಹೊಂಡ ಸಹಾಯಧನ (krishi Honda Subsidy) ಯೋಜನೆಯಿಂದ ನೀರಾವರಿ ವ್ಯವಸ್ಥೆಯನ್ನು ಉತ್ತಮಗೊಳಿಸಿಕೊಂಡು ಉತ್ತಮ ಬೆಳೆ ಉತ್ಪಾದನೆ ಮಾಡಿ! ಈ ಅವಕಾಶವನ್ನು ಹಾಳುಮಾಡದೆ ತಪ್ಪದೇ ಅರ್ಜಿ ಹಾಕಿ, ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಿ.

ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

Join

Leave a Comment