IDFC FIRST Bank Scholarship 2025: ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಸಂಪೂರ್ಣ ಮಾಹಿತಿ!

Photo of author

Mantesh

Publish: July 3, 2025
IDFC FIRST Bank Scholarship 2025

share Share:

IDFC First Bank Scholarship 2025: ಐಡಿಎಫ್‍ಸಿ ಬ್ಯಾಂಕ್ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣದ ಹಣಕಾಸಿನ ಸಹಾಯಕ್ಕಾಗಿ ವಿದ್ಯಾರ್ಥಿ ವೇತನ ನೀಡುತ್ತಿದೆ.

ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತೆಗಳೇನು? ಯಾರು ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎಂಬ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


IDFC First Bank Scholarship 2025

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಇದೀಗ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಆರ್ಥಿಕವಾಗಿ ಹಿಂದುಳಿದ್ದು, ಹಣಕಾಸಿನ ತೊಂದರೆಯಿಂದ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಅವರಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

Bank Holidays In July 2025: ಜುಲೈ ತಿಂಗಳಲ್ಲಿ 13 ದಿನ ಬ್ಯಾಂಕ್ ಬಂದ್: ರಾಜ್ಯವಾರು ರಜಾದಿನಗಳ ಪಟ್ಟಿ ನೋಡಿ!


ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸ್ಕಾಲರ್ಶಿಪ್ ಅಡಿಯಲ್ಲಿ 2025-27ರ ಶೈಕ್ಷಣಿಕ ವರ್ಷದಲ್ಲಿ ಎರಡು ವರ್ಷಗಳ ಪೂರ್ಣ ಅವಧಿಯ ಎಂಬಿಎ ಕೋರ್ಸ್ ನ ಮೊದಲ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಎಂಬಿಎ ಕೋರ್ಸ್ ನ ಎರಡು ವರ್ಷಗಳವರೆಗೆ, ವರ್ಷಕ್ಕೆ 1 ಲಕ್ಷ ರೂ. ಅಂತೆ ಎರಡು ವರ್ಷಗಳ ಕಾಲ ಪಡೆಯುತ್ತಾರೆ.

IDFC First Bank Scholarship 2025 ಅರ್ಹತೆಗಳು:

IDFC FIRST Bank Scholarship 2025
IDFC FIRST Bank Scholarship 2025
  • ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
  • ವಿದ್ಯಾರ್ಥಿಯು ಎರಡು ವರ್ಷಗಳ ಪೂರ್ಣ ಅವಧಿಯ ಎಂಬಿಎ ಅಥವಾ 2027ರ ತರಗತಿಗೆ ಸಮನಾದ ಕೋರ್ಸ್ ಗೆ ದಾಖಲಾಗಿರಬೇಕು.
  • ಅರ್ಜಿದಾರರು ಈ ಕೆಳಗೆ ಸೂಚಿಸಲಾದ ಎಂಬಿಎ ಕಾಲೇಜುಗಳಲ್ಲಿ ಒಂದಕ್ಕೆ ದಾಖಲಾಗಿರಬೇಕು.
  • ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ ಆರು ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

ವಿದ್ಯಾರ್ಥಿ ವೇತನದ ಪ್ರಯೋಜನಗಳು:

IDFC First Bank Scholarship 2025: ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಎರಡು ವರ್ಷ ಅವಧಿಯ ಎಂಬಿಎ ಪದವಿ ಅಧ್ಯಯನಕ್ಕಾಗಿ ವಾರ್ಷಿಕವಾಗಿ ಒಂದು ಲಕ್ಷದಂತೆ ಎರಡು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. (ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ).

ಬೇಕಾಗುವ ಅಗತ್ಯ ದಾಖಲೆಗಳು:

  • ಪ್ರವೇಶ ಪ್ರತಿ
  • ಪದವಿ ಅಂಕಪಟ್ಟಿ
  • ಆದಾಯ ಪುರಾವೆಗಳು
  • ಇನ್ನಿತರ ದಾಖಲೆಗಳು

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/07/2025


IDFC First Bank Scholarship 2025: ಅರ್ಜಿ ಸಲ್ಲಿಸಲು.


Click Here:

Join

Leave a Comment