Karnataka caste certificate apply online: ಜಾತಿ ಪ್ರಮಾಣಪತ್ರವು ಕರ್ನಾಟಕದಲ್ಲಿ ಅನೇಕ ಸಾರ್ವಜನಿಕ ಮತ್ತು ಖಾಸಗಿ ಹಂತದ ಸೌಲಭ್ಯಗಳನ್ನು ಪಡೆಯಲು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಹಿಂದುಳಿದ ವರ್ಗ (OBC) ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳು, ವಿದ್ಯಾರ್ಥಿ ವೇತನ, ಸರ್ಕಾರಿ ಉದ್ಯೋಗಗಳಲ್ಲಿ ಅಡ್ಮಿಷನ್ ಅಥವಾ ನೇಮಕಾತಿ, ಶಿಕ್ಷಣದಲ್ಲಿ ರಿಯಾಯಿತಿ ಇತ್ಯಾದಿಗಳನ್ನು ಪಡೆಯಲು ಈ ಪ್ರಮಾಣಪತ್ರ ಬಹುಮುಖ್ಯವಾಗಿದೆ.
ಈ ಲೇಖನದ ಮೂಲಕ ನೀವು ಜಾತಿ ಪ್ರಮಾಣಪತ್ರ ಏಕೆ ಬೇಕು? ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ]
ಜಾತಿ ಪ್ರಮಾಣಪತ್ರ ಎಂದರೇನು? Karnataka caste certificate apply online
ಜಾತಿ ಪ್ರಮಾಣಪತ್ರವು ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆ ಆಗಿದ್ದು, ನಿಶ್ಚಿತ ಜಾತಿಗೆ ಸೇರಿದವರನ್ನು ದೃಢೀಕರಿಸುತ್ತದೆ. ಭಾರತೀಯ ಸಂವಿಧಾನದ ಅಡಿಯಲ್ಲಿ ಸೌಲಭ್ಯಗಳು ಒದಗಿಸಲಾಗುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು ಇದನ್ನು ಪಡೆಯಬಹುದು.
ಪ್ರಮುಖ ಉದ್ದೇಶಗಳು:
- ವ್ಯಕ್ತಿಯ ಜಾತಿಯನ್ನು ಅಧಿಕೃತವಾಗಿ ದೃಢೀಕರಿಸುವುದು
- ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು
- ಸರ್ಕಾರಿ ಉದ್ಯೋಗ ಮತ್ತು ಯೋಜನೆಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು
- ವಿದ್ಯಾರ್ಥಿ ವೇತನ ಮತ್ತು ಶುಲ್ಕ ರಿಯಾಯಿತಿಗೆ ಅರ್ಹತೆ
- ವಯೋಮಿತಿ ಶಿಥಿಲಿಕೆ (ಉದ್ಯೋಗಗಳಿಗೆ)
ಯಾರು ಅರ್ಜಿ ಹಾಕಬಹುದು? caste certificate eligibility Karnataka
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- SC/ST/OBC ಪಟ್ಟಿಯಲ್ಲಿರುವ ಜಾತಿಗೆ ಸೇರಿದವರಾಗಿರಬೇಕು
- ಈಗಾಗಲೇ ಜಾತಿ ಪ್ರಮಾಣಪತ್ರ ಹೊಂದಿಲ್ಲದವರಾಗಿರಬೇಕು
- ಮಕ್ಕಳಾಗಿದ್ದರೆ ಕನಿಷ್ಠ 3 ವರ್ಷ ವಯಸ್ಸು ಇರಬೇಕು
- ಕುಟುಂಬ ಸದಸ್ಯರು ಬೇರೆ ರಾಜ್ಯದ ಜಾತಿ ಪ್ರಮಾಣಪತ್ರ ಹೊಂದಿರಬಾರದು
ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ವಿಧಾನ:

- ನಾಡಕಚೇರಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: nadakacheri.karnataka.gov.in
- “Apply Online” ಆಯ್ಕೆಮಾಡಿ
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ → OTP ಮೂಲಕ ಲಾಗಿನ್
- “New Request” → “Caste Certificate” ಆಯ್ಕೆ ಮಾಡಿ
- ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಫೀಸ್ ಪಾವತಿಸಿ (₹40)
- ಅರ್ಜಿ ಸಲ್ಲಿಸಿದ ನಂತರ, ಪ್ರಮಾಣಪತ್ರವನ್ನು 30 ದಿನಗಳೊಳಗೆ ಡೌನ್‌ಲೋಡ್ ಮಾಡಬಹುದು
ಆಫ್‌ಲೈನ್ (ಖುದ್ದಾಗಿ) ಅರ್ಜಿ ಸಲ್ಲಿಸುವ ವಿಧಾನ:
- ನಿಮ್ಮ ತಾಲೂಕು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ
- ಅರ್ಜಿ ನಮೂನೆ ಭರ್ತಿ ಮಾಡಿ
- ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಿ
- ಪರಿಶೀಲನೆಯ ನಂತರ ತಹಸೀಲ್ದಾರ್ ಪ್ರಮಾಣಪತ್ರವನ್ನು ನೀಡುತ್ತಾರೆ
ಅಗತ್ಯವಿರುವ ದಾಖಲೆಗಳು:
| ದಾಖಲೆಗಳು | ವಿವರಣೆ |
|---|---|
| ಗುರುತಿನ ಪುರಾವೆ | ಆಧಾರ್, ವೋಟರ್ ಐಡಿ, ಪಾನ್, ಪಾಸ್‌ಪೋರ್ಟ್ |
| ವಿಳಾಸದ ಪುರಾವೆ | ರೇಷನ್ ಕಾರ್ಡ್, ವಿದ್ಯುತ್ ಬಿಲ್, ಗ್ಯಾಸ್ ಬಿಲ್ |
| ಜಾತಿ ಪುರಾವೆ | ಪೋಷಕರ ಜಾತಿ ಪ್ರಮಾಣಪತ್ರ, ಶಾಲಾ ಸನ್‌ಲಿವಿಂಗ್ ಸೆರ್ಟಿಫಿಕೇಟ್ |
| ವಯಸ್ಸಿನ ಪುರಾವೆ | ಜನನ ಪ್ರಮಾಣಪತ್ರ/ಶಾಲಾ ದಾಖಲಾತಿ |
| ಆದಾಯ ಪ್ರಮಾಣಪತ್ರ | ಕೆಲವೊಂದು ಯೋಜನೆಗಳಿಗೆ ಅಗತ್ಯ |
| ಅಫಿಡವಿಟ್ | ಅರ್ಜಿದಾರನ ಘೋಷಣೆಯೊಂದಿಗೆ |
ಜಾತಿ ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ವಿಧಾನ:
- nadakacheri.karnataka.gov.in ಗೆ ಹೋಗಿ
- “Download Caste Certificate” ಕ್ಲಿಕ್ ಮಾಡಿ
- ಅರ್ಜಿ ಸಂಖ್ಯೆ ನಮೂದಿಸಿ → “Download” ಕ್ಲಿಕ್ ಮಾಡಿ
- PDF ಸ್ವರೂಪದಲ್ಲಿ ಡೌನ್‌ಲೋಡ್ ಆಗುತ್ತದೆ
ಪ್ರಮಾಣಪತ್ರ ನೀಡುವ ಪ್ರಾಧಿಕಾರ ಯಾರು?
- ತಹಸೀಲ್ದಾರ್ ಅಥವಾ ನಾಡಕಚೇರಿ ಕಚೇರಿ
- ಕಂದಾಯ ಇಲಾಖೆ ಅಧೀನದಲ್ಲಿ ಇರುವ ಅಧಿಕಾರಿಗಳು
- ನಾಡಕಚೇರಿ ಪೋರ್ಟಲ್ ಮೂಲಕವೂ ಅರ್ಜಿ ಹಾಕಬಹುದು
ಅರ್ಜಿಗೆ ಶುಲ್ಕ ಎಷ್ಟು?
- ಸಾಮಾನ್ಯವಾಗಿ ₹0
- ನಾಡಕಚೇರಿ/ಸೇವಾ ಸಿಂಧು ಮೂಲಕ ಅರ್ಜಿ ಹಾಕಿದರೆ ₹40 ಸೇವಾ ಶುಲ್ಕ ಇರಬಹುದು
- ಶುಲ್ಕಗಳು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆ ಇರುವುದರಿಂದ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ











