Karnataka Farmers Compensation-2025: ರಾಜ್ಯ ರೈತರಿಗೆ ಭಾರಿ ಸಿಹಿ ಸುದ್ದಿ: 1,449 ಕೋಟಿ ರೂ. ಬೆಳೆ ಪರಿಹಾರ – 23 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಶೀಘ್ರವೇ ಹಣ ಜಮಾ..!

Photo of author

Mantesh

Publish: July 26, 2025
Karnataka Farmers Compensation-2025

share Share:

ಕರ್ನಾಟಕದ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ಸಹಾಯದ ಬಾಗಿಲು ತೆರೆಯಲಾಗಿದೆ. 2024-25ನೇ ಸಾಲಿನಲ್ಲಿ ಬರ ಹಾಗೂ ನೈಸರ್ಗಿಕ ಅವಾಂತರಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರದಿಂದ 1,449 ಕೋಟಿ ರೂ. ಬೆಳೆ ಪರಿಹಾರ (Karnataka Farmers Compensation-2025) ವಿತರಣೆ ಮಾಡಲಾಗುತ್ತಿದೆ..

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


ಯಾರು, ಎಷ್ಟು ಪರಿಹಾರ ಪಡೆಯುತ್ತಾರೆ?

ಕೃಷಿ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಈ ಬಾರಿ 23 ಲಕ್ಷಕ್ಕೂ ಹೆಚ್ಚು ರೈತರಿಗೆ (Karnataka Farmers Compensation-2025) ಬೆಳೆ ಪರಿಹಾರ ಧನ ತಲುಪಲಿದೆ. ನಷ್ಟದ ಮೌಲ್ಯಮಾಪನ ಆಧಾರದ ಮೇಲೆ ತಾಲೂಕು ಮಟ್ಟದಲ್ಲಿ ಪಟ್ಟಿ ಸಿದ್ಧವಾಗಿದೆ.

ಬೆಳೆ ಹಾನಿ ಹೆಚ್ಚಾಗಿ ಕಲಬುರ್ಗಿ, ಗದಗ, ಹಾವೇರಿ, ಉಡುಪಿ, ಶಿವಮೊಗ್ಗ ಹಾಗೂ ಬೆಂಗಳೂರಿನ ಗ್ರಾಮೀಣ ಭಾಗದಲ್ಲಿ ವರದಿಯಾಗಿದೆ. ಇದನ್ನು ಆಧರಿಸಿ 3 ಹಂತಗಳಲ್ಲಿ ಪರಿಹಾರ ಧನ ಬಿಡುಗಡೆ ಮಾಡಲಾಗುತ್ತಿದೆ.

ಜಿಲ್ಲಾವಾರು ಪರಿಹಾರದ ಹಂಚಿಕೆ (ಮೊದಲ ಹಂತ)

  • ಕಲಬುರ್ಗಿ: ₹656 ಕೋಟಿ
  • ಗದಗ: ₹242 ಕೋಟಿ
  • ಹಾವೇರಿ: ₹95 ಕೋಟಿ
  • ಶಿವಮೊಗ್ಗ: ₹97 ಕೋಟಿ
  • ಧಾರವಾಡ: ₹23 ಕೋಟಿ
  • ಉಡುಪಿ: ₹3 ಕೋಟಿ

ಇತರ ಜಿಲ್ಲೆಗಳಿಗೂ ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡಲಾಗುವುದು.

2024-25ನೇ ಸಾಲಿನ ಹೊಸ ನಿರ್ಧಾರಗಳು

  • 2.40 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹಾನಿ ಅಂದಾಜು
  • 1,600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾನಿ ವರದಿ
  • ಹಾನಿ ಪ್ರಮಾಣದ ಪ್ರಕಾರ 100 ಕೋಟಿ ರೂ.ಗೂ ಅಧಿಕ ಅನುದಾನ ಹೆಚ್ಚುವರಿ ನೀಡುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ರೈತರಿಗೆ ಮತ್ತಷ್ಟು ನೆರವು

Karnataka Farmers Compensation-2025
Karnataka Farmers Compensation-2025

Solar Pump Subsidy for Farmers Karnataka

ಸರ್ಕಾರವು ಬೆಳೆ ವಿಮೆ, ಬಿತ್ತನೆ ಬೀಜ, ರಾಸಾಯನಿಕ, ಡೀಸೆಲ್ ಸಬ್ಸಿಡಿ ಮುಂತಾದ ಸೌಲಭ್ಯಗಳ ಜೊತೆಗೆ, ಈ ಪರಿಹಾರವನ್ನು ನೇರವಾಗಿ DBT (Direct Benefit Transfer) ಮೂಲಕ ರೈತರ ಖಾತೆಗೆ ಜಮಾ ಮಾಡಲಿದೆ.

ಸರ್ಕಾರದ ಸ್ಪಷ್ಟನೆ

ರೈತರ ನೋವು ಅರಿತಿದ್ದೇವೆ. ಒಂದು ರೂಪಾಯಿ ಕೂಡ ಮಧ್ಯವರ್ತಿಗಳ ಕೈಗೆ ಹೋಗದಂತೆ ನೇರವಾಗಿ ರೈತರ ಖಾತೆಗೆ ಹಣ ತಲುಪುವಂತೆ ಕ್ರಮ ಕೈಗೊಂಡಿದ್ದೇವೆ” ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಈ ಬಾರಿಯ 1,449 ಕೋಟಿ ರೂಪಾಯಿ ಪರಿಹಾರ ರಾಜ್ಯದ 23 ಲಕ್ಷ ರೈತರ ಜೀವನಕ್ಕೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದುಕೊಡಲಿದೆ. ಮುಂದಿನ ದಿನಗಳಲ್ಲಿ ಹಾನಿ ಮೌಲ್ಯಮಾಪನ ಹೆಚ್ಚಾದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡುವ ಭರವಸೆ ಸರ್ಕಾರ ನೀಡಿದೆ.

Join

Leave a Comment