Bank Holidays: ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಬ್ಯಾಂಕ್ ಖಾತೆದಾರರು ಹಾಗೂ ವ್ಯವಹಾರಿಗಳಿಗೆ ಪ್ರಮುಖ ಮಾಹಿತಿ.
ಸ್ವಾತಂತ್ರ್ಯ ದಿನ, ಗಣೇಶ ಚತುರ್ಥಿ, ಜನ್ಮಾಷ್ಟಮಿ ಮೊದಲಾದ ಹಬ್ಬಗಳ ಜೊತೆಗೆ ಭಾನುವಾರ ಹಾಗೂ ಶನಿವಾರಗಳನ್ನು ಸೇರಿಸಿದರೆ ಆಗಸ್ಟ್ 2025ರಲ್ಲಿ ಒಟ್ಟು 15 ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ..
ಈ ಪೈಕಿ ಕೆಲವು ರಜಾದಿನಗಳು ದೇಶವ್ಯಾಪಿಯಾಗಿ ಅನ್ವಯಿಸುತ್ತವೆ, ಆದರೆ ಕೆಲವು ರಾಜ್ಯ ಮಟ್ಟದ ಹಬ್ಬಗಳಿಗೆ ಮಾತ್ರ ಸೀಮಿತ. ಆದ್ದರಿಂದ ನೀವು ಬ್ಯಾಂಕ್ಗೆ ಹೋಗುವ ಮೊದಲು ಈ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿಕೊಳ್ಳಿ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].
RBI ಪ್ರಕಟಿಸಿರುವ ಆಗಸ್ಟ್ 2025ರ ಬ್ಯಾಂಕ್ ರಜಾದಿನಗಳು (Bank Holidays)
ಭಾನುವಾರ ಹಾಗೂ ಎರಡನೇ/ನಾಲ್ಕನೇ ಶನಿವಾರಗಳು ರಾಷ್ಟ್ರವ್ಯಾಪಿ ಸಾಮಾನ್ಯ ರಜೆ. ಇವುಗಳ ಹೊರತಾಗಿ ಹಬ್ಬಗಳು ಹಾಗೂ ಸ್ಥಳೀಯ ಆಚರಣೆಗಳ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ:
ಆಗಸ್ಟ್ 2025ರ ಬ್ಯಾಂಕ್ ರಜೆಗಳ (Bank Holidays) ವಿವರವಾದ ಪಟ್ಟಿ:
| ದಿನಾಂಕ | ಕಾರಣ / ಹಬ್ಬ | ರಾಜ್ಯ / ಪ್ರದೇಶ |
|---|---|---|
| ಆಗಸ್ಟ್ 3 (ಭಾನುವಾರ) | ಸಾಮಾನ್ಯ ರಜೆ | ದೇಶಾದ್ಯಂತ |
| ಆಗಸ್ಟ್ 8 (ಶುಕ್ರವಾರ) | ಟೆಂಡಾಂಗ್ ಲೋ ಹ್ರಮ್ ಫಾಟ್ ಹಬ್ಬ | ಸಿಕ್ಕಿಂ, ಒಡಿಶಾ |
| ಆಗಸ್ಟ್ 9 (ಶನಿವಾರ) | ರಕ್ಷಾ ಬಂಧನ + ಎರಡನೇ ಶನಿವಾರ | ದೇಶಾದ್ಯಂತ |
| ಆಗಸ್ಟ್ 10 (ಭಾನುವಾರ) | ಸಾಮಾನ್ಯ ರಜೆ | ದೇಶಾದ್ಯಂತ |
| ಆಗಸ್ಟ್ 13 (ಬುಧವಾರ) | ದೇಶಭಕ್ತಿ ದಿವಸ್ | ಮಣಿಪುರ |
| ಆಗಸ್ಟ್ 15 (ಶುಕ್ರವಾರ) | ಸ್ವಾತಂತ್ರ್ಯ ದಿನ | ದೇಶಾದ್ಯಂತ |
| ಆಗಸ್ಟ್ 16 (ಶನಿವಾರ) | ಜನ್ಮಾಷ್ಟಮಿ, ಪಾರ್ಸಿ ಹೊಸ ವರ್ಷ | ಗುಜರಾತ್, ಮಧ್ಯಪ್ರದೇಶ, ಮಿಜೋರಾಂ, ತಮಿಳುನಾಡು, ಚಂಡೀಗಢ, ಸಿಕ್ಕಿಂ, ತೆಲಂಗಾಣ, ಜಮ್ಮು-ಕಾಶ್ಮೀರ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಮೇಘಾಲಯ, ಆಂಧ್ರ |
| ಆಗಸ್ಟ್ 17 (ಭಾನುವಾರ) | ಸಾಮಾನ್ಯ ರಜೆ | ದೇಶಾದ್ಯಂತ |
| ಆಗಸ್ಟ್ 19 (ಮಂಗಳವಾರ) | ಮಹಾರಾಜ ಬೀರ್ ಬಿಕ್ರಮ್ ಜಯಂತಿ | ತ್ರಿಪುರಾ |
| ಆಗಸ್ಟ್ 23 (ಶನಿವಾರ) | ನಾಲ್ಕನೇ ಶನಿವಾರ | ದೇಶಾದ್ಯಂತ |
| ಆಗಸ್ಟ್ 24 (ಭಾನುವಾರ) | ಸಾಮಾನ್ಯ ರಜೆ | ದೇಶಾದ್ಯಂತ |
| ಆಗಸ್ಟ್ 25 (ಸೋಮವಾರ) | ಶ್ರೀಮಂತ ಶಂಕರದೇವರ ತಿರುಭವ ತಿಥಿ | ಅಸ್ಸಾಂ |
| ಆಗಸ್ಟ್ 27 (ಬುಧವಾರ) | ಗಣೇಶ ಚತುರ್ಥಿ | ತೆಲಂಗಾಣ, ಆಂಧ್ರ, ಕರ್ನಾಟಕ, ಒಡಿಶಾ, ಗುಜರಾತ್, ತಮಿಳುನಾಡು, ಗೋವಾ, ಮಹಾರಾಷ್ಟ್ರ |
| ಆಗಸ್ಟ್ 28 (ಗುರುವಾರ) | ಗಣೇಶ ಚತುರ್ಥಿ / ನುವಾಖೈ | ಕರ್ನಾಟಕ, ಒಡಿಶಾ, ಗೋವಾ |
| ಆಗಸ್ಟ್ 31 (ಭಾನುವಾರ) | ಸಾಮಾನ್ಯ ರಜೆ | ದೇಶಾದ್ಯಂತ |
ನಿಮ್ಮ ಬ್ಯಾಂಕಿಂಗ್ ಯೋಜನೆ ಹೀಗೆ ಮಾಡಿ

ಹಣಕಾಸು ವ್ಯವಹಾರಗಳು, ಚೆಕ್ ಡಿಪಾಜಿಟ್, ಲೋನ್ ಕೆಲಸಗಳು ಅಥವಾ ಯಾವುದೇ ಬ್ಯಾಂಕಿಂಗ್ ಸೇವೆಗಳು ಬೇಕಿದ್ದರೆ ಮುಂಚಿತವಾಗಿ ಈ ದಿನಾಂಕಗಳನ್ನು ಗಮನಿಸಿ ಯೋಜನೆ ಮಾಡಿಕೊಳ್ಳಿ. ಆನ್ಲೈನ್ ಬ್ಯಾಂಕಿಂಗ್ (NetBanking / UPI) ಸೇವೆಗಳು ಈ ದಿನಗಳಲ್ಲೂ ಲಭ್ಯವಿರುತ್ತವೆ.
ಮುಖ್ಯ ಸೂಚನೆ
- ಎಲ್ಲಾ ರಜಾದಿನಗಳು ಎಲ್ಲ ರಾಜ್ಯಗಳಿಗೆ ಅನ್ವಯಿಸುವುದಿಲ್ಲ
- ಸ್ಥಳೀಯ ಹಬ್ಬಗಳಿಗೆ ಸಂಬಂಧಿಸಿದ ರಜೆಗಳು ಆ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ
ಆಗಸ್ಟ್ 2025ರಲ್ಲಿ ಒಟ್ಟು 15 ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ನೀವು ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡುತ್ತಿರುವರೆ, ಈ ಪಟ್ಟಿಯನ್ನು ಉಳಿಸಿಕೊಂಡು ತೊಂದರೆ ತಪ್ಪಿಸಿಕೊಳ್ಳಿ.











