Rajasthan Cough Syrup Children Death News: ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ದುರಂತ: ಇಬ್ಬರು ಮಕ್ಕಳ ಅಕಾಲ ಮರಣ..! ಪೋಷಕರಿಗೆ ಎಚ್ಚರಿಕೆ!

Photo of author

Mantesh

Publish: October 2, 2025
Rajasthan-Cough-Syrup-Children-Death-News

share Share:

ರಾಜಸ್ಥಾನದಲ್ಲಿ ನಡೆದ ಹೃದಯ ಕಲುಕುವ ಘಟನೆ ಪೋಷಕರಿಗೆ ದೊಡ್ಡ ಪಾಠವಾಗಿದೆ. ಸಾಮಾನ್ಯವಾಗಿ ಮಕ್ಕಳಿಗೆ ಜ್ವರ ಅಥವಾ ಕೆಮ್ಮು ಬಂದಾಗ ಪೋಷಕರು ವೈದ್ಯರನ್ನು ಭೇಟಿಯಾಗುವ ಬದಲು ನೇರವಾಗಿ ಔಷಧಿ ಅಂಗಡಿಯಲ್ಲಿ ಸಿರಪ್ ಖರೀದಿಸಿ ಕೊಡುತ್ತಾರೆ. ಆದರೆ, ಇಂತಹ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂಬುದನ್ನು ಇತ್ತೀಚಿನ ಘಟನೆ ಸ್ಪಷ್ಟಪಡಿಸಿದೆ.

Rajasthan Cough Syrup Children Death News

ಇತ್ತೀಚಿನ ಪ್ರಕರಣದಲ್ಲಿ, ಸಿಕಾರ್ ಮತ್ತು ಭರತ್ಪುರ ಜಿಲ್ಲೆಗಳಲ್ಲಿ ಇಬ್ಬರು ಮಕ್ಕಳು ಕೆಮ್ಮಿನ ಸಿರಪ್ ಸೇವಿಸಿದ ನಂತರ ಅಕಾಲ ಮರಣವನ್ನಪ್ಪಿದ್ದಾರೆ. ಜೈಪುರ ಮತ್ತು ಇನ್ನೂ ಕೆಲವು ಜಿಲ್ಲೆಗಳಲ್ಲಿ ಕೂಡ ಇದೇ ತರಹದ ಪ್ರಕರಣಗಳು ವರದಿಯಾಗಿವೆ. ಸಿಕಾರ್ ಜಿಲ್ಲೆಯಲ್ಲಿನ ಐದು ವರ್ಷದ ಬಾಲಕಿ ಸಿರಪ್ ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರಾಟದ ತೊಂದರೆ ಅನುಭವಿಸಿ ಪ್ರಾಣ ಕಳೆದುಕೊಂಡಳು. ಭರತ್ಪುರದ ಇಬ್ಬರು ವರ್ಷದ ಬಾಲಕಿಗೂ ಅದೇ ಸಿರಪ್ ನೀಡಿದ ನಂತರ ತೀವ್ರ ಅಸ್ವಸ್ಥತೆ ಉಂಟಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನೂ ಕೆಲವು ಮಕ್ಕಳು ಅಸ್ವಸ್ಥಗೊಂಡು ತುರ್ತು ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಸಿರಪ್ ಅನ್ನು ಜೈಪುರ ಮೂಲದ Kayson Pharma ಎಂಬ ಕಂಪನಿ ತಯಾರಿಸಿದೆ. ಇದರಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೊಮೈಡ್ (Dextromethorphan Hydrobromide) ಎಂಬ ರಾಸಾಯನಿಕ ಅಂಶವಿದ್ದು, ಸಾಮಾನ್ಯವಾಗಿ ವಯಸ್ಕರಿಗೆ ಮಾತ್ರ ಬಳಸುವ ಔಷಧವಾಗಿದೆ. ಆದರೆ ತಪ್ಪಾಗಿ ಮಕ್ಕಳಿಗೆ ನೀಡಿದಾಗ ಇದು ಗಂಭೀರ ಪಾರ್ಶ್ವಫಲ ಉಂಟುಮಾಡಬಲ್ಲದು. ವಿಶೇಷವಾಗಿ ಉಸಿರಾಟ ಸಂಬಂಧಿ ಸಮಸ್ಯೆ, ನಿದ್ರೆ ಹಾವಳಿ, ಮತ್ತು ತಕ್ಷಣವೇ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆ.

Rajasthan-Cough-Syrup-Children-Death-News

ಪ್ರಾಥಮಿಕ ತನಿಖೆಯಲ್ಲಿ, KL-25/147 ಮತ್ತು KL-25/148 ಎಂಬ ಬ್ಯಾಚ್‌ಗಳಲ್ಲೇ ಗಂಭೀರ ದೋಷವಿದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜಸ್ಥಾನ ಸರ್ಕಾರ ತುರ್ತು ಕ್ರಮವಾಗಿ 22 ಬ್ಯಾಚ್‌ಗಳ ವಿತರಣೆ ನಿಲ್ಲಿಸಿದೆ. ರಾಜ್ಯ ಔಷಧ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿ ತನಿಖೆ ಪ್ರಾರಂಭಿಸಿದೆ. ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯೂ (CDSCO) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷಾ ಪ್ರಕ್ರಿಯೆ ಕೈಗೊಂಡಿದೆ.

ಘಟನೆಯ ನಂತರ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಶೇಷವೆಂದರೆ, ಜನರ ಆತಂಕ ತಣಿಸಲು ಒಬ್ಬ ಹಿರಿಯ ವೈದ್ಯ ತಾನೇ ಅದೇ ಸಿರಪ್ ಸೇವಿಸಿ, “ಇದು ಸುರಕ್ಷಿತ” ಎಂದು ತೋರಿಸಲು ಪ್ರಯತ್ನಿಸಿದ್ದರೂ, ಕೆಲವೇ ಗಂಟೆಗಳಲ್ಲಿ ಅಸ್ವಸ್ಥನಾಗಿ ಕಾರಿನಲ್ಲೇ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದು ಸಿರಪ್‌ನ ಅಪಾಯ ಎಷ್ಟು ಗಂಭೀರವಾಗಿರಬಹುದು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಈ ಘಟನೆ ಪೋಷಕರಿಗೆ ಒಂದು ದೊಡ್ಡ ಎಚ್ಚರಿಕೆ. ಮಕ್ಕಳಿಗೆ ಯಾವುದೇ ಔಷಧಿಯನ್ನು ಸ್ವಯಂ ನಿರ್ಧಾರದಿಂದ ಕೊಡಬಾರದು. ವಿಶೇಷವಾಗಿ ಕೆಮ್ಮು, ಜ್ವರ ಅಥವಾ ಶೀತದಂತಹ ಸಾಮಾನ್ಯ ಸಮಸ್ಯೆಗಳಿಗೂ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ. ಔಷಧ ಅಂಗಡಿಯಲ್ಲಿ ಲಭ್ಯವಿದೆ ಎಂದು ಖರೀದಿಸಿ ಕೊಡಬೇಡಿ. ಔಷಧದ ಮೇಲೆ ಮುದ್ರಿತ ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ, ಅವಧಿ ಮುಗಿಯುವ ದಿನಾಂಕ ಹಾಗೂ ಕಂಪನಿಯ ವಿಶ್ವಾಸಾರ್ಹತೆ ಇವೆಲ್ಲವನ್ನು ಪರಿಶೀಲಿಸಬೇಕು.

ರಾಜಸ್ಥಾನದ ದುರಂತವು ಪೋಷಕರು, ವೈದ್ಯಕೀಯ ಸಿಬ್ಬಂದಿ ಮತ್ತು ಸರ್ಕಾರ ಎಲ್ಲರಿಗೂ ದೊಡ್ಡ ಪಾಠ ಕಲಿಸುತ್ತಿದೆ. ಮಕ್ಕಳು ಅತ್ಯಂತ ಸಂವೇದನಾಶೀಲರು. ಅವರಿಗೆ ನೀಡುವ ಪ್ರತಿಯೊಂದು ಔಷಧವೂ ವೈದ್ಯಕೀಯ ಸಲಹೆಯ ಮೇರೆಗೆ ಮಾತ್ರ ಇರಬೇಕು. ಇಲ್ಲವಾದರೆ ಇಂತಹ ದುರಂತಗಳು ಮರುಕಳಿಸುವ ಅಪಾಯ ಹೆಚ್ಚುತ್ತದೆ.

Join

Leave a Comment