Ganga Kalyan Yojana: ಏನಿದು ಗಂಗಾ ಕಲ್ಯಾಣ ಯೋಜನೆ?

Photo of author

Mantesh

Publish: March 8, 2025
Ganga Kalyan Yojana

share Share:

Introduction:ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಗಂಗಾ ಕಲ್ಯಾಣ ಯೋಜನೆ Ganga Kalyan Yojana ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಏನಿದು ಗಂಗಾ ಕಲ್ಯಾಣ ಯೋಜನೆ? Ganga Kalyan Yojana:

ಗಂಗಾ ಕಲ್ಯಾಣ ಯೋಜನೆ (Ganga Kalyan Yojana)ಎನ್ನುವುದು ಒಂದು ಸರ್ಕಾರಿ ಯೋಜನೆ ಆಗಿದ್ದು, ರೈತರ ನೀರಾವರಿಯ ಅನುಕೂಲಕ್ಕಾಗಿ ದೂರ ದೃಷ್ಟಿಕೋನ ಇಟ್ಟುಕೊಂಡು ಜಾರಿಗೆ ತರಲಾದಂತಹ ಒಂದು ಯೋಜನೆಯಾಗಿದೆ.
ಗಂಗಾ ಕಲ್ಯಾಣ ಯೋಜನೆಯು 1983 ರಿಂದ ಪ್ರಾರಂಭವಾದಂತ ಒಂದು ಯೋಜನೆ. ಈ ಯೋಜನೆ ಅಡಿ 2 ಎಕರೆ ಜಮೀನಿನಿಂದ 5 ಎಕರೆ ಜಮೀನನ್ನು (ಹೊಲವನ್ನು) ಹೊಂದಿರುವಂತಹ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಕೊಡುವುದು ಇದರ ಮುಖ್ಯ ಉದ್ದೇಶ.

Ganga Kalyan Yojana

ಹಾಗಾದರೆ ಈ ಯೋಜನೆ ಅಡಿ ಫಲಾನುಭವಿಯು ಪಡೆಯುವ ಸೌಲಭ್ಯವೇನು?

ಸ್ನೇಹಿತರೆ ಇದು ಕೇವಲ ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿ ಜಾರಿಗೆ ತರಲಾದಂತಹ ಯೋಜನೆ ಆಗಿದ್ದು ಈ ಯೋಜನೆ ಅಡಿ ಯಾವ ರೈತರ ಭೂಮಿಗೆ ಅಥವಾ ಜಮೀನಿಗೆ ನೀರಾವರಿಯ ಸೌಲಭ್ಯ ಇರುವುದಿಲ್ಲವೋ ಅಂತಹ ರೈತರ ಜಮೀನಿನಲ್ಲಿ (ಹೊಲದಲ್ಲಿ) ಕೊಳವೇ ಬಾವಿ (ಬೋರ್ವೆಲ್) ಕೊರೆದು ಅದನ್ನು ಪಂಪ್ ಸೆಟ್ ಮೂಲಕ ಸಂಪೂರ್ಣವಾಗಿ ಜೋಡಿಸಿ ಹಾಗೂ ಇನ್ನಿತರ ಪೂರಕ ಸಾಮಗ್ರಿಗಳನ್ನು ಅಳವಡಿಸಿ ಜೊತೆಗೆ ವಿದ್ಯುತ್ ಸಂಪರ್ಕವನ್ನು ಸಹ ಒದಗಿಸಿ ಕೊಡಲಾಗುವುದು. ಅಂದರೆ ಇದರ ಅಡಿಯಲ್ಲಿ ಯಾವ ಜಮೀನಿಗೆ ನೀರಾವರಿಯ ಸೌಲಭ್ಯ ಇರುವುದಿಲ್ಲವೋ ಅಂತಹ ಜಮೀನಿಗೆ ಸಂಪೂರ್ಣ ನೀರಾವರಿಯ ವ್ಯವಸ್ಥೆಯನ್ನು ಮಾಡಿ ಕೊಡಲಾಗುವುದು.

ಇದರಲ್ಲಿ ಸರ್ಕಾರದ ಪಾತ್ರ ಏನು?

Ganga Kalyan Yojana ಈ ಒಂದು ಯೋಜನೆ ಅಡಿ ಸರ್ಕಾರವು ಒಂದು ಘಟಕದ ವೆಚ್ಚವಾಗಿ 3 ಲಕ್ಷ ರೂಪಾಯಿಗಳನ್ನು ಒಟ್ಟಾರೆಯಾಗಿ ಖರ್ಚು ಮಾಡುತ್ತದೆ. ಹಾಗೆಯೇ ಇನ್ನೊಂದು ವಿಷಯ ಇಲ್ಲಿ ಪ್ರಮುಖವಾಗಿದೆ ಇದು ಆಯಾ ಸಮುದಾಯಕ್ಕೆ ಹೆಚ್ಚು ಕಡಿಮೆ ಆಗಿರುತ್ತದೆ. ಸರ್ಕಾರವು ಖರ್ಚು ಮಾಡುವ ಈ 3 ಲಕ್ಷ ರೂಪಾಯಿಗಳಲ್ಲಿ 2.50 ಲಕ್ಷ ರೂಪಾಯಿಗಳನ್ನು ರೈತರಿಗೆ ನೇರವಾಗಿ ಸಹಾಯಧನದ ರೂಪದಲ್ಲಿ ನೀಡಲಾಗುವುದು. ಇದರ ಅರ್ಥ ಯಾವುದೇ ರೀತಿಯ ಸಾಲ ನೀಡುತ್ತಿಲ್ಲ ಬದಲಿಗೆ ಸರ್ಕಾರವು ಅಶಕ್ತ ರೈತರೆಂದು ತಿಳಿದು ಮಾಡುವ ಆರ್ಥಿಕ ಸಹಾಯ ಎಂದು ಹೇಳಬಹುದು. ಹಾಗಾದ್ರೆ ಇನ್ನುಳಿದ ಒಂದು ಲಕ್ಷ ರೂಪಾಯಿಗಳನ್ನು ಸರ್ಕಾರವು ನಮಗೆ ನೀಡುವುದಿಲ್ಲವಾ?

ಸ್ನೇಹಿತರೆ ಇನ್ನುಳಿದ ಒಂದು ಲಕ್ಷ ರೂಪಾಯಿಗಳಲ್ಲಿ ಐವತ್ತು ಸಾವಿರ ರೂಪಾಯಿಗಳನ್ನು ಅಲ್ಪಾವಧಿಯ ಸಾಲದ ರೂಪದಲ್ಲಿ ಸರ್ಕಾರವು ರೈತರಿಗೆ ನೀಡುತ್ತದೆ. ಮತ್ತೆ ವಿದ್ಯುತ್ತೀಕರಣ ಬಾಬ್ತು (ಜಮೀನಿನ ವಿದ್ಯುತ್ತೀಕರಣ ಖರ್ಚು) ಎಂದು 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಈ ರೀತಿಯಾಗಿ ರೈತರಿಗೆ 50,000 ಗಳ ಸಾಲ ದೊರೆಯುತ್ತದೆ. ಇದು ಅಲ್ಪಾವಧಿಯ ಸಾಲ ಆಗಿದ್ದು ಇದಕ್ಕೆ ವಾರ್ಷಿಕ 6% ರಷ್ಟು ಬಡ್ಡಿ ದರವನ್ನು ವಿಧಿಸಲಾಗುವುದು. ಈ ಸಾಲದ ಮರುಪಾವತಿಯನ್ನು ನೀವು ಮಾಡುವುದು ಹೇಗೆಂದರೆ ನೀವು ಆರು ವರ್ಷಗಳಲ್ಲಿ ಈ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಅದು ಸಹ ಅರ್ಧ ವಾರ್ಷಿಕ ಅಂದರೆ ಆರು ತಿಂಗಳಿಗೆ ಒಮ್ಮೆ ಕಂತುಗಳ ಮೂಲಕ ಸಾಲ ಹಾಗೂ ಬಡ್ಡಿ ದರವನ್ನು ಪಾವತಿ ಮಾಡಬೇಕಾಗುತ್ತದೆ.

ಯಾರು ಈ ಯೋಜನೆಗೆ ಅರ್ಹರು?

ಈ ಒಂದು ಗಂಗಾ ಕಲ್ಯಾಣ ಯೋಜನೆಗೆ (Ganga Kalyan Yojana) ಪ್ರತಿಯೊಬ್ಬ ರೈತರು ಅರ್ಹರು ಆದರೆ ಕೆಲವೊಂದು ನಿಯಮಗಳೊಂದಿಗೆ. ಅವೇನೆಂದರೆ,

  • ಈ ಯೋಜನೆಗೆ ಅರ್ಹರಾಗಬೇಕಾದರೆ ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿ ಇರಬೇಕಾಗುತ್ತದೆ.
  • ‌ ಒಂದು ಎಕರೆ 20 ಗುಂಟೆ ಇಂದ 5 ಎಕರೆ ಜಮೀನನ್ನು ಹೊಂದಿರಬೇಕು.
  • ‌ ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು.

ಈ ಯೋಜನೆ ಅಡಿ ನೈಸರ್ಗಿಕವಾಗಿ ನದಿ, ತೊರೆ, ಕಾಲುವೆಗಳ ಅಕ್ಕ ಪಕ್ಕದಲ್ಲಿರುವ ಪರಿಶಿಷ್ಟ ಪಂಗಡದ ಕನಿಷ್ಠ 3 ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ಪೈಪ್ಲೈನ್ ಹಾಗೂ ಪಂಪ್ಸೆಟ್ಟುಗಳನ್ನು ಉಚಿತವಾಗಿ ಅಳವಡಿಸಿ ಕೊಡಲಾಗುವುದು.

ಯೋಜನೆಯ ಪ್ರಸ್ತುತೀಕರಣ :

ಈ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಗೆ ಬರುವ;

  • ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ‌ ತಾಂಡಾ ಅಭಿವೃದ್ಧಿ ನಿಗಮ
  • ‌ ಆದಿ ಜಾಂಬವ ಅಭಿವೃದ್ಧಿ ನಿಗಮ
  • ‌ ವಿಶ್ವಕರ್ಮ ಅಭಿವೃದ್ಧಿ ನಿಗಮ
  • ‌ ಬೋವಿ ಅಭಿವೃದ್ಧಿ ನಿಗಮ
  • ‌ ವಾಲ್ಮೀಕಿ ಅಭಿವೃದ್ಧಿ ನಿಗಮ
  • ‌ ದೇವರಾಜ ಅರಸು ಅಭಿವೃದ್ಧಿ ನಿಗಮ

ಸೇರಿದಂತೆ ಒಟ್ಟು ಎಂಟು ನಿಗಮಗಳಿಂದ ಪ್ರತಿವರ್ಷ ಒಂದು ಅಂದಾಜಿನಂತೆ 10,000 ಕೊಳವೆ ಬಾವಿಗಳನ್ನು (ಬೋರ್ವೆಲ್) ಕೊರೆಯಲಾಗುತ್ತದೆ

ಅರ್ಹ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸುವ ಮಿತಿ ಎಷ್ಟು?

ಈ ಒಂದು ಯೋಜನೆಯ (Ganga Kalyan Yojana) ಫಲಾನುಭವಿ ಆದಂತಹ ಯಾವುದೇ ರೈತ ಒಂದು ಮಿತಿಯ ವರೆಗೆ ಮಾತ್ರ ಕೊಳವೆ ಬಾವಿಯನ್ನು ಕೊರೆಸಬಹುದು. ಇದರಲ್ಲಿ ಬಯಲು ಸೀಮೆಯ ರೈತರಿಗೆ ಅತಿ ಹೆಚ್ಚು ಪ್ರಮಾಣದ ಆಳದಲ್ಲಿ ಕೊಳವೆ ಬಾವಿಯನ್ನು ಕೊರೆಸುವ ಮಿತಿ ಇದ್ದು, ಇವರು 500 ರಿಂದ 1000 ಅಡಿಗೆವರೆಗೆ ಕೊಳವೆ ಬಾವಿಯನ್ನು ಕೊರೆಸಬಹುದು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ರೈತರು 300 ರಿಂದ 500 ಅಡಿಯ ವರೆಗೆ ಕೊಳವೆ ಬಾವಿಯನ್ನು ಕೊರೆಸಬಹುದು, ಅದೇ ರೀತಿ ಮಲೆನಾಡಿನ ಭಾಗದ ರೈತರು 100 ಅಡಿಯವರೆಗೆ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಸಬಹುದು.ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಾಗೂ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಈ ರೀತಿಯ ಮಿತಿಯನ್ನು ನೀಡಲಾಗಿರುತ್ತದೆ.

ಫಲಾನುಭವಿಗಳ ಆಯ್ಕೆ ಹೇಗೆ?

ಈ ಒಂದು ಗಂಗಾ ಕಲ್ಯಾಣ ಯೋಜನೆ (Ganga Kalyan Yojana) ಸೌಲಭ್ಯವನ್ನು ಪಡೆಯಬೇಕಾದರೆ ನೀವು ಈ ಒಂದು ಯೋಜನೆಗೆ ಫಲಾನುಭವಿ ಎಂದು ಆಯ್ಕೆ ಆಗಬೇಕಾಗುತ್ತದೆ. ಈ ರೀತಿಯ ಫಲಾನುಭವಿಗಳನ್ನು ಎರಡು ರೀತಿಯಲ್ಲಿ ಆಯ್ಕೆ ಮಾಡುತ್ತಾರೆ. ಮೊದಲನೆಯದಾಗಿ ಈ ಯೋಜನೆಯ ಶೇ.80 ಫಲಾನುಭವಿಗಳನ್ನು ಆಯಾ ಜಿಲ್ಲೆಗಳ ಹಾಗೂ ಮತಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಗಳು ಆಯ್ಕೆ ಮಾಡುತ್ತವೆ. ಇನ್ನುಳಿದ ಶೇ.20 ಅಷ್ಟರಲ್ಲಿ, ಸಮಾಜ ಕಲ್ಯಾಣ ಸಚಿವರು ಶೇ.15 ಹಾಗೂ ನಿಗಮಗಳ ಅಧ್ಯಕ್ಷರು ಶೇ.5 ರಂತೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.


ಇದಿಷ್ಟು ಗಂಗಾ ಕಲ್ಯಾಣ ಯೋಜನೆಯ (Ganga Kalyan Yojana) ಬಗ್ಗೆ ಕುರಿತಾದಂತಹ ಮಾಹಿತಿ. ಈ ರೀತಿಯ ಎಲ್ಲಾ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳು ಮತ್ತು ಇನ್ನಿತರ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಜಾಲತಾಣಕ್ಕೆ ಚಂದಾದಾರರಾಗಿ.

ಈ ಮಾಹಿತಿಗಳನ್ನು ಓದಿ:

Ration Card Apply 2025: ರೇಷನ್ ಕಾರ್ಡ್ ಅರ್ಜಿ ಪ್ರಾರಂಭ…! ತಿದ್ದುಪಡಿ ಹಾಗೂ ಕೊನೆಯ ದಿನಾಂಕ ಯಾವುದು?

ಯೋಗ (Yoga): ಮಾನಸಿಕ ಮತ್ತು ದೈಹಿಕ ಬಲಕ್ಕಾಗಿ

Join

1 thought on “Ganga Kalyan Yojana: ಏನಿದು ಗಂಗಾ ಕಲ್ಯಾಣ ಯೋಜನೆ?”

Leave a Comment