ರೇಷನ್ ಕಾರ್ಡ್ ತಿದ್ದುಪಡಿ ಶುರು: ಹೆಸರು ಸೇರ್ಪಡೆ, ಡಿಲೀಟ್, e-KYC — ಗ್ರಾಮ ಒನ್ ಕೇಂದ್ರಕ್ಕೆ ಹೋಗಿ, ಗೃಹಲಕ್ಷ್ಮಿ ₹2000 ತಪ್ಪಿಸಿಕೊಳ್ಳಬೇಡಿ!

Photo of author

Mantesh

Publish: June 4, 2026
ರೇಷನ್ ಕಾರ್ಡ್ ತಿದ್ದುಪಡಿ

share Share:

ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ₹2,000 ಬರುತ್ತಿಲ್ಲವೇ? ಅನ್ನಭಾಗ್ಯ DBT ಹಣ ಜಮಾ ಆಗುತ್ತಿಲ್ಲವೇ? ಇದಕ್ಕೆ ಕಾರಣ ನಿಮ್ಮ ರೇಷನ್ ಕಾರ್ಡ್ (ಪಡಿತರ ಚೀಟಿ)ನಲ್ಲಿ ಇರುವ ತಪ್ಪುಗಳು ಅಥವಾ e-KYC ಆಗದಿರುವುದು ಇರಬಹುದು. ಇಂತಹ ಸಮಸ್ಯೆಯಲ್ಲಿ ಇರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಒಳ್ಳೆಯ ಸುದ್ದಿ ಬಂದಿದೆ — ಕರ್ನಾಟಕ ಆಹಾರ ಇಲಾಖೆ ಜೂನ್ 2026ರಿಂದ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದೆ.

ಅಧಿಕೃತ ಪ್ರಕಟಣೆ ಇಲ್ಲದಿದ್ದರೂ ಇದು ನಿಜ ಹೇಗೆ? ಏನೆಲ್ಲಾ ತಿದ್ದುಪಡಿ ಮಾಡಿಕೊಳ್ಳಬಹುದು? ಎಲ್ಲಿಗೆ ಹೋಗಬೇಕು? — ಇಲ್ಲಿ ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಇದೆ.


ಅಧಿಕೃತ ಆದೇಶ ಇಲ್ಲದೆ ತಿದ್ದುಪಡಿ ಶುರುವಾಗಿದ್ದು ಹೇಗೆ?

ಸಾಮಾನ್ಯವಾಗಿ ಸರ್ಕಾರ ಯಾವುದೇ ಹೊಸ ಸೇವೆ ಆರಂಭಿಸಿದಾಗ ಟಿವಿ, ಪೇಪರ್‌ನಲ್ಲಿ ಜಾಹೀರಾತು ಕೊಡುತ್ತದೆ. ಆದರೆ ರೇಷನ್ ಕಾರ್ಡ್ ತಿದ್ದುಪಡಿ ವಿಷಯದಲ್ಲಿ ಮಾತ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇದಕ್ಕೆ ಒಂದು ಪ್ರಮುಖ ಕಾರಣವಿದೆ.

ರಾಜ್ಯಾದ್ಯಂತ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿರುವ ಕುಟುಂಬಗಳ ಸಂಖ್ಯೆ ಲಕ್ಷಾಂತರ. ಒಂದು ವೇಳೆ ಸರ್ಕಾರ ಅಧಿಕೃತ ಪ್ರಕಟಣೆ ಕೊಟ್ಟರೆ, ಒಂದೇ ದಿನ ಗ್ರಾಮ ಒನ್ ಕೇಂದ್ರಗಳಿಗೆ ಜನ ನುಗ್ಗಿ ಸರ್ವರ್ Crash ಆಗುವ ಅಪಾಯ ಇರುತ್ತದೆ. ಈ ಸಮಸ್ಯೆ ತಪ್ಪಿಸಲು ಇಲಾಖೆ ತನ್ನ Grama One, Karnataka One ಮತ್ತು Bengaluru One ಫ್ರಾಂಚೈಸಿ Login ಪೋರ್ಟಲ್‌ನಲ್ಲಿ ಸದ್ದಿಲ್ಲದೆ ತಿದ್ದುಪಡಿ ಲಿಂಕ್ ಓಪನ್ ಮಾಡಿದೆ. ಇದನ್ನು ಗಮನಿಸಿದ ಸೇವಾ ಕೇಂದ್ರದ Operator ಗಳು ಕೆಲಸ ಆರಂಭಿಸಿದ್ದಾರೆ. ಇದು ಸಂಪೂರ್ಣ ಕಾನೂನುಬದ್ಧ ಮತ್ತು ಅಧಿಕೃತ ಪ್ರಕ್ರಿಯೆ, ಯಾರೂ ಆತಂಕ ಪಡಬೇಕಿಲ್ಲ.


ರೇಷನ್ ಕಾರ್ಡ್ ಈಗ ಏಕೆ ಇಷ್ಟೊಂದು ಮುಖ್ಯ?

ಹಿಂದೆ ಪಡಿತರ ಚೀಟಿ ಎಂದರೆ ತಿಂಗಳಿಗೊಮ್ಮೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋಧಿ ತರಲು ಮಾತ್ರ ಬಳಸಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ರೇಷನ್ ಕಾರ್ಡ್ ಎಂಬುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಮುಖ್ಯ ಆಧಾರ ದಾಖಲೆಯಾಗಿ ಮಾರ್ಪಟ್ಟಿದೆ:

ಗೃಹಲಕ್ಷ್ಮಿ ಯೋಜನೆ: ರೇಷನ್ ಕಾರ್ಡ್‌ನಲ್ಲಿ ಮಹಿಳೆ ‘ಕುಟುಂಬದ ಮುಖ್ಯಸ್ಥೆ’ಯಾಗಿ ನಮೂದಾಗಿದ್ದರೆ ಮಾತ್ರ ಪ್ರತಿ ತಿಂಗಳು ₹2,000 ನೇರ ಖಾತೆಗೆ ಜಮಾ ಆಗುತ್ತದೆ. ಕಾರ್ಡ್‌ನಲ್ಲಿ ತಪ್ಪಿದ್ದರೆ ಈ ಹಣ ನಿಲ್ಲಿ ಹೋಗುತ್ತದೆ.

ಅನ್ನಭಾಗ್ಯ DBT: ಅಕ್ಕಿಯ ಬದಲು ನೀಡಲಾಗುವ ನಗದು ಖಾತೆಗೆ ಬರಬೇಕಾದರೆ ರೇಷನ್ ಕಾರ್ಡ್‌ನ ಪ್ರತಿ ಸದಸ್ಯರ e-KYC ಕಡ್ಡಾಯ. KYC ಆಗದ ಒಬ್ಬ ಸದಸ್ಯ ಇದ್ದರೂ ಇಡೀ ಕುಟುಂಬದ ಹಣ ನಿಲ್ಲಬಹುದು.

ಆಯುಷ್ಮಾನ್ ಭಾರತ್ & ವಿದ್ಯಾರ್ಥಿವೇತನ: ಉಚಿತ ಚಿಕಿತ್ಸೆ ಮತ್ತು ಮಕ್ಕಳ Scholarship ಪಡೆಯಲು ಅಪ್‌ಡೇಟ್ ಆದ BPL/APL ರೇಷನ್ ಕಾರ್ಡ್ ಇರಲೇಬೇಕು.


ಯಾವ ಯಾವ 7 ತಿದ್ದುಪಡಿ ಮಾಡಿಕೊಳ್ಳಬಹುದು?

ಕರ್ನಾಟಕ ಆಹಾರ ಇಲಾಖೆ ಈ ಕೆಳಗಿನ ಎಲ್ಲಾ ಬದಲಾವಣೆಗಳಿಗೆ ಅವಕಾಶ ಕೊಟ್ಟಿದೆ:

1. ಹೆಸರು ಸೇರ್ಪಡೆ (Add Member) ಮನೆಯಲ್ಲಿ ಹೊಸ ಮಗು ಜನಿಸಿದ್ದರೆ, ಸೊಸೆ ಮನೆಗೆ ಬಂದಿದ್ದರೆ ಅವರ ಹೆಸರು ರೇಷನ್ ಕಾರ್ಡ್‌ಗೆ ಸೇರಿಸಬೇಕು. ಇದರಿಂದ ಅವರಿಗೂ ಅನ್ನಭಾಗ್ಯದ ಪಡಿತರ ಅಥವಾ DBT ಹಣ ಸಿಗುತ್ತದೆ.

2. ಹೆಸರು ಡಿಲೀಟ್ (Remove Member) ಮನೆಯ ಸದಸ್ಯರು ನಿಧನರಾಗಿದ್ದರೆ ಅಥವಾ ಮದುವೆಯಾಗಿ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗಿದ್ದರೆ ಅವರ ಹೆಸರನ್ನು ತೆಗೆದುಹಾಕುವುದು ಕಾನೂನುಬದ್ಧ ಹಾಗೂ ಕಡ್ಡಾಯ.

3. ಹೆಸರಿನ ಕಾಗುಣಿತ ತಿದ್ದುಪಡಿ (Spelling Correction) ರೇಷನ್ ಕಾರ್ಡ್‌ನ ಹೆಸರು ಮತ್ತು ಆಧಾರ್ ಕಾರ್ಡ್‌ನ ಹೆಸರು ಒಂದೇ ರೀತಿ ಇಲ್ಲದಿದ್ದರೆ e-KYC ವಿಫಲವಾಗುತ್ತದೆ. ಈ ತಪ್ಪನ್ನು ಈಗ ಸರಿ ಮಾಡಿಕೊಳ್ಳಬಹುದು.

4. ಫೋಟೋ ಅಪ್‌ಡೇಟ್ (Photo Update) ಹಳೆಯ ಅಥವಾ ಮಸುಕಾದ ಫೋಟೋ ಇದ್ದರೆ ಹೊಸ ಫೋಟೋ ಸೇರಿಸಿಕೊಳ್ಳಬಹುದು.

5. ಕುಟುಂಬದ ಮುಖ್ಯಸ್ಥರ ಬದಲಾವಣೆ (Head of Family Change) ಗೃಹಲಕ್ಷ್ಮಿ ₹2,000 ಬರಬೇಕಾದರೆ ಕಾರ್ಡ್‌ನಲ್ಲಿ ಮಹಿಳೆ ಮುಖ್ಯಸ್ಥೆಯಾಗಿ ನಮೂದಾಗಿರಬೇಕು. ಪುರುಷ ಮುಖ್ಯಸ್ಥರಾಗಿದ್ದರೆ ಈಗಲೇ ಬದಲಿಸಿ.

6. ನ್ಯಾಯಬೆಲೆ ಅಂಗಡಿ ವರ್ಗಾವಣೆ (FPS Transfer) ಹೊಸ ಊರಿಗೆ ಅಥವಾ ಹೊಸ ಬಡಾವಣೆಗೆ ಶಿಫ್ಟ್ ಆಗಿದ್ದರೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಕಾರ್ಡ್ ವರ್ಗಾಯಿಸಿಕೊಳ್ಳಬಹುದು.

7. e-KYC ಅಪ್‌ಡೇಟ್ (e-KYC Update) ರೇಷನ್ ಕಾರ್ಡ್‌ನ ಪ್ರತಿಯೊಬ್ಬ ಸದಸ್ಯರ ಆಧಾರ್ ಜೊತೆ ಬೆರಳಚ್ಚು ನೀಡಿ e-KYC ಮಾಡಿಸುವುದು ಕಡ್ಡಾಯ. ಇದಿಲ್ಲದಿದ್ದರೆ DBT ಹಣ ನಿಲ್ಲಬಹುದು.


ಎಲ್ಲಿಗೆ ಹೋಗಬೇಕು — ಅರ್ಜಿ ಸಲ್ಲಿಸುವ ಸ್ಥಳ

ರೇಷನ್ ಕಾರ್ಡ್ ತಿದ್ದುಪಡಿಗೆ ತಾಲ್ಲೂಕು ಕಚೇರಿ ಅಥವಾ ಆಹಾರ ಇಲಾಖೆ ಕಚೇರಿಗೆ ಹೋಗುವ ಅಗತ್ಯ ಇಲ್ಲ. ನಿಮ್ಮ ಊರಿನ ಹತ್ತಿರದ ಸೇವಾ ಕೇಂದ್ರದಲ್ಲೇ ಈ ಸೌಲಭ್ಯ ಲಭ್ಯ:

ಗ್ರಾಮೀಣ ಭಾಗದವರು → Grama One / ಬಾಪೂಜಿ ಸೇವಾ ಕೇಂದ್ರ ನಗರ ಪ್ರದೇಶದವರು → Karnataka One ಅಥವಾ Bengaluru One ಕೇಂದ್ರ

ತಿದ್ದುಪಡಿಗೆ ತೆಗೆದುಕೊಂಡು ಹೋಗಬೇಕಾದ ದಾಖಲೆ: ಕುಟುಂಬದ ಎಲ್ಲಾ ಸದಸ್ಯರ Original Aadhaar Card ಮಾತ್ರ ಸಾಕು.


ತಡ ಮಾಡಬೇಡಿ — ಇದು ಯಾಕೆ ಅರ್ಜೆಂಟ್?

ಸರ್ಕಾರ ಇನ್ನು ಯಾವತ್ತಾದರೂ ಅಧಿಕೃತ ಪ್ರಕಟಣೆ ಹೊರಡಿಸಿದ ತಕ್ಷಣ ರಾಜ್ಯದ ಲಕ್ಷಾಂತರ ಜನರು ಒಮ್ಮೆಲೇ ಕೇಂದ್ರಗಳಿಗೆ ಮುಗಿಬೀಳುತ್ತಾರೆ. ಆಗ ಸರ್ವರ್ ಡೌನ್ ಆಗಿ ವಾರಗಟ್ಟಲೆ ಕಾಯಬೇಕಾದ ಸ್ಥಿತಿ ಬರಬಹುದು. ಈ ಗದ್ದಲ ತಪ್ಪಿಸಿಕೊಳ್ಳಲು ಮತ್ತು ಯಾವ ತೊಂದರೆಯೂ ಇಲ್ಲದೆ ಕಾರ್ಡ್ ತಿದ್ದಿಸಿಕೊಳ್ಳಲು ಈಗಲೇ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.

Join

Leave a Comment

Join WhatsApp Group