ಕರ್ನಾಟಕ ಪಂಚಾಯತ್ ರಾಜ್ ನೇಮಕಾತಿ 2026: ಸಂದರ್ಶನ ಮೂಲಕ ಆಯ್ಕೆ | ಅರ್ಜಿ ಸಲ್ಲಿಸಿ – ಅರ್ಜಿ ಶುಲ್ಕವಿಲ್ಲ | Karnataka Panchayat Raj Recruitment 2026

Photo of author

Mantesh

Publish: June 4, 2026
ಕರ್ನಾಟಕ ಪಂಚಾಯತ್ ರಾಜ್ ನೇಮಕಾತಿ 2026

share Share:

ಹಲೋ ಸ್ನೇಹಿತರೇ ನಮಸ್ಕಾರ, ನೀವು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ದರೆ ಈ ಸುವರ್ಣ ಅವಕಾಶ ನಿಮಗಾಗಿಯೇ ಇದೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು “ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ ಕೋಶ” (Socially Responsive Local Governance – SRLG) ಯೋಜನೆಯಡಿ ಒಟ್ಟು 03 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಶುಲ್ಕ ಇಲ್ಲ, Degree Pass ಆಗಿದ್ದರೆ ಸಾಕು – ಇಂದೇ ಅರ್ಜಿ ಸಲ್ಲಿಸಿ!


ಪ್ರಮುಖ ವಿವರಗಳು

ವಿವರಮಾಹಿತಿ
ಸಂಸ್ಥೆಯ ಹೆಸರುಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ
ಹುದ್ದೆಯ ಹೆಸರುವಿಷಯ ಪರಿಣಿತರು (Subject Matter Expert) & ಯುವ ವೃತ್ತಿಪರರು (Young Professionals)
ಒಟ್ಟು ಹುದ್ದೆಗಳು03
ಉದ್ಯೋಗ ಸ್ಥಳಬೆಂಗಳೂರು, ಕರ್ನಾಟಕ
ಅರ್ಜಿ ಶುಲ್ಕಇಲ್ಲ (ಉಚಿತ)
ಜಾಹೀರಾತು ದಿನಾಂಕ27.05.2026
ಕೊನೆಯ ದಿನಾಂಕ06-06-2026

ಹುದ್ದೆಗಳ ವಿವರ ಮತ್ತು ಮಾಸಿಕ ಸಂಭಾವನೆ

ಕ್ರ.ಸಂಹುದ್ದೆಯ ಹೆಸರುಖಾಲಿ ಹುದ್ದೆಮಾಸಿಕ ಸಂಭಾವನೆ
1ವಿಷಯ ಪರಿಣಿತರು (Subject Matter Expert)01₹1,00,000/- (ಒಂದು ಲಕ್ಷ)
2ಯುವ ವೃತ್ತಿಪರರು (Young Professionals)02₹75,000/- (ಎಪ್ಪತ್ತೈದು ಸಾವಿರ)

ಮಹತ್ವದ ದಿನಾಂಕಗಳು

ವಿವರದಿನಾಂಕ
ಅರ್ಜಿ ಆರಂಭ ದಿನಾಂಕ30-05-2026
ಅರ್ಜಿ ಕೊನೆಯ ದಿನಾಂಕ06-06-2026 (ಸಂಜೆ 5:30 ರ ಒಳಗೆ)

ವಿದ್ಯಾರ್ಹತೆ

ವಿಷಯ ಪರಿಣಿತರು (Subject Matter Expert) – 01 ಹುದ್ದೆ:

  • ಸಮಾಜ ಶಾಸ್ತ್ರ / ಸಮಾಜ ಕಾರ್ಯ / ಗ್ರಾಮೀಣಾಭಿವೃದ್ಧಿ / ಸಾರ್ವಜನಿಕ ನೀತಿ ಅಥವಾ ಇತರ ಯಾವುದಾದರೂ ವಿಷಯದಲ್ಲಿ Postgraduate Degree ಹೊಂದಿರಬೇಕು
  • ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 8 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಕಡ್ಡಾಯ
  • ಪಂಚಾಯತ್ ರಾಜ್ ಕಾರ್ಯ, ವಿಕೇಂದ್ರೀಕೃತ ಪಂಚಾಯತ್ ರಾಜ್ ವ್ಯವಸ್ಥೆ, ಸಮುದಾಯ ಸಹಭಾಗಿತ್ವ ಯೋಜನೆ ಜ್ಞಾನ ಮತ್ತು ಅನುಭವ ಇರುವವರಿಗೆ ಆದ್ಯತೆ

ಯುವ ವೃತ್ತಿಪರರು (Young Professionals) – 02 ಹುದ್ದೆಗಳು:

  • ಸಮಾಜ ಶಾಸ್ತ್ರ / ಸಮಾಜ ಕಾರ್ಯ / ಗ್ರಾಮೀಣಾಭಿವೃದ್ಧಿ / ಸಾರ್ವಜನಿಕ ನೀತಿ ಅಥವಾ ಇತರ ಯಾವುದಾದರೂ ವಿಷಯದಲ್ಲಿ Degree ಹೊಂದಿರಬೇಕು
  • ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಕ್ಕಳು, ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯಾವುದಾದರೂ ಎರಡು ಕ್ಷೇತ್ರಗಳಲ್ಲಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು

ವಯೋಮಿತಿ

ಹುದ್ದೆಗರಿಷ್ಠ ವಯೋಮಿತಿ
ವಿಷಯ ಪರಿಣಿತರು30 ವರ್ಷ ಮೀರಿರಬಾರದು
ಯುವ ವೃತ್ತಿಪರರು35 ವರ್ಷ ಮೀರಿರಬಾರದು

ಇತರ ಅರ್ಹತೆ ಮತ್ತು ಷರತ್ತುಗಳು

  • ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಸಂಪೂರ್ಣ ತಿಳಿದಿರಬೇಕು; English ಜ್ಞಾನ ಅಗತ್ಯ
  • Computer ಜ್ಞಾನ ಮತ್ತು MS-Word, MS-Excel, MS-PowerPoint ಬಳಸಲು ತಿಳಿದಿರಬೇಕು
  • ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಕೇಂದ್ರ/ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇರಬೇಕು
  • ಕ್ಷೇತ್ರ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳು ಮತ್ತು ಸಮುದಾಯದೊಂದಿಗೆ ಕೆಲಸ ಮಾಡಲು ಮತ್ತು ಅಗತ್ಯವಿದ್ದಲ್ಲಿ ಯಾವುದೇ ಗ್ರಾಮ ಪಂಚಾಯತಿಗೆ ಪ್ರಯಾಣಿಸಲು ಸಿದ್ಧರಿರಬೇಕು
  • ಆಯ್ಕೆಯಾದ ಅಭ್ಯರ್ಥಿಗಳನ್ನು ಈ ಹಣಕಾಸು ವರ್ಷದ ಅವಧಿಗೆ (31.03.2027 ರವರೆಗೆ) ನೇಮಕ ಮಾಡಿಕೊಳ್ಳಲಾಗುವುದು

ಆಯ್ಕೆ ಪ್ರಕ್ರಿಯೆ

ಸಂದರ್ಶನ (Interview) ಮೂಲಕ ಮಾತ್ರ ಆಯ್ಕೆ ಮಾಡಲಾಗುವುದು. ಯಾವುದೇ Written Exam ಇರುವುದಿಲ್ಲ.


ಅರ್ಜಿ ಶುಲ್ಕ

ಅರ್ಜಿ ಶುಲ್ಕ ಇಲ್ಲ – ಸಂಪೂರ್ಣ ಉಚಿತ.


ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಎರಡು ಮಾರ್ಗಗಳಿವೆ:

1. ನೇರವಾಗಿ ಕಚೇರಿಗೆ ಭೇಟಿ ನೀಡಿ: ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ನಿಮ್ಮ ಶೈಕ್ಷಣಿಕ ದಾಖಲೆಗಳು, ವಯಸ್ಸಿನ ಪ್ರಮಾಣ, Resume ಮತ್ತು ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ. ಅರ್ಜಿ ಸಲ್ಲಿಸುವ ವಿಳಾಸ: ಪಂಚಾಯತ್ ರಾಜ್ ಆಯುಕ್ತಾಲಯ, ಕಾಳಿದಾಸ ರಸ್ತೆ, ಗಾಂಧಿನಗರ, ಬೆಂಗಳೂರು

2. Email ಮೂಲಕ: ನಿಮ್ಮ ಭರ್ತಿ ಮಾಡಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳ Scan Copy ಅನ್ನು srlgrecruitment@gmail.com ಗೆ Email ಮಾಡಬಹುದು.

⚠️ ಗಮನಿಸಿ: ಕೊನೆಯ ದಿನಾಂಕ 06-06-2026 ಸಂಜೆ 5:30 ರ ಒಳಗೆ ಅರ್ಜಿ ತಲುಪಬೇಕು. ಅಂತಿಮ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.


ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆ & ಅರ್ಜಿನಮೂನೆClick Here
ಅಧಿಕೃತ ವೆಬ್‌ಸೈಟ್Click Here
WhatsApp GroupClick Here
Telegram GroupClick Here

📢 ಗೆಳೆಯರೇ, ಈ ನೇಮಕಾತಿ ಮಾಹಿತಿಯನ್ನು ನಿಮ್ಮ ಎಲ್ಲಾ ಗೆಳೆಯರಿಗೆ ಮತ್ತು ಕುಟುಂಬದವರಿಗೆ Share ಮಾಡಿ. ಇನ್ನಷ್ಟು ಸರ್ಕಾರಿ ಉದ್ಯೋಗ ಮಾಹಿತಿಗಾಗಿ Karnataka24.in ಅನ್ನು ಪ್ರತಿದಿನ ಭೇಟಿ ನೀಡಿ.

Join

Leave a Comment

Join WhatsApp Group