ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 427 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಇಲ್ಲ

Photo of author

Mantesh

Publish: June 22, 2026
ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026

share Share:

ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 – 427 ಹುದ್ದೆಗಳಿಗೆ ಅರ್ಜಿ ಸ್ವೀಕಾರ ಪ್ರಾರಂಭ. ವೇತನ ₹27,000 ರಿಂದ ₹46,675. ಅರ್ಜಿ ಶುಲ್ಕ ಇಲ್ಲ. ಕೊನೆಯ ದಿನಾಂಕ 28.07.2026.

ಹಲೋ ಸ್ನೇಹಿತರೇ ನಮಸ್ಕಾರ! ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕ ನೇಮಕಾತಿ 2026 ಅಧಿಸೂಚನೆ ಬಿಡುಗಡೆಯಾಗಿದೆ. ಒಟ್ಟು 427 ಪೌರಕಾರ್ಮಿಕ ಹುದ್ದೆಗಳಿಗೆ ಆಫ್‌ಲೈನ್ ಅರ್ಜಿ ಸ್ವೀಕಾರ ಪ್ರಾರಂಭವಾಗಿದ್ದು, ಪಾಲಿಕೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗ ಖಾಯಂಗೊಳಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ.

ಪ್ರಮುಖ ವಿವರಗಳು

ವಿಷಯವಿವರ
ಸಂಸ್ಥೆಕಲಬುರಗಿ ಮಹಾನಗರ ಪಾಲಿಕೆ
ಹುದ್ದೆಪೌರಕಾರ್ಮಿಕರು
ಒಟ್ಟು ಹುದ್ದೆ427
ವೇತನ₹27,000 ರಿಂದ ₹46,675
ಅರ್ಜಿ ವಿಧಾನಆಫ್‌ಲೈನ್ (ಖುದ್ದಾಗಿ ಕಚೇರಿಗೆ ಭೇಟಿ)
ಅರ್ಜಿ ಶುಲ್ಕಇಲ್ಲ
ಕೊನೆಯ ದಿನಾಂಕ28.07.2026
ಅಧಿಕೃತ ವೆಬ್‌ಸೈಟ್kalaburagicity.mrc.gov.in

ವಿದ್ಯಾರ್ಹತೆ

ಈ ನೇಮಕಾತಿಗೆ ವಿಶೇಷ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ. ಆದರೆ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

✔ ಕನ್ನಡ ಭಾಷೆ ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು
✔ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನೇರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆ, ಲೋಡರ್ ಅಥವಾ ಕ್ಲೀನರ್ ಆಧಾರದಲ್ಲಿ ಕನಿಷ್ಠ 2 ವರ್ಷಗಳ ನಿರಂತರ ಸೇವಾ ಅನುಭವ ಇರಬೇಕು
✔ ಸದ್ಯ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಆದ್ಯತೆ

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ₹27,000 ರಿಂದ ₹46,675 ವರೆಗೆ ಮಾಸಿಕ ವೇತನ ನೀಡಲಾಗುವುದು. ಸರ್ಕಾರದ ನಿಯಮಗಳ ಪ್ರಕಾರ DA ಮತ್ತು ಇತರ ಭತ್ಯೆಗಳೂ ಅನ್ವಯವಾಗುತ್ತವೆ.

ವಯೋಮಿತಿ

ದಿನಾಂಕ 23.11.2022 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷಗಳನ್ನು ಮೀರಿರಬಾರದು. SC/ST/OBC ಮತ್ತು ಇತರ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ

ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯುತ್ತದೆ:

✔ ಅರ್ಜಿ ಮತ್ತು ದಾಖಲೆ ಪರಿಶೀಲನೆ
✔ ESI/PF ದಾಖಲೆ ಹಾಗೂ ಸೇವಾ ಅನುಭವ ದೃಢೀಕರಣ
✔ ಆಯ್ಕೆ ಸಮಿತಿಯಿಂದ ಅಂತಿಮ ಪಟ್ಟಿ ತಯಾರಿ
✔ ಜಿಲ್ಲಾ ಉಸ್ತುವಾರಿ ಸಮಿತಿ ಅನುಮೋದನೆ

ಮುಖ್ಯ ಮಾಹಿತಿ: ಅರ್ಜಿ ನಮೂನೆ ಪಾಲಿಕೆ ಕಚೇರಿಯಲ್ಲಿ ಖುದ್ದಾಗಿ ಪಡೆದು 28.07.2026 ಸಂಜೆ 5:30 ರೊಳಗೆ ಸಲ್ಲಿಸಬೇಕು, ಇಲ್ಲದಿದ್ದರೆ ಅರ್ಜಿ ತಿರಸ್ಕೃತವಾಗುತ್ತದೆ.

ಅಗತ್ಯ ದಾಖಲೆಗಳು

✔ ಸಂಪೂರ್ಣ ಭರ್ತಿ ಮಾಡಿದ ಅರ್ಜಿ ನಮೂನೆ
✔ ಆಧಾರ್ ಕಾರ್ಡ್ ಛಾಯಾಪ್ರತಿ
✔ ವಯಸ್ಸಿನ ಪ್ರಮಾಣಪತ್ರ (SSLC ಮಾರ್ಕ್ಸ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರ)
✔ ಕನಿಷ್ಠ 2 ವರ್ಷ ಸೇವಾ ಅನುಭವ ದೃಢೀಕರಣ ಪತ್ರ
✔ ESI / PF ದಾಖಲೆಗಳು (ಅನ್ವಯವಾದರೆ)
✔ ಜಾತಿ ಪ್ರಮಾಣಪತ್ರ (SC/ST/OBC ಅಭ್ಯರ್ಥಿಗಳಿಗೆ)
✔ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (2 ಪ್ರತಿ)

ಅರ್ಜಿ ಹೇಗೆ ಸಲ್ಲಿಸಬೇಕು?

  1. ಕಲಬುರಗಿ ಮಹಾನಗರ ಪಾಲಿಕೆಯ ಆಡಳಿತ ಶಾಖೆಗೆ ಖುದ್ದಾಗಿ ಭೇಟಿ ನೀಡಿ
  2. ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದುಕೊಳ್ಳಿ
  3. ಅರ್ಜಿ ನಮೂನೆಯನ್ನು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳ ಛಾಯಾಪ್ರತಿ ಲಗತ್ತಿಸಿ
  5. ದಿನಾಂಕ 29.06.2026 ರಿಂದ 28.07.2026 ಸಂಜೆ 5:30 ರೊಳಗೆ ಕಚೇರಿಗೆ ಸ್ವಯಂ ಸಲ್ಲಿಸಿ

ಪ್ರಮುಖ ದಿನಾಂಕಗಳು

✔ ಅರ್ಜಿ ಸ್ವೀಕಾರ ಪ್ರಾರಂಭ: 29.06.2026
✔ ಅರ್ಜಿ ಕೊನೆಯ ದಿನಾಂಕ: 28.07.2026 (ಸಂಜೆ 5:30 ರೊಳಗೆ)

ಮುಖ್ಯ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆ PDFDownload
ಅರ್ಜಿ ಸಲ್ಲಿಕೆಆಫ್‌ಲೈನ್ – ಕಚೇರಿಗೆ ಖುದ್ದಾಗಿ ಭೇಟಿ ನೀಡಿ
WhatsApp GroupJoin
Telegram ChannelJoin
ಹೆಚ್ಚಿನ ಮಾಹಿತಿKarnataka24.in

Join

Leave a Comment

Join WhatsApp Group