ಎಂಜಿನಿಯರಿಂಗ್ ಪದವೀಧರರೇ ಗಮನಿಸಿ, ಕೇಂದ್ರ ಸರ್ಕಾರಿ ಸ್ವಾಮ್ಯದ BSNL (ಭಾರತ ಸಂಚಾರ್ ನಿಗಮ್ ಲಿಮಿಟೆಡ್) ದೇಶಾದ್ಯಂತ 100 ಜೂನಿಯರ್ ಟೆಲಿಕಾಂ ಆಫೀಸರ್ (JTO) ಹುದ್ದೆಗಳ ನೇಮಕಾತಿ ನಡೆಸುತ್ತಿದ್ದು, ಕರ್ನಾಟಕ ವೃತ್ತಕ್ಕೇ ಅತಿ ಹೆಚ್ಚು 26 ಹುದ್ದೆಗಳು ಮೀಸಲಾಗಿವೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಇಂದೇ (ಜುಲೈ 3, 2026) ಕೊನೆಯ ದಿನವಾಗಿದೆ.
ಮುಖ್ಯ ಮಾಹಿತಿ: ಆಸಕ್ತ ಅಭ್ಯರ್ಥಿಗಳು ಈ ಲೇಖನ ಓದಿದ ತಕ್ಷಣ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿ, ಯಾಕಂದ್ರೆ ಇಂದು ರಾತ್ರಿಯೊಳಗೆ ವಿಂಡೋ ಮುಚ್ಚುತ್ತದೆ.
ಪ್ರಮುಖ ವಿವರಗಳು
✔ ಒಟ್ಟು ಹುದ್ದೆಗಳು: 100 (Junior Telecom Officer)
✔ ಕರ್ನಾಟಕ ವೃತ್ತ: 26 ಹುದ್ದೆಗಳು (ದೇಶದಲ್ಲೇ ಅತಿ ಹೆಚ್ಚು)
✔ ಇತರೆ ಪ್ರಮುಖ ವೃತ್ತಗಳು: ಮಹಾರಾಷ್ಟ್ರ 16, ಕೇರಳ 15, ಮಧ್ಯಪ್ರದೇಶ 10, ಒಡಿಶಾ 6
✔ ನೇಮಕಾತಿ ಸಂಸ್ಥೆ: ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL)
✔ ಅರ್ಜಿ ವಿಧಾನ: ಆನ್‌ಲೈನ್ ಮಾತ್ರ
ವಿದ್ಯಾರ್ಹತೆ
✔ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE / B.Tech ಪದವಿ
✔ ME / M.Tech ಪದವಿ ಹೊಂದಿರುವವರೂ ಅರ್ಹರು
✔ M.Sc (ಸಂಬಂಧಿತ ವಿಷಯ) ಪದವೀಧರರಿಗೂ ಅವಕಾಶ
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ IDA ಪೇ ಸ್ಕೇಲ್ ಪ್ರಕಾರ ಆರಂಭಿಕ ವೇತನ ಶ್ರೇಣಿ ನೀಡಲಾಗುತ್ತದೆ, ಜೊತೆಗೆ HRA, ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರೆ ಪರ್ಕ್ಸ್ ಲಭ್ಯ. ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಸಹ ನೀಡಲಾಗುತ್ತದೆ. ಆಯ್ಕೆಯಾದವರು ಕಡ್ಡಾಯವಾಗಿ 2 ವರ್ಷಗಳ ಸೇವಾ ಬಾಂಡ್‌ಗೆ ಸಹಿ ಹಾಕಬೇಕಾಗುತ್ತದೆ.
ವಯೋಮಿತಿ ಮತ್ತು ಸಡಿಲಿಕೆ
✔ ಕನಿಷ್ಠ ವಯಸ್ಸು: 20 ವರ್ಷ, ಗರಿಷ್ಠ ವಯಸ್ಸು: 30 ವರ್ಷ (01-01-2026ಕ್ಕೆ ಅನ್ವಯ)
✔ OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
✔ SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
✔ PwBD (General): 10 ವರ್ಷ, PwBD (OBC): 13 ವರ್ಷ, PwBD (SC/ST): 15 ವರ್ಷ ಸಡಿಲಿಕೆ
ಅರ್ಜಿ ಶುಲ್ಕ
✔ OC / OBC / EWS ಅಭ್ಯರ್ಥಿಗಳಿಗೆ: ರೂ. 2,000
✔ SC / ST / PwBD ಅಭ್ಯರ್ಥಿಗಳಿಗೆ: ರೂ. 1,000
✔ ಶುಲ್ಕ ಪಾವತಿ ಆನ್‌ಲೈನ್ ಮೂಲಕ ಮಾತ್ರ
ಆಯ್ಕೆ ಪ್ರಕ್ರಿಯೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ?
- externalexam.bsnl.co.in ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
- ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿ
- ‘JTO Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಶೈಕ್ಷಣಿಕ, ವೈಯಕ್ತಿಕ ವಿವರ ಭರ್ತಿ ಮಾಡಿ, ಫೋಟೋ-ಸಹಿ ಅಪ್‌ಲೋಡ್ ಮಾಡಿ
- ವರ್ಗಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಿ
- Submit ಮಾಡಿ, Application Number ಪ್ರಿಂಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
✔ ಅಧಿಸೂಚನೆ ಬಿಡುಗಡೆ: ಮೇ 26, 2026
✔ ಅರ್ಜಿ ಆರಂಭ: ಜೂನ್ 4, 2026
✔ ಅರ್ಜಿ ಕೊನೆಯ ದಿನ: ಜುಲೈ 3, 2026 (ಇಂದು)
✔ ಪರೀಕ್ಷೆ: ಆಗಸ್ಟ್ 2026 (ನಿರೀಕ್ಷಿತ)
ಮುಖ್ಯ ಲಿಂಕ್‌ಗಳು
| ವಿವರ | ಲಿಂಕ್ |
|---|---|
| Notification PDF | Download |
| Online Application | Apply Here |
| WhatsApp Group | Join |
| Telegram Channel | Join |
| ಹೆಚ್ಚಿನ ಮಾಹಿತಿ | Karnataka24.in |











