ಬೆಳಗಾವಿ DCC ಬ್ಯಾಂಕ್ ನೇಮಕಾತಿ 2026: 104 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಹತೆ, ಸಂಬಳ ಸಂಪೂರ್ಣ ಮಾಹಿತಿ

Photo of author

Mantesh

Publish: July 24, 2026
ಬೆಳಗಾವಿ DCC ಬ್ಯಾಂಕ್ ನೇಮಕಾತಿ 2026

share Share:

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 104 ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಎಸ್‌ಡಿಸಿ, ಪಿಯೋನ್, ಗನ್ ಮ್ಯಾನ್ ಹುದ್ದೆಗಳ ಅರ್ಹತೆ, ವಯೋಮಿತಿ, ಸಂಬಳ, ಅರ್ಜಿ ಶುಲ್ಕ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿ ತಿಳಿಯಿರಿ. Jamkhandi dcc Bank Recruitment.

ನಮಸ್ಕಾರ ಸ್ನೇಹಿತರೇ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (Belagavi DCCB) ಇಲಾಖೆಯಿಂದ ಖಾಲಿ ಇರುವ 104 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. SSLC ಪಾಸಾದವರಿಂದ ಹಿಡಿದು ಪದವೀಧರರವರೆಗೆ ವಿವಿಧ ಅರ್ಹತೆಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಹತೆ, ವಯೋಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಅಧಿಸೂಚನೆಯ ಮುಖ್ಯಾಂಶಗಳು

ವಿವರಗಳುಮಾಹಿತಿ
ಸಂಸ್ಥೆಯ ಹೆಸರುಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCCB)
ಒಟ್ಟು ಹುದ್ದೆಗಳು104
ಉದ್ಯೋಗ ಸ್ಥಳಬೆಳಗಾವಿ, ಕರ್ನಾಟಕ
ಅರ್ಜಿ ವಿಧಾನಆನ್‌ಲೈನ್
ಅಧಿಕೃತ ಜಾಲತಾಣbelagavidccb.bank.in

ಹುದ್ದೆಗಳ ವಿವರ

✔ ಎರಡನೇ ವಿಭಾಗೀಯ ಗುಮಾಸ್ತ (SDC / ಜೂನಿಯರ್ ಅಸಿಸ್ಟೆಂಟ್) – 83 ಹುದ್ದೆಗಳು
✔ ಪಿಯೋನ್ (Peon / ಅಟೆಂಡರ್) – 20 ಹುದ್ದೆಗಳು
✔ ಗನ್ ಮ್ಯಾನ್ (Gunman) – 01 ಹುದ್ದೆ

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ತಿಂಗಳಿಗೆ ₹29,600 ರಿಂದ ₹83,700/- ವರೆಗೆ ಸಂಬಳ ಸಿಗಲಿದೆ.

ಮುಖ್ಯ ಮಾಹಿತಿ
ಈ ಹುದ್ದೆಗಳಿಗೆ ಅಗತ್ಯ ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ ಬೇರೆ ಬೇರೆ ಆಗಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಅರ್ಹತೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.

ಶೈಕ್ಷಣಿಕ ಅರ್ಹತೆ

✔ ಎರಡನೇ ವಿಭಾಗೀಯ ಗುಮಾಸ್ತ (SDC): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BA, B.Sc, B.Com ಅಥವಾ ಯಾವುದೇ ಪದವಿ
✔ ಪಿಯೋನ್ ಹಾಗೂ ಗನ್ ಮ್ಯಾನ್: SSLC / 10ನೇ ತರಗತಿ ಉತ್ತೀರ್ಣ

ವಯೋಮಿತಿ ವಿವರ

ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ.

ವರ್ಗವಯೋಮಿತಿ ಸಡಿಲಿಕೆ
OBC (2A, 2B, 3A, 3B)3 ವರ್ಷಗಳು
SC / ST5 ವರ್ಷಗಳು
ಮಹಿಳೆಯರು & PWD10 ವರ್ಷಗಳು

ಅರ್ಜಿ ಶುಲ್ಕ

✔ ಸಾಮಾನ್ಯ & OBC (2A, 2B, 3A, 3B): ₹1,000/-
✔ SC / ST, ಮಾಜಿ ಸೈನಿಕರು, PWD: ₹500/-
✔ ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ (DD) / ಪೋಸ್ಟಲ್ ಆರ್ಡರ್ / ಮನಿ ಆರ್ಡರ್

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam) ಮತ್ತು ಸಂದರ್ಶನದ (Interview) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪರೀಕ್ಷಾ ಮಾದರಿ ಹಾಗೂ ಸಿಲಬಸ್ ವಿವರವಾದ ಅಧಿಸೂಚನೆಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  1. ಅಧಿಸೂಚನೆ ಪರಿಶೀಲಿಸಿ: ಬೆಳಗಾವಿ DCCB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆ ಸಂಪೂರ್ಣ ಓದಿಕೊಳ್ಳಿ
  2. ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ: ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು, ಫೋಟೋ, ಸಹಿಯ ಸ್ಕ್ಯಾನ್ ಪ್ರತಿ
  3. ಅರ್ಜಿ ಭರ್ತಿ ಮಾಡಿ: ‘Apply Online’ ಕ್ಲಿಕ್ ಮಾಡಿ ವೈಯಕ್ತಿಕ, ಶೈಕ್ಷಣಿಕ ವಿವರ ನಮೂದಿಸಿ
  4. ಶುಲ್ಕ ಪಾವತಿಸಿ: ನಿಗದಿತ ಅರ್ಜಿ ಶುಲ್ಕ ಪಾವತಿಸಿ
  5. ಸಬ್ಮಿಟ್ ಮಾಡಿ: ಎಲ್ಲಾ ವಿವರ ಪರಿಶೀಲಿಸಿ ‘Submit’ ಒತ್ತಿ, ಅಪ್ಲಿಕೇಶನ್ ನಂಬರ್ ಕಾಯ್ದಿರಿಸಿಕೊಳ್ಳಿ

ಪ್ರಮುಖ ದಿನಾಂಕಗಳು

ಘಟನೆದಿನಾಂಕ
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ27-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27-08-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ27-08-2026

Links Table

ವಿವರಲಿಂಕ್
ಅಧಿಕೃತ ಅಧಿಸೂಚನೆOfficial Notification PDF
ಆನ್‌ಲೈನ್ ಅರ್ಜಿApply Link
ಅಧಿಕೃತ ಜಾಲತಾಣBelagavi DCCB
WhatsApp ಗ್ರೂಪ್Join WhatsApp Group
Telegram ಚಾನೆಲ್Join Telegram Channel

Join

Leave a Comment

Join WhatsApp Group