ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ(61) ಮತ್ತು ಸಹಾಯಕಿ(171) ಒಟ್ಟು 232 ಹುದ್ದೆಗಳ ನೇಮಕಾತಿ ಪ್ರಕಟ. ಅರ್ಹತೆ, ವಯೋಮಿತಿ, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕ ಇಲ್ಲಿ ತಿಳಿಯಿರಿ.
ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ಶಿಶು ಅಭಿವೃದ್ಧಿ ಯೋಜನಾ (CDPO) ಕಚೇರಿಗಳ ಅಡಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 232 ಹುದ್ದೆಗಳಿಗೆ (61 ಕಾರ್ಯಕರ್ತೆ + 171 ಸಹಾಯಕಿ) ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಜುಲೈ 24 ರಿಂದ ಆಗಸ್ಟ್ 24ರವರೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಇಲ್ಲ ಎಂಬುದು ಗಮನಿಸಬೇಕಾದ ಅಂಶ.
ಪ್ರಮುಖ ದಿನಾಂಕಗಳು
- ✔ ಅರ್ಜಿ ಸಲ್ಲಿಕೆ ಆರಂಭ ದಿನ: ಜುಲೈ 24, 2026
- ✔ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 24, 2026
ಮುಖ್ಯ ಮಾಹಿತಿ
ಈ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಗಿಂತ ಮುಂಚೆ ಅಭ್ಯರ್ಥಿಗಳು ತಾವು ಸಲ್ಲಿಸುವ ಗ್ರಾಮಾಂತರ ಅಥವಾ ನಗರ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಾಸಸ್ಥಳ ಪ್ರಮಾಣ ಪತ್ರವನ್ನು ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯೊಂದಿಗೆ ಲಗತ್ತಿಸುವುದು ಕಡ್ಡಾಯ.
ಬ್ಲಾಕ್‌ವಾರು ಖಾಲಿ ಹುದ್ದೆಗಳ ವಿವರ
| ಯೋಜನೆಯ ಹೆಸರು | ಕಾರ್ಯಕರ್ತೆ | ಸಹಾಯಕಿ |
|---|---|---|
| ಶಹಾಪುರ | 12 | 58 |
| ಸುರಪುರ | 24 | 58 |
| ಯಾದಗಿರಿ | 16 | 30 |
| ಗುರುಮಿಟ್ಕಲ್ | 09 | 25 |
| ಒಟ್ಟು | 61 | 171 |
ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ:
- ✔ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
- ✔ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿರಬೇಕು
- ✔ DSERT ಯಿಂದ ECCE ಡಿಪ್ಲೋಮಾ, JOC, NTT ಅಥವಾ ಸಂಬಂಧಿತ ಕೋರ್ಸ್ ಮಾಡಿದವರಿಗೆ ಮೊದಲ ಆದ್ಯತೆ ಹಾಗೂ ಬೋನಸ್ +5 ಅಂಕಗಳು
ಅಂಗನವಾಡಿ ಸಹಾಯಕಿ ಹುದ್ದೆಗೆ:
- ✔ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು
- ✔ ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ ವಿಷಯ ಕಡ್ಡಾಯ
- ✔ ಗರಿಷ್ಠ 625ರಲ್ಲಿ ಕನಿಷ್ಠ 219 ಅಂಕಗಳನ್ನು ಪಡೆದವರನ್ನು ಮಾತ್ರ ಪರಿಗಣಿಸಲಾಗುತ್ತದೆ
ವಯೋಮಿತಿ
- ✔ ಕನಿಷ್ಠ 19 ವರ್ಷದಿಂದ ಗರಿಷ್ಠ 35 ವರ್ಷದವರೆಗೆ
- ✔ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ
ಆಯ್ಕೆ ಪ್ರಕ್ರಿಯೆ
- ✔ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ
- ✔ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದವರ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ
ಸಂಬಳ
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆ ಸಂಪೂರ್ಣವಾಗಿ ಗೌರವ ಸೇವೆಯಾಗಿದ್ದು, ಸರ್ಕಾರದ ನಿಯಮಗಳಿಗೆ ಅನುಸಾರ ಮಾಸಿಕ ಗೌರವಧನ ನೀಡಲಾಗುತ್ತದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಇಲ್ಲ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
- ಯಾದಗಿರಿ ಜಿಲ್ಲಾಡಳಿತ ವೆಬ್‌ಸೈಟ್ (yadgir.nic.in) ಅಥವಾ ಜಿಲ್ಲಾ ಪಂಚಾಯತ್ ವೆಬ್‌ಸೈಟ್ (zpyadgiri.karnataka.gov.in) ಗೆ ಭೇಟಿ ನೀಡಿ
- ಅಲ್ಲಿ ಲಭ್ಯವಿರುವ ಸೇವಾಸಿಂಧು ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ
- ಕೇಳಲಾದ ಎಲ್ಲಾ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಕಚೇರಿಗಳು
| ಬ್ಲಾಕ್ | ವಿಳಾಸ | ದೂರವಾಣಿ ಸಂಖ್ಯೆ |
|---|---|---|
| ಶಹಾಪುರ | ಗಂಜ್ ಏರಿಯಾ | 08479-243254 / 9019757399 |
| ಸುರಪುರ | ಹಳೆ ಕೋರ್ಟ ಕಟ್ಟಡ, ಜೈಲ್ ಹತ್ತಿರ | 08443-256808 / 9972219500 |
| ಯಾದಗಿರಿ | ಸ್ತ್ರೀ ಶಕ್ತಿ ಭವನ, ಜಿಲ್ಲಾ ಆಸ್ಪತ್ರೆ ರಸ್ತೆ | 08473-252265 / 9902878603 |
| ಗುರುಮಠಕಲ್ | ಗುಮಡಲಾ ಕಾಂಪ್ಲೇಸ್, ಬಸ್ ನಿಲ್ದಾಣದ ಮುಂದುಗಡೆ | 08473-225035 / 9902878603 |
Links Table
| ಲಿಂಕ್ | ವಿವರ |
|---|---|
| ಅಧಿಕೃತ ನೋಟಿಫಿಕೇಶನ್ PDF | ಸಂಪೂರ್ಣ ಅಧಿಸೂಚನೆ ಡೌನ್‌ಲೋಡ್ |
| ಆನ್‌ಲೈನ್ ಅರ್ಜಿ ಸಲ್ಲಿಕೆ | ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ |
| ಅಧಿಕೃತ ವೆಬ್‌ಸೈಟ್ | ಯಾದಗಿರಿ ಜಿಲ್ಲಾ ಪಂಚಾಯತ್ |
| WhatsApp ಗ್ರೂಪ್ | ಇನ್ನಷ್ಟು ಉದ್ಯೋಗ ಅಪ್‌ಡೇಟ್‌ಗಳಿಗೆ ಸೇರಿ |
| Telegram ಚಾನೆಲ್ | ಉಚಿತ ಉದ್ಯೋಗ ಅಲರ್ಟ್‌ಗಳಿಗೆ ಸೇರಿ |











