ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಗ್ರೇಡ್-3 ಮತ್ತು ಬೆರಳಚ್ಚುಗಾರ ಹುದ್ದೆಗಳ 24 ಖಾಲಿ ಹುದ್ದೆಗಳಿಗೆ ನೇಮಕಾತಿ 2026. ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ, ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ.
ತುಮಕೂರು ಜಿಲ್ಲಾ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ ಗ್ರೇಡ್-3 ಮತ್ತು ಬೆರಳಚ್ಚುಗಾರ ಹುದ್ದೆಗಳ ಒಟ್ಟು 24 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ತುಮಕೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026ಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಕೆಳಗಡೆ ಪಡೆಯಿರಿ.
ಪ್ರಮುಖ ವಿವರಗಳು
✔ ಒಟ್ಟು ಹುದ್ದೆಗಳು: 24
✔ ಶೀಘ್ರಲಿಪಿಗಾರ ಗ್ರೇಡ್-3: 10 ಹುದ್ದೆಗಳು
✔ ಬೆರಳಚ್ಚುಗಾರ: 14 ಹುದ್ದೆಗಳು
✔ ಕರ್ತವ್ಯ ಸ್ಥಳ: ತುಮಕೂರು ಜಿಲ್ಲೆ
✔ ಅರ್ಜಿ ವಿಧಾನ: ಆನ್‌ಲೈನ್
ವಿದ್ಯಾರ್ಹತೆ
ಶೀಘ್ರಲಿಪಿಗಾರ ಗ್ರೇಡ್-3 ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪೂರ್ಣಗೊಳಿಸಿರಬೇಕು. ಜೊತೆಗೆ ಸ್ಟೆನೋಗ್ರಾಫರ್ ಹುದ್ದೆಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಟೈಪಿಸ್ಟ್ ಹುದ್ದೆಗೆ ಕನ್ನಡ ಹಾಗೂ ಆಂಗ್ಲ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವೇತನ
| ಹುದ್ದೆ | ವೇತನ ಶ್ರೇಣಿ |
|---|---|
| ಶೀಘ್ರಲಿಪಿಗಾರ ಗ್ರೇಡ್-3 | ರೂ. 44,425 – ರೂ. 83,700 |
| ಬೆರಳಚ್ಚುಗಾರ | ರೂ. 34,100 – ರೂ. 67,600 |
ವಯೋಮಿತಿ
✔ ಕನಿಷ್ಠ ವಯಸ್ಸು: 18 ವರ್ಷ
✔ ಸಾಮಾನ್ಯ ವರ್ಗ: ಗರಿಷ್ಠ 35+5 ವರ್ಷ
✔ ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 38+5 ವರ್ಷ
✔ ಪ.ಜಾತಿ, ಪ.ಪಂಗಡ, ಪ್ರವರ್ಗ 1: ಗರಿಷ್ಠ 40+5 ವರ್ಷ
ಗಮನಿಸಿ: ಈ ಹುದ್ದೆಗಳಿಗೆ ಸ್ಪರ್ಧೆ ಹೆಚ್ಚಿರುವ ಸಾಧ್ಯತೆ ಇರುವುದರಿಂದ, ಟೈಪಿಂಗ್ ಹಾಗೂ ಶೀಘ್ರಲಿಪಿ ಸ್ಕಿಲ್ ಟೆಸ್ಟ್‌ಗೆ ಮೊದಲೇ ಸಿದ್ಧತೆ ಆರಂಭಿಸುವುದು ಉತ್ತಮ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
ಅರ್ಜಿ ಶುಲ್ಕ
✔ ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ: ರೂ. 200
✔ ಪ.ಜಾತಿ, ಪ.ಪಂಗಡ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
✔ ಪಾವತಿ ವಿಧಾನ: ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ
ಆಯ್ಕೆ ಪ್ರಕ್ರಿಯೆ
ವಿದ್ಯಾರ್ಹತೆಯ ಪರೀಕ್ಷೆ ಮತ್ತು ಕೌಶಲ ಪರೀಕ್ಷೆಗಳ ಒಟ್ಟು ಅಂಕಗಳ ಆಧಾರದ ಮೇಲೆ, ಮೀಸಲಾತಿಗನುಗುಣವಾಗಿ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತ) ಅತಿ ಹೆಚ್ಚು ಅಂಕ ಪಡೆದವರನ್ನು ಸಂದರ್ಶನಕ್ಕೆ ಕರೆಯಲಾಗುವುದು.
ಅರ್ಜಿ ಹೇಗೆ ಸಲ್ಲಿಸುವುದು?
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಕೆಳಗಿನ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಎಲ್ಲಾ ಮಾಹಿತಿ ಭರ್ತಿ ಮಾಡಿ ಮರುಪರಿಶೀಲಿಸಿ
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ (ಅನ್ವಯವಾದಲ್ಲಿ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ
ಪ್ರಮುಖ ದಿನಾಂಕಗಳು
✔ ಅರ್ಜಿ ಆರಂಭ: ಜುಲೈ 25, 2026
✔ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 24, 2026
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ಅಧಿಸೂಚನೆ | Click Here |
| ಅಪ್ಲೈ ಆನ್‌ಲೈನ್ | Click Here |
| WhatsApp Group | Click Here |
| Telegram Channel | Click Here |











