IOB Local Bank Officer Recruitment 2026: 250 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

Photo of author

Mantesh

Publish: August 10, 2026
IOB Local Bank Officer Recruitment 2026

share Share:

ಇಂಡಿಯನ್ ಓವರ್ಸೀಸ್ ಬ್ಯಾಂಕ್ Local Bank Officer Recruitment 2026 – 250 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ, ವೇತನ, ವಿದ್ಯಾರ್ಹತೆ, ಅರ್ಜಿ ಶುಲ್ಕ ಹಾಗೂ ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲೋ ಸ್ನೇಹಿತರೇ ನಮಸ್ಕಾರ! ಬ್ಯಾಂಕ್ ಜಾಬ್ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಒಳ್ಳೆಯ ಅವಕಾಶ ಬಂದಿದೆ. ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ತನ್ನ ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಒಟ್ಟು 250 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ 50 ಹುದ್ದೆಗಳು ಮೀಸಲಿವೆ. ಗ್ರಾಜುಯೇಟ್ ಆಗಿರುವ ಅಭ್ಯರ್ಥಿಗಳಿಗೆ ಈ ಬ್ಯಾಂಕ್ ಜಾಬ್ ಒಂದು ಉತ್ತಮ ಕೆರಿಯರ್ ಆಪ್ಷನ್ ಆಗಿದೆ. ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರವಾಗಿ ನೀಡಲಾಗಿದೆ, ಪೂರ್ತಿ ಓದಿ.

ಪ್ರಮುಖ ವಿವರಗಳು

ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಕೆಲಸ ನಿರ್ವಹಿಸಬೇಕಾಗುತ್ತದೆ.

✔ ಹುದ್ದೆ: ಲೋಕಲ್ ಬ್ಯಾಂಕ್ ಆಫೀಸರ್ (LBO)
✔ ಒಟ್ಟು ಹುದ್ದೆಗಳು: 250
✔ ಕರ್ನಾಟಕ ಕೋಟಾ: 50 ಹುದ್ದೆಗಳು
✔ ಕರ್ತವ್ಯ ಸ್ಥಳ: ಭಾರತದೆಲ್ಲೆಡೆ
✔ ಅರ್ಜಿ ವಿಧಾನ: ಆನ್‌ಲೈನ್

ಮುಖ್ಯ ಮಾಹಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಎಲ್ಲಾ ಅರ್ಹತಾ ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಿಯೇ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್, ಕಾಮರ್ಸ್ ಅಥವಾ ಇತರೆ ಯಾವುದೇ ಸ್ಟ್ರೀಮ್‌ನ ಗ್ರಾಜುಯೇಟ್‌ಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 48,480 ರಿಂದ ರೂ. 85,920 ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆರಿಯರ್ ಬೆಳೆಸಿಕೊಳ್ಳಲು ಬಯಸುವವರಿಗೆ ಇದೊಂದು ಆಕರ್ಷಕ ಸ್ಯಾಲರಿ ಪ್ಯಾಕೇಜ್ ಆಗಿದೆ.

ವಯೋಮಿತಿ

ದಿನಾಂಕ 01/08/2026ಕ್ಕೆ ಅಭ್ಯರ್ಥಿಗಳ ವಯೋಮಿತಿ ಈ ಕೆಳಗಿನಂತೆ ಇರಬೇಕು:

✔ ಕನಿಷ್ಠ ವಯಸ್ಸು: 20 ವರ್ಷ
✔ ಗರಿಷ್ಠ ವಯಸ್ಸು: 30 ವರ್ಷ

ವಯೋಮಿತಿ ಸಡಿಲಿಕೆ:

✔ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
✔ ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
✔ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:

✔ ಆನ್‌ಲೈನ್ ಪರೀಕ್ಷೆ
✔ ಭಾಷಾ ಪ್ರಾವೀಣ್ಯತೆ ಪರೀಕ್ಷೆ (10ನೇ ಅಥವಾ 12ನೇ ತರಗತಿಯಲ್ಲಿ ಸ್ಥಳೀಯ ಭಾಷೆ ಓದಿದವರಿಗೆ ವಿನಾಯಿತಿ)
✔ ಪರ್ಸನಲ್ ಇಂಟರ್ವ್ಯೂ

ಆನ್‌ಲೈನ್ ಪರೀಕ್ಷಾ ಮಾದರಿ:

ವಿಷಯಪ್ರಶ್ನೆಗಳ ಸಂಖ್ಯೆಗರಿಷ್ಠ ಅಂಕಗಳುಅವಧಿ
Reasoning and Computer Aptitude306060 ನಿಮಿಷ
General/Economy/Banking Awareness404030 ನಿಮಿಷ
Data Analysis and Interpretation306060 ನಿಮಿಷ
English Knowledge404030 ನಿಮಿಷ
ಒಟ್ಟು1402003 ಗಂಟೆ

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು.

ಅರ್ಜಿ ಶುಲ್ಕ

✔ ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: ರೂ. 175
✔ ಜನರಲ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು: ರೂ. 850

ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.

ಅರ್ಜಿ ಹೇಗೆ?

✔ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
✔ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಲಾದ Apply Online ಲಿಂಕ್ ಕ್ಲಿಕ್ ಮಾಡಿ
✔ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
✔ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
✔ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ

ದಿನಾಂಕಗಳು

✔ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಆಗಸ್ಟ್ 08, 2026
✔ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 24, 2026

Links Table

Link TypeLink
NotificationClick Here
Apply OnlineClick Here
WhatsApp GroupJoin Now
Telegram ChannelJoin Now

Join

Leave a Comment

Join WhatsApp Group