ಬ್ಯಾಂಕ್ ಆಫ್ ಬರೋಡಾ 2482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ ನೇಮಕಾತಿ 2026; ಕೊನೆಯ ದಿನಾಂಕ ವಿಸ್ತರಣೆ

Photo of author

Mantesh

Publish: September 8, 2026
bank of baroda lbo notification 2026

share Share:

ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿ; ಕರ್ನಾಟಕಕ್ಕೆ 418 ಸ್ಥಾನ ಮೀಸಲು. ಯಾವುದೇ ಪದವಿ ಅರ್ಹತೆ, ಅರ್ಜಿ ಸಲ್ಲಿಕೆ ಸೆ.17ರವರೆಗೆ ವಿಸ್ತರಣೆ.

ಭಾರತದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ, ದೇಶಾದ್ಯಂತ ತನ್ನ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಖಾಲಿ ಇರುವ 2482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 17ರವರೆಗೆ ವಿಸ್ತರಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.

ಈ ನೇಮಕಾತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 418 ಹುದ್ದೆಗಳನ್ನು (130 ಹೊಸ ಸ್ಥಾನಗಳು + 288 ಬ್ಯಾಕ್‌ಲಾಗ್ ಸ್ಥಾನಗಳು) ಮೀಸಲಿಡಲಾಗಿದೆ.

ಪ್ರಮುಖ ಮಾಹಿತಿ

  • ಒಟ್ಟು ಹುದ್ದೆಗಳು: 2482
  • ಕರ್ನಾಟಕಕ್ಕೆ ಮೀಸಲು: 418 (130 ಹೊಸ + 288 ಬ್ಯಾಕ್‌ಲಾಗ್)
  • ಹುದ್ದೆಯ ಹೆಸರು: ಲೋಕಲ್ ಬ್ಯಾಂಕ್ ಆಫೀಸರ್ (LBO)
  • ಅರ್ಜಿ ಆರಂಭ: ಆಗಸ್ಟ್ 18, 2026
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 17, 2026 (ವಿಸ್ತರಣೆ)

ಮುಖ್ಯ ಮಾಹಿತಿ: ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪ್ರಾವೀಣ್ಯತೆ (ಓದು, ಬರಹ, ಮಾತು) ಕಡ್ಡಾಯ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ
  • ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯ
  • ಅನುಭವ: RBIಯ ಎರಡನೇ ಶೆಡ್ಯೂಲ್‌ನಲ್ಲಿರುವ ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕನಿಷ್ಠ 1 ವರ್ಷ ಸೇವೆ

ವಯೋಮಿತಿ (01.08.2026ರಂತೆ)

  • ಕನಿಷ್ಠ ವಯಸ್ಸು: 21 ವರ್ಷ
  • ಗರಿಷ್ಠ ವಯಸ್ಸು: 30 ವರ್ಷ (ಸಾಮಾನ್ಯ ವರ್ಗ)
  • ಸಡಿಲಿಕೆ: SC/ST — 5 ವರ್ಷ, OBC — 3 ವರ್ಷ, ವಿಕಲಚೇತನ (ಸಾಮಾನ್ಯ/EWS) — 10 ವರ್ಷ, OBC — 13 ವರ್ಷ, SC/ST — 15 ವರ್ಷ

ಸಂಬಳ

JMG/S-I ಶ್ರೇಣಿ: ರೂ.48,480-2000/7-62,480-2340/2-67,160-2680/7-85,920/- ಜೊತೆಗೆ ಬ್ಯಾಂಕಿನ ನಿಯಮಾವಳಿ ಪ್ರಕಾರ ಭತ್ಯೆಗಳು.

ಅರ್ಜಿ ಶುಲ್ಕ

  • ಸಾಮಾನ್ಯ/EWS/OBC: ರೂ.850 (GST ಸೇರಿ) + ಪೇಮೆಂಟ್ ಗೇಟ್‌ವೇ ಶುಲ್ಕ
  • SC/ST/ವಿಕಲಚೇತನ/ಮಹಿಳೆ: ರೂ.175 (GST ಸೇರಿ) + ಪೇಮೆಂಟ್ ಗೇಟ್‌ವೇ ಶುಲ್ಕ

ಆಯ್ಕೆ ಪ್ರಕ್ರಿಯೆ

  1. ಆನ್‌ಲೈನ್ ಪರೀಕ್ಷೆ (OT)
  2. ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)
  3. ಗುಂಪು ಚರ್ಚೆ (GD) / ವೈಯಕ್ತಿಕ ಸಂದರ್ಶನ (PI)

ಅರ್ಜಿ ಸಲ್ಲಿಸುವುದು ಹೇಗೆ?

  1. ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. Career ವಿಭಾಗದಲ್ಲಿ LBO ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ
  3. ಅಗತ್ಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ
  4. ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ: ಆಗಸ್ಟ್ 18, 2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಸೆಪ್ಟೆಂಬರ್ 17, 2026 (ವಿಸ್ತರಣೆ)

ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆಡೌನ್‌ಲೋಡ್ ಮಾಡಿ
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಪ್ರಕಟಣೆಡೌನ್‌ಲೋಡ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಕೆಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣಭೇಟಿ ನೀಡಿ
WhatsAppಜಾಯಿನ್ ಆಗಿ
Telegramಜಾಯಿನ್ ಆಗಿ

Join

Leave a Comment

Join WhatsApp Group