LIC ಅಪ್ರೆಂಟಿಸ್ ನೇಮಕಾತಿ 2026: 232 ಹುದ್ದೆ, ತಿಂಗಳಿಗೆ ₹16,650 ವರೆಗೆ ಸ್ಟೈಪೆಂಡ್ | LIC HFL Apprentice Recruitment 2026

Photo of author

Mantesh

Publish: October 24, 2026
LIC HFL Apprentice Recruitment 2026

share Share:

LIC HFL Apprentice Recruitment 2026 232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಕರ್ನಾಟಕದಲ್ಲಿ 24 ಹುದ್ದೆ. ಅರ್ಹತೆ, ಸ್ಟೈಪೆಂಡ್, ಶುಲ್ಕ, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕ 01 ನವೆಂಬರ್ 2026.

ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅನುಭವ ಪಡೆಯಲು ಬಯಸುವ ಪದವೀಧರರಿಗೆ ಒಂದು ಉತ್ತಮ ಅವಕಾಶ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) 2026ರ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 232 ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಕರೆದಿದೆ. ಕರ್ನಾಟಕದಲ್ಲಿ 24 ಹುದ್ದೆಗಳಿವೆ.

LIC HFL Apprentice Recruitment 2026 ಹುದ್ದೆಯ ಪ್ರಮುಖ ವಿವರಗಳು

  • ಸಂಸ್ಥೆ: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
  • ಹುದ್ದೆ: ಅಪ್ರೆಂಟಿಸ್ (ಜಾಹೀರಾತು ಸಂಖ್ಯೆ: LICHFL Apprenticeship Program-010)
  • ಒಟ್ಟು ಹುದ್ದೆಗಳು: 232
  • ತರಬೇತಿ ಅವಧಿ: 12 ತಿಂಗಳು
  • ಕೊನೆಯ ದಿನಾಂಕ: 01 ನವೆಂಬರ್ 2026

ಕರ್ನಾಟಕದಲ್ಲಿನ ಹುದ್ದೆಗಳು

ಒಟ್ಟು 24 ಹುದ್ದೆಗಳು: ಬೆಂಗಳೂರು 13, ಹಾಗೂ ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹಾಸನ, ಹೊಸಕೋಟೆ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಸರ್ಜಾಪುರ ಮತ್ತು ತುಮಕೂರಿನಲ್ಲಿ ತಲಾ 1.

ಶೈಕ್ಷಣಿಕ ಅರ್ಹತೆ

  • UGC ಅಥವಾ AICTE ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ
  • ಈಗಾಗಲೇ ಬೇರೆ ಸಂಸ್ಥೆಯಲ್ಲಿ ಅಪ್ರೆಂಟಿಸ್‌ಶಿಪ್ ಮಾಡಿದವರು ಅಥವಾ ಈಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ

ಮುಖ್ಯ ಮಾಹಿತಿ: ಇದು ತರಬೇತಿ ಹುದ್ದೆಯಾಗಿದ್ದು ಖಾಯಂ ಉದ್ಯೋಗವಲ್ಲ. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ದೊರೆಯುತ್ತದೆ.

ಮಾಸಿಕ ಸ್ಟೈಪೆಂಡ್

  • ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಲ್ಲಿ: ₹16,650
  • ಇತರ ನಗರಗಳಲ್ಲಿ: ₹14,150

ವಯೋಮಿತಿ

01 ಅಕ್ಟೋಬರ್ 2026ಕ್ಕೆ ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ.

ಅರ್ಜಿ ಶುಲ್ಕ

  • ಎಸ್‌ಸಿ / ಎಸ್‌ಟಿ ಮತ್ತು ವಿಕಲಚೇತನ: ₹200 + GST
  • ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಪುರುಷರು: ₹800 + GST
  • ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಮಹಿಳೆಯರು ಮತ್ತು ತೃತೀಯಲಿಂಗಿಗಳು: ₹600 + GST
  • ಪಾವತಿ ಆನ್‌ಲೈನ್ ಮೂಲಕ ಮಾತ್ರ

ಆಯ್ಕೆ ಪ್ರಕ್ರಿಯೆ

ಆನ್‌ಲೈನ್ ಪರೀಕ್ಷೆ, ನಂತರ ದಾಖಲೆ ಪರಿಶೀಲನೆ ಮತ್ತು ಸಂದರ್ಶನ. ಪರೀಕ್ಷೆಯನ್ನು ಮನೆಯಿಂದಲೇ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ (ರಿಮೋಟ್ ಪ್ರಾಕ್ಟರ್ಡ್) ಬರೆಯಬಹುದು.

  • ಒಟ್ಟು 100 ಪ್ರಶ್ನೆ, 100 ಅಂಕ, ಸಮಯ 60 ನಿಮಿಷ
  • ಸಾಮಾನ್ಯ/ಹಣಕಾಸು ಜ್ಞಾನ, ಇಂಗ್ಲಿಷ್, ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: ಪ್ರತಿ ವಿಭಾಗಕ್ಕೆ 25 ಪ್ರಶ್ನೆ
  • ಪ್ರಶ್ನೆಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ

ಅರ್ಜಿ ಸಲ್ಲಿಸುವ ವಿಧಾನ

  1. NATS ಪೋರ್ಟಲ್‌ನಲ್ಲಿ ವಿದ್ಯಾರ್ಥಿಯಾಗಿ ನೋಂದಣಿ ಮಾಡಿ
  2. ಲಾಗಿನ್ ಆಗಿ “LIC HFL” ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಿ ಮತ್ತು Enrolment ID ಉಳಿಸಿಕೊಳ್ಳಿ
  3. BFSI SSC ಕಳುಹಿಸುವ ಇಮೇಲ್‌ನಲ್ಲಿರುವ BEEP ಪೋರ್ಟಲ್ ಲಿಂಕ್ ಮೂಲಕ ವಿವರ ಭರ್ತಿ ಮಾಡಿ, ಶುಲ್ಕ ಪಾವತಿಸಿ
  4. 01 ನವೆಂಬರ್ 2026ರೊಳಗೆ ಎಲ್ಲ ಹಂತ ಪೂರ್ಣಗೊಳಿಸಿ

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ: 20 ಅಕ್ಟೋಬರ್ 2026
  • ಅರ್ಜಿ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನ: 01 ನವೆಂಬರ್ 2026
  • ಆನ್‌ಲೈನ್ ಪರೀಕ್ಷೆ: 07 ನವೆಂಬರ್ 2026
  • ದಾಖಲೆ ಪರಿಶೀಲನೆ ಮತ್ತು ಸಂದರ್ಶನ: 15 ನವೆಂಬರ್ 2026
  • ತರಬೇತಿ ಆರಂಭ: ನವೆಂಬರ್ ಕೊನೆಯ ವಾರ (ತಾತ್ಕಾಲಿಕ)

ಪ್ರಮುಖ ಲಿಂಕ್‌ಗಳು

ವಿವರಲಿಂಕ್
NATS ಪೋರ್ಟಲ್ (ನೋಂದಣಿ ಮತ್ತು ಅರ್ಜಿ)ಇಲ್ಲಿ ಕ್ಲಿಕ್ ಮಾಡಿ
BEEP ಪೋರ್ಟಲ್ (ಶುಲ್ಕ ಪಾವತಿ)ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
WhatsApp ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
Telegram ಚಾನೆಲ್ಇಲ್ಲಿ ಕ್ಲಿಕ್ ಮಾಡಿ

Join

Leave a Comment

Join WhatsApp Group