ಸೌತ್ ಇಂಡಿಯನ್ ಬ್ಯಾಂಕ್ ನೇಮಕಾತಿ 2026: ಜೂನಿಯರ್ ಆಫೀಸರ್ (ಆಪರೇಷನ್ಸ್) ಹುದ್ದೆಗೆ ಅರ್ಜಿ ಶುಲ್ಕ ಇಲ್ಲ. ವಿದ್ಯಾರ್ಹತೆ, ವಯೋಮಿತಿ, ವೇತನ, ಕೊನೆಯ ದಿನಾಂಕ ಇಲ್ಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶ. ಸೌತ್ ಇಂಡಿಯನ್ ಬ್ಯಾಂಕ್ ಜೂನಿಯರ್ ಆಫೀಸರ್ (ಆಪರೇಷನ್ಸ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಶುಲ್ಕ ಇಲ್ಲ. ಅಕ್ಟೋಬರ್ 27, 2026 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಪ್ರಮುಖ ವಿವರಗಳು
- ಸಂಸ್ಥೆ: ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್
- ಹುದ್ದೆ: ಜೂನಿಯರ್ ಆಫೀಸರ್ (ಆಪರೇಷನ್ಸ್)
- ಅರ್ಜಿ ವಿಧಾನ: ಆನ್ಲೈನ್
- ಹುದ್ದೆಗಳ ಸಂಖ್ಯೆ: ಅಧಿಸೂಚನೆಯಲ್ಲಿ ನಿಗದಿತ ಸಂಖ್ಯೆ ತಿಳಿಸಿಲ್ಲ
ಮುಖ್ಯ ಮಾಹಿತಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 27, 2026. ಈ ಹುದ್ದೆಗೆ ಬ್ಯಾಂಕ್ ಅಥವಾ NBFC ಯಲ್ಲಿ ಕನಿಷ್ಠ 2 ವರ್ಷ ಕೆಲಸದ ಅನುಭವ ಕಡ್ಡಾಯ. ಅನುಭವ ಇಲ್ಲದವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ
- ಪದವಿಯಲ್ಲಿ ಕನಿಷ್ಠ ಶೇ. 50 ಅಂಕಗಳು ಇರಬೇಕು
ಕೆಲಸದ ಅನುಭವ
- ಬ್ಯಾಂಕ್ ಅಥವಾ NBFC ಯಲ್ಲಿ ಕನಿಷ್ಠ 2 ವರ್ಷ ಅನುಭವ
ವಯೋಮಿತಿ
- ಗರಿಷ್ಠ 28 ವರ್ಷ (30.09.2026 ರಂತೆ). ಅಂದರೆ 01.10.1998 ರಂದು ಅಥವಾ ನಂತರ ಜನಿಸಿದವರು ಅರ್ಜಿ ಸಲ್ಲಿಸಬಹುದು
- ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
ವೇತನ
- ವಾರ್ಷಿಕ ಒಟ್ಟು ಪ್ಯಾಕೇಜ್ (CTC) ರೂ. 5.14 ಲಕ್ಷ
ಅರ್ಜಿ ಶುಲ್ಕ
- ಅರ್ಜಿ ಶುಲ್ಕ ಇಲ್ಲ
ಆಯ್ಕೆ ವಿಧಾನ
- ಗ್ರೂಪ್ ಡಿಸ್ಕಷನ್
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
- ಕೆಳಗಿನ ಕೋಷ್ಟಕದಲ್ಲಿರುವ ಅಧಿಸೂಚನೆ ಲಿಂಕ್ ತೆರೆದು ಅರ್ಹತೆಯನ್ನು ಸರಿಯಾಗಿ ಓದಿ.
- “Apply Online” ಲಿಂಕ್ ಮೂಲಕ ಬ್ಯಾಂಕ್ನ ನೇಮಕಾತಿ ಪೋರ್ಟಲ್ ತೆರೆಯಿರಿ.
- ಹೆಸರು, ವಿಳಾಸ, ವಿದ್ಯಾರ್ಹತೆ, ಅನುಭವ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ, ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: ಅಕ್ಟೋಬರ್ 16, 2026
- ಅರ್ಜಿ ಕೊನೆಯ ದಿನಾಂಕ: ಅಕ್ಟೋಬರ್ 27, 2026
ಪ್ರಮುಖ ಲಿಂಕ್ಗಳು
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| WhatsApp ಗ್ರೂಪ್ | ಜಾಯಿನ್ ಆಗಿ |
| Telegram ಚಾನೆಲ್ | ಜಾಯಿನ್ ಆಗಿ |












Karnataka24.in