Gruhalakshmi scheme: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್. ಒಟ್ಟಿಗೆ ಎರಡು ತಿಂಗಳು ₹4000 ಹಣ ಬಿಡುಗಡೆ…! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.

Photo of author

Mantesh

Publish: March 25, 2025
Gruhalakshmi scheme

share Share:

ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಎರಡು ತಿಂಗಳ ಹಣ ಬಿಡುಗಡೆ ಆಗದೇ ಇರುವುದು ಜನರಲ್ಲಿ ಗೊಂದಲವನ್ನು ಉಂಟು ಮಾಡಿದೆ. ಈ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಮಹತ್ವದ ಅಪ್ಡೇಟ್ ನೀಡಿದ್ದಾರೆ. ಸದನದಲ್ಲಿ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಿಡುಗಡೆ ಆಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದರ ಕುರಿತಾಗಿ ರಾಜ್ಯ ಸರ್ಕಾರವು ಹೊಸ ಅಪ್ಡೇಟ್ ನೀಡಿದೆ. ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎರಡು ತಿಂಗಳಿನ ಬಾಕಿ ಹಣದ ಬಿಡುಗಡೆಯ ಬಗ್ಗೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಾವು ಈ ಒಂದು ಮಾಹಿತಿಯನ್ನು ಓದಿ ತಿಳಿದುಕೊಳ್ಳಬೇಕಾಗಿ ವಿನಂತಿ. ಈ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:

ಗೃಹಲಕ್ಷ್ಮಿಯ ಜನವರಿ ಮತ್ತು ಫೆಬ್ರುವರಿ ತಿಂಗಳಿನ ಪೆಂಡಿಂಗ್ ಹಣದ ಬಿಡುಗಡೆ: Gruhalakshmi scheme

ಈಗಾಗಲೇ ಕಂತುಗಳ ರೂಪದಲ್ಲಿ ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಹಣವು ಮಹಿಳೆಯರ ಖಾತೆಗೆ ನೇರವಾಗಿ ಜಮಾ ಆಗುತ್ತಿದ್ದು, ಇದೀಗ 15ನೇ ಕಂತಿಯ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ ಹಾಗೂ ಕೆಲ ಮಹಿಳೆಯರ ಖಾತೆಗೆ 16ನೇ ಕಂತಿನ ಹಣವು ಸಹ ಜಮಾ ಆಗಿದೆ ಆದರೆ ಕೆಲವೊಂದು ಮಹಿಳೆಯರ ಖಾತೆಗೆ 16ನೇ ಕಂತಿನ ಹಣ ಇನ್ನು ಜಮಾ ಆಗಿಲ್ಲ. ಇನ್ನು ಫೆಬ್ರುವರಿ ತಿಂಗಳಿನ 17ನೇ ಕಂತಿನ ಹಣವು ಸಹ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಇದರ ಕುರಿತಾಗಿ ನಡೆದ ಸದನದ ಚರ್ಚೆಯಲ್ಲಿ ಬಿಜೆಪಿಯ ವಿರೋಧ ಪಕ್ಷದ ನಾಯಕರದ, ಆರ್ ಅಶೋಕ್ ಅವರು ಕಾಂಗ್ರೆಸ್ ಸಚಿವರಿಗೆ ಪ್ರಶ್ನೆ ಮಾಡಿದರು. ಗೃಹಲಕ್ಷ್ಮಿ ಹಣವನ್ನು ಇನ್ನೂ ಮಹಿಳೆಯರ ಖಾತೆಗೆ ಜಮಾ ಮಾಡಿಲ್ಲ ಕಾರಣ ನೀಡಿ ಹಾಗೂ ಜಮಾ ಮಾಡಲು ಏಕೆ ವಿಳಂಬ ಮಾಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವರು ಆದಂತಹ ಸಂತೋಷ್ ಲಾಡ್ಜ್ ಅವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

Gruhalakshmi scheme

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ…! Gruhalakshmi scheme

ಹೌದು ಸ್ನೇಹಿತರೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವರು, ಜನೆವರಿ ಹಾಗೂ ಫೆಬ್ರುವರಿ ತಿಂಗಳಿನ ಎರಡು ಕಂತಿನ ₹4000 ಹಣವನ್ನು ಒಟ್ಟಿಗೆ ಮಹಿಳೆಯರ ಖಾತೆಗೆ ಜಮಾ ಮಾಡುತ್ತೇವೆ ಹಾಗೂ ಈ ಒಂದು ಪ್ರಕ್ರಿಯೆ ಮಾರ್ಚ್ 31ರ ಒಳಗೆ ನಡೆಯುವುದು ಎನ್ನುವ ರೀತಿಯಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಇದು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳುವ ಪ್ರಕಾರ ಈಗಾಗಲೇ ಹಣದ ಬಿಡುಗಡೆ ಪ್ರಕ್ರಿಯೆ ಪ್ರಾರಂಭವಾಗಿದೆ ಒಂದಿಷ್ಟು ಮಹಿಳೆಯರ ಖಾತೆಗೆ ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಜಮಾ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಾವು ಯಾವುದೇ ರೀತಿಯ ಹಣವನ್ನು ಪೆಂಡಿಂಗ್ ಉಳಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಣ ಜಮಾ ಮಾಡಲು ಇನ್ನೂ ಕೆಲ ದಿನಗಳ ಕಾಲಾವಕಾಶ ಬೇಕಾಗುವುದು, ಹಾಗಾಗಿ ಅಲ್ಲಿಯವರೆಗೂ ಮಹಿಳೆಯರು ತಾಳ್ಮೆಯಿಂದಿರಬೇಕು. ಇನ್ನೂ ಕೆಲ ಮಹಿಳೆಯರು ತಮ್ಮ ಬ್ಯಾಂಕಿಗೆ ಸಂಬಂಧಿಸಿದ ಕೆಲವೊಂದು ನಿಯಮಗಳನ್ನು ಸರಿಯಾಗಿ ಪಾಲಿಸದೆ ಇರುವುದು ಅಂತವರಿಗೆ ಹಣ ಜಮಾ ಮಾಡಲು ವಿಳಂಬವಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

ಪೆಂಡಿಂಗ್ ಹಣ ಪಡೆಯಲು ಈ ನಿಯಮಗಳನ್ನು ಪಾಲಿಸಿ:

ಪೆಂಡಿಂಗ್ ಇರುವಂತಹ ಎರಡು ಕಂತಿನ ಹಣಗಳನ್ನು ನೀವು ಪಡೆಯಬೇಕಾದರೆ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಕೆಲವು ರೀತಿಯ ನಿಯಮಗಳನ್ನು ನೀವು ಪಾಲಿಸಬೇಕು ಅವುಗಳು ಏನೆಂದರೆ, ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಜೋಡಣೆ, ಆಧಾರ್ ಕಾರ್ಡ್ ಸೀಡಿಂಗ್ ಮತ್ತು ಖಾತೆಗೆ ಸಂಬಂಧಿಸಿದ ಈ-ಕೆ ವೈ ಸಿ (E-K Y C) ಮಾಡಿಸಿದವರಿಗೆ ಮಾತ್ರ ಹಣ ಜಮಾ ಆಗುವುದು. ಇದರ ಜೊತೆ ಜೊತೆಗೆ ನಿಮ್ಮ ಪಡಿತರ ಚೀಟಿಯಲ್ಲಿನ (Ration Card) ಕುಟುಂಬದ ಸದಸ್ಯರ ಈ-ಕೆ ವೈ ಸಿ (E-K Y C) ಮಾಡಿಸುವುದು ಕಡ್ಡಾಯವಾಗಿದೆ. ಅದೇ ರೀತಿ ನೀವು ಸಲ್ಲಿಸಿದ ಗುಣಲಕ್ಷ್ಮೀ ಯೋಜನೆಯ ಅರ್ಜಿಯನ್ನು ಸಹ ಮತ್ತೊಮ್ಮೆ ಈ (E-K Y C) ಮಾಡಿಸಬೇಕು ಅಂದಾಗ ಮಾತ್ರ ನಿಮಗೆ ಹಣ ಜಮಾ ಆಗುವುದು.


ಇದಿಷ್ಟು ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಬಗ್ಗೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಸರ್ಕಾರಿ ಯೋಜನೆಗಳು ಬಗ್ಗೆ ಮಾಹಿತಿ ಪಡೆಯಲು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲ, ಉದ್ಯೋಗ ಸಂಬಂಧಿತ ಮಾಹಿತಿಗಳನ್ನು ಪಡೆಯಲು ಮತ್ತು ಇತರೆ ಪ್ರಮುಖ ಸುದ್ದಿಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.

ಈ ಮಾಹಿತಿಗಳನ್ನು ಓದಿ:

Udyogini Yojana: ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ..! 1.50 ಲಕ್ಷ ಸಬ್ಸಿಡಿ..! Quick Apply.

Sunita Williams.ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ..! ಇಲ್ಲಿದೆ ಸಂಪೂರ್ಣ ಮಾಹಿತಿ.

Join

3 thoughts on “Gruhalakshmi scheme: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್. ಒಟ್ಟಿಗೆ ಎರಡು ತಿಂಗಳು ₹4000 ಹಣ ಬಿಡುಗಡೆ…! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.”

Leave a Comment