ನಮಸ್ಕಾರ ಕರ್ನಾಟಕದ ಜನತೆಗೆ, RRB ರೈಲ್ವೆ ನೇಮಕಾತಿ ಮಂಡಳಿಯು (RRB recruitment 2025) ಇದೀಗ ಖಾಲಿ ಇರುವ 9970 ಅಸಿಸ್ಟೆಂಟ್ ಲೋಕೋ ಪೈಲೆಟ್ (ALP -Assistant Loco Pilot) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಲೇಖನದಲ್ಲಿ RRB ಯ ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಅರ್ಹತೆಗಳೇನು ಮತ್ತು ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ;
ರೈಲ್ವೆ ಇಲಾಖೆಯ ನೇಮಕಾತಿ 2025: ಒಟ್ಟು 9970 ಹುದ್ದೆಗಳು..!
ಹೌದು ಸ್ನೇಹಿತರೆ, ಭಾರತೀಯ ರೈಲ್ವೆ ಇಲಾಖೆಯು (RRB recruitment 2025) ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 9970 ಅಸಿಸ್ಟೆಂಟ್ ಲೋಕೋ ಪೈಲೆಟ್ (ALP) ಹುದ್ದೆಗಳಿಗಾಗಿ ಸಂಬಂಧಿಸಿದಂತೆ ಒಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಾಗಾಗಿ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ನೇಮಕಾತಿ ವಿವರ: RRB recruitment 2025.
ಖಾಲಿ ಹುದ್ದೆಗಳ ಸಂಖ್ಯೆ = 9970
ಹುದ್ದೆಗಳ ಹೆಸರು = ಅಸಿಸ್ಟೆಂಟ್ ಲೋಕೋ ಪೈಲೆಟ್ (ALP)
ಅರ್ಜಿ ಸಲ್ಲಿಕೆ ವಿಧಾನ = ಆನ್ಲೈನ್ ಮೂಲಕ (Online)
ಉದ್ಯೋಗ ಸ್ಥಳ = ಭಾರತಾದ್ಯಂತ
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ = ಅಧಿಕೃತವಾಗಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಬಿಡುಗಡೆ ಮಾಡಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = ಅಧಿಕೃತವಾಗಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಬಿಡುಗಡೆ ಮಾಡಿಲ್ಲ.

ಅರ್ಜಿ ಸಲ್ಲಿಕೆಯ ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ:
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 9970 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಕನಿಷ್ಠ 10ನೆಯ ತರಗತಿಯನ್ನು ಹಾಗೂ ಉಳಿದ ಹುದ್ದೆಗಳ ನೇಮಕಾತಿಗಾಗಿ ಆಯಾ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಹಾಗೂ ಗರಿಷ್ಠ ವಯಸ್ಸಿನ ಮಿತಿ 33 ವರ್ಷಗಳು. ಇನ್ನೂ ನಿಯಮಗಳ ಪ್ರಕಾರ ಆಯಾ ವರ್ಗದ ಪಂಗಡದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆಯು ಅನ್ವಯಿಸುತ್ತದೆ.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಷ್ಟು ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಂಬುವುದನ್ನು ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ರೀತಿಯ ಮಾಹಿತಿಯೂ ಪ್ರಕಟವಾಗಿಲ್ಲ. ಹಾಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದ ನಂತರ ಅರ್ಜಿ ಶುಲ್ಕದ ಬಗ್ಗೆ ಮಾಹಿತಿಯು ದೊರೆಯುವುದು.
ಆಯ್ಕೆಯ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲನೆಯದಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಹಂತದಲ್ಲಿ ಆಯ್ಕೆ ಮಾಡಲಾದ ಅಭ್ಯರ್ಥಿಗಳನ್ನು ಮುಂದೆ ದಾಖಲಾತಿ ಪರಿಶೀಲನೆ ಹಾಗೂ ಮೆಡಿಕಲ್ ಪರೀಕ್ಷೆ ಮುಂತಾದ ವಿಧಾನಗಳನ್ನು ಆಧರಿಸಿ ಆಯ್ಕೆ ಪಟ್ಟಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ವಿಧಾನ : How to apply?
ನಿಮಗೆಲ್ಲಾ ತಿಳಿದಿರುವ ಹಾಗೆ ಇದು ಅಧಿಕೃತ ಅಧಿಸೂಚನೆಯಾಗಿದ್ದು ಇನ್ನೂ ಯಾವುದೇ ರೀತಿಯ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಪ್ರಾರಂಭವಾಗಿಲ್ಲ. ಮಾಹಿತಿಗಳ ಮೂಲಕ ತಿಳಿದು ಬಂದಿರುವ ವಿಷಯವೇನೆಂದರೆ ಅರ್ಜಿ ಸಲ್ಲಿಕೆಯು ಏಪ್ರಿಲ್ 10 ರ ನಂತರ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬಹುದು.ಹಾಗಾಗಿ ಹೆಚ್ಚಿನ ವಿವರಕ್ಕಾಗಿ ಕೆಳಗೆ ನೀಡಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ;
ಇದಿಷ್ಟು ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಬಿಡುಗಡೆಯ ಅಧಿಕೃತ ಅಧಿಸೂಚನೆಯ (RRB recruitment 2025) ಬಗ್ಗೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ.
ಈ ಮಾಹಿತಿಗಳನ್ನು ಓದಿ:
Free Laptop Scheme 2025: Quick Apply Online.
Our WhatsApp channel is live now 👇












