13,000 ವರ್ಷಗಳ ಹಿಂದೆ ಅಳಿದು ಹೋದ ಡಯರ್ ವೂಲ್ಫ್ (Dire Wolf)ಎಂಬ ತೋಳಗಳ ಸಂತತಿ; ಇದೀಗ ಮತ್ತೆ ಮರು ಸೃಷ್ಟಿ…! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Photo of author

Mantesh

Publish: April 14, 2025

share Share:

Introduction:13,000 ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸಿದ್ದ, ಅತ್ಯಂತ ಭಯಾನಕ ಹಾಗೂ ಬಲಿಷ್ಠ ತೋಳ ಪ್ರಜಾತಿಯಾದ ಡಯರ್ ವೂಲ್ಫ್ (Dire Wolf), ಇತಿಹಾಸದಲ್ಲಿ ನಾಶವಾಗಿದೆ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಇತ್ತೀಚಿನ ಡಿಎನ್‌ಎ ಸಂಶೋಧನೆಗಳು ಮತ್ತು ವಿಜ್ಞಾನ ತಂತ್ರಜ್ಞಾನಗಳ ಸಹಾಯದಿಂದ ಈ ತೋಳಗಳ ಮರುಸೃಷ್ಟಿಯ ಸಾಧ್ಯತೆ ಬೆಳಕಿಗೆ ಬಂದಿದೆ!

ಈ ಬ್ಲಾಗ್‌ನಲ್ಲಿ ನೀವು ಡಯರ್ ವೂಲ್ಫ್‌ಗಳ ಇತಿಹಾಸ, ಅವುಗಳ ವಿಶಿಷ್ಟ ಗುಣಲಕ್ಷಣಗಳು, ನಾಶವಾಗುವ ಹಿಂದಿನ ಕಾರಣಗಳು ಮತ್ತು ವಿಜ್ಞಾನಿಗಳು ಇತ್ತೀಚೆಗೆ ಮಾಡಿರುವ ಮರುಸೃಷ್ಟಿಯ ಪ್ರಯತ್ನಗಳ ಸಂಪೂರ್ಣ ವಿವರಗಳನ್ನು ತಿಳಿಯಬಹುದು.

ಡಯರ್ ವೂಲ್ಫ್ ಇತಿಹಾಸ.

ಈ ಭೂಮಿಯ ಮೇಲೆ ಅದೆಷ್ಟು ಜೀವಿಗಳು ಹುಟ್ಟಿಕೊಂಡಿವೆ, ಅವುಗಳಲ್ಲಿ ಕೆಲವು ಅಳಿದು ಹೋಗಿವೆ, ಇನ್ನು ಕೆಲವು ಅಳಿವಿನ ಅಂಚಿನಲ್ಲಿವೆ, ಅದರೊಂದಿಗೆ ಇನ್ನೂ ಕೆಲವು ಇಲ್ಲಿಯವರೆಗೂ ಅಂದರೆ ಭೂಮಿಯ ಪ್ರಾರಂಭದ ಹಂತದಿಂದ ಇಲ್ಲಿಯವರೆಗೂ ಭೂಮಿಯ ಮೇಲೆ ಜೀವಿಸುತ್ತಿವೆ. ಅಂತಹ ಸಾಲಿಗೆ ಸೇರುವ ತೋಳಗಳ ಪ್ರಜಾತಿಗಳಲ್ಲಿ ಒಂದಾದ ಡಯರ್ ವೂಲ್ಫ್ (Dire Wolf) ಎಂಬ ದೈತ್ಯ ತೋಳಗಳ ಕಥೆ ಇದು. ಈ ತೋಳಗಳು ಸುಮಾರು 13000 ವರ್ಷಗಳ ಹಿಂದೆಯೇ ಭೂಮಿಯಿಂದ ವಿಲೂಪ್ತವನ್ನು ಹೊಂದಿವೆ. ಅಂದರೆ 13000 ವರ್ಷಗಳ ಹಿಂದೆಯೇ ಇವುಗಳ ಸಂತತಿಯು ಅಳಿದು ಹೋಗಿದೆ. ಇವುಗಳು ಮೂಲತಃವಾಗಿ ಉತ್ತರ ಅಮೆರಿಕಾದಲ್ಲಿ ಕಂಡು ಬರುತ್ತಿದ್ದಂತಹ ಒಂದು ತೋಳದ ಪ್ರಜಾತಿ ಆಗಿದ್ದು, ಪ್ರಸ್ತುತದಲ್ಲಿ ನಾವು ಕಾಣುವ ತೋಳದ ರೀತಿಯಲ್ಲಿ ಕಂಡುಬರುತ್ತಿದ್ದವು. ಆದರೂ ಇವುಗಳು ಗಾತ್ರದಲ್ಲಿ ಇಂದಿನ ತೋಳಗಳಿಗಿಂತ ದುಪ್ಪಟ್ಟು ಗಾತ್ರದಲ್ಲಿದ್ದವು. ಉದ್ದದಲ್ಲಿ 6 ಅಡಿಯಷ್ಟು ಹಾಗೂ ಇವುಗಳ ತೂಕ ಸರಿಸುಮಾರು 68 ರಿಂದ 70 ಕಿಲೋ ಗ್ರಾಂ ವರೆಗೆ ಇರುತ್ತಿತ್ತು. ಬಿಳಿಯ ಕೂದಲಿನೊಂದಿಗೆ ಬಲಿಷ್ಠವಾಗಿ ಕಂಡುಬರುತ್ತಿದ್ದವು. ಇವುಗಳ ಸಂತತಿಯು ಅಳಿದು ಹೋಗಲು ಮುಖ್ಯ ಕಾರಣವೇನೆಂದರೆ ಮಾನವರು ಇವುಗಳನ್ನು ಬೇಟೆಯಾಡುವುದು, ಹಾಗೂ ಇವುಗಳಿಗೆ ಸರಿಯಾದ ರೀತಿಯಲ್ಲಿ ಬೇಟೆಗಳು ಸಿಗದೇ ಇರುವುದರಿಂದ ಇವುಗಳ ಸಂತತಿಯು ಅಳಿದು ಹೋಗಿದೆ ಎಂದು ಹೇಳಲಾಗುತ್ತದೆ.

Dire Wolf

ಹಾಗಾದರೆ ಇವುಗಳನ್ನು (Dire Wolf) ಮತ್ತೆ ಸೃಷ್ಟಿಸಿದ್ದು ಹೇಗೆ? extinct species recreated.

ನೀವು ನಿಮ್ಮ ಶಾಲಾ-ಕಾಲೇಜು ದಿನಗಳಲ್ಲಿ ವಿಜ್ಞಾನ ವಿಷಯದಲ್ಲಿ ಈ ಕೆಲವು ಪದಗಳನ್ನು ಕೇಳೇ ಇರುತ್ತೀರಿ, ಅದೇನೆಂದರೆ, ಜೈವಿಕ ತಂತ್ರಜ್ಞಾನ, ತಳೀಕರಣ, ಡಿಎನ್ಎ ಹಾಗೂ ಆರ್ ಏನ್ ಎ ಮುಂತಾದವುಗಳು. ನಿಮಗೆ ಇವುಗಳ ಬಗ್ಗೆ ಮಾಹಿತಿ ಇದ್ದರೆ ಇಲ್ಲಿ ನಾವು ಡಯರ್ ವೂಲ್ಫ್ (Dire Wolf) ಎಂಬ ತೋಳಗಳ ಮರು ಸೃಷ್ಟಿಯ ಬಗ್ಗೆ ನೋಡುವುದಾದರೆ, ಇವುಗಳನ್ನು ಸಹ ಇದೇ ರೀತಿಯ ಒಂದು ತಂತ್ರಜ್ಞಾನದ ಮೂಲಕ ಮರಿ ಸೃಷ್ಟಿಸಲಾಗಿದೆ.
Colossal bioscience ಎಂಬ ಕಂಪನಿಯು ಜೈವಿಕ ವಿಜ್ಞಾನದ ಮೇಲೆ ಕೆಲಸ ಮಾಡುತ್ತಿರುವ ಕಂಪನಿ ಯಾಗಿದ್ದು ಇದೀಗ ತಯಾರಿಸಿದ ಅಥವಾ ಮರಿ ಸೃಷ್ಟಿಸಿದ ಡಯರ್ ವೂಲ್ಫ್ (Dire Wolf) ಎಂಬ ತೋಳಗಳನ್ನು ಇದೇ ಕಂಪನಿಯು ಮರು ಸೃಷ್ಟಿ ಮಾಡಿದ್ದು ಇದನ್ನು ಇವರು ಜೈವಿಕ ತಂತ್ರಜ್ಞಾನದ ಮೂಲಕ ಅವರ ಸೃಷ್ಟಿ ಮಾಡಿಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಜೈವಿಕ ತಂತ್ರಜ್ಞಾನ, ಜೆನೆಟಿಕ್ ಎಡಿಟಿಂಗ್, ಡಯರ್ ವೂಲ್ಫ್ ಮರು ಸೃಷ್ಟಿಯ ಕಾರ್ಯ ವಿಧಾನ.

ಇದರಲ್ಲಿ ಮುಖ್ಯವಾಗಿ ಅಳಿದು ಹೋದ ಪ್ರಾಣಿಗಳ ಪಳಿಯುಳಿಕೆಗಳ ಮೂಲಕ ಅವುಗಳ DNA ಅನ್ನು ಸಂಗ್ರಹಿಸಲಾಗುತ್ತದೆ, ಇದನ್ನು ಸಂಗ್ರಹಿಸಲು ವಿಜ್ಞಾನಿಗಳು ಅವುಗಳ ಪಳೆಯುಳಿಕೆಗಳನ್ನು, ಅಂದರೆ ಆ ಪ್ರಾಣಿಯ ದೇಹದ ಎಲುಬು, ಕೂದಲು, ಅಥವಾ ಆ ಜೀವಿಯ ದೇಹದ ಯಾವುದೇ ಒಂದು ಭಾಗವಾದರೂ ಸರಿ ಅವುಗಳ ಮೂಲಕ ಆ ಜೀವಿಯ DNA ಅನ್ನು ಸಂಗ್ರಿಸಲಾಗುತ್ತದೆ. ಇಲ್ಲಿ ನಿಮಗೆ ಒಂದು ಸಂದೇಹ ಬರುವುದು ಸರ್ವೇಸಾಮಾನ್ಯ ಏನೆಂದರೆ, ಅದು ಹೇಗೆ ಸಾವಿರಾರು ವರ್ಷಗಳ ಹಿಂದೆ ಅಳಿದು ಹೋದ ಜೀವಿಯ ದೇಹದ ಭಾಗಗಳು ಇವರಿಗೆ ದೊರೆಯುತ್ತವೆ? ಎಂಬುದು, ಹೌದು ದೊರೆಯುತ್ತವೆ, ಏಕೆಂದರೆ ಯಾವುದೇ ಪ್ರಾಣಿಯ ದೇಹದ ಭಾಗವು ಹಿಮದಲ್ಲಿ ಸಿಲುಕಿಕೊಂಡರೆ ಆ ಜೀವಿಯ ದೇಹದ ಭಾಗಗಳು ಅಷ್ಟು ಪ್ರಮಾಣದಲ್ಲಿ ನಷ್ಟವಾಗಿರುವುದಿಲ್ಲ, ಉದಾಹರಣೆಗೆ ಈ ಕೆಲವು ವರ್ಷಗಳ ಹಿಂದೆ ಹಿಮಾಲಯದಲ್ಲಿ ಒಂದು ಮ್ಯಾಮತ್ ( ದೈತ್ಯ ಆನೆ) ನಾ ದೇಹವು ಸಿಕ್ಕಿತ್ತು. ಹಾಗಾಗಿ ಆ ರೀತಿಯಾಗಿ ದೊರೆತ ಜೀವಿಯ ದೇಹದ ಭಾಗದಲ್ಲಿನ DNA ಅನ್ನು ತೆಗೆದು ಅದನ್ನು ಮೂಲತಃ ಅದೇ ಗುಂಪಿಗೆ ಸೇರಿದ ಪ್ರಾಣಿಗಳ ಪ್ರಭೇದದಲ್ಲಿ ಹುಡುಕಿ ಅದನ್ನು ಸೇರಿಸಲಾಗುತ್ತದೆ. ಅವುಗಳಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಅಂದರೆ ಜೀನ್ ಎಡಿಟಿಂಗ್ ಮಾಡುವ ಮೂಲಕ ಅಳಿದು ಹೋದ ಪ್ರಾಣಿಯ ಸಾಮ್ಯತೆಯನ್ನು ಹೊಂದುವ ಮತ್ತೊಂದು ಪ್ರಾಣಿಯನ್ನು ಮರು ಸೃಷ್ಟಿ ಮಾಡಲಾಗುತ್ತದೆ ಅಂದರೆ ಪುನರ್ ಸೃಷ್ಟಿಸಲಾಗುತ್ತದೆ.

ಜೈವಿಕ ತಂತ್ರಜ್ಞಾನದ ಮೂಲಕ ಡೈನೋಸಾರಸ್ ಗಳನ್ನು ಮತ್ತೆ ಸೃಷ್ಟಿಸಬಹುದಾ?

ಜೈವಿಕ ತಂತ್ರಜ್ಞಾನ ಎನ್ನುವ ವಿಜ್ಞಾನದ ಈ ಭಾಗವು ಮಾನವ ಇತಿಹಾಸದ ಬಹುದೊಡ್ಡ ಮೈಲುಗಲ್ಲು ಮತ್ತು ಸಾಧನೆ. ಜಗತ್ತು ಇಷ್ಟೊಂದು ಸುರಕ್ಷವಾಗಿ ಹಾಗೂ ಸುಖಕರವಾಗಿ ಇರಲು ಇದರ ಪಾತ್ರ ಬಹುಮುಖ್ಯ. ಜೈವಿಕ ತಂತ್ರಜ್ಞಾನದ ಮೂಲಕ ನಾವು ಅಳಿದು ಹೋದ ಪ್ರಾಣಿ ಪ್ರಭೇದಗಳನ್ನು ಮತ್ತೆ ಸೃಷ್ಟಿಸುವುದರೊಂದಿಗೆ ಮಾನವನ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಸಹ ಹೋಗಲಾಡಿಸಬಹುದು. ಹೌದು ಜೈವಿಕ ತಂತ್ರಜ್ಞಾನ ಮೂಲಕ ಆಯ್ದು ಹೋದ ಯಾವುದೇ ರೀತಿಯ ಪ್ರಭೇದದ ಪ್ರಾಣಿಗಳನ್ನು ಸಹ ಮತ್ತೆ ಸೃಷ್ಟಿಸಬಹುದು. ಇಲ್ಲಿ ಡೈನೋಸರ್ಸ್ ಗಳನ್ನು ಸಹ ಸೃಷ್ಟಿಸಬಹುದು ಇದರ ಕುರಿತು ಕಾರ್ಯ ನಡೆಯುತ್ತಿದೆ. ಹೀಗೆ ಹುಟ್ಟಿಸಬೇಕಾದರೆ ಡಿಎನ್ಎ ಹಾಗೂ ಆರ್ ಎನ್ ಎ ಎಂಬ ಮ್ಯಾಜಿಕ್ ಅಸ್ತ್ರ ಒಂದು ಮಾನವನ ಕೈಗೆಟುಕಿದರೆ ಸಾಕು ಏನನ್ನಾದರೂ ಮರು ಸೃಷ್ಟಿ ಮಾಡಬಹುದು.

ಈ ಮಾಹಿತಿಗಳನ್ನು ಓದಿ:

Free Laptop Scheme 2025: Quick Apply Online.

Benefits Of Eating Garlic : ದಿನಕ್ಕೆರಡು ಬೆಳ್ಳುಳ್ಳಿ ಸಂಸಾರಿಕ ಜೀವನದ ಗುಟ್ಟು.

Our WhatsApp Channel Is Live Now.

Join

4 thoughts on “13,000 ವರ್ಷಗಳ ಹಿಂದೆ ಅಳಿದು ಹೋದ ಡಯರ್ ವೂಲ್ಫ್ (Dire Wolf)ಎಂಬ ತೋಳಗಳ ಸಂತತಿ; ಇದೀಗ ಮತ್ತೆ ಮರು ಸೃಷ್ಟಿ…! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.”

  1. Greetings Friend,

    I trust this message finds you in excellent health and spirits.

    I’m reaching out with a unique and highly profitable business opportunity that I believe aligns with your vision and potential. This proposal holds promise for substantial returns and long-term partnership.

    If this interests you, kindly reply only to this email: changchih775@gmail.com. I will respond exclusively through this channel.

    Looking forward to your response.

    Warm regards,
    Dir. Chih-Chien Chang
    changchih775@gmail.com

    Reply

Leave a Comment