Gruhalakshmi Scheme Money Delay: ಇನ್ನೂ ಜಮಾ ಆಗದ ಗೃಹಲಕ್ಮಿ ಯೋಜನೆಯ ಹಣ..! ಮೇ 20 ರ ನಂತರ ಜಮಾ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಮಸ್ಕಾರ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ “ಗೃಹಲಕ್ಮಿ” ಯೋಜನೆಯ (Gruhalakshmi Scheme) ಮೂರೂ ಕಂತಿನ ಹಣ ಪಾವತಿ ಬಾಕಿ ಉಳಿದಿದೆ. ಇದು ರಾಜ್ಯದ ಮಹಿಳೆಯರಲ್ಲಿ ಸರ್ಕಾರದ ಬಗ್ಗೇ ಅಪನಂಬಿಕೆಯನ್ನ ಹುಟ್ಟು ಹಾಕುತ್ತಿದ್ದು ಜನಸಾಮಾನ್ಯರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಗೃಹಲಕ್ಮಿ ಯೋಜನೇಯ ಮೂರೂ ಕಂತಿನ ಹಣವೂ ಹೇಗೆ ಮತ್ತು ಯಾವಾಗ ನಿಮ ಖಾತೆಗೆ ಜಮಾ ಮಾಡಲಾಗುವುದು ಹಾಗೂ ಇದರ ಕುರಿತಾದ ಸದ್ಯದ ಅಪ್ಡೇಟ್ ಗಳೇನು? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಆದ ಕಾರಣ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಯಾಕೆ ಗೃಹಲಕ್ಷ್ಮೀ ಹಣ ಜಮಾ ಆಗುತ್ತಿಲ್ಲ?Gruhalakshmi Scheme Money Delay.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಇದ್ದು ತನ್ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಗೆ ಬಂದು ಇದೇ ತಿಂಗಳ ಮೇ 20ನೇ ತಾರೀಕಿಗೆ ಎರಡು ವರ್ಷ ಆಗುವುದು. ಆದರೂ ಸಹ ಇಲ್ಲಿಯವರೆಗೆ ಗೃಹಲಕ್ಷ್ಮಿಯ ಕಳೆದ ಮೂರು ಕಂತಿನ ಹಣ ಬಾಕಿ ಇರುವುದು. ಕಾರಣವೇನು? ಸರ್ಕಾರವು ವ್ಯವಸ್ಥಿತವಾಗಿ ಈ ಒಂದು ಯೋಜನೆಯನ್ನು ನಡೆಸಿಕೊಂಡು ಹೋಗುತ್ತಿದೆಯಾ? ಇಲ್ಲ, ರಾಜ್ಯದ ಬೊಕ್ಕಸಕ್ಕೆ ಇದರ ಮೂಲಕ ಏನಾದರೂ ತೊಂದರೆ ಆಗಿದೆಯಾ? ಅಥವಾ ಇದು ಕೇವಲ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಉಂಟಾದ ಕ್ಷಣಿಕ ಸಮಸ್ಯೆಯಾ? ಗೊತ್ತಿಲ್ಲ. ಹಾಗಾದರೆ ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಜನರ ಖಾತೆಗಳಿಗೆ ಜಮಾ ಆಗುತ್ತಿಲ್ಲ? ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆ “ಮಾರ್ಚ್ 31ರ ನಂತರ ನೇರವಾಗಿ ಜನರ ಖಾತೆಗೆ ಜಮಾ ಆಗೋದು” ಎಂಬುದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು. ಆದರೂ ಇಲ್ಲಿಯವರೆಗೆ ಹಣ ಜಮಾ ಆಗಿಲ್ಲ.
ಒಟ್ಟಿಗೆ ಮೂರು ತಿಂಗಳ ಬಾಕಿ ಹಣ ಜಮಾ
ಹೋದ ತಿಂಗಳಿನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ತಿಂಗಳ ಮಾರ್ಚ್ 31ರ ನಂತರ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಆದರೂ ಇಲ್ಲಿಯವರೆಗೆ ಎರಡು ಕಂತಿನ ಹಣ ಜಮಾ ಆಗಿಲ್ಲ. ಇದೀಗ ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪತ್ರಿಕೆಯೊಂದಿಗೆ ಮಾತನಾಡಿದ ಸಂದರ್ಭದಲ್ಲಿ “ಮುಖ್ಯಮಂತ್ರಿಗಳ ಸಮ್ಮತಿ ದೊರೆತಿದ್ದು ಮೂರು ತಿಂಗಳ ಒಟ್ಟು ಹಣವನ್ನು ಒಂದೇ ತಿಂಗಳಿನಲ್ಲಿ ಜಮಾ ಮಾಡಲಾಗುವುದು” ಎಂಬ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದ ರೈತ ಸಂಪರ್ಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು “ಈ ತಿಂಗಳಲ್ಲಿ (ಮೇ) ಮೂರು ಕಂತುಗಳ ಹಣವನ್ನು ಫಲಾನುಭವಿಗಳ ಖಾತೆಗೆ ಒಟ್ಟಿಗೆ ಜಮಾ ಮಾಡಲಾಗುವುದು” ಎಂದು ಭರವಸೆ ನೀಡಿದ್ದರು. ಆದರೂ ಸಹ ಇಲ್ಲಿಯವರೆಗೆ ಹಣ ಜಮಾ ಆಗಿಲ್ಲ.

ಮೇ 20ರ ನಂತರ ಹಣ ಜಮಾ? ಬಹುಶಃ Gruhalakshmi Scheme
ಇಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡು ವರ್ಷಗಳ ಹೊಸ್ತಲಿನಲ್ಲಿ ನಿಂತಿದೆ. ಇದೇ ತಿಂಗಳ 20ನೆಯ ತಾರೀಕಿಗೆ ಸರ್ಕಾರವು ಎರಡು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ “ಎರಡು ವರ್ಷದ ಗ್ಯಾರಂಟಿ ಬದುಕು” ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಇದರಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ಜನರ ಮುಂದಿಡಲು ಸರ್ಕಾರ ಯೋಚಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಒಟ್ಟು ಮೂರೂ ಕಂತಿನ ಹಣ ಜಮಾವನ ಬಗ್ಗೆ ಪ್ರಸ್ತಾಪನೆ ಮಾಡುವ ಸಾಧ್ಯತೆ ಹೆಚ್ಚಾಗಿ ಇರುವುದು. ಇದೇ ವೇಳೆ ಅಥವಾ ಅನಂತರವ ಹಂತ ಹಂತವಾಗಿ ಜಮಾ ಮಾಡುವ ಸಾಧ್ಯತೆಯೂ ಸಹ ಇದೆ. ಆದರೆ ಸರ್ಕಾರದ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲಿಯವರೆಗೆ ಪ್ರಕಟವಾಗಿಲ್ಲ. ಮೇ 20 ನಂತರ ಹಣ ಜಮಾ ಆಗುವುದು ಎಂಬುವುದು ಕೇವಲ ಸಾಧ್ಯತೆಯ ಮಾತು.













