BIG NEWS: ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್..! ಗ್ಯಾರಂಟಿಯೋಜನೆಗಳಲ್ಲಿ ಬೃಹತ್ ಬದಲಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ.

Photo of author

Mantesh

Publish: May 28, 2025
ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್ (1)

share Share:

ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್..! ಗ್ಯಾರಂಟಿಯೋಜನೆಗಳಲ್ಲಿ ಬೃಹತ್ ಬದಲಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ.


ನಮಸ್ಕಾರ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಇದೀಗ ಜುಲೈನಿಂದ ಗ್ಯಾರಂಟಿ ಯೋಜನೆಗಳಲ್ಲಿ ಹೊಸ ಬದಲಾವಣೆ ಕಾಣಬಹುದು. ಕಾರಣ, ಅನೇಕ ಅನರ್ಹ ಕುಟುಂಬಗಳು ಈ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದು, ಅಂತಹ ಕುಟುಂಬಗಳಿಗೆ ಜುಲೈ 2025 ರಿಂದ ಈ ಯೋಜನೆಗಳ ಲಾಭವನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಘೋಷಿಸಿದ್ದಾರೆ. ಈ ಒಂದು ಲೇಖನದಲ್ಲಿ ಈ ಒಂದು ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

ಅನರ್ಹ ಕುಟುಂಬಗಳಿಗೆ ಇನ್ನು ಮುಂದೆ ಲಾಭ ಇಲ್ಲ

ರಾಜ್ಯದ ಕುಕನೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ಮೊನ್ನೆ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮುಖ್ಯಮಂತ್ರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು, “ಈ ಯೋಜನೆಗಳ ಅಡಿಯಲ್ಲಿ ಅನರ್ಹರು ಸಹ ಲಾಭ ಪಡೆಯುತ್ತಿದ್ದಾರೆ. ಇದನ್ನು ತಡೆಗಟ್ಟಲು ತನಿಖೆ ನಡೆಸಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಗ್ಯಾರೆಂಟಿ ಯೋಜನೆಗಳ ದುರುಪಯೋಗ

ಅನೇಕ ಜನರು ತಮ್ಮ ಕುಟುಂಬಗಳಿಗೆ ಲಾಭವಾಗಲಿ ಎನ್ನುವ ಉದ್ದೇಶದಿಂದ ಗ್ಯಾರೆಂಟಿ ಯೋಜನೆಗಳ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಉದಾಹರಣೆಯಾಗಿ: ಅನೇಕ ಜನರು ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿದ್ದರೂ ಸಹ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಮತ್ತೆ ಕೆಲವರು ಆರ್ಥಿಕವಾಗಿ ಸದೃಢವಾಗಿದ್ದರೂ ಹಾಗೂ GST ಯನ್ನೂ ಪಾವತಿಸುವ ಸಾಮರ್ಥ್ಯ ಹೊಂದಿದ್ದು ಅಂತಹ ಕುಟುಂಬಗಳು ಸಹ ಗೃಹಲಕ್ಷ್ಮಿ ಯಂತಹ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅನ್ನಭಾಗ್ಯ: ಮತ್ತೆ ಕೆಲವರು ಪಡಿತರ ಚೀಟಿಗಳ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಗ್ಯಾರಂಟಿ ಯೋಜನೆಗಳ ದುರುಪಯೋಗವನ್ನು ತಡೆಗಟ್ಟಲು ಈ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್ (1)

ಸರ್ಕಾರದ ಕಟ್ಟು ನಿಟ್ಟಿನ ಕ್ರಮ

ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ತನಿಖಾ ಖಂಡಗಳನ್ನು ರಚಿಸಿ, ಇದರ ಮೂಲಕ ಅರ್ಹತೆ ಇಲ್ಲದವರ ಪಟ್ಟಿ ಮಾಡಿ, ಜುಲೈನಿಂದ ಅವರಿಗೆ ಯಾವುದೇ ರೀತಿಯ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಹಾಗೂ ಯಾವುದೇ ಸಹಾಯಧನ ನೀಡದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗುವುದು. ಅಧಿಕೃತ ಮೂಲಗಳ ಪ್ರಕಾರ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸರಿ ಸುಮಾರು 250 ಕೋಟಿ ರೂಪಾಯಿ ಹಂಚಿಕೆಯಾಗುತ್ತಿದ್ದು, ಇದರ ಸರಿಯಾದ ಬಳಕೆಗಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಮುಂದಿನ ಹಂತ ಏನು?

ಈ ಬಗ್ಗೆ ನಿಖರವಾದ ವರದಿ ಅನ್ನು ತಯಾರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು, ಮತ್ತು ಡಿಜಿಟಲ್ ಪರಿಶೀಲನೆ ವ್ಯವಸ್ಥೆಯನ್ನು ಅಳವಡಿಸಿ ನಿಜವಾದ ಅರ್ಹರಿಗೆ ಮಾತ್ರ ಯೋಜನೆಗಳ ಲಾಭ ಮುಟ್ಟುವಂತೆ ನೋಡಿಕೊಳ್ಳಲಾಗುವುದು.

ಸರ್ಕಾರದ ಈ ನಿರ್ಧಾರವು ರಾಜ್ಯದಲ್ಲಿ ಪಾರದರ್ಶಕತೆ ಹಾಗೂ ಯೋಜನೆಗಳ ಉಪಯುಕ್ತ ಹಾಗೂ ಸಮರ್ಪಕ ಬಳಕೆಗಾಗಿ ಉಪಯುಕ್ತ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ.

5 Yoga Mudras For Healthy Life: ಯೋಗಾಸನದ ಈ 5 ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಸಂಜೀವಿನಿ ಈ 5 ಮುದ್ರೆಗಳು.

Join

Leave a Comment