Rain Alert: ಈ ವಾರ (ಜೂನ್ -10) ವರುಣನ ಅಬ್ಬರ..! 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ (Yellow Alert).
ಈ ಬಾರಿ ಮುಂಗಾರು ಮಾನ್ಸೂನ್ ಮಳೆ ರಾಜ್ಯಾದ್ಯಂತ ಚುರುಕಾಗಿದ್ದು ಕೆಲವೊಂದು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೊ ಅಲರ್ಟ್ ಅನ್ನು ಘೋಷಿಸಲಾಗಿದ್ದು ಅದರ ಕುರಿತಾಗಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Bank Holidays in June 2025: ಜೂನ್ ತಿಂಗಳ ಒಟ್ಟು ಬ್ಯಾಂಕ್ ರಜೆಗಳ ಬಗ್ಗೆ ತಿಳಿಯಿರಿ.
ಜೂನ್ 8 ರಿಂದ ವರುಣನ ಆರ್ಭಟ
ಇನ್ನೇನು ಮಾನ್ಸೂನ್ ಮಳೆಗಳು ಪ್ರಾರಂಭವಾಗಿದ್ದು ಎಲ ದಿನಗಳಿಂದ ಬ್ರೇಕ್ ತೆಗೆದುಕೊಂಡಿದ್ದ ಮಳೆರಾಯ ಮತ್ತೆ ತನ್ನ ಕೆಲಸಕ್ಕೆ ಹಾಜರಿಯಾಗಿದ್ದಾನೆ, ಹವಾಮಾನ ಇಲಾಖೆಯು ನೀಡಿರುವ ವರದಿಯ ಪ್ರಕಾರ ಜೂನ್ 8 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವುದು ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ (Yellow Alert) ಅನ್ನು ಘೋಷಣೆ ಮಾಡಿದೆ.
11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್: Rain Alert In Karnataka
ಈ ಬಾರಿ ಸುರಿಯುವ ಮುಂಗಾರು ಮಳೆಯು ಅತಿಹೆಚ್ಚಿನ ಪ್ರಮಾಣದಲ್ಲಿ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದು, ಈ ಭಾಗದ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೊ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ಈ ಭಾಗದ ದೊಡ್ಡ ಆದಂತಹ ಕೃಷ್ಣ ನದಿ ತೀರದ ಜನರಿಗೆ ಪ್ರವಾಹದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಹಾಗೂ ಜಲಾಶಯದಿಂದ ನೀರು ಬಿಡುಗಡೆ ಆಗುವ ಸಾಧ್ಯತೆವು ಹೆಚ್ಚಾಗಿದೆ.
ಈ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್: Yellow Alert
ಇಷ್ಟು ದಿನಗಳ ಕಾಲ ವಿಶ್ರಾಂತಿ ಪಡೆದ ಮಳೆರಾಯ ಮತ್ತೆ ತನ್ನ ಕೆಲಸದಲ್ಲಿ ಚುರುಕುಕೊಂಡಿದ್ದಾನೆ. ಈ ಬಾರಿಯ ಮಳೆಯೂ ಹೆಚ್ಚಾಗಿದ್ದು ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಅವುಗಳಲ್ಲಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ, ಧಾರವಾಡ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಹಾಗೂ ಬಳ್ಳಾರಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯನ್ನು ನಿರೀಕ್ಷಿಸಬಹುದು.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ
ಪ್ರಸಕ್ತ ವರ್ಷದ ಮುಂಗಾರಿನ ಮಳೆ ಹೆಚ್ಚಾಗಿದ್ದು, ಇದು ಕರಾವಳಿ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಕರಾವಳಿ ಭಾಗದ ಜನರಲ್ಲಿ ಪ್ರವಾಹದ ಭೀತಿ ಶುರುವಾಗಿದ್ದು, ಭೂಕುಸಿತ ಭಯವು ಜನರನ್ನು ಆತಂಕಕ್ಕೆ ಈಡು ಮಾಡಿದೆ. ಹವಾಮಾನ ಇಲಾಖೆಯು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನಿರೀಕ್ಷೆ ಇದೆ ಎಂದು ಹೇಳಿದೆ.
ಇನ್ನು, ಬೆಂಗಳೂರು ಭಾಗದ (bengaluru weather) ಜನರಿಗೆ ಸಮಾಧಾನಕರ ವಿಷಯ ಏನೆಂದರೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸುರಿಯುವಷ್ಟು ಮಳೆಯೂ ಬೆಂಗಳೂರು ಭಾಗದಲ್ಲಿ ಸುರಿಯುವುದಿಲ್ಲ. ಬೆಂಗಳೂರು ನಗರ, ರಾಮನಗರ, ಕೋಲಾರ, ಮಂಡ್ಯ, ಮೈಸೂರು, ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯುವ ಮುನ್ಸೂಚನೆಯನ್ನು ನೀಡಲಾಗಿದೆ. ಒಟ್ಟಾರೆ ಈ ವರ್ಷದ ಮುಂಗಾರು ಹೆಚ್ಚಾಗಿದೆ.












