ಜಿಯೊ (Jio) ಕಂಪನಿಯ ಹೊಸ ರೀಚಾರ್ಜ್ ಪ್ಲಾನ್ (Jio new recharge plan) . ಕೇವಲ ₹895 ಗೆ ಒಂದು ವರ್ಷದವರೆಗಿನ ರೀಚಾರ್ಜ್ ಪ್ಲಾನ್. ಹೌದು ಸ್ನೇಹಿತರೆ, ಭಾರತದಲ್ಲಿ ಇದೀಗ ಬೃಹತ್ ಟೆಲಿಕಾಂ ಕಂಪನಿಗಳಾದ ಜಿಯೊ ಹಾಗೂ ಏರ್ಟೆಲ್ ಕಂಪನಿಗಳು ಗ್ರಾಹಕರ ಬಳಕೆಗಾಗಿ ಉಪಯುಕ್ತ ಹಾಗೂ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಗಳನ್ನು ತರುವುದರ ಮೂಲಕ ಅತಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಇದರ ನೇರ ಉಪಯೋಗ ಗ್ರಾಹಕರು ಪಡೆದುಕೊಳ್ಳಬಹುದು. ಹಾಗೆಯೇ ಇದೀಗ ಜಿಯೊ ಕಂಪನಿಗಯೂ ಕೂಡ ಒಂದು ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಲೇಖನದಲ್ಲಿ ನಾವು ಈ ರೀಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಡಿದ್ದೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
CBDC (Central Bank Digital Currency): ಭಾರತದಲ್ಲಿ ಇನ್ನು ಮುಂದೆ ಡಿಜಿಟಲ್ ಹಣ..!
₹895 ಕ್ಕೆ ಒಂದು ವರ್ಷದ ರೀಚಾರ್ಜ್ ಪ್ಲಾನ್: Jio new recharge plan
ಹೌದು ಸ್ನೇಹಿತರೆ, ಜಿಯೊ ಕಂಪನಿಯು ಇದೀಗ ತನ್ನ ಬಳಕೆದಾರರಿಗೆ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ ಅದೇನೆಂದರೆ, ಕೇವಲ ₹895 ಕ್ಕೆ ಒಂದು ವರ್ಷದ ಅವಧಿಯ ರೀಚಾರ್ಜ್ ಪ್ಲಾನ್ (Jio new recharge plan) . ಹೌದು ಟೆಲಿಕಾಂ ಕಂಪನಿ ಆದಂತಹ ಜಿಯೊ ಈಗ ₹895 ವರ್ಷದ ಅವಧಿಯ ರೀಚಾರ್ಜ್ ಪ್ಲಾನ್ ತನ್ನ ಗ್ರಾಹಕರಿಗೆ ನೀಡಿದೆ. ಇದು ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತ ಆಗಿದೆ. ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು 336 ದಿನಗಳ ವರೆಗೆ ನಿಶ್ಚಿಂತೆ ಇಂದ ಇರಬಹುದು.

ರೀಚಾರ್ಜ್ ಪ್ಲಾನ್ ಬಗ್ಗೆ
ಅವಧಿ (validity): 336 ದಿನಗಳವರೆಗೆ
ಡೇಟಾ (data): 24 GB (ಪ್ರತಿ 28 ದಿನಕ್ಕೆ 2 GB)
ಕರೆಗಳು: ಎಲ್ಲಾ ರೀತಿಯ ಅನಿಯಮಿತ ಕರೆಗಳು
SMS: ಪ್ರತಿ ತಿಂಗಳು 50 ಉಚಿತ ಮೆಸೇಜ್ ಗಳು
ಪ್ಲಾನ್ ಲಭ್ಯತೆ: ಕೇವಲ ಜಿಯೊ ಫೋನ್ ಬಳಕೆದಾರರಿಗೆ ಮಾತ್ರ
ಹೌದು ಸ್ನೇಹಿತರೆ, ಈ ಒಂದು ಪ್ಲಾನ್ ಕೇವಲ ಜಿಯೊ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ಲಭ್ಯ ಇರುವುದಿಲ್ಲ. ಇದು ಗ್ರಾಮೀಣ ಭಾಗದ ಜನರಿಗೆ ಹಾಗೂ ಕೃಷಿಕರಿಗೆ ಮತ್ತು ವಯಸ್ಸಾದ ವೃದ್ಧರಿಗೆ ಮತ್ತು ಹೆಚ್ಚಿನ ಪ್ರಮಾಣದ ಡಾಟಾ ಅವಶ್ಯಕತೆ ಇಲ್ಲದವರಿಗೆ ಈ ರೀಚಾರ್ಜ್ ಪ್ಲಾನ್ ಉಪಯುಕ್ತ.
ಜಿಯೊದ ಈ ಪ್ಲಾನ್ ಹಿಂದಿನ ಉದ್ದೇಶ
ಜಿಯೊ ಕಂಪನಿಯು ಈ ಹಿಂದೆ ತನ್ನ ಗ್ರಾಹಕರಿಗೆ ಒಂದು ವರ್ಷದ ಅವಧಿಯ (Jio new recharge plan) ವರೆಗೆ ಉಚಿತ ಡಾಟಾ ಹಾಗೂ ಅನ್ ಲಿಮಿಟೆಡ್ ಕರೆಯ ಪ್ಲಾನ್ ನೀಡುವುದರ ಮೂಲಕ ಅನೇಕ ಅನ್ಯ ಟೆಲಿಕಾಂ ಕಂಪನಿಯ ಗ್ರಾಹಕರನ್ನು ತನ್ನೆಡೆ ಸೆಳೆದುಕೊಂಡಿತ್ತು. ಈಗ ಸಹ ಅದೇ ರೀತಿಯ ಕಡಿಮೆ ರೀಚಾರ್ಜ್ ಪ್ಲಾನ್ ನೀಡುವುದರ ಮೂಲಕ ಅತಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ.












