Bank Holidays:ಆಗಸ್ಟ್ ತಿಂಗಳ ಬ್ಯಾಂಕಿನ ರಜಾ ದಿನಗಳು:ಬರೋಬ್ಬರಿ 13 ರಜಾ ದಿನಗಳು.

Photo of author

Mantesh

Publish: July 30, 2024

share Share:

ನಮಸ್ಕಾರ ಕರ್ನಾಟಕದ ಜನತೆಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಮುಂದೆ ಬರುವ ಅಗಸ್ಟ್ ತಿಂಗಳಿನಲ್ಲಿ ಇರುವ ಬ್ಯಾಂಕಿನ ರಜೆಗಳ(Bank Holidays) ಬಗ್ಗೆ ತಿಳಿಸಿಕೊಡುತ್ತೇವೆ. ನಿಮಗೆಲ್ಲಾ ತಿಳಿದಿರುವ ಹಾಗೆ ಜುಲೈ ತಿಂಗಳು ಕೊನೆಯಾಗಲಿದ್ದು ಮುಂಬರುವ ಅಗಸ್ಟ್ ತಿಂಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಸರ್ಕಾರಿ ರಜೆಗಳನ್ನು ನಾವು ಕಾಣಬಹುದು ಅದರಲ್ಲೂ ಬ್ಯಾಂಕಿನ ರಜೆಗಳುಎಂದಿನಂತೆ ಹೆಚ್ಚಾಗಿ ಇರುತ್ತವೆ. ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಮುಂದಿನ ತಿಂಗಳಿನಲ್ಲಿ ಅಂದರೆ ಆಗಸ್ಟ್ ತಿಂಗಳಿನಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ ರಜೆ(Bank Holidays) ಬಂದಿದ್ದು ನೀವೇನಾದರೂ ನಿಮ್ಮ ಹಣಕಾಸಿನ ವೈವಾಟುಗಳನ್ನು ಹೊಂದಿದ್ದರೆ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾದದ್ದು ಹಾಗಾಗಿ ಸಂಪೂರ್ಣವಾಗಿ ಓದಿ ಎಂದು ವಿನಂತಿಸಿಕೊಳ್ಳುತ್ತೇವೆ.

ಆಗಸ್ಟ್ 2024ರಲ್ಲಿ ಬ್ಯಾಂಕಿನ ಒಟ್ಟು ರಜಾ ದಿನಗಳು(Bank Holidays):

ನಿಮಗೆಲ್ಲ ತಿಳಿದಿರುವಂತೆ ಆಷಾಢ ಮುಗಿದು ಶ್ರಾವಣ ಬಂದರೆ ನಮ್ಮ ದೇಶದಲ್ಲಿ ರಜೆಗಳಿಗೆ ಕಡಿಮೆ ಇಲ್ಲ ಹಾಗಾಗಿ ಮುಂದೆ ಬರುವ ಅಗಸ್ಟ್ ತಿಂಗಳಲ್ಲಿಯೂ ಸಹ ರಜೆ ಗಳಿಗೇನು ಕೊರತೆ ಇಲ್ಲ, ಆಗಸ್ಟ್ ನಲ್ಲಿ ತುಂಬಾ ರೀತಿಯ ಹಬ್ಬಗಳು ಬರುತ್ತವೆ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ರೀತಿಯ ಹಬ್ಬ ಹರಿದಿನಗಳು ಕಂಡುಬರುತ್ತವೆ. ನಿಮಗೆಲ್ಲ ತಿಳಿದಿರುವಂತೆ ಬ್ಯಾಂಕುಗಳಿಗೆ ರಜಾ ದಿನಗಳು ಹೆಚ್ಚಾಗಿಯೇ ಇರುತ್ತವೆ. ಅದರಲ್ಲೂ ಮುಂದೆ ಬರುವ ಅಗಸ್ಟ್ 2024ರಲ್ಲಿ ಬ್ಯಾಂಕುಗಳಿಗೆ ಶನಿವಾರ ಮತ್ತು ಭಾನುವಾರ ಸಪ್ತಾಯಕ ರಜೆಗಳು ಸೇರಿ ಒಟ್ಟು 13 ದಿನಗಳ ರಜೆಯನ್ನು ನಾವು ಕಾಣಬಹುದು.


ಇನ್ನು ಈ ರಜಾ ದಿನಗಳ ಪಟ್ಟಿಯನ್ನು ತಿಳಿದುಕೊಳ್ಳೋಣ:

ಅಗಸ್ಟ್ ನಲ್ಲಿ ಇಂದಿನಂತೆ ಎರಡನೇ ನಾಲ್ಕನೇ ಶನಿವಾರ ಮತ್ತು ಭಾನುವಾರ ಇವುಗಳು ವಾರದ ರಜಾ ದಿನಗಳಾಗಿ ಇರುತ್ತವೆ ಇದರಿಂದ 6 ರಜಾದಿನಗಳಾಗುತ್ತವೆ. ಆದರೆ ಇದನ್ನು ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಹಬ್ಬ ಹರಿದಿನಗಳು ಇರುವುದರಿಂದ ಬ್ಯಾಂಕುಗಳಿಗೆ ಹೆಚ್ಚುರಿಯಾಗಿ 7 ದಿನಗಳ ರಜೆಯು ಸಿಗುತ್ತದೆ.

ರಜಾ ದಿನಗಳ ಪಟ್ಟಿ:

  • ಕೇರ್ ಪೂಜೆ ಎಂಬುದು ತ್ರಿಪುರ ರಾಜ್ಯದ ಒಂದು ವಾರ್ಷಿಕ ಹಬ್ಬ ಇದನ್ನು ಪ್ರತಿವರ್ಷ ಆಗಸ್ಟ್ ನಲ್ಲಿ ಆಚರಣೆ ಮಾಡಲಾಗುತ್ತದೆ ಈ ಬಾರಿ ಕೇರ್ಪೂಜೆ ಹಬ್ಬವು ಆಗಸ್ಟ್ 3 ಶನಿವಾರದಂದು ಇರುವ ಕಾರಣ ಅಂದಿನ ದಿನ ಬ್ಯಾಂಕ್ ಗಳು ರಜೆ ಇರುತ್ತವೆ.
  • ಆಗಸ್ಟ್ 4 : ಭಾನುವಾರ ಇದು ಒಂದು ಸಾಪ್ತಾಹಿಕ ರಜೆ.
  • ಆಗಸ್ಟ್ 7 : ತಾರೀಕಿನಂದು ಹರಿಯಾಣದಲ್ಲಿ ಹರಿಯಾಲಿ ತೇಜ್ಎಂಬ ಹಬ್ಬ ಇರುವುದರಿಂದ ಆ ದಿನಗೂ ಸಹಿತ ಬ್ಯಾಂಕುಗಳಿಗೆ ರಜೆ ನೀಡಲಾಗಿದೆ ಹರಿಯಾಲಿ ತೇಜ್ ಎಂಬುದು ಹರಿಯಾಣದ ಒಂದು ಪ್ರಸಿದ್ಧ ಹಬ್ಬ ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪೂಜೆಯನ್ನು ಮಾಡುವುದು.
  • ಅಗಸ್ಟ್ 8 : ಗುರುವಾರ ಟೆಂಡಾಂಗ್ ಲೊ ರಮ್ ಪ್ಯಾಟ್ ಮತ್ತು ಎಂಬ ವಾರ್ಷಿಕ ಹಬ್ಬ ಇರುವುದರಿಂದ ಬ್ಯಾಂಕಿಗೆ ರಜೆ ನೀಡಲಾಗಿದೆ.
  • ಆಗಸ್ಟ್ 10 : ಹಾಗೂ ಆಗಸ್ಟ್ 11 ಶನಿವಾರ ಮತ್ತು ಭಾನುವಾರ ಶನಿವಾರದಂದು ಎರಡನೇ ಶನಿವಾರ ವಾಗಿರುವುದರಿಂದ ರಜೆ, ಭಾನುವಾರದಂದು ಸಾಪ್ತಾಹಿಕ ಆಗಿದೆ.
  • ಆಗಸ್ಟ್ 13 : ಮಂಗಳವಾರ ದೇಶಪ್ರೇಮಿ ದಿನ ಮಣಿಪುರದಲ್ಲಿ ಯಾವುದೇ ರೀತಿಯ ಬ್ಯಾಂಕುಗಳು ತೆಗೆದಿರುವುದಿಲ್ಲ.
  • ಆಗಸ್ಟ್ 15 ಗುರುವಾರ ನಮಗೆಲ್ಲ ತಿಳಿದಿರುವ ಹಾಗೆ ನಮ್ಮ ದೇಶದ ಸ್ವಾತಂತ್ರ ದಿನಾಚರಣೆ. ಯಾಗಿರುವುದರಿಂದ ಅಂದು ಎಲ್ಲಾ ಬ್ಯಾಂಕುಗಳು ಶಾಲಾ ಕಾಲೇಜುಗಳು ಸರ್ಕಾರಿ ಕಚೇರಿಗಳು ಎಲ್ಲವೂ ಸಹ ರಜೆಯಲ್ಲಿ ಇರುತ್ತವೆ.
  • ಆಗಸ್ಟ್ 18 : ಭಾನುವಾರ ಸಾಪ್ತಾಹಿಕ ರಜೆ
  • ಅಗಸ್ಟ್ 19 : ಸೋಮವಾರ ರಕ್ಷಾ ಬಂಧನ / ಜಲನ್ ಪೂರ್ಣಿಮಾ ಹಾಗೂ ಇನ್ನಿತರ ಹಬ್ಬಗಳು ವಿವಿಧ ರೀತಿಯ ರಾಜ್ಯಗಳಲ್ಲಿ ಇರುವುದರಿಂದ ಅಂದು ಸಹ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
  • ಅಗಸ್ಟ್ 20 : ಮಂಗಳವಾರ ಶ್ರೀ ನಾರಾಯಣ ಗುರು ಜಯಂತಿಯ ಆಚರಣೆಯ ಸಲುವಾಗಿ ಬ್ಯಾಂಕುಗಳು ಅಂದು ಸಹ ರಜೆಯನ್ನು ನೀಡಿರುತ್ತವೆ.
  • ಆಗಸ್ಟ್ 24 : ಶನಿವಾರ ಇದು 4 ಶನಿವಾರ ವಾಗಿರುವುದರಿಂದ ಅಂದು ಸಹ ಬ್ಯಾಂಗಳು ರಜೆ ಇರುತ್ತದೆ.
  • ಆಗಸ್ಟ್ 25 : ಭಾನುವಾರ ಸಾಪ್ತಾಹಿಕ ರಜೆ.
  • ಅಗಸ್ಟ್ 26 : ಸೋಮವಾರ ಕೃಷ್ಣ ಜನ್ಮಾಷ್ಟಮಿಯ ಕಾರಣದಿಂದಾಗಿ ಅಂದು ಸಹ ಕೆಲವೊಂದು ರಾಜ್ಯಗಳಲ್ಲಿ ಅಂದರೆ ಗುಜರಾತ್, ಓಡಿಸ್ಸಾ, ಚಂಡೀಗಡ್, ತಮಿಳುನಾಡು, ಉತ್ತರಖಂಡ್, ಸಿಕ್ಕಿಂ, ಆಂಧ್ರ ಪ್ರದೇಶ್, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ್, ಬಂಗಾಳ, ಬಿಹಾರ್, ಛತ್ತೀಸ್ಗಢ, ಜಾರ್ಖಂಡ್, ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ರಜೆ ಇರುತ್ತವ.

Also Read :

ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal.

ಭಾರತಕ್ಕೆ ಬಂದ ಮೊದಲ ಪದಕ!:Manu Bhaker Wins Paris Olympics 2024 First Medal

ಮತ್ತೊಂದು ಗಮನೀಯ ವಿಷಯವೇನೆಂದರೆ ಈ ರಜಾದಿನಗಳು ಪ್ರಾದೇಶಿಕ ಹಬ್ಬ ಹರಿದಿನಗಳನ್ನು ನೋಡಿಕೊಂಡು ಅಥವಾ ಅಗತ್ಯತೆಗಳ ಕಾರಣದಿಂದ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ ಇರುತ್ತದೆ ಇದನ್ನು ಗಮನಿಸಬೇಕು.

ಆದಕಾರಣ ಮುಂದಿನ ತಿಂಗಳಲ್ಲಿ 13 ದಿನಗಳ ಕಾಲ ಬ್ಯಾಂಕ್ ರಜೆಗಳು ಇರಲಿದ್ದು ನೀವು ಯಾವುದೇ ರೀತಿಯ ಬ್ಯಾಂಕಿನ ವೈವಾಟುಗಳನ್ನು ಮಾಡಿಕೊಳ್ಳಬೇಕಾದರೆ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು ಇದಲ್ಲದೆ ನೀವು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ನಿಮ್ಮ UPI ಮೂಲಕ ಹಣ ವರ್ಗಾವಣೆ ಹಾಗೂ ಹಣದ ಸ್ವೀಕಾರ ಈ ರೀತಿಯ ವೈವಾಟುಗಳನ್ನು ಮಾಡಬಹುದು.

Join
Join WhatsApp Group